ಪ್ರಧಾನ ಮಂತ್ರಿಯವರ ಕಛೇರಿ

ಬ್ಯಾಂಕ್ ಮತ್ತು ಎನ್.ಬಿ.ಎಫ್.ಸಿ.ಗಳ ಬಾಧ್ಯಸ್ಥರೊಂದಿಗೆ ಪ್ರಧಾನಿ ಸಂವಾದ

Posted On: 29 JUL 2020 10:05PM by PIB Bengaluru

ಬ್ಯಾಂಕ್ ಮತ್ತು ಎನ್.ಬಿ.ಎಫ್.ಸಿ.ಗಳ ಬಾಧ್ಯಸ್ಥರೊಂದಿಗೆ ಪ್ರಧಾನಿ ಸಂವಾದ

 

ಭವಿಷ್ಯದ ದೃಷ್ಟಿ ಮತ್ತು ಮಾರ್ಗಸೂಚಿಯ ಕುರಿತು ಚರ್ಚಿಸಲು ಹಾಗೂ ಸಮಾಲೋಚಿಸಲು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಬ್ಯಾಂಕ್ ಮತ್ತು ಎನ್.ಬಿ.ಎಫ್.ಸಿ.ಗಳ ಬಾಧ್ಯಸ್ಥರ ಜೊತೆಗೂಡಿದರು.

ಪ್ರಗತಿಯನ್ನು ಬೆಂಬಲಿಸುವ ಹಣಕಾಸು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ನಿರ್ಣಾಯಕ ಪಾತ್ರದ ಕುರಿತು ಚರ್ಚಿಸಲಾಯಿತು. ಸಣ್ಣ ಉದ್ಯಮಿಗಳು, ಸ್ವಸಹಾಯ ಸಂಘಗಳು, ರೈತರು ತಮ್ಮ ಸಾಲದ ಅಗತ್ಯಗಳನ್ನು ಪೂರೈಸಿಕೊಳ್ಳಲು ಮತ್ತು ಪ್ರಗತಿಹೊಂದಲು ಸಾಂಸ್ಥಿಕ ಸಾಲವನ್ನು ಬಳಸಲು ಪ್ರೇರೇಪಿಸಬೇಕು ಎಂಬ ಬಗ್ಗೆ ಪ್ರಸ್ತಾಪಿಸಲಾಯಿತು. ಪ್ರತಿಯೊಂದು ಬ್ಯಾಂಕೂ ಸ್ಥಿರವಾದ ಸಾಲದ ವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಅದರ ರೂಢಿಗಳ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬ್ಯಾಂಕ್ ಗಳು ಎಲ್ಲ ಪ್ರಸ್ತಾವನೆಗಳನ್ನೂ ಒಂದೇ ಮಾನದಂಡದಲ್ಲಿ ಅಳೆಯಬಾರದು ಮತ್ತು ಬ್ಯಾಂಕಿಗೆ ಸೂಕ್ತವಾದ ಪ್ರಸ್ತಾಪಗಳನ್ನು ಪ್ರತ್ಯೇಕಿಸಲು ಮತ್ತು ಗುರುತಿಸಲು ಮತ್ತು ಅರ್ಹತೆಗನುಸಾರ ಧನಸಹಾಯವನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಹಿಂದಿನ ಎನ್‌.ಪಿಎಗಳ ಹೆಸರಿನಲ್ಲಿ ಅವರು ತೊಂದರೆಗೊಳಗಾಗಬಾರದು.

ಸರ್ಕಾರ ದೃಢವಾಗಿ ಬ್ಯಾಂಕಿಂಗ್ ವ್ಯವಸ್ಥೆಯ ಹಿಂದೆ ನಿಂತಿದೆ ಎಂಬುದನ್ನು ಪ್ರತಿಪಾದಿಸಲಾಯಿತು. ಸರ್ಕಾರ ಅದರ ಪ್ರಗತಿ ಮತ್ತು ಉತ್ತೇಜನಕ್ಕೆ ಬೆಂಬಲ ನೀಡಲು ಅಗತ್ಯವಾದ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ.

ಬ್ಯಾಂಕುಗಳು ಗ್ರಾಹಕರ ಡಿಜಿಟಲ್ ಸ್ವಾಧೀನತೆಯತ್ತ ಸಾಗಲು ಕೇಂದ್ರೀಕೃತ ದತ್ತಾಂಶ ವೇದಿಕೆಗಳು, ಡಿಜಿಟಲ್ ದಸ್ತಾವೇಜೀಕರಣ ಮತ್ತು ಮಾಹಿತಿಯ ಸಹಯೋಗದ ಬಳಕೆಯಂತಹ ಫಿನ್ಟೆಕ್ ಅನ್ನು ಅಳವಡಿಸಿಕೊಳ್ಳಬೇಕು. ಇದು ಸಾಲದ ಹರಿವು ಹೆಚ್ಚಿಸಲು, ಗ್ರಾಹಕರಿಗೆ ಸುಗಮ ವ್ಯವಹಾರ ಹೆಚ್ಚಿಸಲು, ಬ್ಯಾಂಕುಗಳಿಗೆ ವೆಚ್ಚವನ್ನು ಇಳಿಸಲು ಮತ್ತು ವಂಚನೆಗಳನ್ನು ತಗ್ಗಿಸಲು ನೆರವಾಗುತ್ತದೆ.

ಭಾರತವು ದೃಢವಾದ, ಕಡಿಮೆ ವೆಚ್ಚದ ಮೂಲಸೌಕರ್ಯವನ್ನು ನಿರ್ಮಿಸಿದ್ದು, ಇದು ಪ್ರತಿಯೊಬ್ಬ ಭಾರತೀಯರಿಗೆ ಯಾವುದೇ ಪ್ರಮಾಣದ ಡಿಜಿಟಲ್ ವಹಿವಾಟುಗಳನ್ನು ಬಹಳ ಸುಗಮವಾಗಿ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರ ನಡುವೆ ರುಪೇ ಮತ್ತು ಯುಪಿಐ ಬಳಕೆಗೆ ಪ್ರೋತ್ಸಾಹ ನೀಡಬೇಕು.

ಎಂಎಸ್‌.ಎಂಇಗಾಗಿ ತುರ್ತು ಸಾಲ, ಹೆಚ್ಚುವರಿ ಕೆಸಿಸಿ ಕಾರ್ಡ್ಗಳು, ಎನ್‌.ಬಿಎಫ್‌.ಸಿ ಮತ್ತು ಎಂಎಫ್‌.ಐಗಾಗಿ ನಗದು ಗವಾಕ್ಷಿ ಮುಂತಾದ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು. ಬಹುತೇಕ ಯೋಜನೆಗಳಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ, ಬಿಕ್ಕಟ್ಟಿನ ಅವಧಿಯಲ್ಲಿ ಸಾಲದ ಬೆಂಬಲವು ಸಮಯಕ್ಕೆ ಸರಿಯಾಗಿ ತಲುಪುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಬ್ಯಾಂಕುಗಳು ಸಕ್ರಿಯವಾಗಿರಬೇಕು ಮತ್ತು ಉದ್ದೇಶಿತ ಫಲಾನುಭವಿಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬುದನ್ನು ಉಲ್ಲೇಖಿಸಲಾಯಿತು.

***



(Release ID: 1642315) Visitor Counter : 239