ಆಯುಷ್

 ‘ನನ್ನ ಜೀವನ - ನನ್ನ ಯೋಗ’ ವಿಡಿಯೋ ಬ್ಲಾಗಿಂಗ್ ಸ್ಪರ್ಧೆಯ ವಿಜೇತರನ್ನು ಪ್ರಕಟಿಸಿದ ಆಯುಷ್ ಸಚಿವಾಲಯ

Posted On: 14 JUL 2020 6:57PM by PIB Bengaluru

 ‘ನನ್ನ ಜೀವನ - ನನ್ನ ಯೋಗವಿಡಿಯೋ ಬ್ಲಾಗಿಂಗ್ ಸ್ಪರ್ಧೆಯ ವಿಜೇತರನ್ನು ಪ್ರಕಟಿಸಿದ ಆಯುಷ್ ಸಚಿವಾಲಯ

ಎರಡು ವಿಭಾಗಗಳಲ್ಲಿ ಮೊದಲ ಬಹುಮಾನ ಪಡೆದ ಕರ್ನಾಟಕದ ಸ್ಪರ್ಧಿಗಳು

 

 ‘ಮೈ ಲೈಫ್, ಮೈ ಯೋಗ’- ‘ನನ್ನ ಜೀವನ, ನನ್ನ ಯೋಗ’- ವಿಡಿಯೋ ಬ್ಲಾಗಿಂಗ್ ಸ್ಪರ್ಧೆಯ ವಿಜೇತರನ್ನು ಇಂದು ಪ್ರಕಟಿಸಲಾಗಿದೆ. ಜಾಗತಿಕ ಸ್ಪರ್ಧೆಯು ಆಯುಷ್ ಸಚಿವಾಲಯ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಕೌನ್ಸಿಲ್ (ಐಸಿಸಿಆರ್) ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿನ ಜಂಟಿ ಪ್ರಯತ್ನವಾಗಿದೆ. ಮತ್ತು ಸ್ಪರ್ಧೆಗೆ 6 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ  ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2020 ಮೇ 31 ರಂದು ಚಾಲನೆ ನೀಡಿದ್ದರು.

ಸ್ಪರ್ಧೆಯನ್ನು ಆರು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು- ವೃತ್ತಿಪರರು, ವಯಸ್ಕರು (18 ವರ್ಷಕ್ಕಿಂತ ಮೇಲ್ಪಟ್ಟವರು) ಮತ್ತು ಯುವಕರು (18 ವರ್ಷದೊಳಗಿನವರು). ಪುರುಷ ಮತ್ತು ಮಹಿಳಾ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗಿತ್ತು. ಭಾರತದಿಂದ ಒಟ್ಟು 35141 ಸ್ಪರ್ಧಿಗಳು ಮತ್ತು ಇತರ ದೇಶಗಳಿಂದ ಸುಮಾರು 2000 ಸ್ಪರ್ಧಿಗಳು ಭಾಗವಹಿಸಿದ್ದರು. ಇತರ ದೇಶಗಳ ಸ್ಪರ್ಧಿಗಳ ಮೌಲ್ಯಮಾಪನವನ್ನು ಆಯಾ ಭಾರತೀಯ ನಿಯೋಗಗಳು ಮಾಡುತ್ತಿವೆ.

ವೃತ್ತಿಪರ ವಿಭಾಗದಲ್ಲಿ ಕರ್ನಾಟಕದ ಅಶ್ವತ್ ಹೆಗ್ಡೆ (ಪುರುಷ) ಮತ್ತು ರಜನಿ ಗೆಹ್ಲೋಟ್ (ಮಹಿಳೆ). ವಯಸ್ಕರ (18 ವರ್ಷಕ್ಕಿಂತ ಮೇಲ್ಪಟ್ಟವರು) ವಿಭಾಗದಲ್ಲಿ ರಾಜ್ಪಾಲ್ ಸಿಂಗ್ ಆರ್ಯ ಮತ್ತು ಕರ್ನಾಟಕದ ಶೈಲೀ ಪ್ರಸಾದ್ ಮತ್ತು ಯುವ (18 ವರ್ಷದೊಳಗಿನವರು) ವಿಭಾಗದಲ್ಲಿ ಪ್ರಣಯ್ ಶರ್ಮಾ ಮತ್ತು ನವ್ಯಾ.ಎಸ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಭಾರತದ ಸ್ಪರ್ಧಿಗಳನ್ನು 200 ಯೋಗ ತಜ್ಞರು ಪರಿಶೀಲಿಸಿ, 160 ವೀಡಿಯೊಗಳನ್ನು ಅಂತಿಮಗೊಳಿಸಲಾಗಿತ್ತು. ಪಟ್ಟಿಯನ್ನು 15 ಸದಸ್ಯರ ತೀರ್ಪುಗಾರರು ಮೌಲ್ಯಮಾಪನ ಮಾಡಿದರು. ತೀರ್ಪುಗಾರರು ಪ್ರತ್ಯೇಕವಾಗಿ ನೀಡಿದ ಅಂಕಗಳ ಸರಾಸರಿ ಆಧಾರದಲ್ಲಿ ವಿಜೇತರನ್ನು ನಿರ್ಧರಿಸಲಾಯಿತು. ಹೆಚ್ಚಿನ ಸರಾಸರಿ ಅಂಕ ಪಡೆದವರನ್ನು ವಿಜೇತರು ಎಂದು ಘೋಷಿಸಲಾಯಿತು.

ಸ್ಪರ್ಧೆಯಲ್ಲಿ ಭಾಗವಹಿಸಲು  ಪ್ರಪಂಚದಾದ್ಯಂತದ ಎಲ್ಲರಿಗೂ ಮುಕ್ತವಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸುವವರು 3 ಯೋಗಾಭ್ಯಾಸಗಳ (ಕ್ರಿಯಾ, ಆಸನ, ಪ್ರಾಣಾಯಾಮ, ಬಂಧ ಅಥವಾ ಮುದ್ರಾ) 3 ನಿಮಿಷಗಳ ವೀಡಿಯೊವನ್ನು ಅಪ್ಲೋಡ್ ಮಾಡಬೇಕಾಗಿತ್ತು, ಯೋಗಾಭ್ಯಾಸಗಳು ಅವರ ಜೀವನದ ಮೇಲೆ ಹೇಗೆ ಪ್ರಭಾವ ಬೀರಿವೆ ಎಂಬ ಕಿರು ವೀಡಿಯೊ ಸಂದೇಶ / ವಿವರಣೆಯನ್ನು ಒಳಗೊಂಡಿರುತ್ತಿತ್ತು. #MyLifeMyYoga ಎಂಬ ಸ್ಪರ್ಧೆಯ ಹ್ಯಾಶ್ಟ್ಯಾಗ್ನೊಂದಿಗೆ ವೀಡಿಯೊಗಳನ್ನು ಫೇಸ್ಬುಕ್, ಟ್ವಿಟರ್ ಅಥವಾ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಸ್ಪರ್ಧೆಯು 2020 ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು 23.50 ಗಂಟೆಗೆ ಮುಕ್ತಾಯಗೊಂಡಿತು.

ಆರು ವಿಭಾಗಗಳ ಭಾರತದ ಬಹುಮಾನ ವಿಜೇತರು:

  1. ವೃತ್ತಿಪರ ವಿಭಾಗ

ಪುರುಷರು

ಕ್ರ.

ಸಂ.

ಹೆಸರು

ಸ್ಪರ್ಧಿಯ ID

ಸ್ಥಳ

ವಿಜೇತರು

1

ಅಶ್ವಥ್ ಹೆಗ್ಡೆ

NOPaRGKqa

ಸಿರ್ಸಿ - ಕರ್ನಾಟಕ - ಭಾರತ

ಮೊದಲ ಬಹುಮಾನ

2

ಎಚ್ ಪಟೇಲ್

IndiaIG2424

ವಿವರಗಳು ನಿರೀಕ್ಷಿಸಲಾಗಿದೆ

ಎರಡನೇ ಬಹುಮಾನ

3

ರಿಷಿಪಾಲ್

UvosV94Hp

ಹರಿದ್ವಾರ - ಉತ್ತರಾಖಂಡ - ಭಾರತ

ಮೂರನೇ ಬಹುಮಾನ

 

ಮಹಿಳೆಯರು

1

ರಜನಿ ಗೆಹ್ಲೋಟ್

5657773

ವಿವರಗಳು ನಿರೀಕ್ಷಿಸಲಾಗಿದೆ

ಮೊದಲ ಬಹುಮಾನ

2

ಪೂಜಾ ಪಟೇಲ್

IndiaIG1089

ವಿವರಗಳು ನಿರೀಕ್ಷಿಸಲಾಗಿದೆ

ಎರಡನೇ ಬಹುಮಾನ

3

ಜಾನ್ವಿ ಪ್ರತಿಭಾ ಪಟೇಲ್

India-T457

ವಿವರಗಳು ನಿರೀಕ್ಷಿಸಲಾಗಿದೆ

ಮೂರನೇ ಬಹುಮಾನ

 

  1. ವಯಸ್ಕರ (18 ವರ್ಷಕ್ಕಿಂತ ಮೇಲ್ಪಟ್ಟವರು) ವಿಭಾಗ:

ಪುರುಷರು

ಕ್ರ.

ಸಂ.

ಹೆಸರು

ಸ್ಪರ್ಧಿಯ ID

ಸ್ಥಳ

ವಿಜೇತರು

1

ರಾಜ್ಪಾಲ್ ಸಿಂಗ್ ಆರ್ಯ

GHFK3Seok

ಶಾಮ್ಲಿ - ಉತ್ತರ ಪ್ರದೇಶ - ಭಾರತ

ಮೊದಲ ಬಹುಮಾನ

2

ಹರ್ಷಿತ್ ಪರಿಹಾರ್ Ny1gvx0pA

Ny1gvx0pA

ಚಂಡೀಗಢ - ಭಾರತ

ಎರಡನೇ ಬಹುಮಾನ

3

ನಿತಿನ್ ತಾನಾಜಿ ಪವಾಲೆ

Txb_H8_bu

ಪುಣೆ - ಮಹಾರಾಷ್ಟ್ರ - ಭಾರತ

ಮೂರನೇ ಬಹುಮಾನ

ಮಹಿಳೆಯರು

ಕ್ರ.

ಸಂ.

ಹೆಸರು

ಸ್ಪರ್ಧಿಯ ID

ಸ್ಥಳ

ವಿಜೇತರು

1

ಶೈಲಿ ಪ್ರಸಾದ್

fUkqrq9Of

ಬೆಂಗಳೂರು, ಕರ್ನಾಟಕ

ಮೊದಲ ಬಹುಮಾನ

2

ಅಕಾಂಕ್ಷಾ

IndiaIG1635

ವಿವರಗಳು ನಿರೀಕ್ಷಿಸಲಾಗಿದೆ

ಎರಡನೇ ಬಹುಮಾನ

3

ಯು.ಬಿ. ಅಥಿಸ್ಟಾ

SckM9x1C4

ನಾಗರ್ಕೋಯಿಲ್ - ತಮಿಳುನಾಡು - ಭಾರತ

ಮೂರನೇ ಬಹುಮಾನ

 

  1. ಯುವ ವಿಭಾಗ(18 ವರ್ಷದೊಳಗಿನವರು):

ಕ್ರ.

ಸಂ.

ಹೆಸರು

ಸ್ಪರ್ಧಿಯ ID

ಸ್ಥಳ

ವಿಜೇತರು

1

ಪ್ರಣಯ್ ಶರ್ಮಾ ವೈ

Y4qsge-4i

ಸಹಾರಾನ್ಪುರ್ - ಉತ್ತರ ಪ್ರದೇಶ

ಭಾರತ

ಮೊದಲ ಬಹುಮಾನ

2

ಸನ್ನಿ

vqgQGmrK6

ವಿವರಗಳು ನಿರೀಕ್ಷಿಸಲಾಗಿದೆ

ಎರಡನೇ ಬಹುಮಾನ

3

ಕಬಿಲನ್ ಸುಬ್ರಮಣ್ಯಂ

3FPdAMyqt

ಕರೂರ್ - ತಮಿಳುನಾಡು - ಭಾರತ

ಮೂರನೇ ಬಹುಮಾನ

 

ಮಹಿಳೆಯರು

ಕ್ರ.

ಸಂ.

ಹೆಸರು

ಸ್ಥಳ

ವಿಜೇತರು

1

ನವ್ಯಾ.ಎಸ್.ಎಚ್.

ಚುಂಕಂಕಡೈ & ಪೋಸ್ಟ್, ಕನ್ಯಾಕುಮಾರಿ ಜಿಲ್ಲೆ

 

ಮೊದಲ ಬಹುಮಾನ

2

ಅವ್ನಿ ರಾಮರಕ್ಷಣಿ

ಪುಣೆ - ಮಹಾರಾಷ್ಟ್ರ

ಎರಡನೇ ಬಹುಮಾನ

3

ಮಾನ್ವಿ ವ್ಯಾಸ್

ಹಿಸ್ಸಾರ್ - ಹರಿಯಾಣ

ಮೂರನೇ ಬಹುಮಾನ

 

ಸಾಗರೋತ್ತರ ಸ್ಪರ್ಧಿಗಳ ವಿಜೇತರನ್ನು ನಂತರ ಪ್ರಕಟಿಸಲಾಗುತ್ತದೆ.

***



(Release ID: 1638811) Visitor Counter : 182