PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 14 JUL 2020 7:14PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

https://static.pib.gov.in/WriteReadData/userfiles/image/image005IW97.jpg

https://static.pib.gov.in/WriteReadData/userfiles/image/WhatsAppImage2020-07-14at7.32.27PM3T0H.jpeg

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೋವಿಡ್-19 ತಾಜಾ ಮಾಹಿತಿ:

ಸರ್ಕಾರಿ ವಲಯದಲ್ಲಿ 853 ಮತ್ತು ಖಾಸಗಿ ವಲಯದ 353 ಪ್ರಯೋಗಾಲಯಗಳೊಂದಿಗೆ ದೇಶದಲ್ಲಿ ಈವರೆಗೆ ಒಟ್ಟು ಪ್ರಯೋಗಾಲಯಗಳ  ಸಂಖ್ಯೆ 1206ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಿಂದೀಚೆಗೆ 2,86,247 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಹಾಗಾಗಿ ಒಟ್ಟು ಪರೀಕ್ಷಿಸಲಾದ ಮಾದರಿಗಳ ಸಂಖ್ಯೆ ಈವರೆಗೆ 1,20,92,503 ಆಗಿದೆ. ಭಾರತದಲ್ಲಿ ಪ್ರತಿ ಮಿಲಿಯನ್  ಜನರಿಗೆ ಪರೀಕ್ಷೆ ಪ್ರಮಾಣ ಏರಿಕೆಯಾಗುತ್ತಿದ್ದು, ಅದು ಇಂದು 8762.7. ತಲುಪಿದೆ ಕಳೆದ  24 ಗಂಟೆಗಳಲ್ಲಿ ಒಟ್ಟು 17,989 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಇದರಿಂದ ಗುಣಮುಖರಾದ ಕೋವಿಡ್-19 ರೋಗಿಗಳ ಸಂಖ್ಯೆ 5,71,459ಕ್ಕೆ ಮತ್ತು ಗುಣಮುಖರಾದವರ ಪ್ರಮಾಣ ಶೇ.63.02ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 3,11,565 ಸಕ್ರಿಯ ಪ್ರಕರಣಗಳಿದ್ದು, ಅವೆಲ್ಲಾ ವೈದ್ಯಕೀಯ ನಿಗಾದಲ್ಲಿವೆ. ಕೆಲವರು ಹೋಮ್ ಐಸೋಲೋಷನ್ ನಲ್ಲಿ ಮತ್ತು ಇನ್ನೂ ಕೆಲವರು ಆಸ್ಪತ್ರೆಗಳ ಆರೈಕೆಯಲ್ಲಿದ್ದಾರೆ. ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರಾದವರ ಪ್ರಕರಣಗಳು 2,59,894 ಹೆಚ್ಚಿವೆ. ಕೋವಿಡ್-19 ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸಾ ನಿರ್ವಹಣಾ ವಿಧಾನಗಳಿಂದಾಗಿ ಭಾರತದಲ್ಲಿ ಸಾವಿನ ಪ್ರಮಾಣ ಮತ್ತಷ್ಟು ಕುಸಿದು, ಶೇ.2.62ಕ್ಕೆ ಇಳಿದಿದೆ.

ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸೋಣ ಡಾ. ಹರ್ಷವರ್ಧನ್. ಆಸ್ಟ್ರೇಲಿಯಾದ ಆರೋಗ್ಯ ಸಚಿವರೊಂದಿಗೆ ಕೋವಿಡ್-19 ನಿರ್ವಹಣೆ ಸೇರಿದಂತೆ ದ್ವಿಪಕ್ಷೀಯ ಆರೋಗ್ಯ ಸಹಕಾರ ಕುರಿತು ಸಮಾಲೋಚನೆ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಇಂದು ಆಸ್ಟ್ರೇಲಿಯಾದ ಸಹವರ್ತಿ ಶ್ರೀ ಗ್ರೆಗೋರಿ ಆಂಡ್ರೀವ್ ಹಂಟ್ ಅವರೊಂದಿಗೆ ದ್ವಿಪಕ್ಷೀಯ ಆರೋಗ್ಯ ಸಹಕಾರ ಕುರಿತು ಡಿಜಿಟಲ್ ವೇದಿಕೆಯ ಮೂಲಕ ಸಮಾಲೋಚನೆ ನಡೆಸಿದರು. ಕೋವಿಡ್-19 ಸಾಂಕ್ರಾಮಿಕ ನಿರ್ವಹಣೆ ಮತ್ತು ನಿರ್ಬಂಧದಲ್ಲಿ ಭಾರತೀಯ ವೈದ್ಯಕೀಯ ಸಮುದಾಯದ ಪಾತ್ರದ ಕುರಿತು ವಿಸ್ತೃತವಾಗಿ ಮಾತನಾಡಿದ ಡಾ. ಹರ್ಷವರ್ಧನ್ ಅವರು, ಭಾರತೀಯ ವೈದ್ಯಕೀಯ ವೃತ್ತಿಪರರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ವಿಜ್ಞಾನಿಗಳು ಕೋವಿಡ್-19 ನಿರ್ವಹಣೆಯಲ್ಲಿ ಮಹತ್ವದ ಪಾತ್ರವಹಿಸಿದರು ಎಂದರು. ಅವರು ಔಷಧ ಸಂಶೋಧನೆ ಮತ್ತು ಹಾಲಿ ಇರುವ ಔಷಧಗಳ ಮರು ಸಂಶೋಧನೆಗಳಿಗೆ ಸಹಾಯ ಮಾಡುತ್ತಿದ್ದಾರೆ ಎಂದರು. ಸೋಂಕು ಆರಂಭದಲ್ಲೇ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಜಿನೋಮ್ ಸೀಕ್ವೆನ್ಸಿಂಗ್ ಬಳಸಿ, ವೈರಾಣುವಿನ ಅಧ್ಯಯನದಲ್ಲಿ ತೊಡಗಿದ್ದಾರೆ ಎಂದರು. “2020 ಜನವರಿಯಲ್ಲಿ ಭಾರತದಲ್ಲಿ ಕೇವಲ ಒಂದೇ ಒಂದು ಸೋಂಕು ಪತ್ತೆ ಪ್ರಯೋಗಾಲಯವಿತ್ತು. ಇದೀಗ ದೇಶಾದ್ಯಂತ ಸುಮಾರು 1200ಕ್ಕೂ ಅಧಿಕ ಪ್ರಯೋಗಾಲಯಗಳು ಸ್ಥಾಪನೆಯಾಗಿವೆಎಂದು ಅವರು ಹೇಳಿದರು. ಭಾರತೀಯ ಔಷಧ ಉತ್ಪಾದಕರು ಸುಮಾರು 140 ದೇಶಗಳಿಗೆ ಹೈಡ್ರೋಕ್ಲೋರೋಕ್ವಿನ್ ಅನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು. ಆರೋಗ್ಯ ಮತ್ತು ಇತರ ಸಮಾನ ಆಸಕ್ತಿ ಹೊಂದಿರುವ ವಲಯಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲು ಆರೋಗ್ಯ ಸಚಿವರು ಒಪ್ಪಿದರು.  

ಸುರಕ್ಷಿತ ಪ್ರಯಾಣ ಖಾತ್ರಿಪಡಿಸಲು ಭಾರತೀಯ ರೈಲ್ವೆಯಿಂದ ಕೋವಿಡ್ ನಂತರ ವಿಶೇಷ ಕೋಚ್ ಸೃಷ್ಟಿ

ಕೋವಿಡ್-19 ವೈರಾಣು ಸೋಂಕು ಹರಡುವುದನ್ನು ನಿಯಂತ್ರಿಸಲು ಭಾರತೀಯ ರೈಲ್ವೆ ಹಲವು ಕ್ರಮಗಳನ್ನು ಕೈಗೊಂಡಿದೆ. ಕೋವಿಡ್-19 ವಿರುದ್ಧ ನಿರಂತರ ಸುಸ್ಥಿರ ಸಮರ ನಡೆಸುತ್ತಿರುವ ಭಾರತೀಯ ರೈಲ್ವೆಯ ಕಪೂರ್ತಲಾ ರೈಲು ಕೋಚ್ ಕಾರ್ಖಾನೆಯ ಉತ್ಪಾದನಾ ಘಟಕ, ಕೋವಿಡ್ ನಂತರದ ಪ್ರಯಾಣಕ್ಕಾಗಿ ವಿಶೇಷ ಕೋಚ್ ಗಳನ್ನು ಅಭಿವೃದ್ಧಿಪಡಿಸಿದೆ. ಪೋಸ್ಟ್-ಕೋವಿಡ್ ಕೋಚ್ ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಅದರಲ್ಲಿ ಕೈಗಳನ್ನು ಬಳಸದೇ ಹಲವು ಸೌಕರ್ಯಗಳನ್ನು ಉಪಯೋಗಿಸಬಹುದು, ತಾಮ್ರ ಲೇಪಿತ ಕೈ ಹಿಡಿಕೆಗಳು ಮತ್ತು ಪ್ಲಾಸ್ಮಾ ಏರ್ ಪ್ಯೂರಿಫಿಕೇಶನ್ ಮತ್ತು ಟಿಟಾನಿಯಂ ಡೈಆಕ್ಸೈಡ್ ಕೋಟಿಂಗ್ ಸೌಕರ್ಯಗಳಿವೆ. ಕೋವಿಡ್ ಮುಕ್ತ ಪ್ರಯಾಣಿಕರ ಸುರಕ್ಷತೆಗಾಗಿ ಇದನ್ನು ರೂಪಿಸಲಾಗಿದೆ. ಪೋಸ್ಟ್  ಕೋವಿಡ್ ವಿಶೇಷ ಕೋಚ್ ನಲ್ಲಿ ಕೈಯನ್ನು ಬಳಸದೇ ಕಾಲಿನಿಂದ ನಲ್ಲಿಯನ್ನು ಮತ್ತು ಸೋಪು ಒದಗಿಸುವ ವ್ಯವಸ್ಥೆ, ಕಾಲಿನಿಂದಲೇ ಶೌಚಾಲಯದ ಬಾಗಿಲು ತೆಗೆಯುವ ವ್ಯವಸ್ಥೆ ಹಾಗೂ ಕಾಲಿನಿಂದಲೇ ಫ್ಲಶ್ ವಾಲ್ ಒತ್ತುವ ವ್ಯವಸ್ಥೆ ಹಾಗೂ ಶೌಚಾಲಯದ ಹೊರಗೆ ಕಾಲಿನಿಂದ ಒತ್ತಿದರೆ ವಾಷ್ ಬೇಸಿನ್ ನಲ್ಲಿ ನೀರಿನ ಹಾಗೂ ಸೋಪಿನ ವ್ಯವಸ್ಥೆ ಮಾಡಲಾಗಿದೆ. ಬೋಗಿಯ ಬಾಗಿಲನ್ನು ತೆಗೆಯಲೂ ಸಹ ಕೈಯಿಂದ ಮುಟ್ಟಬೇಕಾಗಿಲ್ಲ.

ಡಿಜಿಟಲ್ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಾಗ್ಯತಾ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಎಚ್ ಆರ್ ಡಿ ಸಚಿವರು

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ನವದೆಹಲಿಯಲ್ಲಿಂದು ಡಿಜಿಟಲ್ ಶಿಕ್ಷಣದ ಮೂಲಕ ಆನ್ ಲೈನ್ ಮಾಧ್ಯಮದ ಬೋಧನೆ ಕುರಿತಂತೆ ಪ್ರಾಗ್ಯತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದರು. ಪ್ರಾಗ್ಯತಾ ಮಾರ್ಗಸೂಚಿಯಲ್ಲಿ ಆನ್ ಲೈನ್/ಡಿಜಿಟಲ್ ಕುರಿತಂತೆ ಎಂಟು ಹಂತಗಳು ಸೇರಿವೆ ಅವುಗಳೆಂದರೆ ಯೋಜನೆ ಪರಾಮರ್ಶೆ ವ್ಯವಸ್ಥೆ ಮಾರ್ಗದರ್ಶನ ಬೋಧನೆ ಅಸೈನ್- ನಿಗಾವಹಿಸುವುದು ಮೆಚ್ಚುಗೆ ಸೂಚಿಸುವುದು. ಕ್ರಮಗಳು ಹಂತ ಹಂತವಾಗಿ ಉದಾಹರಣೆಗಳ ಮೂಲಕ ಡಿಜಿಟಲ್ ಶಿಕ್ಷಣದ ಯೋಜನೆ ಮತ್ತು ಅನುಷ್ಠಾನಕ್ಕೆ ಮಾರ್ಗದರ್ಶಿಯಾಗಲಿವೆ. ಸಂದರ್ಭದಲ್ಲಿ ಮಾತನಾಡಿದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಕೋವಿಡ್-19 ಸಾಂಕ್ರಾಮಿಕದಿಂದಾಗಿ ಶಾಲೆಗಳು ಮುಚ್ಚಲ್ಪಟ್ಟಿವೆ ಮತ್ತು ದೇಶಾದ್ಯಂತ ಶಾಲೆಗಳಲ್ಲಿ ಓದುತ್ತಿರುವ 240 ಮಿಲಿಯನ್ ಮಕ್ಕಳ ಮೇಲೆ ಪರಿಣಾಮ ಬೀರಿದೆ, ಶಾಲಾ ಕಾಲೇಜುಗಳನ್ನು ದೀರ್ಘಕಾಲ ಮುಚ್ಚುವುದರಿಂದ ಕಲಿಕೆಯ ಮೇಲೆ ಪರಿಣಾಮವಾಗಲಿದೆ ಎಂದರು. ಸಾಂಕ್ರಾಮಿಕದಿಂದ ಆಗುವ ಪರಿಣಾಮವನ್ನು ತಗ್ಗಿಸಬೇಕಾಗಿದೆ ಎಂದ ಪೋಖ್ರಿಯಾಲ್, ಶಾಲೆಗಳು ತಮ್ಮ ಕಲಿಕೆ ಮತ್ತು ಬೋಧನಾ ವಿಧಾನಕ್ಕೆ ಹೊಸ ರೂಪ ನೀಡುವುದು ಮತ್ತು ಮರುವಿನ್ಯಾಸ ಗೊಳಿಸಿಕೊಳ್ಳುವುದಷ್ಟೇ ಅಲ್ಲದೆ ಮನೆಯಲ್ಲಿ ಕಲಿಕೆ ಮತ್ತು ಶಾಲೆಯಲ್ಲಿ ಕಲಿಕೆ ಎರಡನ್ನೂ ಒಟ್ಟಾಗಿ ಸೇರಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಸೂಕ್ತ ವಿಧಾನವನ್ನು ಪರಿಚಯಿಸುವ ಅಗತ್ಯವಿದೆ ಎಂದರು

ಪಿಎಂಜಿಕೆಪಿ  ಅಡಿಯಲ್ಲಿ ಘೋಷಿಸಲಾದ ಕೋವಿಡ್-19 ವಿರುದ್ಧ ಹೋರಾಟದಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರ ವಿಮಾ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದ ಹಣಕಾಸು ಸಚಿವರು

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ (ಪಿಎಂಜಿಕೆಪಿ) ಅಡಿಯಲ್ಲಿ ಘೋಷಿಸಲಾದ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರ ವಿಮಾ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದರು. ಸಭೆಯಲ್ಲಿ ಹಣಕಾಸು ಸಚಿವರು ಪ್ರಮುಖವಾಗಿ ತ್ವರಿತ ಪರಿಹಾರಕ್ಕೆ ಒತ್ತು ನೀಡಬೇಕು ಮತ್ತು ನಾಮಿನಿಗಳಿಗೆ ಆದಷ್ಟು ಶೀಘ್ರ ವಿಮೆಯ ಪ್ರಯೋಜನ ತಲುಪಲು ಒತ್ತು ನೀಡಬೇಕು ಎಂದು ಕರೆ ನೀಡಿದರು. ತ್ವರಿತವಾಗಿ ಪರಿಹಾರವನ್ನು ಒದಗಿಸಲು ರಾಜ್ಯಗಳ ನೋಡಲ್ ಅಧಿಕಾರಿಗಳು ಅನುಸರಿಸುತ್ತಿರುವ ಕಾರ್ಯತಂತ್ರದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕಾರಿಗಳು ಸ್ಥೂಲ ನೋಟವನ್ನು ನೀಡಿದರು. ಅದರಲ್ಲಿ ಮೃತರ ಕುಟುಂಬಗಳಿಗೆ ಪ್ರಯೋಜನ ತಲುಪಿಸುವಲ್ಲಿ ಆಗುತ್ತಿರುವ ಸಮಸ್ಯೆಗಳು, ಉತ್ತರಾಧಿಕಾರಿ ಪ್ರಮಾಣಪತ್ರ ಪಡೆಯುವಲ್ಲಿ ಆಗುತ್ತಿರುವ ತೊಂದರೆಗಳ ಕುರಿತು ವಿವರಿಸಲಾಯಿತು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಗತಿ ಪರಿಶೀಲಿಸಿದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ(ಪಿಎಂಎಫ್ ಬಿವೈ) ಪ್ರಗತಿ ಪರಿಶೀಲನಾ ಸಭೆಯನ್ನು ನಿನ್ನೆ ನಡೆಸಿದರು. ವಿಮಾ ಯೋಜನೆ ಎಲ್ಲಾ ರೈತರಿಗೆ ಸ್ವಯಂ ಪ್ರೇರಿತವಾಗಿರುವ ಹಿನ್ನೆಲೆಯಲ್ಲಿ ಬಗ್ಗೆ ಎಲ್ಲಾ ರೈತರಿಗೆ ಅಗತ್ಯ ಮಾಹಿತಿಯನ್ನು ತಲುಪಿಸಲು ಹೆಚ್ಚಿನ ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಅವರು ಕರೆ ನೀಡಿದರು ಮತ್ತು ಸಕಾಲದಲ್ಲಿ ಬೆಳೆ ವಿಮೆ ಪರಿಹಾರವನ್ನು ಒದಗಿಸಲು ರಾಜ್ಯಗಳು ತಮ್ಮ ಪಾಲಿನ ಪ್ರೀಮಿಯಂ ಸಬ್ಸಡಿ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದರು. ಸಬ್ಸಿಡಿ ಬಾಕಿ ಉಳಿಸಿಕೊಂಡಿರುವ ಹಾಗೂ 2020 ಮುಂಗಾರು ಹಂಗಾಮಿನಲ್ಲಿ ವಿಮೆ ಯೋಜನೆ ಜಾರಿಗೊಳಿಸದ ರಾಜ್ಯಗಳ ಜೊತೆ ನಿರಂತರ ಸಂಪರ್ಕ ಸಾಧಿಸುವಂತೆ ಸಲಹೆ ಮಾಡಿದ ಶ್ರೀಮತಿ ನಿರ್ಮಲಾ ಸೀತಾರಾಮನ್, ರೈತರಿಗೆ ನೀಡಬೇಕಾಗಿರುವ ಬಾಕಿ ವಿಮೆ ಮೊತ್ತವನ್ನು ಆದಷ್ಟು ಬೇಗ ಪಾವತಿಸುವಂತೆ ಸೂಚಿಸಿದರು.

ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟ; “ಅನುತ್ತೀರ್ಣಪದದ ವ್ಯಾಖ್ಯಾನವನ್ನು ಬದಲಿಸಿ ಅತ್ಯಗತ್ಯ ಪುನರಾವರ್ತನೆ ಎಂದು ಕರೆಯಲು ಸಿಬಿಎಸ್ಇ ನಿರ್ಧಾರ

ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್ಇ) ನಿನ್ನೆ 12ನೇ ತರಗತಿಗಳ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದೆ. ತ್ರಿವೇಂಡ್ರಮ್ ಶೇ.97.67ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಶೇ.97.05ರೊಂದಿಗೆ ಬೆಂಗಳೂರು ಇದೆ. ಒಟ್ಟು           11,92,961 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪೈಕಿ 10,59,080 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಉತ್ತೀರ್ಣರಾಗಿರುವವರ ಪ್ರಮಾಣ ವರ್ಷ ಶೇ.88.78. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಮಾಣ ಶೇ.5.38ರಷ್ಟು ಹೆಚ್ಚು. ಸಿಬಿಎಸ್ಇ 12ನೇ ತರಗತಿಗಳ ಪರೀಕ್ಷೆಗಳು 15.02.2020 ರಿಂದ 30.03.2020 ನಡೆಸಲು ನಿಗದಿಯಾಗಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಸಿಬಿಎಸ್ಇ ಪರೀಕ್ಷೆಗಳನ್ನು ಮರು ನಿಗದಿ ಮಾಡಿ, 19.03.2020 ರಿಂದ 30.03.2020 ವರೆಗೆ 12 ವಿಷಯಗಳ ಪರೀಕ್ಷೆಗಳನ್ನು ಮತ್ತು ಈಶಾನ್ಯ ದೆಹಲಿ ವಿದ್ಯಾರ್ಥಿಗಳಿಗಾಗಿ 11 ವಿಷಯಗಳ ಪರೀಕ್ಷೆಗಳನ್ನು ನಡೆಸಿತು. ಪರೀಕ್ಷೆಗಳನ್ನು 2020 ಜುಲೈ 1 ರಿಂದ 15 ವರೆಗೆ ಮರು ನಿಗದಿ ಮಾಡಲಾಗಿದೆ. ಅನಿರೀಕ್ಷಿತ ಪರಿಸ್ಥಿತಿ ಮತ್ತು ಅನಿಶ್ಚಿತತೆಗಳನ್ನು ಗಮನದಲ್ಲಿರಿಸಿಕೊಂಡು ಹಾಗೂ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸೌಖ್ಯವನ್ನು ಗಮನದಲ್ಲಿರಿಸಿಕೊಂಡು ಸುಪ್ರೀಂಕೋರ್ಟ್ 26.06.2020ರಂದು ಸಿಬಿಎಸ್ಇ ಸಲ್ಲಿಸಿದ ಮೌಲ್ಯಾಂಕನ ಪದ್ಧತಿಗೆ ಅನುಮೋದನೆ ನೀಡಿತ್ತು.

ಪಿಐಬಿ ಪ್ರಾದೇಶಿಕ ಕಚೇರಿಗಳ ಮಾಹಿತಿ

  • ಪಂಜಾಬ್: ಕೋವಿಡ್-19 ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿರುವ ಪಂಜಾಬ್ ಸರ್ಕಾರ, ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಸಂಪೂರ್ಣ ನಿಷೇಧಿಸಿದೆ ಮತ್ತು ಸಭೆಗಳಲ್ಲಿ ಐದಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ, ಮದುವೆ ಮತ್ತು ಇತರೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮೊದಲು 50 ಜನರಿಗೆ ಅವಕಾಶವಿತ್ತು, ಇದೀಗ 30ಕ್ಕೆ ಇಳಿಕೆ ಮಾಡಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಡ್ಡಾಯವಾಗಿ ಎಫ್ ಆರ್ ದಾಖಲು ಮಾಡಲಾಗುತ್ತಿದೆ. ರಾಜ್ಯ ಸರ್ಕಾರ, ಐಐಟಿ ಚೆನ್ನೈನ ಪರಿಣಿತರ ಸಹಭಾಗಿತ್ವದಲ್ಲಿ ತಂತ್ರಜ್ಞಾನ ಬಳಸಿ ತೀವ್ರ ನಿಗಾ ವಹಿಸುತ್ತಿದೆ, ಅಲ್ಲದೆ, ಹಿಂದೆ ಸೋಂಕು ವ್ಯಾಪಕಗೊಳ್ಳಲು ಕಾರಣವಾಗಿದ್ದ ಪ್ರದೇಶಗಳನ್ನು ಗುರುತಿಸಲು ಸೂಪರ್ ಸ್ಪ್ರೆಡರ್  ಬಳಸಲಾಗುತ್ತಿದೆ ಮತ್ತು ಅದರಿಂದ ಭವಿಷ್ಯದಲ್ಲಿ ಕ್ರಮಗಳನ್ನು ಕೈಗೊಳ್ಳಲು ನೆರವಾಗಲಿದೆ.
  • ಅರುಣಾಚಲಪ್ರದೇಶ: ಇಟಾನಗರದ ರಾಜಭವನದಲ್ಲಿ ಅರುಣಾಚಲಪ್ರದೇಶದ ಗೌರವಾನ್ವಿತ ರಾಜ್ಯಪಾಲರು, ಅವರ ಕುಟುಂಬದವರು, ಅಧಿಕಾರಿಗಳು ಮತ್ತು ರಾಜ್ಯಪಾಲರ ಸಚಿವಾಲಯದ ಸಿಬ್ಬಂದಿಗೆ ಕೋವಿಡ್-19 ಸೋಂಕು ಪರೀಕ್ಷೆ ನಡೆಸಲಾಯಿತು.
  • ಅಸ್ಸಾಂ: ಅಸ್ಸಾಂನ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಅಸ್ಸಾಂನದಲ್ಲಿಂದು ಪ್ರವಾಹ ಮತ್ತು ಭೂಕುಸಿತದಿಂದ ಬಾಧಿತವಾದ ಜೊನೈನ ಓಕ್ ಲ್ಯಾಂಡ್ ರಕ್ಷಣೆಯನ್ನು ಗುರಿಯಾಗಿಟ್ಟುಕೊಂಡು ಜಲಸಂಪನ್ಮೂಲ ಇಲಾಖೆ ಕೈಗೊಂಡಿರುವ ಯೋಜನೆಗಳು ಮತ್ತು ಕಾಮಗಾರಿಯನ್ನು ಪರಿಶೀಲಿಸಿದರು.
  • ಮಣಿಪುರ: ಮಣಿಪುರ ಪೊಲೀಸ್ ಇಲಾಖೆ, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು, ಮಾಸ್ಕ್ ಧರಿಸದಿರುವುದು ಮತ್ತಿತರ ಲಾಕ್ ಡೌನ್ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಆರಂಭಿಸಿದೆ ಮತ್ತು 411 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದೆ ಮತ್ತು 310 ವಾಹನಗಳನ್ನು ವಶಕ್ಕೆ ಪಡೆದು, ದಂಡದ ರೂಪದಲ್ಲಿ 60,750 ರೂ. ಸಂಗ್ರಹ ಮಾಡಿದೆ.
  • ಮಿಜೋರಾಂ: ಮಿಜೋರಂನಲ್ಲಿಂದು 8 ಕೋವಿಡ್-19 ಸೋಂಕಿತ ರೋಗಿಗಳು ಗುಣಮುಖರಾಗಿ ಬಿಡುಗಡೆ ಹೊಂದಿದರು. ರಾಜ್ಯದಲ್ಲಿ ಸದ್ಯ 74 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ ಮತ್ತು ಈವರೆಗೆ 159 ಮಂದಿ ಗುಣಮುಖರಾಗಿದ್ದಾರೆ.
  • ನಾಗಾಲ್ಯಾಂಡ್: ಕೊಹಿಮಾ ಜಿಲ್ಲೆಯಲ್ಲಿ ಪ್ರಸ್ತುತ ಇರುವ ನಿರ್ಬಂಧಿತ ವಲಯಗಳಲ್ಲಿ ಕೋವಿಡ್-19 ಸೋಂಕು ಪ್ರಸರಣಾ ತಡೆಯುಲ್ಲಿ ಶೀಘ್ರವಾಗಿ ಪ್ರಕರಣಗಳನ್ನು ಪತ್ತೆಹಚ್ಚಲು ವ್ಯಾಪಕ ನಿಗಾ ವಹಿಸಲಾಗುತ್ತಿದೆ.
  • ಸಿಕ್ಕಿಂಮುಖ್ಯಮಂತ್ರಿ ಶ್ರೀ ಪ್ರೇಮ್ ಸಿಂಗ್ ತಮಂಗ್ ಅವರು, ಇಂದು ರಾಜ್ಯ ಕಾರ್ಯಪಡೆಯ ತುರ್ತು ಸಭೆ ನಡೆಸಿದರು ಮತ್ತು ರೋನ್ ಗಲಿ ಉಪವಲಯದಲ್ಲಿ ಕೋವಿಡ್-19 ಪ್ರಕರಣಗಳು ದಿಢೀರ್ ಏರಿಕೆಯಾಗುತ್ತಿರುವ ಕುರಿತು ಮತ್ತು ತಕ್ಷಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು. ಸಭೆಯಲ್ಲಿ ಸಂಪುಟ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಇಲಾಖಾ ಮುಖ್ಯಸ್ಥರು ಭಾಗವಹಿಸಿದ್ದರು. ಸಿಕ್ಕಿಂ ಸರ್ಕಾರ ಕೋವಿಡ್-19 ನಿಯಂತ್ರಣಕ್ಕೆ ಹೊಸ ಕ್ರಮಗಳನ್ನು ಪ್ರಕಟಿಸಿದೆ. ಜಿಮ್ ಮತ್ತು ಬಾರ್ ಗಳನ್ನು ಮುಚ್ಚಲಾಗುವುದು. ಎಲ್ಲಾ ಅಂತರ ಮತ್ತು ಅಂತರ ಜಿಲ್ಲಾ ಸಂಚಾರ ತಕ್ಷಣದಿಂದ ರದ್ದಾಗಲಿದೆ. ದ್ವಿಚಕ್ರ ವಾಹನಗಳು ಸೇರಿದಂತೆ ಎಲ್ಲ ಬಗೆಯ ಖಾಸಗಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಟ್ಯಾಕ್ಸಿಗಳು ಸ್ಥಳೀಯವಾಗಿ ಸಮ-ಬೆಸ ಆಧಾರದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ನಿಯಮಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಅವುಗಳು ಜುಲೈ 31 ವರೆಗೆ ಮುಂದುವರಿಯಲಿದೆ.
  • ಮಹಾರಾಷ್ಟ್ರ:  ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 6,497 ಹೊಸ ಕೋವಿಡ್-19 ಪಾಸಿಟಿವ್  ಪ್ರಕರಣಗಳು ದೃಢಪಟ್ಟಿವೆ. ಇದರಿಂದ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ  2,60,924ಕ್ಕೆ ಏರಿಕೆಯಾಗಿದೆ. ಅಲ್ಲದೆ ಹೊಸದಾಗಿ 193 ರೋಗಿಗಳು ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಪ್ರಕರಣ 10,482ಕ್ಕೆ ಏರಿದೆ. ಪ್ರಸ್ತುತ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,05,637. ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಮಧ್ಯರಾತ್ರಿಯಿಂದ ಪುಣೆ ಮತ್ತು ಪಿಂಪ್ರಿ-ಚಿಂಚವಾಡ ಪ್ರಾಂತ್ಯದಲ್ಲಿ ಲಾಕ್ ಡೌನ್ ಮತ್ತೆ ಜಾರಿಗೊಳಿಸಲಾಗಿದೆ.
  • ಗುಜರಾತ್: ಗುಜರಾತ್ ನಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 902 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 42,808ಕ್ಕೆ ಏರಿಕೆಯಾಗಿದೆ. ಪೈಕಿ 10,945 ಸಕ್ರಿಯ ಪ್ರಕರಣಗಳಿದ್ದು, 74 ರೋಗಿಗಳ ಸ್ಥಿತಿ ಗಂಭೀರವಾಗಿದ್ದು, ಅವರುಗಳನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ. ರಾಜ್ಯದಲ್ಲಿ ಈವರೆಗೆ 4.70 ಲಕ್ಷ ಸೋಂಕಿತರ ಪರೀಕ್ಷೆಗಳನ್ನು ನಡೆಸಲಾಗಿದೆ.
  • ರಾಜಸ್ಥಾನ: ಮಂಗಳವಾರ ಬೆಳಗ್ಗೆ ಹೊಸದಾಗಿ 98 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 25,000 ಗಡಿ ದಾಟಿದ್ದು, ಪ್ರಸ್ತುತ 25,034 ಪ್ರಕರಣಗಳಿವೆ. ಪೈಕಿ ಈವರೆಗೆ 5,759 ಸಕ್ರಿಯ ಪ್ರಕರಣಗಳಿವೆ.
  • ಮಧ್ಯಪ್ರದೇಶ: ರಾಜ್ಯದಲ್ಲಿ ಸೋಮವಾರ ಹೊಸದಾಗಿ 575 ಪಾಸಿಟಿವ್ ಪ್ರಕರಣಗಳು ಮತ್ತು 10 ಸಾವು ವರದಿಯಾಗಿದೆ. ಇದು ಈವರೆಗೆ ಒಂದೇ ದಿನ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ಕೋವಿಡ್-19 ಸೋಂಕಿತರ ಸಂಖ್ಯೆ 18,207ಕ್ಕೆ ಏರಿಕೆಯಾಗಿದೆ. ಪ್ರಸ್ತುತ 4,336 ಸಕ್ರಿಯ ರೋಗಿಗಳಿದ್ದು, ಈವರೆಗೆ 13,208 ರೋಗಿಗಳು ಗುಣಮುಖರಾಗಿದ್ದಾರೆ. ಗ್ವಾಲಿಯರ್ ಹೊಸ ಹಾಟ್ ಸ್ಪಾಟ್ ಆಗಿ ಕಂಡುಬಂದಿದ್ದು, ಅಲ್ಲಿ 110 ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. ನಂತರ ಇಂದೋರ್ ನಲ್ಲಿ 92 ಮತ್ತು ಭೂಪಾಲ್ ನಲ್ಲಿ 88 ಪ್ರಕರಣ ಪತ್ತೆಯಾಗಿದೆ.
  • ಛತ್ತೀಸ್ ಗಢ: ರಾಜ್ಯದಲ್ಲಿ ಒಂದೇ ದಿನ ಅತ್ಯಧಿಕ ಪ್ರಕರಣ ಅಂದರೆ ಸೋಮವಾರ 184 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಅದರೊಂದಿಗೆ ರಾಜ್ಯದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 4265ಕ್ಕೆ ಏರಿದೆ. ಒಟ್ಟು ಸಕ್ರಿಯ ಪ್ರಕರಣಗಳು 1044. ಗರಿಷ್ಠ 87 ಪ್ರಕರಣ ರಾಯ್ಪುರದಲ್ಲೇ ಕಂಡುಬಂದಿದ್ದು, ರಾಜನಂದಗಾವ್ ನಲ್ಲಿ 26 ಮತ್ತು ದುರ್ಗ್ ನಲ್ಲಿ 25 ಪ್ರಕರಣ ಪತ್ತೆಯಾಗಿವೆ.
  • ಗೋವಾ: ರಾಜ್ಯದಲ್ಲಿ 130 ಹೊಸ ಪಾಸಿಟಿವ್ ಪ್ರಕರಣಗಳು ದೃಢಪಡುವುದರೊಂದಿಗೆ ಒಟ್ಟು ಕೋವಿಡ್-19 ಸೋಂಕಿತರ  ಸಂಖ್ಯೆ 2,583ಕ್ಕೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 1,026 ಸಕ್ರಿಯ ಪ್ರಕರಣಗಳಿವೆ.
  • ಕೇರಳ: ಕೋವಿಡ್-19ನಿಂದಾಗಿ ಅಲಪ್ಪುಝಾ ವೈದ್ಯಕೀಯ ಕಾಲೇಜಿನಲ್ಲಿ ಮತ್ತೊಂದು ಸಾವು ಸಂಭವಿಸಿದೆ. ಮೃತಪಟ್ಟವರು ಕೊಲ್ಲಿ ರಾಷ್ಟ್ರದಿಂದ ವಾಪಸ್ ಬಂದವರಾಗಿದ್ದು, ಅವರ ಸಾವಿನಿಂದಾಗಿ ಒಟ್ಟು ಮೃತರ ಪ್ರಮಾಣ 34ಕ್ಕೆ ಏರಿಕೆಯಾಗಿದೆ. ಅಲಪ್ಪುಝಾ, ತ್ರಿಶೂರ್, ಪಾಲಕ್ಕಾಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಹೆಚ್ಚು ಸೋಂಕು ಹರಡುತ್ತಿರುವುದರಿಂದ ಜಾಗೃತವಾಗಿರುವಂತೆ ಸೂಚಿಸಲಾಗಿದೆ. ಸ್ಥಳಗಳಲ್ಲಿ ಹೆಚ್ಚಿನ ಕ್ಲಸ್ಟರ್ ಗಳನ್ನು ಸೃಷ್ಟಿಸಲಾಗುವುದು. 35 ಪಾಸಿಟಿವ್ ಪ್ರಕರಣಗಳು ದೃಢಪಟ್ಟ ಎರ್ನಾಕುಲಂನ ಚೆಲ್ಲಾನಂ ಪಂಚಾಯಿತಿಗೆ ಕ್ಷಿಪ್ರ ಕಾರ್ಯಪಡೆಯನ್ನು ನಿಯೋಜಿಸಲಾಗಿದೆ. ಕೊಚ್ಚಿ ಮತ್ತು ತ್ರಿವೇಂಡ್ರಮ್ ನಲ್ಲಿ ತಲಾ ಇಬ್ಬರು ವೈದ್ಯರಿಗೆ ಪಾಸಿಟಿವ್ ದೃಢಪಟ್ಟಿದೆ. ಮಧ್ಯೆ ಕೇರಳ ಹೈಕೋರ್ಟ್ ನಲ್ಲಿ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಪ್ರತಿಭಟನೆಗಳನ್ನು ನಿಷೇಧಿಸುವಂತೆ ಅರ್ಜಿ ಸಲ್ಲಿಸಲಾಗಿದೆ. ರಾಜ್ಯದಲ್ಲಿ ನಿನ್ನೆ 449 ಹೊಸ ಪ್ರಕರಣಗಳು ದೃಢಪಟ್ಟವೆ. ಅವುಗಳ ಸಂಪರ್ಕ ಸಂಖ್ಯೆ 144 ಇದ್ದು, 18ಕ್ಕೆ ಯಾವುದೇ ಮೂಲಗಳು ಪತ್ತೆಯಾಗಿಲ್ಲ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,028. 713 ಮಂದಿ ನಿನ್ನೆ ಒಂದೇ ದಿನ ಆಸ್ಪತ್ರೆಗೆ ದಾಖಲಾಗಿದ್ದು, ಇದು ಈವರೆಗಿನ ಗರಿಷ್ಠ ಸಂಖ್ಯೆಯಾಗಿದೆ.
  • ತಮಿಳುನಾಡು: ಪುದುಚೆರಿಯಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 3,000 ಮಾದರಿಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲು ಯೋಜಿಸಲಾಗಿದ್ದು, ಹೊಸದಾಗಿ 63 ಕೋವಿಡ್-19 ಪ್ರಕರಣಗಳು ಇಂದು ಕೇಂದ್ರಾಡಳಿತ ಪ್ರದೇಶದಲ್ಲಿ ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,531ಕ್ಕೆ ಏರಿಕೆಯಾಗಿದೆ. ತಮಿಳುನಾಡು ಮುಖ್ಯಮಂತ್ರಿಗಳ ಕಾರ್ಯಾಲಯದ ಸಿಬ್ಬಂದಿಗೆ ಕೋವಿಡ್-19 ಪರೀಕ್ಷೆಯಲ್ಲಿ ನೆಗಿಟಿವ್ ವರದಿ ಬಂದಿದೆ. ಈವರೆಗೆ 11 ಶಾಸಕರ ಪೈಕಿ ಮೂರು ಸಚಿವರು ಸೇರಿ ಕೆಲ ಸಿಬ್ಬಂದಿಗಳಿಗೆ ಪಾಸಿಟಿವ್ ವರದಿ ಬಂದಿದೆ. ಕೊಯಮತ್ತೂರು ಜಿಲ್ಲೆಯಲ್ಲಿ ಜುಲೈ 9ಕ್ಕೆ ಒಂದು ಸಾವಿರ ಪ್ರಕರಣಗಳ ಗಡಿ ದಾಟಿದ್ದು, ಆಗಸ್ಟ್ ವೇಳೆಗೆ 4,000 ಪ್ರಕರಣಗಳಾಗಲಿವೆ ಎಂದು ಅಂದಾಜಿಸಲಾಗಿದೆ. ಕ್ಲಸ್ಟರ್ ಮತ್ತು ಪ್ರಯಾಣಿಕರ ಭೇಟಿ ಕಾರಣಗಳಿಂದ ಕೊಯಮತ್ತೂರಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆಯವರೆಗೆ ರಾಜ್ಯದಲ್ಲಿ 4328 ಹೊಸ ಪ್ರಕರಣಗಳು ಮತ್ತು 66 ಸಾವು ಸಂಭವಿಸಿದೆ. ಒಟ್ಟು ಪ್ರಕರಣಗಳು 1,42,798; ಸಕ್ರಿಯ ಪ್ರಕರಣಗಳು: 48,196; ಸಾವು: 2032; ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು: 16,601.
  • ಕರ್ನಾಟಕ: ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು ರಾತ್ರಿ 8 ಗಂಟೆಯಿಂದ ಲಾಕ್ ಡೌನ್ ಜಾರಿಯಾಗಲಿದೆ. ದಕ್ಷಿಣ ಕನ್ನಡ, ಧಾರವಾಡ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ನಾಳೆಯಿಂದ ಲಾಕ್ ಡೌನ್ ಜಾರಿಗೆ ಬರಲಿದೆ. ರಾಜ್ಯದಲ್ಲಿ ಎಲ್ಲಾ ಬಗೆಯ ಹಬ್ಬಗಳ ಸಾರ್ವತ್ರಿಕ ಆಚರಣೆಯನ್ನು ನಿಷೇಧಿಸಲಾಗಿದೆ. ಮಧ್ಯೆ ರಾಜ್ಯ ಸರ್ಕಾರ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಿಗೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ. ಕೋವಿಡ್-19 ರೋಗಿಗಳಿಗೆ ಸಹಾಯ ಮಾಡುವ ಸಲುವಾಗಿ ಬಿಬಿಎಂಪಿ ರಿಯಲ್ ಟೈಮ್ ಹಾಸಿಗೆ ಲಭ್ಯತೆ ಮಾಹಿತಿ ವ್ಯವಸ್ಥೆಯನ್ನು ಆರಂಭಿಸಿದೆ. ರಾಜ್ಯದಲ್ಲಿ 2738 ಹೊಸ ಪ್ರಕರಣಗಳು ಮತ್ತು 73 ಸಾವು ನಿನ್ನೆ ವರದಿಯಾಗಿದ್ದು, ಬೆಂಗಳೂರಿನಲ್ಲಿ 1315 ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಪಾಸಿಟಿವ್ ಪ್ರಕರಣಗಳು 41,518; ಸಕ್ರಿಯ ಪ್ರಕಣಗಳು: 24,572; ಸಾವು: 757.
  • ಆಂಧ್ರಪ್ರದೇಶ:  ದೇಶದ ನಾನಾ ಭಾಗಗಳಿಂದ ಹಾಗೂ ವಿದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಜನರಿಗೆ ಕ್ವಾರಂಟೈನ್ ಗಾಗಿ ವಿಶೇಷ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಹೊರಡಿಸಿದೆ ಮತ್ತು 14 ದಿನಗಳ ಕಟ್ಟುನಿಟ್ಟಿನ ಗೃಹ ದಿಗ್ಭಂಧನಕ್ಕೆ ಸೂಚಿಸಲಾಗಿದೆ. ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನು ಹೆಚ್ಚಿನ ಅಪಾಯವಿರುವ ರಾಜ್ಯಗಳೆಂದು ಗುರುತಿಸಲಾಗಿದೆ. ವ್ಯಕ್ತಿಗಳ ಸಂಚಾರಕ್ಕೆ ರಾಜ್ಯದಲ್ಲಿ ಇನ್ನೂ ಅಂತಾರಾಜ್ಯ ಗಡಿಗಳನ್ನು ತೆರೆದಿಲ್ಲ. ರಾಜ್ಯದ ಪ್ರವೇಶಕ್ಕೆ -ಪಾಸ್ ಕಡ್ಡಾಯಗೊಳಿಸಿರುವುದು ಇನ್ನೂ ಮುಂದುವರಿದಿದೆ. ಬೀದಿ ಬದಿ ಮಕ್ಕಳನ್ನು ಸೋಂಕಿನಿಂದ ರಕ್ಷಿಸುವುದು ಮತ್ತು ಕೋವಿಡ್ ನಿಯಂತ್ರಣಕ್ಕೆ ವಿಶೇಷ ಒತ್ತು ನೀಡಲು ಹಾಗೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಉದ್ದೇಶದಿಂದ ಆಂಧ್ರಪ್ರದೇಶ ಡಿಜಿಪಿ ಮುಸ್ಕಾನ್ ಕೋವಿಡ್-19 ಕಾರ್ಯಾಚರಣೆಆರಂಭಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 1916 ಹೊಸ ಪ್ರಕರಣಗಳು, 952 ಗುಣಮುಖ ಮತ್ತು 43 ಸಾವುಗಳು ಸಂಭವಿಸಿವೆ. ಒಟ್ಟು ಪ್ರಕರಣಗಳು 33,019,  ಸಕ್ರಿಯ ಪ್ರಕಣಗಳು 15,144, ಗುಣಮುಖರಾದವರು 17,467, ಮತ್ತು ಸಾವು 408.
  • ತೆಲಂಗಾಣ: ಸಾಮೂಹಿಕವಾಗಿ ಕೋವಿಡ್-19 ಪರೀಕ್ಷೆ ನಡೆಸದಿರುವುದಕ್ಕೆ ತೆಲಂಗಾಣ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಸಾರ್ವಜನಿಕ ಆರೋಗ್ಯಾಧಿಕಾರಿ ಡಾ. ಜಿ. ಶ್ರೀನಿವಾಸರಾವ್ ಅವರಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸಮನ್ಸ್ ಜಾರಿಗೊಳಿಸಿದೆ. ಸಾಕಷ್ಟು ವಿಳಂಬದ ನಂತರ ತೆಲಂಗಾಣದಲ್ಲಿ ಆಂಟಿಜನ್ ಕ್ಷಿಪ್ರ ಪರೀಕ್ಷೆ ಆರಂಭಿಸಲಾಗಿದ್ದು, ಅದು ಐಸಿಎಂಆರ್ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿಲ್ಲ. ಐಸಿಎಂಆರ್ ಆಂಟಿಜನ್ ಪರೀಕ್ಷೆಯಲ್ಲಿ ನೆಗಿಟಿವ್ ಬಂದವರೂ ಸಹ ಆರ್ ಟಿ ಪಿಸಿಆರ್ ಪರೀಕ್ಷೆಗೆ ಒಳಗಾಗುವುದು ಅಗತ್ಯ ಎಂದು ಸಲಹೆ ಮಾಡಿದೆ. ಸರ್ಕಾರ ಸೋಂಕು ಲಕ್ಷಣಗಳಿಲ್ಲದ ಜನರಿಗೆ ಮತ್ತೆ ಪರೀಕ್ಷೆ ಮಾಡಿಸಿಕೊಳ್ಳುವ ಬದಲು ಗೃಹ ದಿಗ್ಭಂಧನಕ್ಕೆ ತೆರಳುವಂತೆ ಸೂಚಿಸಲು ನಿರ್ಧರಿಸಿದೆ. ನಿನ್ನೆಯವರೆಗೆ ದಾಖಲಾಗಿರುವ ಒಟ್ಟು ಪ್ರಕರಣಗಳು 36,221; ಸಕ್ರಿಯ ಪ್ರಕರಣ: 12, 178; ಸಾವು: 365; ಗುಣಮುಖರಾದವರು: 23,679.

***



(Release ID: 1638727) Visitor Counter : 177