ಪ್ರಧಾನ ಮಂತ್ರಿಯವರ ಕಛೇರಿ

ಮಾರಿಷಸ್ ನ ನೂತನ ಸುಪ್ರೀಂ ಕೋರ್ಟ್ ಕಟ್ಟಡ ಉದ್ಘಾಟನೆ ವೇಳೆ ಪ್ರಧಾನಮಂತ್ರಿಯರ ಭಾಷಣದ ಪಠ್ಯ

Posted On: 30 JUL 2020 1:16PM by PIB Bengaluru

ಮಾರಿಷಸ್ ಗಣರಾಜ್ಯದ ಪ್ರಧಾನಮಂತ್ರಿ, ಗೌರವಾನ್ವಿತ ಪ್ರವಿಂದ್ ಕುಮಾರ್ ಜುಗ್ನೌತ್ ಅವರೇ, ಹಿರಿಯ ಸಚಿವರೆ ಮತ್ತು ಮಾರಿಷಸ್ ಗಣ್ಯರೇ, ಗೌರವಾನ್ವಿತ ಅತಿಥಿಗಳೇ, ನಮಸ್ಕಾರ, ಬೋಂಜೌರ್.

ನಿಮ್ಮೆಲ್ಲರಿಗೂ ನನ್ನ ಆತ್ಮೀಯ ಶುಭಾಶಯಗಳು. ಮೊದಲನೆಯದಾಗಿ, ಜಾಗತಿಕ ಮಹಾಮಾರಿ ಕೋವಿಡ್ -19 ಸಮರ್ಥ ನಿರ್ವಹಣೆಗಾಗಿ ನಾನು ಮಾರಿಷಸ್ ಸರ್ಕಾರ ಮತ್ತು ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಯತ್ನಕ್ಕೆ ಸಕಾಲದಲ್ಲಿ ಔಷಧಗಳನ್ನು ಪೂರೈಸುವ ಮತ್ತು ಅನುಭವವನ್ನು ಹಂಚಿಕೊಳ್ಳುವ ಮೂಲಕ ಭಾರತ ಬೆಂಬಲ ನೀಡಿತು ಎಂದು ತಿಳಿಸಲು ನಾನು ಹರ್ಷಿಸುತ್ತೇನೆ.

ಸ್ನೇಹಿತರೆ, ಇಂದು ಭಾರತ ಮತ್ತು ಮಾರಿಷಸ್ ವಿಶೇಷ ಬಾಂಧವ್ಯದಲ್ಲಿ ಹೆಗ್ಗುರುತಿನ ಮತ್ತೊಂದು ಸಂಭ್ರಮ ಆಚರಿಸುತ್ತಿದ್ದೇವೆ. ಪೋರ್ಟ್ ಲೂಯಿಸ್ ನಲ್ಲಿನ ಹೊಸ ಸುಪ್ರೀಂ ಕೋರ್ಟ್ ಕಟ್ಟಡವು ನಮ್ಮ ಸಹಕಾರ ಮತ್ತು ನಮ್ಮ ಹಂಚಿಕೆಯ ಮೌಲ್ಯಗಳ ಸಂಕೇತವಾಗಿದೆ. ಭಾರತ ಮತ್ತು ಮಾರಿಷಸ್ ಎರಡೂ ನಮ್ಮ ಸ್ವತಂತ್ರ ನ್ಯಾಯಾಂಗವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವದ ಆಧಾರ ಸ್ತಂಭಗಳೆಂದು ಗೌರವಿಸುತ್ತವೆ.

ಸ್ಫೂರ್ತಿದಾಯಕ ಹೊಸ ಕಟ್ಟಡವು ಆಧುನಿಕ ವಿನ್ಯಾಸ ಮತ್ತು ನಿರ್ಮಾಣದೊಂದಿಗೆ ಗೌರವಕ್ಕೆ ಪಾತ್ರವಾಗಿದೆ. ಯೋಜನೆಯು ನಿಗದಿತ ಕಾಲಮಿತಿಯೊಳಗೆ ಮತ್ತು ಆರಂಭಿಕ ಅಂದಾಜು ಮೊತ್ತದೊಳಗೆ ಪೂರ್ಣಗೊಂಡಿರುವುದಕ್ಕೆ ನಾನು ಹರ್ಷಿಸುತ್ತೇನೆ

ಪ್ರಧಾನಮಂತ್ರಿ ಜುಗ್ನೌತ್ ಅವರೇ, ಕೆಲವೇ ತಿಂಗಳುಗಳ ಹಿಂದೆ, ನಾವಿಬ್ಬರೂ ಹೆಗ್ಗುರುತಿನ ಮೆಟ್ರೋ ಯೋಜನೆ ಮತ್ತು ಹೊಸ ಸುವ್ಯವಸ್ಥಿತ ಆಸ್ಪತ್ರೆಯನ್ನು ಜಂಟಿಯಾಗಿ ಉದ್ಘಾಟಿಸಿದ್ದೆವು. ಎರಡೂ ಯೋಜನೆಗಳು ಮಾರಿಷಸ್ ಜನರಿಗೆ ಉಪಯುಕ್ತವಾದ ಸೇವೆ ಒದಗಿಸುತ್ತಿವೆ ಎಂದು ತಿಳಿದು ಸಂತೋಷವಾಯಿತು.

ಸ್ನೇಹಿತರೆ, ನಾನು ಮಾರಿಷಸ್ ನಲ್ಲಿ ಸಾಗರ್ ವಲಯದ ಎಲ್ಲರ ಪ್ರಗತಿ ಮತ್ತು ಭದ್ರತೆ ಕುರಿತು ಮೊದಲಿಗೆ ಮಾತನಾಡಿದ್ದೆ. ಹಿಂದೂ ಮಹಾಸಾಗರ ವಲಯದ ಭಾರತದ ದೃಷ್ಟಿಕೋನದಲ್ಲಿ ಮಾರಿಷಸ್ ಹೃದಯ ಭಾಗದಲ್ಲಿದೆ ಎಂಬುದು ಇದಕ್ಕೆ ಕಾರಣ. ಭಾರತದ ಅಭಿವೃದ್ಧಿ ಸಹಯೋಗದ ದೃಷ್ಟಿಕೋನದಲ್ಲಿ ಸಹ ಮಾರಿಷಸ್ ಹೃದಯಭಾಗದಲ್ಲಿದೆ ಎಂದು ಇಂದು, ನಾನು ತಿಳಿಸಲು ಬಯಸುತ್ತೇನೆ.

ಸ್ನೇಹಿತರೆ, ಮಹಾತ್ಮಾ ಗಾಂಧಿ ಅವರು ಸರಿಯಾಗಿಯೇ ಹೇಳಿದ್ದಾರೆ ಅದನ್ನು ನಾನು ಉಲ್ಲೇಖಿಸುತ್ತೇನೆ: ನಾನು ಇಡೀ ಪ್ರಪಂಚದ ದೃಷ್ಟಿಯಿಂದ ಯೋಚಿಸಲು ಬಯಸುತ್ತೇನೆ. ನನ್ನ ದೇಶಪ್ರೇಮವು ಸಾಮಾನ್ಯವಾಗಿ ಮಾನವಕುಲದ ಒಳಿತನ್ನು ಒಳಗೊಂಡಿರುತ್ತದೆ. ಆದ್ದರಿಂದ, ಭಾರತಕ್ಕೆ ನಾನು ಸಲ್ಲಿಸುವ ಸೇವೆಯು, ಮಾನವೀಯತೆಯ ಸೇವೆಯೂ ಆಗಿರುತ್ತದೆ. ಇದು ಭಾರತದ ನಿರ್ದೇಶಕ ತತ್ವವಾಗಿದೆ. ಭಾರತ ಅಭಿವೃದ್ಧಿ ಹೊಂದಲು ಬಯಸುತ್ತದೆ ಮತ್ತು ಇತರರಿಗೂ ಅವರ ಅಭಿವೃದ್ಧಿ ಅಗತ್ಯ ಪೂರೈಸಲು ನೆರವಾಗಲು ಬಯಸುತ್ತದೆ.

ಸ್ನೇಹಿತರೆ, ಭಾರತದ ಅಭಿವೃದ್ಧಿಯ ದೃಷ್ಟಿಕೋನ ಮುಖ್ಯವಾಗಿ ಮಾನವ ಕೇಂದ್ರಿತವಾಗಿದೆ. ನಾವು ಮಾನವತೆಯ ಕಲ್ಯಾಣಕ್ಕಾಗಿ ಕೆಲಸ ಮಾಡಲು ಇಚ್ಛಿಸುತ್ತೇವೆ. ಅಭಿವೃದ್ಧಿ ಸಹಭಾಗಿತ್ವದ ಹೆಸರಿನಲ್ಲಿ ರಾಷ್ಟ್ರಗಳನ್ನು ಅವಲಂಬನೆ ಸಹಭಾಗಿತ್ವಕ್ಕೆ ಒತ್ತಾಯಿಸಲ್ಪಟ್ಟವು ಎಂಬುದನ್ನು ಇತಿಹಾಸವು ನಮಗೆ ಕಲಿಸಿದೆ. ಇದು ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಆಡಳಿತಕ್ಕೆ ನಾಂದಿ ಹಾಡಿತು. ಇದು ಜಾಗತಿಕ ವಿದ್ಯುತ್ ಘಟಕಗಳಿಗೂ ನಾಂದಿ ಹಾಡಿತು. ಮಾನವೀಯತೆ ನರಳುವಂತಾಯಿತು.

ಸ್ನೇಹಿತರೆ,

ಭಾರತವು ಗೌರವ, ವೈವಿಧ್ಯತೆ, ಭವಿಷ್ಯದ ಕಾಳಜಿ ಮತ್ತು ಸುಸ್ಥಿರ ಅಭಿವೃದ್ಧಿಯಿಂದ ಗುರುತಿಸಲ್ಪಟ್ಟ ಅಭಿವೃದ್ಧಿ ಸಹಭಾಗಿತ್ವವನ್ನು ನಿರ್ಮಿಸುತ್ತಿದೆ.

ಸ್ನೇಹಿತರೆ, ಭಾರತಕ್ಕೆ ಅಭಿವೃದ್ಧಿ ಸಹಕಾರದಲ್ಲಿ ಅತ್ಯಂತ ಮೂಲಭೂತ ತತ್ವವೆಂದರೆ ನಮ್ಮ ಪಾಲುದಾರರನ್ನು ಗೌರವಿಸುವುದಾಗಿದೆ. ಅಭಿವೃದ್ಧಿ ಪಾಠಗಳ ಹಂಚಿಕೆ ನಮ್ಮ ಏಕೈಕ ಪ್ರೇರಣೆ. ಅದಕ್ಕಾಗಿಯೇ ನಮ್ಮ ಅಭಿವೃದ್ಧಿ ಸಹಕಾರವು ಯಾವುದೇ ಷರತ್ತುಗಳೊಂದಿಗೆ ಇರುವುದಿಲ್ಲ. ಇದು ರಾಜಕೀಯ ಅಥವಾ ವಾಣಿಜ್ಯ ಪರಿಗಣನೆಗಳಿಂದ ಪ್ರಭಾವಿತವಾಗಿರುವುದೂ ಇಲ್ಲ.

ಸ್ನೇಹಿತರೆ, ಭಾರತದ ಅಭಿವೃದ್ಧಿ ಸಹಭಾಗಿತ್ವವು ವೈವಿಧ್ಯಮಯವಾಗಿದೆ. ವಾಣಿಜ್ಯದಿಂದ ಸಂಸ್ಕೃತಿವರೆಗೆ, ಇಂಧನದಿಂದ ಎಂಜಿನಿಯರಿಂಗ್ ವರೆಗೆ, ಆರೋಗ್ಯದಿಂದ ವಸತಿಯವರೆಗೆ, ಐಟಿಯಿಂದ ಮೂಲಸೌಕರ್ಯದವರೆಗೆ, ಕ್ರೀಡೆಯಿಂದ ವಿಜ್ಞಾನದವರೆಗೆ, ಭಾರತವು ಜಗತ್ತಿನಾದ್ಯಂತದ ರಾಷ್ಟ್ರಗಳೊಂದಿಗೆ ಕೂಡಿ ಶ್ರಮಿಸುತ್ತಿದೆ. ಭಾರತವು ಆಫ್ಘಾನಿಸ್ತಾನದ ಸಂಸತ್ ಭವನಕ್ಕೂ ನೆರವು ನೀಡುವ ಗೌರವ ಪಡೆದಿತ್ತು, ನೈಜರ್ ನಲ್ಲಿ ಮಹಾತ್ಮಾಗಾಂಧಿ ಸಮಾವೇಶ ಕೇಂದ್ರದಲ್ಲೂ ಜೊತೆಗೂಡಿದ್ದಕ್ಕೆ ಭಾರತ ಹೆಮ್ಮೆಪಡುತ್ತದೆ. ತುರ್ತು ಮತ್ತು ಟ್ರಾಮಾ ಆಸ್ಪತ್ರೆ ನಿರ್ಮಾಣದ ಮೂಲಕ ಆರೋಗ್ಯ ಸೇವೆ ಉತ್ತಮಪಡಿಸಲು ನೇಪಾಳಕ್ಕೆ ನೆರವಾಗಿದ್ದಕ್ಕೂ ನಾವು ಸಂತೋಷ ಪಡುತ್ತೇವೆ. ಅದೇ ರೀತಿ ಶ್ರೀಲಂಕಾದ ಎಲ್ಲ 9 ಪ್ರಾಂತಗಳಲ್ಲೂ ತುರ್ತು ಆಂಬುಲೆನ್ಸ್ ಸೇವೆ ಸ್ಥಾಪನೆಗೆ ಬೆಂಬಲ ನೀಡಿರುವುದಕ್ಕೂ ಹೆಮ್ಮೆ ಪಡುತ್ತೇವೆ. ನೇಪಾಳದೊಂದಿಗೆ ನಾವು ಕೈಗೊಂಡಿರುವ ತೈಲ ಕೊಳವೆ ಮಾರ್ಗ ಯೋಜನೆ ಪೆಟ್ರೋಲಿಯಂ ಉತ್ಪನ್ನಗಳ ಲಭ್ಯತೆಯ ಖಾತ್ರಿಗೆ ನೆರವಾಗುತ್ತದೆ. ಅದೇ ರೀತಿ, ಮಾಲ್ಡೀವ್ಸ್ 34 ದ್ವೀಪಗಳಲ್ಲಿ ಕುಡಿಯುವ ನೀರು ಲಭ್ಯತೆ ಮತ್ತು ಒಳಚರಂಡಿಯ ಖಾತ್ರಿಪಡಿಸುವ ನಿಟ್ಟಿನಲ್ಲಿ ಕೊಡುಗೆ ನೀಡುತ್ತಿರುವುದಕ್ಕೆ ಹರ್ಷಿಸುತ್ತೇವೆ. ಆಫ್ಘಾನಿಸ್ತಾನ ಮತ್ತು ಗಯಾನಾದಂಥ ವೈವಿಧ್ಯತೆಯ ರಾಷ್ಟ್ರಗಳಲ್ಲಿ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸುವ ಪ್ರಯತ್ನದಲ್ಲಿ ಕ್ರೀಡಾಂಗಣ ಮತ್ತು ಇತರ ಸೌಲಭ್ಯ ನಿರ್ಮಾಣಕ್ಕೆ ನೆರವಾಗಿದ್ದೇವೆ.

ಭಾರತದಲ್ಲಿ ತರಬೇತಿ ಪಡೆದ ಯುವ ಅಫ್ಘನ್ ಕ್ರಿಕೆಟ್ ತಂಡವು ಪರಿಗಣನಾತ್ಮಕ ಶಕ್ತಿಯಾಗಿ ಹೊರಹೊಮ್ಮುವುದನ್ನು ನೋಡಿ ನಾವು ಉತ್ಸುಕರಾಗಿದ್ದೇವೆ. ಮಾಲ್ಡೀವ್ಸ್ ಕ್ರಿಕೆಟ್ ಆಟಗಾರರ ಪ್ರತಿಭೆಯನ್ನು ಬೆಳೆಸಲು ನಾವು ಈಗ ಇದೇ ರೀತಿಯ ಬೆಂಬಲವನ್ನು ನೀಡುತ್ತಿದ್ದೇವೆ. ಶ್ರೀಲಂಕಾದ ಪ್ರಮುಖ ವಸತಿ ಯೋಜನೆಯಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂಬುದು ತುಂಬಾ ಹೆಮ್ಮೆಯ ವಿಷಯವೆಂದು ನಾವು ಪರಿಭಾವಿಸುತ್ತೇವೆ. ನಮ್ಮ ಅಭಿವೃದ್ಧಿ ಪಾಲುದಾರಿಕೆಗಳು ನಮ್ಮ ಪಾಲುದಾರ ರಾಷ್ಟ್ರಗಳ ಅಭಿವೃದ್ಧಿ ಆದ್ಯತೆಗಳನ್ನೂ ಪ್ರತಿಬಿಂಬಿಸುತ್ತವೆ.

ಸ್ನೇಹಿತರೆ, ಭಾರತವು ಕೇವಲ ನಿಮ್ಮ ವರ್ತಮಾನಕ್ಕೆ ನೆರವಾಗಲು ಹೆಮ್ಮೆ ಪಡುವುದಿಲ್ಲ. ನಾವು ನಿಮ್ಮ ಯುವಜನರ ಉತ್ತಮ ಭವಿಷ್ಯದ ನಿರ್ಮಾಣಕ್ಕೆ ನೆರವಾಗುವುದನ್ನು ನಮ್ಮ ಹೆಮ್ಮೆ ಎಂದು ಪರಿಭಾವಿಸುತ್ತೇವೆ. ಹೀಗಾಗಿಯೇ ಕೌಶಲ್ಯ ನಮ್ಮ ಅಭಿವೃದ್ಧಿ ಸಹಕಾರದಲ್ಲಿ ಮಹತ್ವದ ಭಾಗವಾಗಿದೆ. ನಮ್ಮ ಪಾಲುದಾರ ರಾಷ್ಟ್ರಗಳಲ್ಲಿನ ಯುವಕರನ್ನು ಅವರು ಸ್ವಾವಲಂಬಿಗಳನ್ನಾಗಿ ಮಾಡುತ್ತಾರೆ ಮತ್ತು ಭವಿಷ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಮಾರ್ಗದರ್ಶನ ಮಾಡುತ್ತಾರೆ.

ಸ್ನೇಹಿತರೆ, ಭವಿಷ್ಯವು ಸುಸ್ಥಿರ ಅಭಿವೃದ್ಧಿ ಕುರಿತಾದ್ದಾಗಿದೆಮಾನವನ ಅಗತ್ಯತೆಗಳು ಮತ್ತು ಆಕಾಂಕ್ಷೆಗಳು ನಮ್ಮ ನೈಸರ್ಗಿಕ ನೆರೆಹೊರೆಯೊಂದಿಗೆ ಸಂಘರ್ಷಕ್ಕಿಳಿಯಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ಮಾನವ ಸಬಲೀಕರಣ ಮತ್ತು ಪರಿಸರದ ಕಾಳಜಿ ಎರಡನ್ನೂ ನಂಬಿಕೆ ಇಟ್ಟಿದ್ದೇವೆ. ತತ್ವವನ್ನು ಆಧಾರವಾಗಿಟ್ಟುಕೊಂಡು, ಭಾರತವು ಅಂತಾರಾಷ್ಟ್ರೀಯ ಸೌರ ಸಹಯೋಗದಂಥ ಸಂಸ್ಥೆಯನ್ನು ಪೋಷಿಸುವ ಪ್ರಯತ್ನ ಮಾಡಿದೆ. ಮಾನವನ ಪ್ರಗತಿಯ ಪಯಣವನ್ನು ಸೂರ್ಯ ಕಿರಣಗಳು ಮತ್ತಷ್ಟು ಉಜ್ವಲಗೊಳಿಸಲಿ. ನಾವು ವಿಪತ್ತು ತಾಳಿಕೊಳ್ಳುವಂಥ ಮೂಲಸೌಕರ್ಯ ಬಲವಾದ ಮೈತ್ರಿಗೆ ಶ್ರಮಿಸುತ್ತಿದ್ದೇವೆ. ಎರಡೂ ಉಪಕ್ರಮಗಳು ದ್ವೀಪ ರಾಷ್ಟ್ರಗಳಿಗೆ ವಿಶೇಷ ಪ್ರಸ್ತುತತೆ ಹೊಂದಿವೆ. ಜಾಗತಿಕ ಸಮುದಾಯಗಳು ಪ್ರಯತ್ನಗಳನ್ನು ಬೆಂಬಲಿಸಿದ ರೀತಿ ಹೃದಯಸ್ಪರ್ಶಿಯಾಗಿದೆ.

ಸ್ನೇಹಿತರೆ, ನಾನು ಮಾತನಾಡಿದ ಎಲ್ಲಾ ಮೌಲ್ಯಗಳು ಮಾರಿಷಸ್ನೊಂದಿಗಿನ ನಮ್ಮ ವಿಶೇಷ ಸಹಭಾಗಿತ್ವದಲ್ಲಿ ಒಟ್ಟಾಗಿ ಸೇರುತ್ತವೆ. ಮಾರಿಷಸ್ ನೊಂದಿಗೆ, ನಾವು ಹಿಂದೂ ಮಹಾಸಾಗರದ ನೀರನ್ನಷ್ಟೇ ಹಂಚಿಕೊಳ್ಳುವುದಿಲ್ಲ, ಜೊತೆಗೆ ರಕ್ತಸಂಬಂಧ, ಸಂಸ್ಕೃತಿ ಮತ್ತು ಭಾಷೆಯ ಸಾಮಾನ್ಯ ಪರಂಪರೆಯನ್ನೂ ಹಂಚಿಕೊಳ್ಳುತ್ತೇವೆ. ನಮ್ಮ ಸ್ನೇಹ ಹಿಂದಿನಿಂದ ಶಕ್ತಿಯನ್ನು ಪಡೆದಿದೆ ಮತ್ತು ಭವಿಷ್ಯದತ್ತಲೂ ಮುಖ ಮಾಡಿದೆ. ಮಾರಿಷಸ್ ಜನರ ಸಾಧನೆಗೆ ಭಾರತ ಹೆಮ್ಮೆ ಪಡುತ್ತದೆ. ಪವಿತ್ರ ಆಪ್ರವಾಸಿ ಘಾಟ್ ಕಿರಿದಾದ ಮೆಟ್ಟಿಲುಗಳಿಂದ ಹಿಡಿದು ಆಧುನಿಕ ಕಟ್ಟಡದವರೆಗೆ ಮಾರಿಷಸ್ ಕಠಿಣ ಪರಿಶ್ರಮ ಮತ್ತು ನಾವೀನ್ಯತೆಗಳ ಮೂಲಕ ತನ್ನ ಯಶಸ್ಸನ್ನು ನಿರ್ಮಿಸಿದೆ. ಮಾರಿಷಸ್ ಚೈತನ್ಯವು ಸ್ಪೂರ್ತಿದಾಯಕವಾಗಿದೆ. ನಮ್ಮ ಪಾಲುದಾರಿಕೆ ಮುಂಬರುವ ವರ್ಷಗಳಲ್ಲಿ ಇನ್ನೂ ಔನ್ನತ್ಯವನ್ನು ಸಾಧಿಸಲು ಉದ್ದೇಶಿಸಿದೆ.

विव लामिते एंत्र लांद मोरीस 

भारत और मॉरिशस मैत्री अमर रहे।

ಭಾರತ ಮತ್ತು ಮಾರಿಷಸ್ ಮೈತ್ರಿ ಅಮರವಾಗಲಿ

ಧನ್ಯವಾದಗಳು

***



(Release ID: 1642753) Visitor Counter : 195