ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿಯವರಿಂದ ಪಿಎಂ-ಸ್ವನಿಧಿ ಯೋಜನೆ ಅನುಷ್ಠಾನದ ಪರಿಶೀಲನೆ

Posted On: 25 JUL 2020 6:10PM by PIB Bengaluru

ಯೋಜನೆಯ ವಿನ್ಯಾಸವು ಬೀದಿ ಬದಿ ಮಾರಾಟಗಾರರಿಗೆ ಡಿಜಿಟಲ್ ವಹಿವಾಟುಗಳನ್ನು ಪ್ರೋತ್ಸಾಹಿಸಬೇಕು: ಪ್ರಧಾನಿ

ಯೋಜನೆಯನ್ನು ಕೇವಲ ಸಾಲ ನೀಡುವ ದೃಷ್ಟಿಕೋನದಿಂದ ನೋಡಬಾರದು. ಇದು ಬೀದಿ ಬದಿ ಮಾರಾಟಗಾರರ ಸಮಗ್ರ ಅಭಿವೃದ್ಧಿ ಮತ್ತು ಆರ್ಥಿಕ ಉನ್ನತಿಯ ಭಾಗವಾಗಿದೆ: ಪ್ರಧಾನಿ

 

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪಿಎಂ-ಸ್ವನಿಧಿ ಯೋಜನೆಯ ಅನುಷ್ಠಾನವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಪರಿಶೀಲಿಸಿದರು.

ಯೋಜನೆಯಡಿ ಇದುವರೆಗೆ 2.6 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ, 64,000 ಕ್ಕೂ ಹೆಚ್ಚು ಮಂಜೂರಾತಿ ನೀಡಲಾಗಿದ್ದು 5,500 ಕ್ಕೂ ಹೆಚ್ಚು ಮಂದಿಗೆ ಸಾಲ ವಿತರಿಸಲಾಗಿದೆ ಎಂದು ಪ್ರಧಾನಿಯವರಿಗೆ ತಿಳಿಸಲಾಯಿತು. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ವೇಗವನ್ನು ಖಚಿತಪಡಿಸಿಕೊಳ್ಳಲು ಯೋಜನೆಯ ಆಡಳಿತಕ್ಕಾಗಿ ವೆಬ್-ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಹಿತಿ ತಂತ್ರಜ್ಞಾನವನ್ನು ಬಳಸುತ್ತಿರುವ ಬಗ್ಗೆ ಪ್ರಧಾನ ಮಂತ್ರಿಯವರು ತೃಪ್ತಿ ವ್ಯಕ್ತಪಡಿಸಿದರು.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಯೋಜನೆಯ ಅಡಚಣೆ ರಹಿತ ಅನುಷ್ಠಾನಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಸೇರಿದಂತೆ ಸಂಪೂರ್ಣ ಮಾಹಿತಿ ತಂತ್ರಜ್ಞಾನ ಬಳಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿದ ಪ್ರಧಾನಿಯವರು, ಯೋಜನೆಯ ವಿನ್ಯಾಸವು ಬೀದಿ ಬದಿ ವ್ಯಾಪಾರಿಗಳಿಗೆ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವಂತೆ ಮಾಡಬೇಕು ಎಂದು ಹೇಳಿದರು. ಇದು ಅವರ ವ್ಯವಹಾರದ ಸಂಪೂರ್ಣ ಹರವನ್ನು - ಕಚ್ಚಾ ವಸ್ತುಗಳ ಸಂಗ್ರಹದಿಂದ ಮಾರಾಟದವರೆಗೆ- ಒಳಗೊಂಡಿರಬೇಕು. ಉದ್ದೇಶಕ್ಕಾಗಿ ಸೂಕ್ತ ಪ್ರೋತ್ಸಾಹ ಮತ್ತು ತರಬೇತಿಗಳನ್ನು ನೀಡಬೇಕು. ಡಿಜಿಟಲ್ ಪಾವತಿಗಳ ಬಳಕೆಯು ಬೀದಿ ಬದಿ ವ್ಯಾಪಾರಿಗಳಿಗೆ ಭವಿಷ್ಯದ ಹಣಕಾಸಿನ ಅಗತ್ಯಗಳಿಗೆ ಸಹಾಯ ಮಾಡುವ ಕ್ರೆಡಿಟ್ ಪ್ರೊಫೈಲ್ ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಯೋಜನೆಯನ್ನು ಬೀದಿ ಬದಿ ಮಾರಾಟಗಾರರಿಗೆ ಸಾಲ ನೀಡುವ ದೃಷ್ಟಿಕೋನದಿಂದ ಮಾತ್ರ ನೋಡಬಾರದು ಎಂದು ಪ್ರಧಾನಿ ಹೇಳಿದರು. ಬೀದಿ ಬದಿ ವ್ಯಾಪಾರಿಗಳ ಸಮಗ್ರ ಅಭಿವೃದ್ಧಿ ಮತ್ತು ಆರ್ಥಿಕ ಉನ್ನತಿಯ ಭಾಗವಾಗಿ ಇದನ್ನು ನೋಡಬೇಕು. ಅವರ ಸಂಪೂರ್ಣ ಸಾಮಾಜಿಕ-ಆರ್ಥಿಕ ವಿವರಗಳನ್ನು ಪಡೆಯುವ ಮೂಲಕ ಅಗತ್ಯ ನೀತಿ ರೂಪಿಸಲು ಅನುಕೂಲವಾಗುವ ದಿಕ್ಕಿನಲ್ಲಿ  ಇದೊಂದು ಹೆಜ್ಜೆಯಾಗುತ್ತದೆ. ಡೇಟಾವನ್ನು ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಪಿಎಂಎವೈ-ಯು ಅಡಿಯಲ್ಲಿ ವಸತಿ, ಉಜ್ಜಲಾ ಅಡಿಯಲ್ಲಿ ಅಡುಗೆ ಅನಿಲ, ಸೌಭಾಗ್ಯದ ಅಡಿಯಲ್ಲಿ ವಿದ್ಯುತ್, ಆಯುಷ್ಮಾನ್ ಭಾರತ್ ಅಡಿಯಲ್ಲಿ ಆರೋಗ್ಯ, DAY-NULM ಅಡಿಯಲ್ಲಿ ಕೌಶಲ್ಯ, ಜನ ಧನ ಅಡಿಯಲ್ಲಿ ಬ್ಯಾಂಕ್ ಖಾತೆ ಇತ್ಯಾದಿ ಯೋಜನೆಗಳ ಅಡಿಯಲ್ಲಿ ಸೌಲಭ್ಯ ನೀಡಲು ಬಳಸಬಹುದು ಎಂದು ಪ್ರಧಾನಿ ತಿಳಿಸಿದರು.

ಹಿನ್ನೆಲೆ

ಯಾವುದೇ ಮೇಲಾಧಾರವಿಲ್ಲದೇ ಒಂದು ವರ್ಷದವರೆಗೆ. 10,000 ರೂ. ವರೆಗೆ ಮೂಲ ಬಂಡವಾಳ ಸಾಲವನ್ನು, ಸುಮಾರು 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಅವರು ತಮ್ಮ ವ್ಯವಹಾರಗಳನ್ನು ಪುನರಾರಂಭಿಸಲು ಅನುಕೂಲವಾಗುವಂತೆ ಪಿಎಂ ಸ್ವನಿಧಿ ಯೋಜನೆಯನ್ನು ಭಾರತ ಸರ್ಕಾರ ಪ್ರಾರಂಭಿಸಿದೆ. ಉತ್ತಮ ಮರುಪಾವತಿ ಮತ್ತು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಬಡ್ಡಿ ಸಹಾಯಧನ  (ವಾರ್ಷಿಕ @ 7%) ಮತ್ತು ಕ್ಯಾಶ್ ಬ್ಯಾಕ್ (ವಾರ್ಷಿಕ ರೂ .1,200 / - ವರೆಗೆ) ಪ್ರೋತ್ಸಾಹ ಧನ ನೀಡಲಾಗುತ್ತಿದೆ. 10,000 ರೂ.ಗಳಿಗೆ ಒಟ್ಟಾರೆ ವಾರ್ಷಿಕ ಶೇ. 24 ಬಡ್ಡಿಯ ಮೇಲೆ ಬಡ್ಡಿ ಸಹಾಯಧನವು ಶೇ.30 ರಷ್ಟು ದೊರೆಯುತ್ತದೆ.

ಆದ್ದರಿಂದ, ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ಮತ್ತು ಎಲ್ಲಾ ರಸೀದಿಗಳು ಮತ್ತು ಪಾವತಿಗಳಿಗೆ ಡಿಜಿಟಲ್ ವಹಿವಾಟುಗಳನ್ನು ಬಳಸಿದರೆ ಸಾಲದ ಮೊತ್ತಕ್ಕೆ ಸಹಾಯಧನವನ್ನು ಪಡೆಯುವುದರಿಂದ ಮಾರಾಟಗಾರನು ಯಾವುದೇ ಬಡ್ಡಿಯನ್ನು ಪಾವತಿಸಿದಂತಾಗುವುದಿಲ್ಲ,  ಆರಂಭಿಕ ಅಥವಾ ಕಾಲೋಚಿತ ಮರುಪಾವತಿಯ ಮೇಲೆ ಯೋಜನೆಯು ಮುಂದಿನ ಸಾಲದ ಮೊತ್ತವನ್ನು ಸಹ ಹೆಚ್ಚಿಸುತ್ತದೆ. ಯೋಜನೆಯ ಅನುಷ್ಠಾನ ಸಂಸ್ಥೆಯಾದ ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್ಐಡಿಬಿಐ) ಪಿಎಂ ಸ್ವನಿಧಿಎಂಬ ಐಟಿ ಪ್ಲಾಟ್ಫಾರ್ಮ್ ಮೂಲಕ 2020 ಜುಲೈ 02 ರಿಂದ ಸಾಲ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ.

***



(Release ID: 1641259) Visitor Counter : 232