PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 01 JUL 2020 6:17PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

Coat of arms of India PNG images free download

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಕುರಿತು ಹೊಸಮಾಹಿತಿ: ಕೋವಿಡ್-19     ಚೇತರಿಕೆಯ ಪ್ರಮಾಣ  59.43% ರಷ್ಟು ಹೆಚ್ಚಾಗಿದೆ

ಸಕ್ರಿಯ ಕೋವಿಡ್-19 ಪ್ರಕರಣಗಳಿಗಿಂತ 1,27,864 ಹೆಚ್ಚು ಚೇತರಿಸಿಕೊಂಡ ಪ್ರಕರಣಗಳಿವೆ. ಇದರಿಂದಾಗಿ ಚೇತರಿಕೆಯ ಪ್ರಮಾಣವು 59.43% ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 13,157 ಕೋವಿಡ್-19 ರೋಗಿಗಳನ್ನು ಗುಣಪಡಿಸಲಾಗಿದ್ದು, ಇಲ್ಲಿಯವರೆಗೆ ಒಟ್ಟು 3,47,978 ಜನರು ಗುಣಮುಖರಾಗಿದ್ದಾರೆ. ಪ್ರಸ್ತುತ, 2,20,114 ಸಕ್ರಿಯ ಪ್ರಕರಣಗಳಿವೆ ಮತ್ತು ಎಲ್ಲವೂ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದೆ. ದೇಶದಲ್ಲಿ ಪರೀಕ್ಷಾ ಪ್ರಯೋಗಾಲಯದ ಜಾಲವು ಮತ್ತಷ್ಟು ಬಲಗೊಂಡಿದೆ. ಸರ್ಕಾರಿ ವಲಯದಲ್ಲಿ 764 ಪ್ರಯೋಗಾಲಯಗಳು ಮತ್ತು 292 ಖಾಸಗಿ ಪ್ರಯೋಗಾಲಯಗಳನ್ನು ಇದ್ದು  ದೇಶದಲ್ಲಿ ಒಟ್ಟು 1056 ಪ್ರಯೋಗಾಲಯಗಳಿವೆ. ಪ್ರತಿದಿನ ಪರೀಕ್ಷಿಸಿದ ಮಾದರಿಗಳ ಸಂಖ್ಯೆಗಳಲ್ಲಿ ಸ್ಥಿರ ಏರಿಕೆ ಕಂಡುಬಂದಿದೆ; ಕಳೆದ 24 ಗಂಟೆಗಳಲ್ಲಿ 2,17,931 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈವರೆಗೆ ಒಟ್ಟು 88,26,585. ಮಾದರಿಗಳನ್ನುಪರೀಕ್ಷಿಸಲಾಗಿದೆ,

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635679

ಕೋವಿಡ್-19 ಹೊಸ ಮಾಹಿತಿ

ಭಾರತ ಸರ್ಕಾರ ಸರಬರಾಜು ಮಾಡುವ ವೆಂಟಿಲೇಟರ್‌ಗಳಲ್ಲಿ ಬೈಲೆವೆಲ್ ಪಾಸಿಟಿವ್ ಏರ್‌ವೇ ಪ್ರೆಶರ್ (ಬೈಪಾಪ್) ಮೋಡ್ ಲಭ್ಯವಿಲ್ಲದಿರುವ ಬಗ್ಗೆ ಕೆಲವು ಮಾಧ್ಯಮ ವರದಿಗಳ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಗಮನಕ್ಕೆ ಬಂದಿದೆ.  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದೆಹಲಿಯ ಜಿಎನ್‌ಸಿಟಿ ಸೇರಿದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ “ಮೇಕ್ ಇನ್ ಇಂಡಿಯಾ” ವೆಂಟಿಲೇಟರ್‌ಗಳನ್ನು ಐಸಿಯುಗಳ ಬಳಕೆಗಾಗಿ ಒದಗಿಸಿದೆ. ಈ ಕೋವಿಡ್ ವೆಂಟಿಲೇಟರ್‌ಗಳ ತಾಂತ್ರಿಕ ವಿಶಿಷ್ಟತೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಡೈರೆಕ್ಟರ್ ಜನರಲ್ ಹೆಲ್ತ್ ಸರ್ವೀಸಸ್ ನೇತೃತ್ವದ ಕ್ಷೇತ್ರದ ತಜ್ಞರ ತಾಂತ್ರಿಕ ಸಮಿತಿಯು ನಿಗದಿಪಡಿಸಿದ ಪ್ರಕಾರ ವೆಂಟಿಲೇಟರ್‌ಗಳನ್ನು   ಸಂಗ್ರಹಿಸಿ ಸರಬರಾಜು ಮಾಡಲಾಗಿದೆ. ಸಂಗ್ರಹಿಸಿದ ಮತ್ತು ಸರಬರಾಜು ಮಾಡಿದ ವೆಂಟಿಲೇಟರ್‌ಗಳು ಈ ವಿಶಿಷ್ಟತೆಗಳಿಗೆ ಅನುಗುಣವಾಗಿರುತ್ತವೆ.

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635566

ವೈದ್ಯರ ದಿನಾಚರಣೆಯಂದು ಪ್ರಧಾನಮಂತ್ರಿಯವರು ವೈದ್ಯರಿಗೆ ವಂದಿಸಿದರು

ವೈದ್ಯರ ದಿನಾಚರಣೆಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವೈದ್ಯರಿಗೆ ವಂದನೆ ಸಲ್ಲಿಸಿದರು. ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು , "ಕೋವಿಡ್-19 ವಿರುದ್ಧದ ಉತ್ಸಾಹಭರಿತ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಅಸಾಧಾರಣ ಆರೈಕೆ ನೀಡುತ್ತಿರುವ  ನಮ್ಮ ವೈದ್ಯರಿಗೆ ಭಾರತವು ವಂದಿಸುತ್ತದೆ." ಎಂದು ಹೇಳಿದರು. #doctorsday2020

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635539

ಡಾ. ಹರ್ಷ ವರ್ಧನ್ ಅವರು ಎನ್ಬಿಇಯ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗಾಗಿ  ಫೆಲೋಶಿಪ್ ಕಾರ್ಯಕ್ರಮದ  ಉತ್ತಮ ಕ್ಲಿನಿಕಲ್ ಪ್ರಾಕ್ಟೀಸ್  ಮಾರ್ಗದರ್ಶಕ ಕೈಪಿಡಿಯನ್ನು  ಮತ್ತು  ಪ್ರಾಸ್ಪೆಕ್ಟಸ್ ಅನ್ನು ಬಿಡುಗಡೆ ಮಾಡಿದರು

ರಾಷ್ಟ್ರೀಯ ಆರೋಗ್ಯ ಪರೀಕ್ಷಾ ಮಂಡಳಿಯ (ಎನ್‌ಬಿಇ) ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ (ಎಫ್‌ಪಿಐಎಸ್) ಫೆಲೋಶಿಪ್ ಕಾರ್ಯಕ್ರಮದ ಉತ್ತಮ ಕ್ಲಿನಿಕಲ್ ಪ್ರಾಕ್ಟೀಸ್  ಮಾರ್ಗದರ್ಶಕ ಕೈಪಿಡಿಮತ್ತು ಪ್ರಾಸ್ಪೆಕ್ಟಸ್  ಅನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ ವರ್ಧನ್ ಇಂದು ಬಿಡುಗಡೆ ಮಾಡಿದರು.  ವೆಬ್ ಪ್ಲಾಟ್‌ಫಾರ್ಮ್‌ನಲ್ಲಿ ಇ-ಪುಸ್ತಕಗಳ ಬಿಡುಗಡೆಯೊಂದಿಗೆ ಮಾತನಾಡಿದ ಡಾ. ಹರ್ಷ ವರ್ಧನ್ ತಮ್ಮ ವೃತ್ತಿಯಲ್ಲಿ ನೈತಿಕ ನಡವಳಿಕೆಯನ್ನು ಅನುಸರಿಸುವುದಾಗಿ ಪ್ರತಿಜ್ಞೆ ಮಾಡುವಂತೆ ವೈದ್ಯಕೀಯ ಸಮುದಾಯಕ್ಕೆ ಸೂಚಿಸಿದರು. ಇಂದು ರಾಷ್ಟ್ರೀಯ ವೈದ್ಯರ ದಿನದಂದು ವೈದ್ಯರನ್ನು ಅಭಿನಂದಿಸಿದ ಡಾ.ಹರ್ಷ ವರ್ಧನ್ ರವರು ಡಾ.ಬಿ.ಸಿ. ರಾಯ್  ಅವರ ಗೌರವಾರ್ಥವಾಗಿ ದೇಶವು ಜುಲೈ 1 ಅನ್ನು ರಾಷ್ಟ್ರೀಯ ವೈದ್ಯರ ದಿನವೆಂದು ಆಚರಿಸುತ್ತದೆ.  “ವೈದ್ಯರಾಗುವುದು ವೈಯಕ್ತಿಕ ಸಾಧನೆ, ಉತ್ತಮ ವೈದ್ಯರಾಗುವುದು ನಿರಂತರ ಸವಾಲು.  ಒಂದೇ ಸಮಯದಲ್ಲಿ ತಮ್ಮ ದೈನಂದಿನ ಹೊಟ್ಟೆಪಾಡನ್ನು ನೋಡಿಕೊಳ್ಳುವ ಮತ್ತು ಇಡೀ ಮಾನವೀಯತೆಯ ಸೇವ ಸಲ್ಲಿಸುವ ಏಕೈಕ ವೃತ್ತಿ ಇದಾಗಿದೆ. ” ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಅವರ ನಿಸ್ವಾರ್ಥ ಸೇವೆಗಾಗಿ ಸಚಿವರು ಮನದಾಳದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಅವರು ನಮ್ಮ ನಿಜವಾದ ನಾಯಕರು ಎಂದು ಡಾ.ಹರ್ಷ ವರ್ಧನ್ ಹೇಳಿದರು.

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635676

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ವೈದ್ಯರ ದಿನದಂದು ವೈದ್ಯರಿಗೆ ಕೃತಜ್ಞತೆ ಮತ್ತು ಧನ್ಯವಾದಗಳನ್ನು ಅರ್ಪಿಸಿದ್ದಾರೆ

ಇಂದು ವೈದ್ಯರ ದಿನದಂದು, ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಟ್ವೀಟ್ ಮೂಲಕ ಕೋವಿಡ್-19 ವಿರುದ್ಧ ಮುಂಚೂಣಿಯಿಂದ ಯುದ್ಧವನ್ನು ಮುನ್ನಡೆಸುತ್ತಿರುವ ಭಾರತದ ಧೈರ್ಯಶಾಲಿ ವೈದ್ಯರಿಗೆ ಕೃತಜ್ಞತೆ ಮತ್ತು ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಾರೆ.  ಈ ಸಂಕಷ್ಟದ ಕಾಲದಲ್ಲಿ ರಾಷ್ಟ್ರವನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿಡಲು ಅವರ ಅತ್ಯಂತ ಬದ್ಧತೆಯು ನಿಜಕ್ಕೂ ಅಸಾಧಾರಣವಾಗಿದೆ ಎಂದು ಕೇಂದ್ರ ಗೃಹ ಸಚಿವರು ಒತ್ತಿ ಹೇಳಿದರು. ವೈದ್ಯರ ದಿನದಂದು ರಾಷ್ಟ್ರವು ಅವರ ಭಕ್ತಿ ಮತ್ತು ತ್ಯಾಗಕ್ಕೆ ವಂದನೆ ಸಲ್ಲಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635603

ಜಾರ್ಖಂಡ್ ಸಹಿಯಾಸ್: ಎಲ್ಲೆಡೆ ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ ಸ್ಫೂರ್ತಿ

ಜಾರ್ಖಂಡ್‌ನ ಆಶಾ ಕಾರ್ಯಕರ್ತೆಯರನ್ನು, “ಸಹಿಯಾಸ್” ಎಂದು ಕರೆಯಲಾಗುತ್ತದೆ, ಆರೋಗ್ಯ ಸೇವೆಗಳನ್ನು ತಳ ಹಂತದ ವರೆಗೆ ತಲುಪಿಸಲು, ವಿಶೇಷವಾಗಿ ಬುಡಕಟ್ಟು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಾರೆ . ರಾಜ್ಯವು ಸುಮಾರು 42,000 ಸಹಿಯಾಗಳನ್ನು ಹೊಂದಿದೆ, ಇದನ್ನು 2260 ಸಹಿಯಾ ಸಾಥಿಸ್ (ಆಶಾ ಫೆಸಿಲಿಟೇಟರ್ಸ್), 582 ಬ್ಲಾಕ್ ತರಬೇತುದಾರರು, 24 ಜಿಲ್ಲಾ ಸಮುದಾಯ ಸಜ್ಜುಗೊಳಿಸುವವರು ಮತ್ತು ರಾಜ್ಯ ಮಟ್ಟದ ಸಮುದಾಯ ಪ್ರಕ್ರಿಯೆಗಳ ಸಂಪನ್ಮೂಲ ಕೇಂದ್ರವು ನೆರವು ನೀಡುತ್ತದೆ. ಕೋವಿಡ್-19ಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ಸಹಿಯಾಸ್ ಮಾರ್ಚ್ 2020 ರಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, ಉದಾಹರಣೆಗೆ ಕೋವಿಡ್-19ರ ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಸೋಪ್ ಮತ್ತು ನೀರಿನಿಂದ ಆಗಾಗ್ಗೆ ಕೈ ತೊಳೆಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಮುಖಗವಸುಗಳು / ಮುಖದ ಕವರ್‌ಗಳನ್ನು ಬಳಸುವುದು, ಕೆಮ್ಮು ಮತ್ತು ಸೀನುವಾಗ ಸರಿಯಾದ ಶಿಷ್ಟಾಚಾರವನ್ನು ಅನುಸರಿಸುವುದು ಇತ್ಯಾದಿ. ಅವರು ಸಂಪರ್ಕ ಪತ್ತೆಹಚ್ಚುವಿಕೆ, ಸೋಂಕಿಗೆ ಸಂಬಂಧಪಟ್ಟವರ ಪಟ್ಟಿ ತಯಾರಿಸುವಲ್ಲಿ  ಮತ್ತು ಕೋವಿಡ್-19 ಪ್ರಕರಣಗಳ ಅನುಸರಣೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635562

ಒಟ್ಟು ರೂ. 90,917 ಕೋಟಿ ಜಿಎಸ್ಟಿ ಆದಾಯವನ್ನು ಜೂನ್ ತಿಂಗಳಲ್ಲಿ ಸಂಗ್ರಹಿಸಲಾಗಿದೆ

2020 ರ ಜೂನ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ  90,917 ಕೋಟಿ ರೂಪಾಯಿಗಳು, ಇದರಲ್ಲಿ ಸಿಜಿಎಸ್‌ಟಿ ರೂ. 18,980 ಕೋಟಿ, ಎಸ್‌ಜಿಎಸ್‌ಟಿ ರೂ. 23,970 ಕೋಟಿ, ಐಜಿಎಸ್‌ಟಿ ರೂ. 40,302 ಕೋಟಿ (ಸರಕುಗಳ ಆಮದಿಗೆ ಸಂಗ್ರಹಿಸಿದ ರೂ. 15,709 ಕೋಟಿ ಸೇರಿದಂತೆ) ಮತ್ತು ಸೆಸ್ ರೂ. 7,665 ಕೋಟಿ (ಸರಕುಗಳ ಆಮದಿಗೆ ಸಂಗ್ರಹಿಸಿದ 607 ಕೋಟಿ ರೂ. ಸೇರಿದಂತೆ). ಕಳೆದ ವರ್ಷದ ಇದೇ ತಿಂಗಳ ಜಿಎಸ್‌ಟಿ ಆದಾಯದ 91%ರಷ್ಟು ತಿಂಗಳ ಆದಾಯವಾಗಿದೆ. ಹಣಕಾಸಿನ ವರ್ಷದಲ್ಲಿ ಆದಾಯದ ಮೇಲೆ ಕೋವಿಡ್-19 ರ ಕಾರಣದಿಂದಾಗಿ ಪರಿಣಾಮ ಬೀರಿದೆ, ಮೊದಲನೆಯದಾಗಿ ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮದಿಂದಾಗಿ ಮತ್ತು ಎರಡನೆಯದಾಗಿ ಸಾಂಕ್ರಾಮಿಕ ರೋಗದಿಂದಾಗಿ ರಿಟರ್ನ್ಸ್ ಸಲ್ಲಿಸುವಲ್ಲಿ ಮತ್ತು ತೆರಿಗೆ ಪಾವತಿಸುವಲ್ಲಿ ಸರ್ಕಾರವು ನೀಡಿದ ಸಡಿಲಿಕೆಗಳಿಂದಾಗಿ. ಆದಾಗ್ಯೂ, ಕಳೆದ ಮೂರು ತಿಂಗಳ ಅಂಕಿಅಂಶಗಳು ಜಿಎಸ್.ಟಿ ಆದಾಯದಲ್ಲಿ ಚೇತರಿಕೆ ತೋರಿಸುತ್ತಿವೆ.

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635572

ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಕ್ರಮೇಣ ಸಾಮಾನ್ಯ ಸ್ಥಿತಿಗೆ ತಲುಪುತ್ತಿದೆ

ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್ ಕೊನೆಯ ವಾರದಲ್ಲಿ ಭಾರತದ ಒಟ್ಟಾರೆ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ, ಪಿಎಸ್‌ಯುಗಳು (ಐಒಸಿ, ಬಿಪಿಸಿ ಮತ್ತು ಎಚ್‌ಪಿಸಿ) ಮಾರಾಟ ಅಂಕಿಅಂಶಗಳಿಂದ  ತಿಳಿದಂತೆ, ಜೂನ್ 2020ರಲ್ಲಿ ಈಗ ಅದರ ಪೂರ್ವ ಲಾಕ್‌ಡೌನ್ ಮಟ್ಟಕ್ಕೆ ಸ್ಥಿರವಾಗಿ ತಲುಪುತ್ತಿದೆ. ವಿಶ್ವದ ಮೂರನೇ ಅತಿದೊಡ್ಡ ತೈಲ ಉಪಯೋಗಿಸುವ ರಾಷ್ಟ್ರವಾದ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟವು 2007 ರಿಂದೀಚೆಗೆ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ,  ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಅಗತ್ಯವಿತ್ತು. ಕೈಗಾರಿಕಾ ಚಟುವಟಿಕೆ ಮತ್ತು ಜನರ ಓಡಾಟವನ್ನುಪುನರಾರಂಭಿಸಲು ಅನುವು ಮಾಡಿಕೊಡುವ ಮೂಲಕ ಹಂತಹಂತವಾಗಿ ಲಾಕ್‌ಡೌನ್‌ಗಳನ್ನು ತೆಗೆದುಹಾಕುವುದು ಮತ್ತು ಆರ್ಥಿಕತೆಯನ್ನು ಅನ್‌ಲಾಕ್ ಮಾಡಲು ಪ್ರಾರಂಭಿಸುವುದರೊಂದಿಗೆ ಜೂನ್ 2019 ಕ್ಕೆ  (13.4 ಎಂಎಂಟಿ) ಹೋಲಿಸಿದರೆ ಒಟ್ಟು ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಜೂನ್ 2020 ರಲ್ಲಿ (11.8 ಎಂಎಂಟಿ) 88% ಕ್ಕೆ ತಲುಪಿದೆ. ಇದು  ಆರ್ಥಿಕ ವಲಯದ ಎಲ್ಲಾ ವಿಭಾಗಗಳಲ್ಲಿ ಉತ್ಪಾದನೆ / ಕೈಗಾರಿಕಾ / ಸಾರಿಗೆ ಚಟುವಟಿಕೆಗಳ ಹೆಚ್ಚಳವನ್ನು ಸೂಚಿಸುತ್ತದೆ.

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635689

ಯುಪಿಎಸ್,ಸಿ ಸಿವಿಲ್ ಸರ್ವೀಸಸ್ (ಪ್ರಿಲಿಮಿನರಿ) ಪರೀಕ್ಷೆ, 2020 ಮತ್ತು ಭಾರತೀಯ ಫಾರೆಸ್ಟ್ ಸರ್ವಿಸ್ ಪರೀಕ್ಷೆ, 2020

 05.06.2020ರಂದು ಪ್ರಕಟವಾದ ಪರಿಷ್ಕೃತ ಪರೀಕ್ಷೆಯ ಕಾರ್ಯಕ್ರಮ / ಆರ್‌ಟಿಗಳ ಪ್ರಕಾರ ಕೇಂದ್ರ ಸಾರ್ವಜನಿಕ ಸೇವಾ ಆಯೋಗವು  ಭಾರತದಾದ್ಯಂತ ನಾಗರಿಕ ಸೇವೆಗಳ (ಪ್ರಾಥಮಿಕ) ಪರೀಕ್ಷೆಯನ್ನು 2020ನ್ನು  (ಭಾರತೀಯ ಅರಣ್ಯ ಸೇವೆ (ಪ್ರಾಥಮಿಕ) ಪರೀಕ್ಷೆ, 2020 ಸೇರಿದಂತೆ ) 04.10.2020 ರಂದು (ಭಾನುವಾರ) ನಡೆಸಲಿದೆ. ನಾಗರಿಕ ಸೇವೆಗಳ (ಪ್ರಾಥಮಿಕ) ಪರೀಕ್ಷೆ, 2020 [ಭಾರತೀಯ ಅರಣ್ಯ ಸೇವೆ (ಪ್ರಾಥಮಿಕ) ಪರೀಕ್ಷೆ, 2020 ಸೇರಿದಂತೆ] ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಆಯೋಗವು ತಮ್ಮ ಕೇಂದ್ರಗಳನ್ನು ಬದಲಾಯಿಸಲು ಅಭ್ಯರ್ಥಿಗಳಿಂದ ಪಡೆದ ಕೇಂದ್ರದ ಪರಿಷ್ಕೃತ ಆಯ್ಕೆಯ ಮನವಿಗಳನ್ನು ಸಲ್ಲಿಸಲು ಅವರಿಗೆ.ಅವಕಾಶವನ್ನು ನೀಡಲು ನಿರ್ಧರಿಸಿದೆ. ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷೆ, 2020 ಮತ್ತು ಭಾರತೀಯ ಅರಣ್ಯ ಸೇವೆ (ಮುಖ್ಯ) ಪರೀಕ್ಷೆ, 2020 ಅನ್ನು ಬದಲಾಯಿಸುವ ಆಯ್ಕೆಯನ್ನು ಅಭ್ಯರ್ಥಿಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ.

ವಿವರಗಳಿಗಾಗಿ: https://www.pib.gov.in/PressReleseDetail.aspx?PRID=1635587

2020 ಏಪ್ರಿಲ್-ನವೆಂಬರ್ ಅವಧಿಯಲ್ಲಿ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್  ಅನ್ನ್ ಯೋಜನೆ ಅಡಿಯಲ್ಲಿ ಆಹಾರ ಧಾನ್ಯಗಳು ಮತ್ತು ಧಾನ್ಯಗಳ ವಿತರಣೆಯ ಅಂದಾಜು ವೆಚ್ಚ ಸುಮಾರು 1,50,471 ಕೋಟಿ ರೂಪಾಯಿಗಳು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್  ಅನ್ನ್  ಯೋಜನೆಯನ್ನು  2020 ರ ನವೆಂಬರ್ ಅಂತ್ಯದವರೆಗೆ ವಿಸ್ತರಿಸುವುದಾಗಿ ಘೋಷಿಸಿದರು. ಪಿಎಂಜಿಕೆ ಯೋಜನೆಯನ್ನು ಜುಲೈನಿಂದ  ನವೆಂಬರ್ 2020ರ ಅಂತ್ಯದವರೆಗೆ ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು. ಈ ಐದು ತಿಂಗಳ ಅವಧಿಯಲ್ಲಿ 80 ಕ್ಕೂ ಹೆಚ್ಚು ಕೋಟಿ ಜನರಿಗೆ ತಿಂಗಳಿಗೆ 5 ಕೆಜಿ ಉಚಿತ ಗೋಧಿ / ಅಕ್ಕಿ ಜೊತೆಗೆ ಪ್ರತಿ ಕುಟುಂಬಕ್ಕೆ 1 ಕೆಜಿ ಉಚಿತ ಕಡಲೆಕಾಳನ್ನು ನೀಡಲಾಗುವುದು. ಆಹಾರ ಧಾನ್ಯಗಳು (ಅಕ್ಕಿ ಮತ್ತು ಗೋಧಿ) ಮತ್ತು ದ್ವಿದಳ ಧಾನ್ಯಗಳ ವಿತರಣೆಯ ಅಂದಾಜು ವೆಚ್ಚ ಅಂದಾಜು 1,50,471 ಕೋಟಿ ರೂ. ಆಗಲಿದ್ದು, ಭಾರತ ಸರ್ಕಾರವು ಆಹಾರ ಧಾನ್ಯ ಸಬ್ಸಿಡಿ ಮತ್ತು ಅಂತರ ರಾಜ್ಯ ಸಾರಿಗೆಯ ಖರ್ಚಿನ ವೆಚ್ಚ, ಇಪಿಓಎಸ್ ಬಳಕೆಯಿಂದ ಹೆಚ್ಚುವರಿ ವ್ಯಾಪಾರಿಗಳ  ಲಾಭ ಸೇರಿದಂತೆ ಒಟ್ಟು ಅಂದಾಜು ರೂ.46,061 ಕೋಟಿ ರೂ.ಗಳನ್ನು ಭರಿಸಲಿದೆ,

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635648

ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆಯನ್ನು ನವೆಂಬರ್ ವರೆಗೆ ವಿಸ್ತರಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವರು ಪ್ರಧಾನಮಂತ್ರಿಯವರನ್ನು  ಅಭಿನಂದಿಸಿದರು

"ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ್ ಯೋಜನೆ ಪ್ರಧಾನಮಂತ್ರಿಯವರಿಂದ ವಿಸ್ತರಿಸಲ್ಪಟ್ಟಿದೆ, ಬಡವರ ಕಲ್ಯಾಣಕ್ಕಾಗಿ ಅವರಿಗಿರುವ ಸೂಕ್ಷ್ಮತೆ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಶ್ರೀ ಅಮಿತ್ ಶಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635433

ಕೃಷಿ ಮತ್ತು ರೈತರ ಕಲ್ಯಾಣ ಸಚಿವರು ಖಾರಿಫ್ ಋತುವಿನಲ್ಲಿ ಬೆಳೆಯ ಉತ್ಪಾದನೆಯನ್ನು ಅಧಿಕಗೊಳಿಸಲು ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕೆಂದು ರೈತರಲ್ಲಿ ಮನವಿ ಮಾಡಿದ್ದಾರೆ

ಕೃಷಿಯನ್ನು ಲಾಭದಾಯಕ ಚಟುವಟಿಕೆಯನ್ನಾಗಿ ಮಾಡಲು ಕೃಷಿಭೂಮಿಯ ಪ್ರಕಾರವನ್ನು ಗಮನದಲ್ಲಿಟ್ಟುಕೊಂಡು ವಿವಿಧ ರೀತಿಯ ಬೆಳೆಗಳನ್ನು ಬೆಳೆಯುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ರೈತರಲ್ಲಿ ಮನವಿ ಮಾಡಿದ್ದಾರೆ.  ದೇಶದ ಹೆಚ್ಚಿನ ಭಾಗಗಳಲ್ಲಿ ಮಾನ್ಸೂನ್ ಪ್ರಾರಂಭವಾಗುವುದರೊಂದಿಗೆ, ಅನೇಕ ಸ್ಥಳಗಳಲ್ಲಿ ಬೆಳೆ ಬಿತ್ತನೆ ಸಹ ಪೂರ್ಣಗೊಂಡಿದೆ ಮತ್ತು ಇತರ ಪ್ರದೇಶಗಳಲ್ಲಿ ಪ್ರಕ್ರಿಯೆಯಲ್ಲಿದೆ ಎಂದು ದೇಶದ ರೈತರಿಗೆ ಬರೆದ ಪತ್ರದಲ್ಲಿ ಶ್ರೀ ತೋಮರ್ ಹೇಳಿದ್ದಾರೆ. ಉತ್ಪಾದನೆಯನ್ನು ಅಧಿಕಗೊಳಿಸುವ ಸಲುವಾಗಿ ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡಲು ರೈತರೊಂದಿಗೆ ಅವರು ಸಂವಹನ ನಡೆಸುತ್ತಿದ್ದಾರೆ ಎಂದು ಶ್ರೀ ತೋಮರ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿಯೂ  ಸಮುದಾಯವು ಕೃಷಿ ಕೆಲಸವನ್ನು  ಜವಾಬ್ದಾರಿ ಮತ್ತ ಸಮರ್ಪಣೆಯಿಂದ ಮಾಡಿದೆ ಎಂದು ಶ್ಲಾಘಿಸಿದ ಶ್ರೀ ತೋಮರ್ ರವರು, ಕೃಷಿ ಉತ್ಪಾದನೆಯು ದೇಶದ ಆರ್ಥಿಕತೆಯ ಪ್ರಮುಖ ಭಾಗವಾಗಿದೆ ಎಂದು ಹೇಳಿದರು; ಕೃಷಿ ಮತ್ತು ಹಳ್ಳಿಗಳು ಆತ್ಮನಿರ್ಭರ ಭಾರತದ ಮುಖ್ಯ ಭಾಗವಾಗಿವೆ.

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635599

ಕೋವಿಡ್-19 ಸಂಕಷ್ಟದ ಕಾಲದಲ್ಲಿಯೂ ಕೃಷಿ ಸಮುದಾಯಕ್ಕೆ ರಸಗೊಬ್ಬರಗಳ ಲಭ್ಯತೆಯನ್ನು ಆರ್ಸಿಎಫ್ ಖಚಿತಪಡಿಸಿದೆ

ಆರ್‌ಸಿಎಫ್ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಲೇ ಇವೆ ಮತ್ತು ರಸಗೊಬ್ಬರಗಳನ್ನು ಸಾಕಷ್ಟು ಉತ್ಪಾದನೆ ಮಾಡಲಾಯಿತು. ದೇಶದಲ್ಲಿ ಪ್ರಸ್ತುತ ಖಾರಿಫ್ ಬಿತ್ತನೆ ಋತುವಿನಲ್ಲಿ ಆರ್‌ಸಿಎಫ್ ತಾನು ತಯಾರಿಸಿದ ರಸಗೊಬ್ಬರಗಳಲ್ಲದೆ ರೈತರಿಗೆ ಡಿಎಪಿ, ಎಪಿಎಸ್ (20: 20: 0: 13) ಮತ್ತು ಎನ್‌ಪಿಕೆ (10:26:26)  2 ಲಕ್ಷ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು  ರಸಗೊಬ್ಬರಗಳನ್ನು ಸಹ ಲಭ್ಯಗೊಳಿಸಿದೆ.

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635634

ಪಿ ಐ ಬಿ ಕ್ಷೇತ್ರೀಯ ಕಚೇರಿಗಳ ಮಾಹಿತಿ

  • ಚಂಡೀಗಢ: ಹೊರಗಿನಿಂದ ಬರುವ ರೋಗಿಗಳ ಮೇಲ್ವಿಚಾರಣೆಯನ್ನು ಹೆಚ್ಚು ತೀವ್ರವಾಗಿ ನಡೆಸಬೇಕು, ಇದರಿಂದಾಗಿ ಆರಂಭಿಕ ಹಂತದಲ್ಲಿ ಪ್ರಕರಣಗಳನ್ನು ಕಂಡುಹಿಡಿಯಬಹುದು ಎಂದು ಚಂಡೀಗಢ  ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ನಿರ್ದೇಶನ ನೀಡಿದರು. ಗರ್ಭಿಣಿಯರು, ಹಿರಿಯ ನಾಗರಿಕರು ಮತ್ತು ಮಕ್ಕಳಂತಹ ದುರ್ಬಲ ವರ್ಗಗಳತ್ತ ಗಮನಹರಿಸುವಂತೆ ಅವರು ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನೆರೆಹೊರೆಯಲ್ಲಿರುವ ಕೊರೊನಾದ ಯಾವುದೇ ರೋಗಲಕ್ಷಣವನ್ನು ನಿವಾಸಿಗಳು ತಕ್ಷಣ ವರದಿ ಮಾಡಬೇಕೆಂದು ಇದರಿಂದಾಗಿ ಚಿಕಿತ್ಸೆಯನ್ನು ಮೊದಲೇ ಪ್ರಾರಂಭಿಸಬಹುದು.ಅವರು ಸಲಹೆ ನೀಡಿದರು,   
  • ಪಂಜಾಬ್: ಪಂಜಾಬ್ ಸರ್ಕಾರವು 01.07.2020 ರಿಂದ 30.07.2020ರವರೆಗೆ 'ಅನ್ಲಾಕ್ 2' ಅನ್ನು ಹಂತಹಂತವಾಗಿ ಪುನಃ ತೆರೆಯಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಮತ್ತು ನಿಯಂತ್ರಣ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಮಾಪನಾಂಕ ನಿರ್ಣಯದ ರೀತಿಯಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ಪುನಃ ತೆರೆಯಲು ನಿರ್ಧರಿಸಿದೆ. ಸಾಮಾಜಿಕ ಅಂತರವನ್ನು ಖಾತರಿಪಡಿಸುವುದು, ಎಲ್ಲಾ ಚಟುವಟಿಕೆಗಳಿಗೆ ಕನಿಷ್ಠ 6 ಅಡಿ ಅಂತರವನ್ನು (2 ಗಜ್ ಕಿ ದುರಿ ಮಾಡಿ) ಯಾವಾಗಲೂ ನಿರ್ವಹಿಸಲಾಗುವುದು. ಅಂತೆಯೇ, ಯಾವುದೇ ಅನುಮತಿ  ನೀಡಲಾದ ಚಟುವಟಿಕೆಯು ಜನಸಂದಣಿ ಮತ್ತು ದಟ್ಟಣೆಗೆ ಕಾರಣವಾದರೆ, ಪಾಳಿ ಬದಲಾವಣೆ, ಕಚೇರಿಗಳು ಮತ್ತು ಸಂಸ್ಥೆಗಳ ಸಮಯ ಬದಲಾವಣೆ ಇತ್ಯಾದಿಗಳ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಸಾಮಾಜಿಕ ಅಂತರದ ಬಗ್ಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಕೆಲಸದ ಸ್ಥಳಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾ ವ್ಯಕ್ತಿಗಳು ಮುಖಗವಸುಗಳನ್ನು ಧರಿಸುವುದು ಕಡ್ಡಾಯವಾಗಿರುತ್ತದೆ ಮತ್ತು ಅದನ್ನು ಕಟ್ಟುನಿಟ್ಟಾಗಿ ಗಮನಿಸಿ ಜಾರಿಗೊಳಿಸಬೇಕು.
  • ಹಿಮಾಚಲ ಪ್ರದೇಶ: ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆಯನ್ನು ಈ ವರ್ಷದ ನವೆಂಬರ್ ಅಂತ್ಯದವರೆಗೆ ವಿಸ್ತರಿಸುವ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿದ ಪ್ರಕಟಣೆಯನ್ನು ಮುಖ್ಯಮಂತ್ರಿಯವರು ಶ್ಲಾಘಿಸಿದ್ದಾರೆ. ಐದು ತಿಂಗಳವರೆಗೆ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಿಂಗಳಿಗೆ 5 ಕೆಜಿ ಅಕ್ಕಿ/ ಗೋಧಿ ಉಚಿತ ಪಡಿತರ ಮತ್ತು ಪ್ರತಿ ಕುಟುಂಬಕ್ಕೆ 1 ಕೆಜಿ ಕಾಳಿನ  ವಿತರಣೆಯನ್ನು 80 ಕೋಟಿ ಜನರಿಗೆ ವಿಸ್ತರಿಸುವುದಾಗಿ ಪ್ರಧಾನಿ ಘೋಷಿಸಿದ್ದು, ಸಂಕಷ್ಟದ ಸಮಯದಲ್ಲಿ ಇದು ಜನರಿಗೆ ವರದಾನವಾಗಿದೆ. 
  • ಹರಿಯಾಣ: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪಶುಸಂಗೋಪನೆ ಮತ್ತು ಸಂಬಂಧಿತ ಸೇವೆಗಳನ್ನು, ವಿಶೇಷವಾಗಿ ಕಿರು,  ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಿಭಾಗದಲ್ಲಿ ಕೋಳಿ ಸಾಕಾಣಿಕೆಯನ್ನು 'ಆತ್ಮನಿರ್ಭರ ಭಾರತ್' ಪ್ಯಾಕೇಜ್ ಅಡಿಯಲ್ಲಿ ಸಂಯೋಜಿಸಲು ಮತ್ತು ಅದರೊಂದಿಗೆ ಕೇಂದ್ರ ಹಣಕಾಸು ಸಚಿವಾಲಯದ ಮೂಲಕ ಈ ವಲಯಕ್ಕೆ ಸಾಲ ಒದಗಿಸುವುದಕ್ಕಾಗಿ ಬ್ಯಾಂಕುಗಳಿಗೆ ಅಗತ್ಯವಾದ ಮಾರ್ಗಸೂಚಿಗಳನ್ನು ನೀಡುವಂತೆ ಉಪ ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.
  • ಕೇರಳ: ಬಸ್ ದರವನ್ನು ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಇಂದು ಅನುಮತಿ ನೀಡಿದೆ; ಕೋವಿಡ್ ಬಿಕ್ಕಟ್ಟು ಕಡಿಮೆಯಾಗುವವರೆಗೆ ಹೆಚ್ಚಿದ ಶುಲ್ಕ ಜಾರಿಯಲ್ಲಿರುತ್ತದೆ. ಅನ್ಲಾಕ್ 2.0 ಗಾಗಿ ಕೇಂದ್ರ ಮಾರ್ಗಸೂಚಿಗಳನ್ನು ಅಂಗೀಕರಿಸಿದ ಕೇರಳವು ಲಾಕ್ಡೌನ್ ನಿರ್ಬಂಧಗಳನ್ನು ಸರಾಗಗೊಳಿಸುವಿಕೆ ಸೇರಿದಂತೆ ಆದೇಶವನ್ನು ಹೊರಡಿಸಿತು. ಕೇರಳವು ರಾಜ್ಯಕ್ಕೆ ಪ್ರವೇಶಿಸಲು ಜಾಗ್ರತಾ ಪೋರ್ಟಲ್ನಲ್ಲಿ ನೋಂದಾಯಿಸುವ ಷರತ್ತನ್ನು ಮುಂದುವರಿಸಲಿದೆ. ಜುಲೈ 31 ರವರೆಗೆ ಕಟ್ಟುನಿಟ್ಟಿನ ಲಾಕ್‌ಡೌನ್ ನಿಯಂತ್ರಣ ವಲಯಗಳಲ್ಲಿ ಮುಂದುವರಿಯುತ್ತದೆ. ಏತನ್ಮಧ್ಯೆ, ವಯನಾಡ್‌ನ ಕಟುನೈಕರ್ ಬುಡಕಟ್ಟಿನ 40 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಬುಡಕಟ್ಟು ಪ್ರಾಬಲ್ಯದ ಪಂಚಾಯತ್‌ನಲ್ಲಿ ವೈರಸ್ ಸೋಂಕಿಗೆ ಒಳಗಾದ ಮೊದಲ ಬುಡಕಟ್ಟು ಜನಾಂಗದವರು ಇವರಾಗಿದ್ದಾರೆ. ಇನ್ನೂ ಒಂಬತ್ತು ಕೇರಳಿಗರು ರಾಜ್ಯದ ಹೊರಗಿನ ಕೊರೊನಾವೈರಸ್‌ಗೆ ಬಲಿಯಾಗಿದ್ದಾರೆ. ನಿನ್ನೆ 131 ಹೊಸ ಕೊರೊನಾವೈರಸ್‌ ಪ್ರಕರಣಗಳನ್ನು ರಾಜ್ಯ ದೃಢಪಡಿಸಿದೆ. ಈ ಪೈಕಿ 10 ಸ್ಥಳೀಯ ಪ್ರಸರಣ ಪ್ರಕರಣಗಳಾಗಿವೆ. ಪ್ರಸ್ತುತ ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ 2,112 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
  • ತಮಿಳುನಾಡು:  ಜುಲೈ 1 ಬುಧವಾರದಿಂದ ಸಾರ್ವಜನಿಕರಿಗಾಗಿ ತೆರೆಯಲಾದ ಗ್ರಾಮೀಣ ಪ್ರದೇಶಗಳಲ್ಲಿನ ಪೂಜಾ ಸ್ಥಳಗಳಿಗೆ ರಾಜ್ಯ ಸರ್ಕಾರ ಎಸ್‌ಒಪಿ (ಕಾರ್ಯಸೂಚಿ ನಿಯಮ) ನೀಡಿದೆ; ಆದಾಗ್ಯೂ, ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಚೆನ್ನೈ ಮತ್ತು ಮಧುರೈ ಹೊರತುಪಡಿಸಿ ಕಾಂಚೀಪುರಂ, ತಿರುವಳ್ಳೂರು ಮತ್ತು ಚೆಂಗಲ್ಪಟ್ಟು ಮುಂತಾದ ಜಿಲ್ಲೆಗಳಲ್ಲಿ ಈ ಸ್ಥಳಗಳನ್ನು ತೆರೆಯಲಾಗುವುದಿಲ್ಲ. ಇರಾನ್‌ನಲ್ಲಿ ಸಿಲುಕಿರುವ ತಮಿಳುನಾಡಿನ 652 ಸೇರಿದಂತೆ 687 ಭಾರತೀಯರು ಆರು ದಿನಗಳ ಪ್ರಯಾಣದ ನಂತರ ಐಎನ್‌ಎಸ್ ಜಲಾಶ್ವಾದಲ್ಲಿ ತೂತುಕುಡಿ ತಲುಪುತ್ತಾರೆ. 3943 ಹೊಸ ಪ್ರಕರಣಗಳು, 2325 ಚೇತರಿಕೆಗಳು ಮತ್ತು 60 ಸಾವುಗಳು ನಿನ್ನೆ ವರದಿಯಾಗಿವೆ. ಒಟ್ಟು ಪ್ರಕರಣಗಳು: 90167, ಸಕ್ರಿಯ ಪ್ರಕರಣಗಳು: 38889, ಸಾವುಗಳು: 1201, ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು: 22610.
  • ಕರ್ನಾಟಕ: ಜುಲೈ 31 ರವರೆಗೆ ಜಾರಿಯಲ್ಲಿರುವ ಅನ್ಲಾಕ್ 2.0 ಗಾಗಿ ರಾಜ್ಯ ಸರ್ಕಾರ ಮಂಗಳವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಜುಲೈ ತಿಂಗಳಲ್ಲಿ ರಾತ್ರಿ ಕರ್ಫ್ಯೂ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ಇರುತ್ತದೆ; ಸರ್ಕಾರಿ ಕಚೇರಿಗಳಿಗೆ ವಾರದಲ್ಲಿ 5 ದಿನಗಳ ಕೆಲಸ; ಶಾಲೆಗಳು ಮುಚ್ಚಲ್ಪಡುತ್ತವೆ. ರಾಜ್ಯವು ಜುಲೈ 15 ರಿಂದ ಬೆಂಗಳೂರು ಮತ್ತು ಉಡುಪಿಯಲ್ಲಿ ಸೆರೋ-ಸಮೀಕ್ಷೆ ನಡೆಸಲಿದೆ; ಪೂರ್ವ  ಅಧ್ಯಯನದ ನಂತರ, ಸಂಪೂರ್ಣ ಕರ್ನಾಟಕದಲ್ಲಿ ನಡೆಸಲಾಗುವುದು. 20ರಲ್ಲಿ, ಕರ್ನಾಟಕವು ಮಂಗಳವಾರ ಅತಿ ಹೆಚ್ಚು ಕೋವಿಡ್ ಸಾವನ್ನು ವರದಿ ಮಾಡಿದೆ. ನಿನ್ನೆ 947 ಹೊಸ ಪ್ರಕರಣಗಳು ಮತ್ತು 235 ಪ್ರಕರಣಗಳು ವರದಿಯಾಗಿವೆ. ಒಟ್ಟು ದೃಢಪಟ್ಟ ಪ್ರಕರಣಗಳು: 15242, ಸಕ್ರಿಯ ಪ್ರಕರಣಗಳು: 7074, ಸಾವುಗಳು: 246 ಆಸ್ಪತ್ತೆಯಿಂದ ಬಿಡುಗಡೆಯಾದವರು: 7918.
  • ಆಂಧ್ರಪ್ರದೇಶ: ರಾಜ್ಯದ ವೈದ್ಯಕೀಯ ಮೂಲಸೌಕರ್ಯ ಸೌಲಭ್ಯಗಳಿಗೆ ಪ್ರಮುಖ ಉತ್ತೇಜನ ನೀಡಿದ ಮುಖ್ಯಮಂತ್ರಿಗಳು 1,088 ಹೊಸ 108 ಮತ್ತು 104 ಆಂಬುಲೆನ್ಸ್‌ಗಳನ್ನು ವಿಶೇಷವಾಗಿ ಕೋವಿಡ್-19 ಕಾಲದಲ್ಲಿ ಜನರಿಗೆ ತ್ವರಿತವಾಗಿ ಮೆಡಿಕೇರ್ ಸೇವೆಗಳನ್ನು ತಲುಪಿಸಲು ಚಾಲನೆ ನೀಡಿದರು,. ಎಲ್ಲಾ ಕೆಳ ನ್ಯಾಯಾಲಯಗಳಲ್ಲಿ ವಿಚಾರಣೆಯನ್ನು ಸ್ಥಗಿತಗೊಳಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಆದರೆ, ನಿರ್ದೇಶನಗಳಲ್ಲಿ, ತುರ್ತು ಪರಿಸ್ಥಿತಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಅದು ಕೇಳಿದೆ. ಪ್ರಕಾಶಂ ಜಿಲ್ಲೆಯಲ್ಲಿ ಕೊರೊನಾವೈರಸ್ಸಿಗೆ 10 ಪೊಲೀಸರು ಮತ್ತು ಆಯುಷ್ ವೈದ್ಯಕೀಯ ಅಧಿಕಾರಿಯವರ  ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. 28,239 ಮಾದರಿಗಳನ್ನು ಪರೀಕ್ಷಿಸಿದ ನಂತರ ಕಳೆದ 24 ಗಂಟೆಗಳಲ್ಲಿ 657 ಹೊಸ ಪ್ರಕರಣಗಳು, 342 ಡಿಸ್ಚಾರ್ಜ್ ಮತ್ತು ಆರು ಸಾವುಗಳು ವರದಿಯಾಗಿವೆ. 657 ಪ್ರಕರಣಗಳಲ್ಲಿ 39 ಅಂತರರಾಜ್ಯ ಪ್ರಕರಣಗಳು ಮತ್ತು ಏಳು ವಿದೇಶಗಳಿಂದ ಬಂದವು. ಒಟ್ಟು ಪ್ರಕರಣಗಳು: 15,252, ಸಕ್ರಿಯ ಪ್ರಕರಣಗಳು: 8071, ಆಸ್ಪತ್ತೆಯಿಂದ ಬಿಡುಗಡೆಯಾದವರು: 6988, ಸಾವು: 193.
  • ತೆಲಂಗಾಣ: ದಕ್ಷಿಣ ಮಧ್ಯ ರೈಲ್ವೆ ಕೋವಿಡ್-19 ಚಿಕಿತ್ಸೆಗಾಗಿ ರೈಲ್ವೆ ಆಸ್ಪತ್ರೆಯನ್ನು ಸಿದ್ಧಪಡಿಸುತ್ತದೆ; ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಐಸಿಎಂಆರ್ ನಿಯಮಗಳ ಪ್ರಕಾರ ವ್ಯವಸ್ಥೆ ಮಾಡಲಾಗುತ್ತಿದೆ. ತೆಲಂಗಾಣ ಸರ್ಕಾರವು ಜುಲೈ 31 ರವರೆಗೆ ನಿಯಂತ್ರಣ ವಲಯಗಳಲ್ಲಿ ಲಾಕ್‌ಡೌನ್ ವಿಸ್ತರಣೆಗೆ ಆದೇಶಿಸಿದೆ  ಮತ್ತು ನಿಯಂತ್ರಣ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಮಾಪನಾಂಕ ನಿರ್ಣಯದ ರೀತಿಯಲ್ಲಿ ಚಟುವಟಿಕೆಗಳನ್ನು ಪುನಃ ತೆರೆಯುತ್ತದೆ. ನಿನ್ನೆ ತನಕ ಒಟ್ಟು ಪ್ರಕರಣಗಳು: 16339, ಸಕ್ರಿಯ ಪ್ರಕರಣಗಳು: 8785 ಸಾವು: 260, ಆಸ್ಪತ್ತೆಯಿಂದ ಬಿಡುಗಡೆಯಾದವರು: 7294.
  • ಅರುಣಾಚಲ ಪ್ರದೇಶ: ಕೋವಿಡ್-19 ಸಾಂಕ್ರಾಮಿಕ ರೋಗವು ಜಾಗತಿಕವಾಗಿ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತಿರುವುದರಿಂದ, ನಮ್ಮ ಎಲ್ಲಾ ವೈದ್ಯರು ಮತ್ತು ಮುಂಚೂಣಿಯ ಆರೋಗ್ಯ ಕಾರ್ಯಕರ್ತರು ಜೀವ ಉಳಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಎಂದು ರಾಷ್ಟ್ರೀಯ ವೈದ್ಯರ ದಿನದಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಸಮುದಾಯವನ್ನು ವೈರಸ್‌ನಿಂದ ಸುರಕ್ಷಿತವಾಗಿರಿಸಿಕೊಳ್ಳಲು ತಮ್ಮನ್ನು ತಾವು ಅಪಾಯಕ್ಕೆ ತಳ್ಳಿಕೊಳ್ಳುವುದರಿಂದ ಅವರ ಸುರಕ್ಷತೆಗಾಗಿ ಪ್ರಾರ್ಥನೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
  • ಅಸ್ಸಾಂ: ಅಸ್ಸಾಂನಲ್ಲಿ ಈಗ 13 ಕೋವಿಡ್-19 ಪರೀಕ್ಷಾ ಪ್ರಯೋಗಾಲಯಗಳಿವೆ ಮತ್ತು ಇನ್ನೂ 6 ಪ್ರಯೋಗಾಲಯಗಳು ಶೀಘ್ರದಲ್ಲೇ ಬರಲಿವೆ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.
  • ಮಣಿಪುರ: ಮಣಿಪುರದ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಅವರು ಕೋವಿಡ್-19ರ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ಮತ್ತು ಇಂದು ವೈದ್ಯರ ದಿನದಂದು ಅಮೂಲ್ಯವಾದ ಜೀವಗಳನ್ನು ಉಳಿಸುತ್ತಿರುವ ಎಲ್ಲ ವೈದ್ಯರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಮತ್ತು ವಂದನೆ ಸಲ್ಲಿಸಿದರು.
  • ಮಿಜೋರಾಂ: ಮಿಜೋರಾಂನಲ್ಲಿ ಇಂದು ಚೇತರಿಸಿಕೊಂಡ ಒಬ್ಬ ರೋಗಿಯನ್ನು ಬಿಡುಗಡೆ ಮಾಡಲಾಗಿದೆ. ಈಗ ರಾಜ್ಯದಲ್ಲಿ ಸಕ್ರಿಯ ಪ್ರಕರಣ 37 ರಷ್ಟಿದೆ. ಒಟ್ಟು ಕೋವಿಡ್-19 ಸಂಖ್ಯೆಯು 123 ಗುಣಪಡಿಸಿದ ಪ್ರಕರಣಗಳೊಂದಿಗೆ 160 ಕ್ಕೆ ತಲುಪಿದೆ. ಪಿಎಂಜಿಕೆವೈ ವಿಸ್ತರಣೆಗಾಗಿ ಮಿಜೋರಾಂ ಮುಖ್ಯಮಂತ್ರಿ ಜೋರಾಂಥಂಗರವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಧನ್ಯವಾದ ಅರ್ಪಿಸಿದರು.
  • ನಾಗಾಲ್ಯಾಂಡ್: ರಾಷ್ಟ್ರೀಯ ವೈದ್ಯರ ದಿನದಂದು, ನಾಗಾಲ್ಯಾಂಡ್‌ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ವೈದ್ಯರಿಗೆ ಗೌರವ ಸಲ್ಲಿಸಿದರು; ಸಮಯೋಚಿತ ಆರೋಗ್ಯ ರಕ್ಷಣೆ ನೀಡುವಲ್ಲಿ ನಮ್ಮ ಜನರಿಗೆ ಅವರು ಮಾಡಿದ ಸೇವೆಗಳು ಮತ್ತು ತ್ಯಾಗಗಳು, ವಿಶೇಷವಾಗಿ ಸಾಂಕ್ರಾಮಿಕ ರೋಗವನ್ನು ಎದುರಿಸುವ ಅಭೂತಪೂರ್ವ ಸಮಯದಲ್ಲಿ ನಿಜವಾಗಿಯೂ ಶ್ಲಾಘನೀಯ ಎಂದು ಹೇಳಿದರು.
  • ಸಿಕ್ಕಿಂ: ಸಿಕ್ಕಿಂನ ಮುಖ್ಯಮಂತ್ರಿ ಎಲ್ಲಾ ಕೋವಿಡ್-19 ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಅವರ ನಿಸ್ವಾರ್ಥ ಸೇವೆ ಮತ್ತು ಸಮರ್ಪಣೆಗಾಗಿ ಪ್ರೀತಿ, ಗೌರವ ಮತ್ತು ಮೆಚ್ಚುಗೆಯ ಸಂಕೇತವಾಗಿ ಆರ್ಥಿಕ ಉತ್ತೇಜನವನ್ನು ಘೋಷಿಸಿದರು. ಅವರು ಒಂದು ಬಾರಿಯ ಉತ್ತೇಜನ ಧನ  ವೈದ್ಯರಿಗೆ ರೂ. 20,000, ರೂ. 10,000 ನರ್ಸಿಂಗ್ ಸಿಬ್ಬಂದಿಗೆ, ಮತ್ತು  ಪೂರಕ ಸಿಬ್ಬಂದಿಗೆ 5000 ರೂ. ಘೋಷಿಸಿದ್ದಾರೆ
  • ಮಹಾರಾಷ್ಟ್ರ: ರಾಜ್ಯದಲ್ಲಿ ಪ್ರಸ್ತುತ ಕೋವಿಡ್-19 ರೋಗಿಗಳ ಸಂಖ್ಯೆ 174761 ಆಗಿದೆ. ಹೊಸದಾಗಿ 4878 ರೋಗಿಗಳಲ್ಲಿ ಸೋಂಕು ದೃಢಪಟ್ಟಿದ್ದು, 1951 ರೋಗಿಗಳನ್ನು ಮಂಗಳವಾರ ಗುಣಪಡಿಸಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 90911 ರೋಗಿಗಳನ್ನು ಗುಣಪಡಿಸಲಾಗಿದೆ. ಒಟ್ಟು ಸಕ್ರಿಯ ರೋಗಿಗಳು 75979. ಗ್ರೇಟರ್ ಮುಂಬೈ ಪ್ರದೇಶದಲ್ಲಿ, 903 ಸೋಂಕು ದೃಢಪಟ್ಟ ರೋಗಿಗಳು, 625 ಚೇತರಿಕೆ ಮತ್ತು 36 ಸಾವುಗಳು ಮಂಗಳವಾರ ವರದಿಯಾಗಿದೆ. ಈಗ ಒಟ್ಟು ಪ್ರಕರಣಗಳ ಸಂಖ್ಯೆ 77197, ಒಟ್ಟು ಚೇತರಿಕೆಯಾದವರ ಸಂಖ್ಯೆ 44170 ಮತ್ತು ಮುಂಬೈಯಲ್ಲಿ ಸಾವಿನ ಸಂಖ್ಯೆ 4554 ಆಗಿದೆ. ಮತ್ತೊಂದೆಡೆ, ರಾಜ್ಯದ 11 ಕಾರಾಗೃಹಗಳಲ್ಲಿ ಈವರೆಗೆ 361 ಕೈದಿಗಳಲ್ಲಿ ಸೋಂಕು ದೃಢಪಟ್ಟಿದೆ, ಅದರಲ್ಲಿ 106 ಸಕ್ರಿಯ ಪ್ರಕರಣಗಳು. 94 ಜೈಲು ಸಿಬ್ಬಂದಿಗಳು ಸಹ  ಸೋಂಕು ದೃಢಪಟ್ಟಿದೆ ಮತ್ತು ಈ ಕಾರಾಗೃಹಗಳಲ್ಲಿ ನಾಲ್ಕು ಸಾವುಗಳು ವರದಿಯಾಗಿವೆ.
  • ಗುಜರಾತ್: ಕಳೆದ 24 ಗಂಟೆಗಳಲ್ಲಿ 626 ಹೊಸ ಪ್ರಕರಣಗಳು ಕೋವಿಡ್ -19 ಪ್ರಕರಣಗಳ ಸಂಖ್ಯೆ 32,446ಕ್ಕೆ ತಲುಪಿದೆ. ರಾಜ್ಯದಲ್ಲಿ ಕೋವಿಡ್-19 ಕಾರಣದಿಂದಾಗಿ 1,848 ರವರೆಗೆ ಒಟ್ಟು ಸಾವು ಸಂಭವಿಸಿ 20 ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಸೂರತ್ ನಗರದಿಂದ ಗರಿಷ್ಠ 183 ಪ್ರಕರಣಗಳು ವರದಿಯಾಗಿದ್ದು, ಮೊದಲ ಬಾರಿಗೆ ಹೊಸ ಪ್ರಕರಣಗಳಲ್ಲಿ ಅಹಮದಾಬಾದ್ ಅನ್ನು ಹಿಂದಿಕ್ಕಿದೆ. ಅಹಮದಾಬಾದ್ ನಗರದಲ್ಲಿ 182 ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 422 ರೋಗಿಗಳನ್ನು ಚೇತರಿಸಿಕೊಂಡ ನಂತರ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಕೋವಿಡ್ 19 ನಿಂದ ಚೇತರಿಸಿಕೊಂಡ ಒಟ್ಟು ರೋಗಿಗಳ ಸಂಖ್ಯೆಯು 23670 ಕ್ಕೆ ಏರಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 3,70,000ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ. ಏತನ್ಮಧ್ಯೆ, ಅನ್ಲಾಕ್ 2 ಗಾಗಿ ಹೊಸ ಮಾರ್ಗಸೂಚಿಗಳನ್ನು ಇಂದಿನಿಂದ ಜಾರಿಗೆ ತರಲಾಗುತ್ತಿದ್ದು, ಇದರಲ್ಲಿ ರಾತ್ರಿ 8 ಗಂಟೆಯವರೆಗೆ ಅಂಗಡಿಗಳು ತೆರೆದಿರುತ್ತವೆ ಮತ್ತು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ರಾತ್ರಿ 9 ರವರೆಗೆ ತೆರೆದಿರುವುದಿಲ್ಲ. ಎಐಟಿ-ಗಾಂಧಿನಗರ ಚೆಸ್ಟ್  ಎಕ್ಸರೆನಿಂದ ಕೋವಿಡ್-19 ಅನ್ನು ಕಂಡುಹಿಡಿಯಲು ಕೃತಕ ಬುದ್ಧಿಮತ್ತೆ ಆಧಾರಿತ ಸಾಧನವನ್ನು ಅಭಿವೃದ್ಧಿಪಡಿಸಿದೆ. ವೈದ್ಯಕೀಯ ಪರೀಕ್ಷೆಯ ಮೊದಲು ತ್ವರಿತ ಪ್ರಾಥಮಿಕ ರೋಗನಿರ್ಣಯಕ್ಕೆ ಈ ಉಪಕರಣವನ್ನು ಬಳಸಬಹುದು. 
  • ರಾಜಸ್ಥಾನ: ಮಂಗಳವಾರ 78 ಹೊಸ ಪ್ರಕರಣಗಳ ವರದಿಯೊಂದಿಗೆ, ರಾಜ್ಯದ ಕೋವಿಡ್-19 ಸಂಖ್ಯೆ 18092 ಕ್ಕೆ ಏರಿದೆ. ಚೇತರಿಕೆಗಳ ಸಂಖ್ಯೆ 14,232 ಆಗಿದೆ. ಅಲ್ವಾರ್ ಜಿಲ್ಲೆಯಲ್ಲಿ 29 ಹೊಸ ಪ್ರಕರಣಗಳು ವರದಿಯಾಗಿದ್ದು, ಜೈಪುರದಿಂದ 25 ಪ್ರಕರಣಗಳು ವರದಿಯಾಗಿವೆ.
  • ಮಧ್ಯಪ್ರದೇಶ: ಮಂಗಳವಾರ 223 ಕೋವಿಡ್-19 ಹೊಸ ಪ್ರಕರಣಗಳನ್ನು ಗುರುತಿಸಲಾಗಿದ್ದು , ಒಟ್ಟು ಸಂಖ್ಯೆ 13,593 ಆಗಿದೆ. 2626 ಸಕ್ರಿಯ ರೋಗಿಗಳಿದ್ದು, ಒಟ್ಟು ಚೇತರಿಕೆಯ ಸಂಖ್ಯೆಯು 10,395 ಮತ್ತು ಸಾವಿನ ಸಂಖ್ಯೆ 572 ರಷ್ಟಿದೆ. ಹಾಟ್‌ಸ್ಪಾಟ್ ಇಂದೋರ್ ಮಂಗಳವಾರ 45 ಹೊಸ ಪ್ರಕರಣಗಳು ಮತ್ತು 3 ಸಾವುಗಳನ್ನು ವರದಿ ಮಾಡಿದೆ, ಇದು ನಗರದಲ್ಲಿ ಕೋವಿಡ್-19 ಒಟ್ಟು ಸಂಖ್ಯೆಯು 4709 ಆಗಿದೆ. ರಾಜಧಾನಿ ಭೋಪಾಲ್‌ನಲ್ಲಿ 25 ಹೊಸ ಪ್ರಕರಣಗಳು ಮತ್ತು ಮಂಗಳವಾರ 3 ಸಾವುಗಳು ವರದಿಯಾಗಿವೆ. ಆದ್ದರಿಂದ, ಭೋಪಾಲ್‌ನಲ್ಲಿನ ಕೋವಿಡ್-19ರ ಸಂಖ್ಯೆ ಈಗ 2789 ರಷ್ಟಿದೆ. ಅಲ್ಲದೆ, ಮೊರೆನಾ ಜಿಲ್ಲೆಯಲ್ಲಿ 59 ಹೊಸ ಪ್ರಕರಣಗಳು, ಗ್ವಾಲಿಯರ್ 14 ಪ್ರಕರಣಗಳು ಮತ್ತು ಭಿಂದ್-ನಲ್ಲಿ ಮಂಗಳವಾರ 12 ಪ್ರಕರಣಗಳು ವರದಿಯಾಗಿವೆ. ಕೋವಿಡ್-19ರ ಹಿನ್ನೆಲೆಯಲ್ಲಿ ರಾಜ್ಯದ ಪ್ರತಿಯೊಂದು ಮನೆಗಳನ್ನು ತಲುಪುವ ಗುರಿಯನ್ನು ಹೊಂದಿರುವ “ಕಿಲ್ ಕೊರೊನಾ” ಅಭಿಯಾನವನ್ನು ಇಂದು ಪ್ರಾರಂಭಿಸಲಾಯಿತು. ಅಗತ್ಯ ಸಜ್ಜುಸಾಮಾಗರಿಯೊಂದಿಗೆ 11,400ಕ್ಕೂ ಹೆಚ್ಚು ತಂಡಗಳು ಇಂದಿನಿಂದ ಈ ತಿಂಗಳ 15 ರವರೆಗೆ ಮನೆ ಮನೆ ಸಮೀಕ್ಷೆ ನಡೆಸಲಿವೆ. ಸಮೀಕ್ಷೆಯನ್ನು ದಾಖಲಿಸಲು ರಾಜ್ಯ ಅಭಿವೃದ್ಧಿಪಡಿಸಿದೆ ಅಪ್ಲಿಕೇಶನ್ SARTHAK ಅನ್ನು ಬಳಸಲಾಗುತ್ತದೆ.
  • ಛತ್ತೀಸ್ಗಢ್: ಮಂಗಳವಾರ ರಾಜ್ಯದಲ್ಲಿ 63 ಹೊಸ ಪ್ರಕರಣಗಳು ಮತ್ತು 100 ಚೇತರಿಕೆಗಳು ವರದಿಯಾಗಿವೆ, ಇದರಿಂದಾಗಿ ರಾಜ್ಯದ ಕೋವಿಡ್-19 ರ ಸಂಖ್ಯೆಯು 2858 ಆಗಿದೆ. ಸಕ್ರಿಯ ರೋಗಿಗಳ ಸಂಖ್ಯೆ 595 ಆಗಿದ್ದರೆ, ಒಟ್ಟು ಚೇತರಿಕೆಯು 2250 ರಷ್ಟಿದೆ.
  • ಗೋವಾ: 64 ಹೊಸ ರೋಗಿಗಳನ್ನು ಮಂಗಳವಾರ ಗುರುತಿಸಲಾಗಿದೆ, ಇದರಿಂದಾಗಿ ರಾಜ್ಯದ ಕೋವಿಡ್-19ರ ಸಂಖ್ಯೆಯು 1315 ಆಗಿದೆ. ರಾಜ್ಯದಲ್ಲಿ ಈಗ 716 ಸಕ್ರಿಯ ಪ್ರಕರಣಗಳಿವೆ. ಅಲ್ಲದೆ, ಮಂಗಳವಾರ 72 ಚೇತರಿಕೆ ಪ್ರಕರಣ ವರದಿಯಾಗಿದ್ದು, ರಾಜ್ಯದ ಒಟ್ಟು ಚೇತರಿಸಿಕೊಂಡ ರೋಗಿಗಳ ಸಂಖ್ಯೆ 596 ಆಗಿದೆ.

ವಾಸ್ತವ ಪರಿಶೀಲನೆ

***



(Release ID: 1636090) Visitor Counter : 204