ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಂದ ಪ್ರಾಗ್ಯತಾ ಮಾರ್ಗಸೂಚಿ ಬಿಡುಗಡೆ

Posted On: 14 JUL 2020 4:50PM by PIB Bengaluru

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಂದ ವರ್ಚುಯಲ್ ರೂಪದಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಾಗ್ಯತಾ ಮಾರ್ಗಸೂಚಿ ಬಿಡುಗಡೆ

ಡಿಜಿಟಲ್/ ಆನ್ ಲೈನ್ ಶಿಕ್ಷಣದ ಮಾರ್ಗಸೂಚಿ ಉನ್ನತ ಗುಣಮಟ್ಟದೊಂದಿಗೆ ಆನ್ ಲೈನ್ ಶಿಕ್ಷಣ ಮುಂದುವರಿಸಲು ನೀಲನಕ್ಷೆ: ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

ಒಂದನೇ ತರಗತಿಯಿಂದ 12ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಪ್ರತಿ ದಿನ ತೆಗೆದುಕೊಳ್ಳಬಹುದಾದ  ಆನ್ ಲೈನ್  ತರಗತಿ ಮತ್ತು ಅವಧಿಗೆ ಮಾರ್ಗಸೂಚಿಯಲ್ಲಿ ಶಿಫಾರಸ್ಸು

 

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು, ನವದೆಹಲಿಯಲ್ಲಿಂದು ಡಿಜಿಟಲ್ ಶಿಕ್ಷಣದ ಮೂಲಕ ಆನ್ ಲೈನ್ ಮಾಧ್ಯಮದ ಬೋಧನೆ ಕುರಿತಂತೆ ಪ್ರಾಗ್ಯತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದರು. ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ದೋತ್ರೆ ಅವರೂ ಕೂಡ ಆನ್ ಲೈನ್ ಮೂಲಕ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು, ಕೋವಿಡ್-19 ಸಾಂಕ್ರಾಮಿಕದಿಂದಾಗಿ ಶಾಲೆಗಳು ಮುಚ್ಚಲ್ಪಟ್ಟಿವೆ ಮತ್ತು ದೇಶಾದ್ಯಂತ ಶಾಲೆಗಳಲ್ಲಿ ಓದುತ್ತಿರುವ 240 ಮಿಲಿಯನ್ ಮಕ್ಕಳ ಮೇಲೆ ಪರಿಣಾಮ ಬೀರಿದೆ ಎಂದರು. ಶಾಲಾ ಕಾಲೇಜುಗಳನ್ನು ದೀರ್ಘಕಾಲ ಮುಚ್ಚುವುದರಿಂದ ಕಲಿಕೆಯ ಮೇಲೆ ಪರಿಣಾಮವಾಗಲಿದೆ ಎಂದರು. ಸಾಂಕ್ರಾಮಿಕದಿಂದ ಆಗುವ ಪರಿಣಾಮವನ್ನು ತಗ್ಗಿಸಬೇಕಾಗಿದೆ ಎಂದ ಪೋಖ್ರಿಯಾಲ್, ಶಾಲೆಗಳು ತಮ್ಮ ಕಲಿಕೆ ಮತ್ತು ಬೋಧನಾ ವಿಧಾನಕ್ಕೆ ಹೊಸ ರೂಪ ನೀಡುವುದು ಮತ್ತು ಮರುವಿನ್ಯಾಸ ಗೊಳಿಸಿಕೊಳ್ಳುವುದಷ್ಟೇ ಅಲ್ಲದೆ ಮನೆಯಲ್ಲಿ ಕಲಿಕೆ ಮತ್ತು ಶಾಲೆಯಲ್ಲಿ ಕಲಿಕೆ ಎರಡನ್ನೂ ಒಟ್ಟಾಗಿ ಸೇರಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಸೂಕ್ತ ವಿಧಾನವನ್ನು ಪರಿಚಯಿಸುವ ಅಗತ್ಯವಿದೆ ಎಂದರು

ಡಿಜಿಟಲ್ ಶಿಕ್ಷಣ #DigitalEducation ಕ್ಕೆ ಸಂಬಂಧಿಸಿದಂತೆ ಶಾಲಾ ಮುಖ್ಯಸ್ಥರು, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರಾಗ್ಯತಾಮಾರ್ಗಸೂಚಿಗಳನ್ನು ಪರಿಚಯಿಸಲಾಗುತ್ತಿದೆ. ಅದರಲ್ಲಿ ಮಕ್ಕಳು ಪರದೆಯ ಮೇಲೆ ಎಷ್ಟು ಹೊತ್ತು ಕಳೆಯಬಹುದು ಎಂದು ಶಿಫಾರಸ್ಸು ಮಾಡಲಾಗಿದೆ ಮತ್ತು ಡಿಜಿಟಲ್ ಕಲಿಕೆ#DigitalLearning ವೇಳೆ ಆಗುವ ಮಾನಸಿಕ/ದೈಹಿಕ ಒತ್ತಡವನ್ನು ನಿವಾರಿಸುವ ಉಪಾಯಗಳನ್ನು ನೀಡಲಾಗಿದೆ. ಹೆಚ್ಚಿನ ವಿವರಗಳಿಗೆ #PRAGYATA pic.twitter.com/o1BkkhID7j

  • ಡಾ|| ರಮೇಶ್ ಪೋಖ್ರಿಯಾಲ್ ನಿಶಾಂಕ್(@DrRPNishank) ಜುಲೈ 14, 2020

ಪ್ರಸಕ್ತ ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಗಳಲ್ಲೇ ಉಳಿದಿರುವ ವಿದ್ಯಾರ್ಥಿಗಳಿಗೆ ಡಿಜಿಟಲ್/ಆನ್ ಲೈನ್ ಮತ್ತು ಅವೆರಡೂ ಸೇರಿಸಿದ ಶಿಕ್ಷಣವನ್ನು ನೀಡಲು ಆದ್ಯತೆ ಕೊಟ್ಟು ಸಂಭಾವ್ಯ ಕಲಿಕಾರ್ಥಿಗಳಿಗಾಗಿ ಪ್ರಾಗ್ಯತಾ ಮಾರ್ಗಸೂಚಿಗಳನ್ನು ಆನ್ ಲೈನ್ ಮಾರ್ಗಸೂಚಿಗಳನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದು ಸಚಿವರು ಹೇಳಿದರು. ಈ ಡಿಜಿಟಲ್/ಆನ್ ಲೈನ್ ಶಿಕ್ಷಣ ಮಾರ್ಗಸೂಚಿಗಳು ಆನ್ ಲೈನ್ ಶಿಕ್ಷಣದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದನ್ನು ಮುಂದುವರಿಸಲು ನೀಲನಕ್ಷೆ ಒದಗಿಸಲಿದೆ ಎಂದು ಅವರು ಹೇಳಿದರು. ಈ ಮಾರ್ಗಸೂಚಿಗಳು ಶಾಲಾ ಮುಖ್ಯಸ್ಥರು, ಶಿಕ್ಷಕರು, ಪೋಷಕರು, ಶಿಕ್ಷಕರ ಮಾರ್ಗದರ್ಶಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ವಿಭಿನ್ನ ಭಾಗೀದಾರರಿಗೆ ಅತ್ಯಂತ ಉಪಯುಕ್ತ ಮತ್ತು ಪ್ರಸ್ತುತವಾಗಲಿವೆ ಎಂದು ಸಚಿವರು ಹೇಳಿದರು. ಈ ಮಾರ್ಗಸೂಚಿಗಳಲ್ಲಿ ಎನ್ ಸಿ ಇ ಆರ್ ಟಿ ಶೈಕ್ಷಣಿಕ ವೇಳಾಪಟ್ಟಿಯ ಪರ್ಯಾಯ ಬಳಕೆಗೆ ಒತ್ತು ನೀಡಲಾಗಿದೆ. ಕಲಿಕಾರ್ಥಿಗಳು ಡಿಜಿಟಲ್ ಉಪಕರಣಗಳನ್ನು ಬಳಸಲು ಮತ್ತು ಸೀಮಿತ ರೀತಿಯಲ್ಲಿ ಅವುಗಳನ್ನು ಉಪಯೋಗಿಸಲು ನೆರವಾಗಲಿವೆ ಎಂದರು.

ಪ್ರಾಗ್ಯತಾ ಮಾರ್ಗಸೂಚಿಯಲ್ಲಿ ಆನ್ ಲೈನ್/ಡಿಜಿಟಲ್ ಕಲಿಕೆಗೆ ಸಂಬಂಧಿಸಿದಂತೆ ಎಂಟು ಹಂತಗಳು ಒಳಗೊಂಡಿವೆ. ಅವುಗಳೆಂದರೆ ಯೋಜನೆಪರಾಮರ್ಶೆ ವ್ಯವಸ್ಥೆ ಮಾರ್ಗದರ್ಶನ ಬೋಧನೆ ಅಸೈನ್- ನಿಗಾವಹಿಸುವುದು ಮೆಚ್ಚುಗೆ ಸೂಚಿಸುವುದು. ಈ ಕ್ರಮಗಳು ಹಂತ ಹಂತವಾಗಿ ಉದಾಹರಣೆಗಳ ಮೂಲಕ ಡಿಜಿಟಲ್ ಶಿಕ್ಷಣದ ಯೋಜನೆ ಮತ್ತು ಅನುಷ್ಠಾನಕ್ಕೆ ಮಾರ್ಗದರ್ಶಿಯಾಗಲಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಧೋತ್ರೆ ಅವರು, ಎಚ್ ಆರ್ ಡಿ ಸಚಿವಾಲಯ ಪ್ರಾಗ್ಯತಾ ಮಾರ್ಗಸೂಚಿಗಳನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಕಲ್ಯಾಣ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದೆ. ಆನ್ ಲೈನ್ ಶಿಕ್ಷಣ ಈ ಸಾಂಕ್ರಾಮಿಕದ ವೇಳೆ ಅಂತರವನ್ನು ತುಂಬುವಲ್ಲಿ ಸಹಾಯಕವಾಗಿದೆ. ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನ ಬಳಸಿ, ಶಿಕ್ಷಣ ನೀಡುವಾಗ ಭಾರೀ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗುತ್ತಿದೆ ಎಂದರು. ಈ ಮಾರ್ಗಸೂಚಿಗಳು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಮುಖ್ಯಸ್ಥರು ಸೇರಿದಂತೆ ಸಂಬಂಧಿಸಿದ ಎಲ್ಲರಿಗೂ ಸುರಕ್ಷಿತ ಪದ್ಧತಿಗಳಲ್ಲಿ ಆನ್ ಲೈನ್ ಶಿಕ್ಷಣ ಪಡೆಯಲು ನೆರವಾಗುತ್ತದೆ ಎಂದರು. ಸುರಕ್ಷಿತ ಮತ್ತು ಅತ್ಯಂತ ಜಾಗರೂಕತೆಯಿಂದ ಡಿಜಿಟಲ್ ಕಲಿಕೆಯ ವಾತಾವರಣ ಒದಗಿಸುವ ಪ್ರಾಗ್ಯತಾ ಮಾರ್ಗಸೂಚಿ ಹೊರತಂದಿರುವುದಕ್ಕೆ ಸಚಿವಾಲಯದ ಪ್ರಯತ್ನಗಳ ಬಗ್ಗೆ  ಶ್ರೀ ಧೋತ್ರೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಮಾರ್ಗಸೂಚಿಗಳಲ್ಲಿ ಶಾಲಾ ಆಡಳಿತಾಗಾರರು, ಶಾಲಾ ಮುಖ್ಯಸ್ಥರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಸಲಹೆ ರೂಪದಲ್ಲಿ ನೀಡಲಾಗಿದ್ದು, ಅವುಗಳು ಈ ಕೆಳಗಿನ ವಲಯದಲ್ಲಿ ಸೇರಿವೆ:

  • ಮೌಲ್ಯಾಂಕನ ಅಗತ್ಯತೆ
  • ಆನ್ ಲೈನ್ ಮತ್ತು ಡಿಜಿಟಲ್ ಶಿಕ್ಷಣದ ಯೋಜನೆ ರೂಪಿಸುವಾಗ ಅವಧಿ, ಪರದೆ ನೋಡುವ ಸಮಯ(ಸ್ಕೀನ್ ನೋಡುವುದು), ಒಳಗೊಳ್ಳುವಿಕೆ, ಸಮತೋಲಿತ ಆನ್ ಲೈನ್ ಮತ್ತು ಆಫ್ ಲೈನ್ ಚಟುವಟಿಕೆಗಳು ಇತ್ಯಾದಿಗಳ ಬಗ್ಗೆ ಗಮನಹರಿಸಲಾಗಿದೆ.
  • ಸಂಪನ್ಮೂಲ ವ್ಯಕ್ತಿ, ಹಂತವಾರು ಫಲಿತಾಂಶ ಸೇರಿದಂತೆ ಯಾವ ಮಾದರಿಯಲ್ಲಿ ಮಧ್ಯ ಪ್ರವೇಶ ಮಾಡಬಹುದೆಂಬುದು.
  • ಡಿಜಿಟಲ್ ಶಿಕ್ಷಣದ ವೇಳೆ ದೈಹಿಕ, ಮಾನಸಿಕ ಆರೋಗ್ಯ ಮತ್ತು ಸೌಖ್ಯ.
  • ಸೈಬರ್ ಭದ್ರತೆ ಕಾಯ್ದುಕೊಳ್ಳುವ ಕ್ರಮಗಳು ಹಾಗೂ ಸೈಬರ್ ಸುರಕ್ಷತೆ ಮತ್ತು ನೈತಿಕ ಪದ್ಧತಿಗಳ ಮುಂಜಾಗ್ರತಾ ಕ್ರಮಗಳು.
  • ಹಲವು ಉಪಕ್ರಮಗಳ ನಡುವೆ ಸಹಭಾಗಿತ್ವ ಮತ್ತು ಸಮನ್ವಯ.

ಶಿಫಾರಸ್ಸು ಮಾಡಲಾದ ಪರದೆ (screen) ನೋಡುವ ಸಮಯ

ತರಗತಿ

ಶಿಫಾರಸ್ಸು

ಪೂರ್ವ ಪ್ರಾಥಮಿಕ

ನಿಗದಿತ ದಿನ ಪೋಷಕರೊಂದಿಗೆ ಸಂವಾದ ನಡೆಸುವುದು ಮತ್ತು ಮಾರ್ಗದರ್ಶನ ನೀಡುವುದು ಸೇರಿ ಗರಿಷ್ಠ 30 ನಿಮಿಷ ಮೀರಬಾರದು.

1 ರಿಂದ 12ನೇ ತರಗತಿ

ಎನ್ ಸಿ ಇ ಆರ್ ಟಿಯ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿ http://ncert.nic.in/aac.html ಅಳವಡಿಸಿಕೊಳ್ಳಲು ಶಿಫಾರಸ್ಸು

1 ರಿಂದ 8ನೇ ತರಗತಿ

ಆನ್ ಲೈನ್ ಶಿಕ್ಷಣ ಸೇರಿ ಪ್ರತಿ ದಿನ ಎರಡಕ್ಕಿಂತ ಹೆಚ್ಚಿಲ್ಲದ ಅವಧಿಗೆ 30 ರಿಂದ 45 ನಿಮಿಷಗಳ ಕಾಲ ಬೋಧನೆ ಕುರಿತು ಪ್ರಾಥಮಿಕ ತರಗತಿಗಳಿಗೆ ಆನ್ ಲೈನ್ ಶಿಕ್ಷಣದ ಬಗ್ಗೆ ರಾಜ್ಯಗಳು/ಕೇಂದ್ರಾಳಿತ ಪ್ರದೇಶಗಳು ನಿರ್ಧರಿಸಬಹುದು.

1 ರಿಂದ 12ನೇ ತರಗತಿ

ಆನ್ ಲೈನ್ ಶಿಕ್ಷಣ, ಪ್ರತಿ ದಿನ ನಾಲ್ಕಕ್ಕಿಂತ ಹೆಚ್ಚಿಲ್ಲದ ಅವಧಿಗೆ 30 ರಿಂದ 45 ನಿಮಿಷಗಳ ಕಾಲ ಬೋಧನೆ ಕುರಿತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿರ್ಧರಿಸಬಹುದು.

ಈ ಮಾರ್ಗಸೂಚಿಗಳಲ್ಲಿ ಸೈಬರ್ ಭದ್ರತೆ ಮತ್ತು ಖಾಸಗಿತನ ಕಾಯ್ದುಕೊಳ್ಳುವ ಹಕ್ಕುಗಳನ್ನು ಖಾತ್ರಿಪಡಿಸುವ ಜೊತೆಗೆ ಡಿಜಿಟಲ್ ಶಿಕ್ಷಣದ ಅನುಷ್ಠಾನದಲ್ಲಿ ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕರಿಗೆ ಅಗತ್ಯ ಮೌಲ್ಯಾಂಕನ, ಯೋಜನೆ ಮತ್ತು ಹಂತಗಳನ್ನು ವಿವರಿಸಲಾಗಿದೆ. ಇದರಲ್ಲಿ ವಿಶೇಷವಾಗಿ ಗಮನಹರಿಸಬೇಕಾದ ಮಕ್ಕಳ ಅಗತ್ಯತೆಗಳನ್ನೂ ಸಹ ಪೂರೈಸಲಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳ ಮಟ್ಟಕ್ಕೆ ಅನುಗುಣವಾಗಿ ಅಗತ್ಯ ಪರದೆ ಸಮಯದಲ್ಲಿ ಅಗತ್ಯ ಮಾನದಂಡಗಳನ್ನು ಪಾಲಿಸಿ, ಆನ್ ಲೈನ್ ಮತ್ತು ಆಫ್ ಲೈನ್ ಚಟುವಟಿಕೆಗಳಿಗೆ ಸಮಾನ ಆದ್ಯತೆ ನೀಡಲಾಗಿದೆ.

ಪೋಷಕರಿಗೆ ಮನೆಗಳಲ್ಲಿರುವ ಮಕ್ಕಳ ಸೈಬರ ಭದ್ರತಾ ಕ್ರಮಗಳ ಜೊತೆಗೆ ಅವರ ದೈಹಿಕ, ಮಾನಸಿಕ ಆರೋಗ್ಯ ಮತ್ತು ಸೌಖ್ಯವನ್ನು ಅರ್ಥಮಾಡಿಕೊಳ್ಳಲು ಈ ಮಾರ್ಗಸೂಚಿಗಳು ಸಹಾಯಕವಾಗಲಿವೆ. ಮಾರ್ಗಸೂಚಿಯುದ್ದಕ್ಕೂ ದೈಹಿಕ ಆರೋಗ್ಯ ಮತ್ತು ಮಾನಸಿಕ ಸೌಖ್ಯ ಕಾಪಾಡಲು ಹೆಚ್ಚಿನ ಒತ್ತು ನೀಡಲಾಗಿದ್ದು, ಎಲ್ಲಾ ಭಾಗಿದಾರರಿಗೆ ಡಿಜಿಟಲ್ ಉಪಕರಣಗಳ ನಿರಂತರ ಬಳಕೆಯಿಂದ ಮಕ್ಕಳ ಮೇಲೆ ಹೆಚ್ಚಾಗಿ ಒತ್ತಡ ಹಾಕದಂತೆ ಅವರ ಮೇಲೆ ನಕಾರಾತ್ಮಕ ಪರಿಣಾಮಗಳು ಬೀರದಂತೆ (ದೈಹಿಕ ನ್ಯೂನತೆಗಳು, ಕಣ್ಣಿನ ಸಮಸ್ಯೆಗಳು ಮತ್ತು ಇತರೆ ದೈಹಿಕ ತೊಂದರೆಗಳು) ಕ್ರಮ ಕೈಗೊಳ್ಳಲಾಗಿದೆ. ಸೈಬರ್ ಭದ್ರತೆ ಮತ್ತು ದಕ್ಷತೆಯ ಕುರಿತಂತೆ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ಅಗತ್ಯ ಮಾಹಿತಿಯನ್ನು ಒದಗಿಸಲಾಗಿದೆ.

ಮಾರ್ಗಸೂಚಿಯಲ್ಲಿ ದೇಶಾದ್ಯಂತ ಶಾಲೆಗೆ ಹೋಗುವ ಮಕ್ಕಳಿಗೆ ಅನುಕೂಲವಾಗುವಂತೆ ಡಿಜಿಟಲ್/ಆನ್ ಲೈನ್/ದೂರ ಶಿಕ್ಷಣ/ರೇಡಿಯೋ ಶಿಕ್ಷಣದ ಎಲ್ಲ ಪ್ರಯತ್ನಗಳನ್ನು ಒಗ್ಗೂಡಿಸಿ ಒತ್ತು ನೀಡಲಾಗಿದೆ. ಈ ಉಪಕ್ರಮಗಳಲ್ಲಿ ದೀಕ್ಷಾ, ಸ್ವಯಂಪ್ರಭಾ, ಸ್ವಯಂ ಮೂಕ್ಸ್, ರೇಡಿಯೋ ವಾಹಿನಿ, ಶಿಕ್ಷಾ ವಾಹಿನಿ, ವಿಶೇಷಚೇತನ ಮಕ್ಕಳಿಗೆ ವಿಶೇಷ ಪಠ್ಯ ಮತ್ತು ಐಟಿಪಿಎಎಲ್ ಗಳನ್ನು ಒಳಗೊಂಡಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಂತಹ ರಾಷ್ಟ್ರದಲ್ಲಿ ಶಿಕ್ಷಣದಲ್ಲಿ ಡಿಜಿಟಲ್ ಪದ್ಧತಿಗಳಿಗೆ ವರ್ಗಾವಣೆಗೊಳ್ಳಲು ಹಲವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಹಕಾರ ಅಗತ್ಯವಿದೆ ಮತ್ತು ರಾಷ್ಟ್ರಮಟ್ಟದಲ್ಲಿ ಕೋವಿಡ್ ನಂತರದ ಜಗತ್ತಿನಲ್ಲಿ ಬದಲಾವಣೆಗಳನ್ನು ತರಲು ಎಲ್ಲ ಸಂಸ್ಥೆಗಳು ಕೈಜೋಡಿಸಬೇಕಿದೆ.

ಮಾರ್ಗಸೂಚಿಗಳಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:

mhrd.gov.in/sites/upload_files/mhrd/files/pragyata-guidelines_0.pdf

***



(Release ID: 1638711) Visitor Counter : 683