PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 03 AUG 2020 6:37PM by PIB Bengaluru

Coat of arms of India PNG images free downloadhttps://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

ಪುಣೆಯ ಸೀರಂ ಸಂಸ್ಥೆಯಿಂದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಲಸಿಕೆಯ ಹಂತ II+III ಪರೀಕ್ಷಾ ಪ್ರಯೋಗಕ್ಕೆ ಡಿ.ಸಿ.ಜಿ.. ಅನುಮೋದನೆ; ಕೋವಿಡ್ ಪ್ರಕರಣಗಳಲ್ಲಿ ಮರಣ ಪ್ರಮಾಣ  (ಸಿ.ಎಫ್.ಆರ್.) ಇನ್ನಷ್ಟು ಕುಸಿದು 2 .11 % ನಲ್ಲಿದೆ; ಒಟ್ಟು ಗುಣಮುಖ ಪ್ರಕರಣಗಳ ಸಂಖ್ಯೆ 11.8 ಲಕ್ಷಕ್ಕೂ ಅಧಿಕ.

ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಆಸ್ಟ್ರಾ ಜೆನಿಕಾ ಕೋವಿಡ್ -19 ಲಸಿಕೆ (ಕೋವಿಶೀಲ್ಡ್) ಯನ್ನು ಭಾರತದಲ್ಲಿ ಪುಣೆಯ ಸೀರಂ ಸಂಸ್ಥೆಯ ಮೂಲಕ ಪರೀಕ್ಷಾ ಪ್ರಯೋಗ ನಡೆಸುವುದಕ್ಕೆ ಭಾರತದ ಔಷಧಿ ಮಹಾ ನಿಯಂತ್ರಕರು (ಡಿ.ಸಿ.ಜಿ..) ಅನುಮತಿ ನೀಡಿದ್ದಾರೆ. ಇದರಿಂದ ಕೋವಿಡ್ -19 ಲಸಿಕೆಯ ಅಭಿವೃದ್ದಿ ಇನ್ನಷ್ಟು ವೇಗ ಪಡೆಯಲಿದೆ. ಭಾರತದಲ್ಲಿ ಕೋವಿಡ್ ಮರಣ ಪ್ರಮಾಣ (ಸಿ.ಎಫ್.ಆರ್.) ದಲ್ಲಿ ಸುಧಾರಣೆಯಾಗಿದ್ದು, ಜಾಗತಿಕವಾಗಿ ಅತ್ಯಂತ ಕಡಿಮೆ ಕೋವಿಡ್ ಮರಣ ಪ್ರಮಾಣ ಇರುವ ದೇಶಗಳಲ್ಲಿ ಒಂದು  ಎಂಬ  ಸ್ಥಾನವನ್ನು ಉಳಿಸಿಕೊಂಡಿದೆ. ಪ್ರಮಾಣದಲ್ಲಿ ಇನ್ನಷ್ಟು ಇಳಿಕೆಯಾಗುವುದರೊಂದಿಗೆ , ಹಾಲಿ ಸಿ.ಎಫ್.ಆರ್. ಇಂದು 2.11 % ಗೆ ತಲುಪಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 40,574 ಕ್ಕೂ ಅಧಿಕ ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದ ಒಟ್ಟು ಗುಣಮುಖರಾದವರ ಸಂಖ್ಯೆ 11,86,203 ಕ್ಕೇರಿದೆ ಮತ್ತು ಗುಣಮುಖ ದರ 65.77% ಗೇರಿದೆ. ದಿನನಿತ್ಯ ಗುಣಮುಖರಾದವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಗುಣಮುಖರಾದ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಣ ಅಂತರ 6 ಲಕ್ಷಕ್ಕೂ ಅಧಿಕವಿದೆ. ಪ್ರಸ್ತುತ ಅದು 6,06,846 ರಲ್ಲಿದೆ. ಇದರ ಅರ್ಥ ಸಕ್ರಿಯ ಪ್ರಕರಣಗಳ ಹೊರೆ 5,79,357 ರಷ್ಟಿದೆ ಮತ್ತು ಅವರೆಲ್ಲ ವೈದ್ಯಕೀಯ ನಿಗಾದಲ್ಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಂತಾರಾಷ್ಟ್ರೀಯ ಆಗಮನಗಳಿಗೆ ಸಂಬಂಧಿಸಿ ಪರಿಷ್ಕೃತ ಮಾರ್ಗದರ್ಶಿಗಳನ್ನು ಹೊರಡಿಸಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1643136

2 ಕೋಟಿಗೂ ಅಧಿಕ ಕೋವಿಡ್ ಪರೀಕ್ಷೆಗಳನ್ನು ನಡೆಸುವ ಮೂಲಕ ಭಾರತ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ; ಒಂದು ಮಿಲಿಯನ್ ಜನಸಂಖ್ಯೆಗೆ ಪರೀಕ್ಷೆಗಳ ಸಂಖ್ಯೆ 14640 ಕ್ಕೇರಿದೆ

ಭಾರತವು ಇದುವರೆಗೆ 2,02,02,858 ಕೋವಿಡ್ -19 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡುವ ಮೂಲಕ , ನಿಟ್ಟಿನಲ್ಲಿ ಹೊಸ ಸಾಧನೆಯ ಮೈಲಿಗಲ್ಲನ್ನು ಸ್ಥಾಪಿಸಿದೆ. ಕಳೆದ 24 ಗಂಟೆಗಳಲ್ಲಿ 3,81,027 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡಲಾಗಿದೆ. ಮಿಲಿಯನ್ ಜನಸಂಖ್ಯೆಗೆ ಪರೀಕ್ಷೆಗಳ ಪ್ರಮಾಣ (ಟಿ.ಪಿ.ಎಂ.) 14640 ಕ್ಕೇರಿದೆ. ದೇಶದ ಟಿ.ಪಿ.ಎಂ. ಪ್ರಮಾಣದ ಹೆಚ್ಚಳವು ಪರೀಕ್ಷಾ ಜಾಲ ವಿಸ್ತರಣೆಯನ್ನು ಸೂಚಿಸುತ್ತದೆ. 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಿಲಿಯನ್ ಜನಸಂಖ್ಯೆಗೆ ಪರೀಕ್ಷಾ ಪ್ರಮಾಣಕ್ಕೆ ಸಂಬಂಧಿಸಿದ  ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಪ್ರಮಾಣದ  ಪರೀಕ್ಷೆಗಳನ್ನು ನಡೆಸಿರುವುದು ವರದಿಯಾಗಿದೆ. ದೇಶದಲ್ಲಿ ಪರೀಕ್ಷಾ ಪ್ರಯೋಗಾಲಯ ಜಾಲವನ್ನು  ಸತತವಾಗಿ ಬಲಪಡಿಸಲಾಗುತ್ತಿದೆ. ಪ್ರಸ್ತುತ 1348 ಪ್ರಯೋಗಾಲಯಗಳು ದೇಶದಲ್ಲಿವೆ. ಇವುಗಳಲ್ಲಿ 914 ಪ್ರಯೋಗಾಲಯಗಳು ಸರಕಾರಿ ವಲಯದಲ್ಲಿವೆ ಮತ್ತು 434 ಖಾಸಗಿ ವಲಯದಲ್ಲಿವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1643143

ಇಲೆಕ್ಟ್ರಾನಿಕ್  ಲಸಿಕೆ ಬುದ್ದಿಮತ್ತೆ ಜಾಲವು ಕೋವಿಡ್ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಅವಶ್ಯ ರೋಗ ನಿರೋಧಕ  ಸೇವೆಗಳನ್ನು ಖಾತ್ರಿಪಡಿಸಿದೆ

ಇಲೆಕ್ಟ್ರಾನಿಕ್  ಲಸಿಕೆ ಬುದ್ದಿಮತ್ತೆ ಜಾಲವು (.ವಿ..ಎನ್- ವಿನ್ ) ಒಂದು ನವೀನ ತಾಂತ್ರಿಕ ಪರಿಹಾರವಾಗಿದ್ದು ದೇಶಾದ್ಯಂತ ರೋಗನಿರೋಧಕ ಲಸಿಕಾ ಪೂರೈಕೆ ಸರಪಳಿ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಆರೋಗ್ಯ ಆಂದೋಲನ ಅಡಿಯಲ್ಲಿ ಇದನ್ನು ಅನುಷ್ಟಾನಿಸಲಾಗುತ್ತಿದೆ. ಲಸಿಕೆಗಳ ದಾಸ್ತಾನು  ಮತ್ತು ಅವುಗಳ ರವಾನೆಗೆ ಸಂಬಂಧಿಸಿದ ಸಕಾಲಿಕ ಮಾಹಿತಿ ಮತ್ತು ದೇಶದ ಎಲ್ಲಾ ಶೀತಲೀಕೃತ ಸರಪಳಿ ಬಿಂದುಗಳಲ್ಲಿಯ ದಾಸ್ತಾನು ಉಷ್ಣಾಂಶ ವಿವರಗಳನ್ನು ಒದಗಿಸುವ ಉದ್ದೇಶವನ್ನು ವಿನ್  ಹೊಂದಿದೆ. ಕೋವಿಡ್ ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಅವಶ್ಯಕ ರೋಗ ನಿರೋಧಕ ಲಸಿಕಾ ಸೇವೆಗಳನ್ನು ಮುಂದುವರಿಸಲು ಮತ್ತು  ರೋಗ ತಡೆಯಬಹುದಾದ ಲಸಿಕೆಗಳನ್ನು ಮಕ್ಕಳಿಗೆ ಹಾಗು  ಗರ್ಭಿಣಿ ಮಹಿಳೆಯರಿಗೆ ನೀಡುವುದನ್ನು ಖಾತ್ರಿಪಡಿಸಲು ಅವಶ್ಯಕ ಗ್ರಾಹಕೀಕರಣ  ಮಾದರಿಯಲ್ಲಿ ದೃಢವಾದ ವ್ಯವಸ್ಥೆಯನ್ನು ಬಳಸಲಾಗಿತ್ತು.   -ವಿನ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬಲಿಷ್ಟ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಹಾಗು ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು  ಲಸಿಕೆಗಳನ್ನು ವಿವಿಧೆಡೆಗಳಲ್ಲಿ ದಾಸ್ತಾನು ಮಾಡುವಾಗ ಅವುಗಳ ಸಂಗ್ರಹಾಗಾರಗಳ ಉಷ್ಣಾಂಶ ನಿಗಾ ಮಾಡುವುದಕ್ಕಾಗಿ ಮತ್ತು ದಾಸ್ತಾನಿಗೆ ಸಂಬಂಧಿಸಿ ಸಕಾಲಿಕ ನಿಗಾ ವಹಿಸುವುದಕ್ಕಾಗಿ ಹೊಂದಿದೆ. ವಿನ್ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ತಲುಪಿದ್ದು, ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಶೀಘ್ರವೇ ಅನುಷ್ಟಾನಕ್ಕೆ ಬರಲಿದೆ. ಕೋವಿಡ್ -19 ವಿರುದ್ದ ಹೋರಾಡುವ ಭಾರತ ಸರಕಾರದ ಪ್ರಯತ್ನಗಳನ್ನು ವಿನ್ ಬೆಂಬಲಿಸುತ್ತಿದೆ. ಕೋವಿಡ್ ಪ್ರತಿಕ್ರಿಯಾ ಸಾಮಗ್ರಿಗಳ ಪೂರೈಕೆ ಸರಪಳಿಯ ಮೇಲೆ ನಿಗಾ ಇಡಲು ರಾಜ್ಯ /ಕೇಂದ್ರಾಡಳಿತ ಪ್ರದೇಶಗಳಿಗೆ ಸಹಾಯ ಮಾಡುತ್ತಿದೆ. 2020 ಏಪ್ರಿಲ್ ತಿಂಗಳಿನಿಂದ ಎಂಟು ರಾಜ್ಯಗಳು ( ತ್ರಿಪುರಾ, ನಾಗಾಲ್ಯಾಂಡ್ , ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ, ಹರ್ಯಾಣಾ, ಪಂಜಾಬ್, ಮತ್ತು ಮಹಾರಾಷ್ಟ್ರ) ವಿನ್ ಅಪ್ಲಿಕೇಶನ್ ಗಳನ್ನು ಬಳಸುತ್ತಿವೆ. ರಾಜ್ಯಗಳ ನಿರ್ದಿಷ್ಟ ಕೋವಿಡ್ -19 ಸಾಮಗ್ರಿಗಳ ಪೂರೈಕೆ , ಲಭ್ಯತೆ ಖಾತ್ರಿಪಡಿಸುವಿಕೆ ಮತ್ತು 81 ಅವಶ್ಯ ಔಷಧಿಗಳು ಮತ್ತು ಸಲಕರಣೆಗಳ  ಕೊರತೆ ಇದ್ದರೆ ಅದರ ಬಗ್ಗೆ ಎಚ್ಚರಿಕೆ ನೀಡುವುದಕ್ಕೆ ವಿನ್ ಬಳಕೆ ಮಾಡುತ್ತಿವೆ. ಬಲಿಷ್ಟ ವೇದಿಕೆಯು ಕೋವಿಡ್ -19  ಲಸಿಕೆ ಸಹಿತ ಯಾವುದೇ ರೋಗ ಹತೋಟಿಯ ಲಸಿಕೆಯು ಲಭ್ಯವಾದಾಗ ಅದನ್ನು ಅಳವಡಿಸಿಕೊಳ್ಳುವ  ಸಾಮರ್ಥ್ಯವನ್ನು ಹೊಂದಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1643172

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

    • ಪಂಜಾಬ್: ಕೊರೊನಾ ವೈರಸ್ಸಿನಿಂದ ಗರ್ಭಿಣಿ ಮಹಿಳೆಯರ ಸುರಕ್ಷೆಯನ್ನು ಖಾತ್ರಿಪಡಿಸುವುದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಗರ್ಭಿಣಿ ಮಹಿಳೆಯರಿಗೆ ಟೆಲಿವೈದ್ಯಕೀಯ ಸಮಾಲೋಚನೆಯನ್ನು ಒದಗಿಸುವುದಕ್ಕಾಗಿ 70 ಮಂದಿ ಹೆರಿಗೆ ತಜ್ಞರಿಗೆ ವಿಶೇಷ ತರಬೇತಿ ನೀಡಿದೆ. ಇದರ ಜೊತೆಗೆ ಕೋವಿಡ್ -19 ಪಾಸಿಟಿವ್ ಇರುವ ಎಲ್ಲಾ ಗರ್ಭಿಣಿ ಮಹಿಳೆಯರ ಹೆರಿಗೆಗಳನ್ನು ನಡೆಸುವುದಕ್ಕಾಗಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹೆರಿಗೆ ಕೊಠಡಿಗಳನ್ನು ಸ್ಥಾಪಿಸಲಾಗಿದೆ.
    • ಮಹಾರಾಷ್ಟ್ರ: ಗ್ರಾಮೀಣ ಮಹಾರಾಷ್ಟ್ರದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಸತತ ಹೆಚ್ಚುತ್ತಿದೆ. ಲಾಕ್ ಡೌನ್ ನಿರ್ಬಂಧಗಳ ತೆರವಿನ ಬಳಿಕ ಸ್ಥಿತಿ ಉಂಟಾಗಿದೆ. ಮುಂಬಯಿಯ ಉಪ ನಗರಗಳಾದಥಾಣೆ, ರಾಯಗಢ ಇತ್ಯಾದಿ ನಗರಗಳ ನೆರೆ ಹೊರೆಯಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ನಾಸಿಕ್, ಔರಂಗಾಬಾದ್, ಧುಲೆ, ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿ ಇಂತಹದೇ ಪರಿಸ್ಥಿತಿ ಉಂಟಾಗಿದೆ. ಭಾನುವಾರದಂದು ಮಹಾರಾಷ್ಟ್ರದಲ್ಲಿ 9,509  ಹೊಸ ಕೋವಿಡ್ ಪ್ರಕರಣಗಳು  ವರದಿಯಾಗಿವೆ ಮತ್ತು 9,926 ರೋಗಿಗಳು ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,48,537.ಗುಣಮುಖ ದರದಲ್ಲಿ ಸುಧಾರಣೆಯಾಗುತ್ತಿರುವುದರಿಂದ ಹಲವಾರು ಮಂದಿ ಭಯ ತೊರೆದು ಕೋವಿಡ್ ಪರೀಕ್ಷೆಗೆ ಒಳಗಾಗುತ್ತಿರುವುದು ಕಂಡುಬರುತ್ತಿದೆ.
    • ಗುಜರಾತ್: ಭಾನುವಾರದಂದು ಗುಜರಾತಿನಲ್ಲಿ 805 ಕೋವಿಡ್ -19 ರೋಗಿಗಳು ಬಿಡುಗಡೆಯಾಗಿದ್ದಾರೆ ಮತ್ತು ಗುಣಮುಖ ದರ ಇನ್ನಷ್ಟು ಸುಧಾರಣೆಯಾಗಿ 73.16 % ಗೆ ತಲುಪಿದೆ. ರಾಜ್ಯದಲ್ಲಿ ಇದುವರೆಗೆ 46,587 ರೋಗಿಗಳು ಗುಣಮುಖರಾಗಿದ್ದಾರೆ. 1101 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ದೃಢೀಕೃತ ಪ್ರಕರಣಗಳ ಸಂಖ್ಯೆ 63,675 ಕ್ಕೇರಿದೆ. ಸೂರತ್ತಿನಿಂದ ಗರಿಷ್ಟ ಸಂಖ್ಯೆಯ ಅಂದರೆ 209 ಹೊಸ ಪ್ರಕರಣಗಳು ವರದಿಯಾಗಿವೆ. ಅಹ್ಮದಾಬಾದ್ (143) ಎರಡನೆ ಸ್ಥಾನದಲ್ಲಿದೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 14,601
    • ರಾಜಸ್ಥಾನ : ಭಾನುವಾರದಂದು ರಾಜಸ್ಥಾನದಲ್ಲಿ 12 ಕೋವಿಡ್ -19 ರೋಗಿಗಳು ಸಾವನ್ನಪ್ಪಿದ್ದಾರೆ. ಇದರೊಂದಿಗೆ ರೋಗಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 706 ಕ್ಕೇರಿದೆ.ಇಂದು ಬೆಳಿಗ್ಗೆ ರಾಜ್ಯದಲ್ಲಿ  565 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಹೊರೆ 44,975 ಕ್ಕೇರಿದೆ. ಇದರಲ್ಲಿ 12,488 ಸಕ್ರಿಯ ಪ್ರಕರಣಗಳು.  ಒಟ್ಟು 29,697 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ.
    • ಮಧ್ಯ ಪ್ರದೇಶ: ಭಾನುವಾರದಂದು 921 ಹೊಸ ಪ್ರಕರಣಗಳು ವರದಿಯಾದ ಬಳಿಕ ಒಟ್ಟು ಪ್ರಕರಣಗಳ ಸಂಖ್ಯೆ 33,535 ಕ್ಕೇರಿದೆ. ರಾಜ್ಯ ಆರೋಗ್ಯ ಬುಲೆಟಿನ್ ಪ್ರಕಾರ ಭಾನುವಾರದಂದು 581 ಕೊರೊನಾವೈರಸ್ ಸೋಂಕಿತರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಗುಣಮುಖ ಪ್ರಕರಣಗಳ ಒಟ್ಟು ಸಂಖ್ಯೆ 23,550 ಕ್ಕೇರಿದೆ. ರಾಜ್ಯದಲ್ಲೀಗ 9,099 ಸಕ್ರಿಯ ಪ್ರಕರಣಗಳಿವೆ ಮತ್ತು ಇದುವರೆಗೆ ಸೋಂಕಿಗೆ 886 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ 3,246 ಸಕ್ರಿಯ ಕಂಟೈನ್ ಮೆಂಟ್ ವಲಯಗಳಿವೆ.  
    • ಛತ್ತೀಸ್ ಗಢ: ರಾಜ್ಯದಲ್ಲಿ ಸೋಂಕು ಲಕ್ಷಣ ತೋರ್ಪಡಿಸದೇ ಇರುವ ಮತ್ತು ಮಂದ ರೋಗಲಕ್ಷಣಗಳನ್ನು ತೋರ್ಪಡಿಸುವ ಕೊರೊನಾವೈರಸ್ ರೋಗಿಗಳ ಚಿಕಿತ್ಸೆಗಾಗಿ ಛತ್ತೀಸ್ ಗಢ ಸರಕಾರ 157 ಕೋವಿಡ್ ಶುಶ್ರೂಷಾ ಕೇಂದ್ರಗಳನ್ನು 18,598 ಹಾಸಿಗೆಗಳ ಸಾಮರ್ಥ್ಯದೊಂದಿಗೆ ಸ್ಥಾಪಿಸಿದೆ. ಇಂತಹ ರೋಗಿಗಳಿಗೆ ಹಾಸಿಗೆಗಳ ಲಭ್ಯತೆಯನ್ನು 25,000 ಕ್ಕೇರಿಸಲು ಸಿದ್ದತೆಗಳನ್ನು ಮಾಡಲಾಗುತ್ತಿದೆ. ರಾಜ್ಯವು 2,482 ಸಕ್ರಿಯ ಪ್ರಕರಣಗಳನ್ನು ಹೊಂದಿದೆ.
    • ಗೋವಾ: ಭಾನುವಾರದಂದು ದಾಖಲೆ ಪ್ರಮಾಣದಲ್ಲಿ ಅಂದರೆ 337 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಗೋವಾದಲ್ಲಿ ಸೋಂಕಿನ ಪ್ರಮಾಣ 6,530 ಕ್ಕೇರಿದೆ. 5 ಮಂದಿ ಮೃತಪಡುವುದರೊಂದಿಗೆ ಮೃತರ ಒಟ್ಟು ಸಂಖ್ಯೆ 53 ಕ್ಕೇರಿದೆ. ನಡುವೆ ಗೋವಾ ಸರಕಾರ ಕೊರೊನಾ ಬಾಧಿತರಾಗಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಮೇಲೆ ಪ್ಲಾಸ್ಮಾ ಚಿಕಿತ್ಸೆ ನಡೆಸಲು ಆರಂಭಿಸಿದೆ.
    • ಮಣಿಪುರ: ಮಣಿಪುರ ಮುಖ್ಯಮಂತ್ರಿ ಶ್ರೀ ಎನ್. ಬಿರೇನ್ ಸಿಂಗ್ ಇಂದು ಮಣಿಪುರ ವ್ಯಾಪಾರ ಮತ್ತು ಎಕ್ಸ್ಪೋ ಕೇಂದ್ರದಲ್ಲಿ 300 ಹಾಸಿಗೆಗಳ ಹೊಸ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿ ಕಾರ್ಯಾರಂಭಗೊಳಿಸಿದರು. ಸೌಲಭ್ಯವನ್ನು ಅವಶ್ಯಕತೆ ಉಂಟಾದರೆ 1000 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬಹುದು.
    • ಮಿಜೋರಾಂ: ಮಿಜೋರಾಂನಲ್ಲಿಂದು ಗುಣಮುಖರಾದ 8 ಮಂದಿ ಕೋವಿಡ್ -19 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 482. ಇವುಗಳಲ್ಲಿ 216 ಸಕ್ರಿಯ ಪ್ರಕರಣಗಳು ಮತ್ತು 266 ಮಂದಿ ಇದುವರೆಗೆ ಬಿಡುಗಡೆಯಾಗಿದ್ದಾರೆ.
    • ನಾಗಾಲ್ಯಾಂಡ್: ನಾಗಾಲ್ಯಾಂಡಿನಲ್ಲಿಂದು 194 ಹೊಸ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ. ಧಿಮಾಪುರದಿಂದ 136, ಝುನ್ಹೆಬೊಟೋದಿಂದ 36, ಮತ್ತು ಕೊಹಿಮಾದಿಂದ 22 ಪ್ರಕರಣಗಳು ವರದಿಯಾಗಿವೆ. ನಾಗಾಲ್ಯಾಂಡಿನಲ್ಲಿ ಸಂಪರ್ಕ ಪತ್ತೆಯನ್ನು ಕಟ್ಟು ನಿಟ್ಟಾಗಿ ಕೈಗೊಳ್ಳಲಾಗುತ್ತಿದೆ ಮತ್ತು ಹೊಸ ಕೋವಿಡ್ -19 ಪ್ರಕರಣಗಳಲ್ಲಿ ಎಲ್ಲಾ ಪ್ರಾಥಮಿಕ ಸಂಪರ್ಕಗಳನ್ನು ಸ್ವಯಂ ಕ್ವಾರಂಟೈನಿನಲ್ಲಿಡಲಾಗಿದೆ.
    • ಕೇರಳ: ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳು ಹರಡಲು ನಿರ್ಲಕ್ಷ್ಯ ಕಾರಣ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈಗಿನ ಪರಿಸ್ಥಿತಿಗೆ ಕೋವಿಡ್ ಶಿಷ್ಟಾಚಾರದಲ್ಲಿ ಮಾಡಿಕೊಂಡ ರಾಜಿ ಮತ್ತು ನಿರ್ಲಕ್ಷ್ಯದ ವರ್ತನೆ ಕಾರಣ ಎಂದವರು ಅಭಿಪ್ರಾಯಪಟ್ಟಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ 102 ಕುಟುಂಬ ಆರೋಗ್ಯ ಕೇಂದ್ರಗಳನ್ನು ಉದ್ಘಾಟಿಸಿದ ಸಂದರ್ಭ ಮಾತನಾಡಿದ ಅವರು ಇನ್ನು ಮುಂದೆ ಸರಕಾರದ ನಿಯಮಗಳು ,ಮಾನದಂಡಗಳನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಇಂದು ಮೂರು ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಕೋವಿಡ್ ನಿಂದ ಮೃತರಾದವರ ಒಟ್ಟು ಸಂಖ್ಯೆ 85 ಕ್ಕೇರಿದೆ. ರಾಜ್ಯದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ನಿನ್ನೆ 1169 ಮಂದಿಗೆ ವೈರಸ್ ಸೋಂಕು ದೃಢಪಟ್ಟಿದೆ. 11 ದಿನಗಳಲ್ಲಿ 10,788 ಮಂದಿಗೆ ಸೋಂಕು ತಗಲಿದೆ. 991 ಮಂದಿ ರೋಗಿಗಳ ಸಂಪರ್ಕದಿಂದ ಸೋಂಕು ತಗಲಿಸಿಕೊಂಡಿದ್ದಾರೆ ಮತ್ತು 56 ಮಂದಿಯ ಸೋಂಕಿನ ಮೂಲ ಗೊತ್ತಾಗಿಲ್ಲ. ವೈರಸ್ ಸೋಂಕಿಗಾಗಿ 11,342 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯಾದ್ಯಂತ 1.45 ಲಕ್ಷ ಮಂದಿ ನಿಗಾದಲ್ಲಿದ್ದಾರೆ
    • ತಮಿಳು ನಾಡು : ಪುದುಚೇರಿಯಲ್ಲಿ ಮತ್ತೆ ನಾಲ್ಕು ಮಂದಿ ಕೋವಿಡ್ -19 ಕ್ಕೆ ಬಲಿಯಾಗಿದ್ದಾರೆ. 178 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 3982ಕ್ಕೇರಿದೆ . ಸಕ್ರಿಯ ಪ್ರಕರಣಗಳ ಸಂಖ್ಯೆ 1515 ಮತ್ತು ಮರಣಗಳು 56. ಸರಕಾರಿ ಕಲಾ ಕಾಲೇಜುಗಳ ಬೋಧಕರು ಎರಡನೆ ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಆನ್ ಲೈನ್ ತರಗತಿಗಳನ್ನು ಆರಂಭಿಸಲಿದ್ದಾರೆ. ಸಂಪೂರ್ಣವಾಗಿ ಆನ್ ಲೈನ್ ತರಗತಿಗಳನ್ನು ಜಾರಿಗೆ ತರುವುದಕ್ಕಾಗಿ ಗ್ರೇಡ್ -1 ಕಾಲೇಜುಗಳಿಗೆ ಸಮಾನವಾಗಿ ಗ್ರೇಡ್ 2 ಕಾಲೇಜುಗಳಿಗೂ ಹಣಕಾಸು ಒದಗಿಸುವಂತೆ ಬೋಧಕರು ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ. ನಾಗಪಟ್ಟಣಂ ಸಂಸತ್ ಸದಸ್ಯರಾದ ಸಿ.ಪಿ..ಎಂ. ಸೆಲ್ವರಸು ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿ ಹೊರಹೊಮ್ಮಿದ ಒಂದು ದಿನದ ಬಳಿಕ ಇನ್ನೋರ್ವ ಲೋಕಸಭಾ ಸದಸ್ಯ , ಶಿವಗಂಗಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾರ್ತಿ  ಪಿ. ಚಿದಂಬರಂ ಸೋಮವಾರ ವೈರಸ್ ಸೋಂಕಿನ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಚೆನ್ನೈಯ ನೆರೆ ಹೊರೆಯ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಚೆಂಗಲ್ಪಟ್ಟುವಿನಲ್ಲಿ 446 ಪ್ರಕರಣಗಳು , ಕಾಂಚೀಪುರಂನಲ್ಲಿ 393 ಮತ್ತು ತಿರುವಲ್ಲೂರುನಲ್ಲಿ 317 ಪ್ರಕರಣಗಳು ವರದಿಯಾಗಿವೆ. ನಿನ್ನೆ 5875 ಹೊಸ ಪ್ರಕರಣಗಳು ಮತ್ತು 98 ಸಾವುಗಳು ವರದಿಯಾಗಿವೆ. ಒಟ್ಟು ವರದಿಯಾದ ಪ್ರಕರಣಗಳ ಸಂಖ್ಯೆ 2,57,613; ಸಕ್ರಿಯ ಪ್ರಕರಣಗಳು : 56,998 , ಮರಣಗಳು: 4132
    • ಕರ್ನಾಟಕ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ವೈದ್ಯಕೀಯ ರೀತಿಯಲ್ಲಿ ಸ್ಥಿರವಾಗಿದ್ದಾರೆ ಎಂದು ಆಸ್ಪತ್ರೆ ವರದಿಗಳು ಹೇಳಿವೆ. ಕಳೆದ 10 ದಿನಗಳಿಂದ ಕೋವಿಡ್ ನಿಗಾ ಕೇಂದ್ರಗಳಲ್ಲಿಯ ಹಾಸಿಗೆಗಳಲ್ಲಿ 60 ರಿಂದ 65 % ನಷ್ಟು ಹಾಸಿಗೆಗಳು ಮಾತ್ರವೇ ಭರ್ತಿಯಾಗಿರುವುದರಿಂದ ಇಂತಹ ಇನ್ನಷ್ಟು ಸೌಲಭ್ಯಗಳ ಸ್ಥಾಪನೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಭಾನುವಾರದಂದು ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ ಹೆಚ್ಚಾಗಿತ್ತು. ಬೆಂಗಳೂರಿನಲ್ಲಿ   2331 ರೋಗಿಗಳು ಬಿಡುಗಡೆಯಾಗಿದ್ದರೆ 2105 ಹೊಸ ಪ್ರಕರಣಗಳು ವರದಿಯಾಗಿವೆ. ನಿನ್ನೆ 5532 ಹೊಸ ಪ್ರಕರಣಗಳು ಮತ್ತು 84 ಸಾವುಗಳು ವರದಿಯಾಗಿವೆ. ಇದುವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ : 1,34,819. ಸಕ್ರಿಯ ಪ್ರಕರಣಗಳು:74,590; ಮರಣಗಳು: 2496
    • ಆಂಧ್ರ ಪ್ರದೇಶ: ಕೃಷ್ಣಾ ಜಿಲ್ಲೆಯಲ್ಲಿ ಭಾನುವಾರದಂದು ಕೋವಿಡ್ -19 ಪ್ರಕರಣಗಳ ಸಂಖ್ಯೆ 7500 ಗಡಿ ದಾಟಿವೆ. ಇಂದಿನಿಂದ ಒಂದು ವಾರದವರೆಗೆ ಮಚಲೀಪಟ್ಟಣಂನಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲಾಗಿದೆ. ರಾಜ್ಯದ ಕೋವಿಡ್ ಗಾಗಿಯೇ ಇರುವ ಆಸ್ಪತ್ರೆಯಾದ ವಿಸಾಕಾ ವೈದ್ಯ ವಿಜ್ಞಾನಗಳ ಸಂಸ್ಥೆಯಲ್ಲಿ (ವಿ..ಎಂ.ಎಸ್.) ರೋಗಿಗಳ ದುಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರವಾದ ಹಿನ್ನೆಲೆಯಲ್ಲಿ ಮತ್ತು ಅಲ್ಲಿ ಸಿಬ್ಬಂದಿಗಳ ಕೊರತೆ ಅದರಲ್ಲೂ ದಾದಿಯರ ಕೊರತೆ ತೀವ್ರವಾಗಿರುವ ಬಗ್ಗೆ ಸ್ಪಷ್ಟೀಕರಣ ನೀಡಿರುವ ವಿಶಾಖಪಟ್ಟಣಂ ಜಿಲ್ಲಾ ಕಲೆಕ್ಟರ್ ಎಲ್ಲಾ ಪಾಳಿಗಳಲ್ಲಿ 100 ದಾದಿಯರನ್ನು ವಿ..ಎಂ.ಎಸ್. ಗೆ ನಿಯುಕ್ತಿ ಮಾಡಲಾಗಿದೆ ಎಂದಿದ್ದಾರಲ್ಲದೆ, 213 ದಾದಿಯರ ನೇಮಕಾತಿ ಇನ್ನೊಂದು ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ. ನಿನ್ನೆ 8555 ಹೊಸ ಪ್ರಕರಣಗಳು ಮತ್ತು 67 ಸಾವುಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು: 1,58,764, ಸಕ್ರಿಯ ಪ್ರಕರಣಗಳು: 74,404, ಸಾವುಗಳು: 1474.  
    • ತೆಲಂಗಾಣ: ರಾಜ್ಯ ಬುಲೆಟಿನ್ ಪ್ರಕಾರ ತೆಲಂಗಾಣದ ಸರಕಾರಿ ಮತ್ತು ಖಾಸಗಿ ಬೋಧನಾ ಆಸ್ಪತ್ರೆಗಳು ಹಾಗು  ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಕೋವಿಡ್ -19 ರೋಗಿಗಳಿಗೆ  ಹಾಸಿಗೆಗಳ ಕೊರತೆ ಇಲ್ಲ. ಒಟ್ಟು 14,571 ಹಾಸಿಗೆಗಳು ಖಾಲಿ ಇವೆ. ಸರಕಾರಿ ಆಸ್ಪತ್ರೆಗಳಲ್ಲಿ  5936 ಹಾಸಿಗೆಗಳು ಖಾಲಿ ಇವೆ. ಕಳೆದ 24 ಗಂಟೆಗಳಲ್ಲಿ 983 ಹೊಸ ಪ್ರಕರಣಗಳು, 1019 ಚೇತರಿಕೆ ಪ್ರಕರಣಗಳು ಮತ್ತು 11 ಸಾವುಗಳು ವರದಿಯಾಗಿವೆ. 983 ಹೊಸ ಪ್ರಕರಣಗಳಲ್ಲಿ 273 ಪ್ರಕರಣಗಳು ಜಿ.ಎಚ್.ಎಂ.ಸಿ.ಯಿಂದ ವರದಿಯಾಗಿವೆ. ಒಟ್ಟು ಪ್ರಕರಣಗಳು: 67,660, ಸಕ್ರಿಯ ಪ್ರಕರಣಗಳು: 18,500, ಮರಣಗಳು: 551, ಗುಣಮುಖರಾಗಿ ಬಿಡುಗಡೆಗಳು: 48,609.Image Image

***



(Release ID: 1643275) Visitor Counter : 228