ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಿ ಮತ್ತು ಅಫ್ಘಾನಿಸ್ತಾನ ಅಧ್ಯಕ್ಷರ ನಡುವೆ ದೂರವಾಣಿ ಮಾತುಕತೆ
प्रविष्टि तिथि:
03 AUG 2020 5:50PM by PIB Bengaluru
ಪ್ರಧಾನಿ ನರೇಂದ್ರ ಮೋದಿ ಮತ್ತು ಅಫ್ಘಾನಿಸ್ತಾನದ ಅಧ್ಯಕ್ಷ ಡಾ. ಅಶ್ರಫ್ ಘನಿ ಅವರು ದೂರವಾಣಿ ಮಾತುಕತೆ ನಡೆಸಿದರು. ಈದ್ - ಉಲ್ - ಅಧಾ ಹಬ್ಬಕ್ಕೆ ಉಭಯ ನಾಯಕರು ಶುಭಾಶಯ ವಿನಿಮಯ ಮಾಡಿಕೊಂಡರು.
ಅಫ್ಘಾನಿಸ್ತಾನದ ಅಗತ್ಯವನ್ನು ಪೂರೈಸಲು ಆಹಾರ ಮತ್ತು ವೈದ್ಯಕೀಯ ನೆರವನ್ನು ಸಕಾಲಿಕವಾಗಿ ಒದಗಿಸಿದ್ದಕ್ಕಾಗಿ ಅಧ್ಯಕ್ಷ ಘನಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದರು. ಶಾಂತಿಯುತ, ಸಮೃದ್ಧ ಮತ್ತು ಅಂತರ್ಗತ ಅಫ್ಘಾನಿಸ್ತಾನಕ್ಕಾಗಿ ಅಫ್ಘಾನಿಸ್ತಾನದ ಜನರಿಗೆ ಭಾರತದ ಬೆಂಬಲವನನ್ನು ಪ್ರಧಾನಿ ಪುನರುಚ್ಚರಿಸಿದರು. ಈ ಪ್ರದೇಶದಲ್ಲಿ ನಡೆಯುತ್ತಿರುವ ಭದ್ರತಾ ಪರಿಸ್ಥಿತಿಗಳು ಮತ್ತು ಪರಸ್ಪರ ದ್ವಿಪಕ್ಷೀಯ ಆಸಕ್ತಿಯ ಇತರ ಕ್ಷೇತ್ರಗಳ ಬಗ್ಗೆ ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
***
(रिलीज़ आईडी: 1643278)
आगंतुक पटल : 259
इस विज्ञप्ति को इन भाषाओं में पढ़ें:
Telugu
,
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Malayalam