ಪ್ರಧಾನ ಮಂತ್ರಿಯವರ ಕಛೇರಿ
ಕೋವಿಡ್-19 ವಿರುದ್ಧ ಹೋರಾಡಲು ಪಿಎಂ ಕೇರ್ಸ್ ನಿಧಿಯಡಿ 50,000 ವೆಂಟಿಲೇಟರ್ಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ
Posted On:
23 JUN 2020 11:15AM by PIB Bengaluru
ಕೋವಿಡ್-19 ವಿರುದ್ಧ ಹೋರಾಡಲು ಪಿಎಂ ಕೇರ್ಸ್ ನಿಧಿಯಡಿ 50,000 ವೆಂಟಿಲೇಟರ್ಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ
ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರ್ಕಾರಿ ಕೋವಿಡ್ ಆಸ್ಪತ್ರೆಗಳಿಗೆ 50000 ‘ಭಾರತದಲ್ಲಿ ತಯಾರಿಸಿದ’ವೆಂಟಿಲೇಟರ್ಗಳನ್ನು ಪೂರೈಸಲು ಪಿಎಂ ಕೇರ್ಸ್ ಫಂಡ್ ಟ್ರಸ್ಟ್ ನಿಂದ 2000 ಕೋಟಿ ರೂ. ಗಳನ್ನು ನಿಗದಿಪಡಿಸಲಾಗಿದೆ. ಇದಲ್ಲದೆ, ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ 1000 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
50000 ವೆಂಟಿಲೇಟರ್ಗಳ ಪೈಕಿ 30000 ವೆಂಟಿಲೇಟರ್ಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ತಯಾರಿಸುತ್ತಿದೆ. ಉಳಿದ 20000 ವೆಂಟಿಲೇಟರ್ಗಳನ್ನು AgVa ಹೆಲ್ತ್ಕೇರ್ (10000), AMTZ ಬೇಸಿಕ್ (5650), AMTZ ಹೈ ಎಂಡ್ (4000) ಮತ್ತು ಅಲೈಡ್ ಮೆಡಿಕಲ್ (350) ತಯಾರಿಸುತ್ತಿವೆ. ಇಲ್ಲಿಯವರೆಗೆ 2923 ವೆಂಟಿಲೇಟರ್ಗಳನ್ನು ತಯಾರಿಸಲಾಗಿದ್ದು, ಅದರಲ್ಲಿ 1340 ವೆಂಟಿಲೇಟರ್ಗಳನ್ನು ಈಗಾಗಲೇ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿಸಲಾಗಿದೆ. ಮಹಾರಾಷ್ಟ್ರ (275), ದೆಹಲಿ (275), ಗುಜರಾತ್ (175), ಬಿಹಾರ (100), ಕರ್ನಾಟಕ (90), ರಾಜಸ್ಥಾನ (75) ಇವುಗಳಲ್ಲಿ ಪ್ರಮುಖವಾದವು. ಜೂನ್ 2020 ರ ಅಂತ್ಯದ ವೇಳೆಗೆ, ಹೆಚ್ಚುವರಿ 14,000 ವೆಂಟಿಲೇಟರ್ಗಳನ್ನು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿಸಲಾಗುತ್ತದೆ.
ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ಈಗಾಗಲೇ 1000 ಕೋಟಿಗಳನ್ನು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ. ನಿಧಿಯ ವಿತರಣೆಯು 2011 ರ ಜನಗಣತಿಯ ಪ್ರಕಾರ ಜನಸಂಖ್ಯೆಯ ಶೇ. 50, ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ. 40 ಮತ್ತು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಶೇ. 10ರಷ್ಟು ಸಮಾನ ವಿತರಣೆ ಸೂತ್ರವನ್ನು ಆಧರಿಸಿದೆ. ಈ ನೆರವನ್ನು ವಲಸಿಗರ ವಸತಿ, ಆಹಾರ, ವೈದ್ಯಕೀಯ ಚಿಕಿತ್ಸೆ ಮತ್ತು ಸಾಗಣೆಗೆ ವ್ಯವಸ್ಥೆಗೆ ಬಳಸಲಾಗುತ್ತದೆ. ಮಹಾರಾಷ್ಟ್ರ (181 ಕೋಟಿ), ಉತ್ತರ ಪ್ರದೇಶ (103 ಕೋಟಿ), ತಮಿಳುನಾಡು (83 ಕೋಟಿ), ಗುಜರಾತ್ (66 ಕೋಟಿ), ದೆಹಲಿ (55 ಕೋಟಿ), ಪಶ್ಚಿಮ ಬಂಗಾಳ (53 ಕೋಟಿ), ಬಿಹಾರ (51 ಕೋಟಿ) ), ಮಧ್ಯಪ್ರದೇಶ (50 ಕೋಟಿ), ರಾಜಸ್ಥಾನ (50 ಕೋಟಿ) ಮತ್ತು ಕರ್ನಾಟಕ (34 ಕೋಟಿ) ನೆರವು ಪಡೆದ ಪ್ರಮುಖ ರಾಜ್ಯಗಳಾಗಿವೆ.
***
(Release ID: 1633673)
Visitor Counter : 292
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam