ಪ್ರಧಾನ ಮಂತ್ರಿಯವರ ಕಛೇರಿ

ಉನ್ನತ ಗುಣಮಟ್ಟದ ಸಮಗ್ರ ಕೋವಿಡ್-19 ಪರೀಕ್ಷಾ ಸೌಲಭ್ಯ ಕೇಂದ್ರ ಉದ್ಘಾಟಿಸಲಿರುವ ಪ್ರಧಾನಮಂತ್ರಿ

Posted On: 26 JUL 2020 1:42PM by PIB Bengaluru

ಜುಲೈ 27ರಂದು ಉನ್ನತ ಗುಣಮಟ್ಟದ ಸಮಗ್ರ ಕೋವಿಡ್-19 ಪರೀಕ್ಷಾ ಸೌಲಭ್ಯ ಕೇಂದ್ರ ಉದ್ಘಾಟಿಸಲಿರುವ ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜುಲೈ 27ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉನ್ನತ ಗುಣಮಟ್ಟದ ಸಮಗ್ರ ಕೋವಿಡ್-19 ಪರೀಕ್ಷಾ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ. ಸೌಲಭ್ಯದಿಂದಾಗಿ ದೇಶಾದ್ಯಂತ ಪರೀಕ್ಷಾ ಸೌಕರ್ಯ ವೃದ್ಧಿಗೆ ನೆರವಾಗಲಿದೆ. ಮತ್ತು ತ್ವರಿತ ಪತ್ತೆ ಮತ್ತು ಚಿಕಿತ್ಸೆ ಸೌಲಭ್ಯ ಬಲವರ್ಧನೆಗೊಳಿಸಲು, ಮೂಲಕ ಸಾಂಕ್ರಾಮಿಕ ಹರಡುವುದನ್ನು ನಿಯಂತ್ರಿಸಲೂ ಸಹ ಸಹಕಾರಿಯಾಗಲಿದೆ.

ಮೂರು ಉನ್ನತ ಗುಣಮಟ್ಟಮಟ್ಟದ ಥ್ರೂಪುಟ್ ಪರೀಕ್ಷಾ ಸೌಕರ್ಯಗಳನ್ನು ನೋಯ್ಡಾದಲ್ಲಿರುವ ಐಸಿಎಂಆರ್ - ಕ್ಯಾನ್ಸರ್ ನಿಯಂತ್ರಣ ಮತ್ತು ಸಂಶೋಧನಾ ರಾಷ್ಟ್ರೀಯ ಕೇಂದ್ರ, ಮುಂಬೈನ ಐಸಿಎಂಆರ್ - ರಾಷ್ಟ್ರೀಯ ಸಂತಾನೋತ್ಪತ್ತಿ ಆರೋಗ್ಯ ಕುರಿತ ಸಂಶೋಧನಾ ಕೇಂದ್ರ ಮತ್ತು ಕೊಲ್ಕತ್ತಾದ ಐಸಿಎಂಆರ್ ರಾಷ್ಟ್ರೀಯ ಕಾಲರಾ ಮತ್ತು ಇತರೆ ಸಾಂಕ್ರಾಮಿಕ ರೋಗಗಳ ಕೇಂದ್ರಗಳಲ್ಲಿ ಸ್ಥಾಪಿಸಲಾಗಿದ್ದು, ಅವುಗಳಲ್ಲಿ ಪ್ರತಿದಿನ ಸುಮಾರು 10ಸಾವಿರ ಮಾದರಿಗಳನ್ನು ಪರೀಕ್ಷೆ ಮಾಡಬಹುದಾಗಿದೆ. ಪ್ರಯೋಗಾಲಯಗಳು ಪರೀಕ್ಷೆಯ ಸಮಯವನ್ನು ತಗ್ಗಿಸುವುದಲ್ಲದೆ, ಲ್ಯಾಬ್ ಸಿಬ್ಬಂದಿ ಕ್ಲಿನಿಕ್  ಸಾಮಗ್ರಿಗಳ ಮೂಲಕ ಸೋಂಕಿಗೆ ಒಳಗಾಗುವುದು ತಪ್ಪಿಸಲಿದೆ. ಲ್ಯಾಬ್ ಗಳಲ್ಲಿ ಕೋವಿಡ್ ಮಾತ್ರವಲ್ಲದೆ, ಇತರೆ ಸಾಂಕ್ರಾಮಿಕ ರೋಗಗಳಾದ ಹೆಪಟಿಟಿಸ್ ಬಿ ಮತ್ತು ಸಿ, ಎಚ್ ಐವಿ, ಮೈಕೋಬ್ಯಾಕ್ಟೀರಿಯಂ ಕ್ಷಯರೋಗ, ಸೈಟೋಮೆಗ್ಲೋವೈರಸ್, ಕ್ಲಾಮೈಡಿಯಾ, ನೈಸೀರಿಯಯಾ ಡೆಂಘಿ ಮತ್ತಿತರರವುಗಳ ಪರೀಕ್ಷೆಗಳನ್ನೂ ಸಹ ಮಾಡಬಹುದಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಮತ್ತು ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

***



(Release ID: 1641368) Visitor Counter : 228