ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಔಷದ  ವೈದ್ಯಕೀಯ ಉಪಕರಣ

Posted On: 13 JUL 2020 5:12PM by PIB Bengaluru

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರನ್ನು ನವದೆಹಲಿಯ  ಕಛೇರಿಯಲ್ಲಿ ಭೇಟಿಯಾದ ಪಂಜಾಬ್ ಮಾನ್ಯ ಸಚಿವ ಶ್ರೀ ಮನ್ ಪ್ರೀತ್ ಸಿಂಗ್ ಬಾದಲ್, ಉದ್ದೇಶಿತ ಔಷಧ ಪಾರ್ಕ್ ಅನ್ನು ಪಂಜಾಬ್ ರಾಜ್ಯದ ಭಟಿಂಡಾದಲ್ಲಿ ಸ್ಥಾಪಿಸುವ ಪ್ರಸ್ತಾಪ ಪರಿಗಣಿಸುವಂತೆ ಕೋರಿ ಮನವಿ ಪತ್ರ ಅರ್ಪಿಸಿದರು. ಭಟಿಂಡಾದಲ್ಲಿನ ಸ್ಥಳ ಉತ್ತಮ ಸಂಪರ್ಕ, ನೀರು ಮತ್ತು ಜಮೀನಿನ ಲಭ್ಯತೆಯನ್ನು ಹೊಂದಿದ್ದು, ರಾಜ್ಯದಲ್ಲಿ ಈಗಾಗಲೇ ಕೆಲವು ದೊಡ್ಡ ಯುಎಸ್.ಎಫ್.ಡಿಎ ಅನುಮೋದಿತ ಔಷಧೀಯ ಕಂಪನಿಗಳು ಮತ್ತು ಔಷಧ ಸಂಸ್ಥೆಗಳಾದ ಎನ್..ಪಿ..ಆರ್, ಐಐಎಸ್.ಇಆರ್, ಏಮ್ಸ್ ಮೊದಲಾದ ಸಂಸ್ಥೆಗಳು ಅಸ್ತಿತ್ವ ಹೊಂದಿವೆ ಎಂದು ತಿಳಿಸಿದರು.

ಮೂರು ಸಗಟು ಔಷಧ ಪಾರ್ಕ್ ಮತ್ತು ನಾಲ್ಕು ವೈದ್ಯಕೀಯ ಉಪಕರಣಗಳ ಪಾರ್ಕ್ ಸ್ಥಾಪನೆಗೆ ವಸ್ತುನಿಷ್ಠವಾಗಿ ಸ್ಥಳ ಆಯ್ಕೆ ಮಾಡಲು ಮಾರ್ಗಸೂಚಿಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಔಷಧ ಇಲಾಖೆ ತೊಡಗಿದೆ ಎಂದು ಶ್ರೀ ಸದಾನಂದ ಗೌಡ ತಿಳಿಸಿದರು. ಪಾರ್ಕ್ ಅಭಿವೃದ್ಧಿಗೆ ಬೆಂಬಲ ಸೂಚಿಸಿ, ಆಸಕ್ತಿ ತೋರಿದ್ದಕ್ಕಾಗಿ ಶ್ರೀ ಬಾದಲ್ ಅವರಿಗೆ ಧನ್ಯವಾದ ಅರ್ಪಿಸಿದರು.

ಪ್ರಮುಖವಾದ ಎಪಿಐಗಳು / ಕೆಎಸ್ಎಂ ಮತ್ತು ವೈದ್ಯಕೀಯ ಉಪಕರಣಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ, ಕೇಂದ್ರ ಸಚಿವ ಸಂಪುಟ 2020 ಮಾರ್ಚ್ 12ರಂದು ಮೂರು ಬೃಹತ್ ಔಷಧ ಮತ್ತು ನಾಲ್ಕು ವೈದ್ಯಕೀಯ ಉಪಕರಣಗಳ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಅನುಮೋದನೆ ನೀಡಿದೆ, ಇದಕ್ಕಾಗಿ ಭಾರತ ಸರ್ಕಾರ ರಾಜ್ಯಗಳಿಗೆ ಪ್ರತಿ ಸಗಟು ಔಷಧ ಪಾರ್ಕ್ ಗೆ ಗರಿಷ್ಠ 1000 ಕೋಟಿ ರೂ. ಮತ್ತು ವೈದ್ಯಕೀಯ ಸಲಕರಣೆ ಪಾರ್ಕ್ ಗೆ 100 ಕೋಟಿ ರೂ. ಅನುದಾನ ನೀಡಲಿದೆ.

ಇದರ ಜೊತೆಗೆ ದೇಶಾದ್ಯಂತ ಪ್ರಮುಖ ನಿರ್ಣಾಯಕ ಅಗತ್ಯ ಸಾಮಗ್ರಿ/ಔಷಧ ಮಾಧ್ಯಮಿಕಗಳು ಮತ್ತು ಎಪಿಐಗಳು ಹಾಗೂ ವೈದ್ಯಕೀಯ ಉಪಕರಣಗಳನ್ನು ದೇಶೀಯವಾಗಿ ಉತ್ಪಾದಿಸುವುದನ್ನು ಉತ್ತೇಜಿಸಲು ಭಾರತ ಸರ್ಕಾರ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆ ಪ್ರಕಟಿಸಿದೆ.

ಯೋಜನೆಗಳ ಒಟ್ಟು ಆರ್ಥಿಕ ಹೊರೆ 13,760 ಕೋಟಿ ರೂಪಾಯಿಗಳಾಗಿವೆ. ಸಗಟು ಔಷಧ ಪಾರ್ಕ್ ಉತ್ತೇಜನ ಯೋಜನೆಯಿಂದ 46,400 ಕೋಟಿ ರೂ. ಹಂತ ಹಂತದ ಉತ್ಪಾದನೆಯಾಗಲಿದ್ದರೆ, ವೈದ್ಯಕೀಯ ಉಪಕರಣ ಪಾರ್ಕ್ ನಲ್ಲಿ 68,437 ಕೋಟಿ ರೂ. ಉತ್ಪಾದನೆಗೆ ಕಾರಣವಾಗಲಿದೆ. ಯೋಜನೆಗಳಿಂದ ಗಣನೀಯವಾಗಿ ಉದ್ಯೋಗ ಸೃಷ್ಟಿಯಾಗಲಿದೆ.

***



(Release ID: 1638521) Visitor Counter : 180