ಪ್ರಧಾನ ಮಂತ್ರಿಯವರ ಕಛೇರಿ

ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಚಾಲನೆ

Posted On: 20 JUN 2020 2:06PM by PIB Bengaluru

ಕೋವಿಡ್-19 ಹಿನ್ನೆಲೆಯಲ್ಲಿ ತಮ್ಮ ಗ್ರಾಮಗಳಿಗೆ ಮರಳಿರುವ ವಲಸೆ ಕಾರ್ಮಿಕರ ಜೀವನೋಪಾಯ ಮತ್ತು

ಉದ್ಯೋಗ ಲಭ್ಯತೆ ಉತ್ತೇಜನಕ್ಕೆ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಚಾಲನೆ

ಗ್ರಾಮೀಣ ಮೂಲಸೌಕರ್ಯ ಮತ್ತು ಇಂಟರ್ನೆಟ್ ಸೌಲಭ್ಯಕ್ಕೆ ಆದ್ಯತೆ: ಪ್ರಧಾನಮಂತ್ರಿ

 

ಮನೆಯ ಹತ್ತಿರದಲ್ಲೇ ಗ್ರಾಮೀಣ ವಲಸೆ ಕಾರ್ಮಿಕರ ಕೌಶಲ್ಯ ಶೋಧನೆಗೆ ಒತ್ತು: ಪ್ರಧಾನಮಂತ್ರಿ

125 ದಿನಗಳಲ್ಲಿ 6 ರಾಜ್ಯಗಳ 116 ಜಿಲ್ಲೆಗಳಲ್ಲಿ ಯಂತ್ರೋಪಾದಿಯ ಅಭಿಯಾನದಲ್ಲಿ 50,000 ಕೋಟಿ ರೂ. ಮೌಲ್ಯದ ಯೋಜನೆಗಳ ಅನುಷ್ಠಾನ

 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರಕ ಕೊರೊನಾ ಹಿನ್ನೆಲೆ ಮರಳಿ ವಲಸೆ ಕಾರ್ಮಿಕರಿಗೆ ತಮ್ಮ ಗ್ರಾಮ/ ಪ್ರದೇಶದಲ್ಲೇ ಜೀವನೋಪಾಯ ಅವಕಾಶಗಳನ್ನು ಒದಗಿಸಲು ಮತ್ತು ಸಬಲೀಕರಿಸಲು ಗರೀಬ್ ಕಲ್ಯಾಣ ರೋಜ್ಗಾರ್ ಅಭಿಯಾನ ಹೆಸರಿನ ಬೃಹತ್ ಉದ್ಯೋಗ ಸಹಿತ- ಗ್ರಾಮೀಣ ಸಾರ್ವಜನಿಕ ಕಾಮಗಾರಿ ಅಭಿಯಾನಕ್ಕೆ ಚಾಲನೆ ನೀಡಿದರು.

ಅಭಿಯಾನಕ್ಕೆ ಬಿಹಾರದ ಖಗಾರಿಯಾ ಜಿಲ್ಲೆಯ ಬೆಲ್ದೌರ್ ವಿಭಾಗದ ತೆಲಿಹರ್ ಗ್ರಾಮದಲ್ಲಿ ಜೂನ್ 20ರಂದು (ಶನಿವಾರ) ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಯೋಜನೆಯಲ್ಲಿ ಭಾಗಿಯಾಗುತ್ತಿರುವ 6 ರಾಜ್ಯಗಳಾದ ಮುಖ್ಯಮಂತ್ರಿಗಳು ಮತ್ತು ಪ್ರತಿನಿಧಿಗಳು, ಹಲವು ಕೇಂದ್ರ ಸಚಿವರು ಮತ್ತು ಇತರರು ಭಾಗಿಯಾಗಿದ್ದರು.

ಪ್ರಧಾನಮಂತ್ರಿಯವರು ತಾವು ವಿಧ್ಯುಕ್ತವಾಗಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನಕ್ಕೆ ಚಾಲನೆ ನೀಡಿದ ಬಿಹಾರದ ಖಗಾರಿಯಾ ಜಿಲ್ಲೆಯ ತೆಲಿಹಾರ್ ಗ್ರಾಮಸ್ಥರೊಂದಿಗೆ ರಿಮೋಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಪ್ರಧಾನಮಂತ್ರಿಯವರು ಕೆಲವು ವಲಸಿಗರಿಂದ, ಅವರ ಪ್ರಸಕ್ತ ಉದ್ಯೋಗದ ಸ್ಥಿತಿ ಮತ್ತು ಲಾಕ್ ಡೌನ್ ಅವಧಿಯಲ್ಲಿ ಆರಂಭಿಸಲಾದ ವಿವಿಧ ಕಲ್ಯಾಣ ಯೋಜನೆಗಳು ಅವರಿಗೆ ಲಭಿಸಿತೋ ಇಲ್ಲವೋ ಎಂಬ ಬಗ್ಗೆ ವಿಚಾರಿಸಿದರು.

ತಮ್ಮ ಸಂವಾದದ ಬಳಿಕ ಸಂತೃಪ್ತಿ ವ್ಯಕ್ತಪಡಿಸಿದ ಶ್ರೀ ಮೋದಿ, ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಗ್ರಾಮೀಣ ಭಾರತ ಹೇಗೆ ನಿಂತಿತು ಮತ್ತು ಅದು ಬಿಕ್ಕಟ್ಟಿನ ಸಮಯದಲ್ಲಿ ಇಡೀ ದೇಶಕ್ಕೆ ಮತ್ತು ವಿಶ್ವಕ್ಕೆ ಹೇಗೆ ಸ್ಫೂರ್ತಿ ನೀಡಿತು ಎಂಬುದನ್ನು ಉಲ್ಲೇಖಿಸಿದರು.

ಬಡವರು ಮತ್ತು ವಲಸಿಗರ ಕಲ್ಯಾಣದ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಕಾಳಜಿ ವಹಿಸಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಆತ್ಮ ನಿರ್ಭರ ಭಾರತ ಅಭಿಯಾನ ಒಂದರಲ್ಲೇ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 1.75 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಆರಂಭಿಸಲಾಗಿದೆ ಎಂದರು.

ತಮ್ಮ ಮನೆಗಳಿಗೆ ಮರಳಲು ಬಯಸಿದ ವಲಸೆ ಕಾರ್ಮಿಕರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಶ್ರಮಿಕ ರೈಲುಗಳನ್ನೂ ಓಡಿಸಿದವು ಎಂದು ಅವರು ತಿಳಿಸಿದರು.

ಬಡವರ ಕಲ್ಯಾಣಕ್ಕಾಗಿ, ಅವರ ಉದ್ಯೋಗಕ್ಕಾಗಿ ಬೃಹತ್ ಅಭಿಯಾನ ಪ್ರಾರಂಭಿಸಿದ ದಿನ ಐತಿಹಾಸಿಕ ದಿನ ಎಂದು ಪ್ರಧಾನಮಂತ್ರಿಯವರು ಬಣ್ಣಿಸಿದರು.

ನಮ್ಮ ಗ್ರಾಮಗಳಲ್ಲಿ ಜೀವಿಸುತ್ತಿರುವ ನಮ್ಮ ಶ್ರಮಿಕ ಸೋದರ ಮತ್ತು ಸೋದರಿಯರಿಗಾಗಿ, ಯುವಕರಿಗಾಗಿ, ಸೋದರಿಯರಿಗಾಗಿ ಮತ್ತು ಹೆಣ್ಣು ಮಕ್ಕಳಿಗಾಗಿ ಅಭಿಯಾನ ಸಮರ್ಪಿತವಾಗಿದೆ ಎಂದರು. ಅಭಿಯಾನದ ಮೂಲಕ ಕಾರ್ಮಿಕರಿಗೆ ಮನೆಯ ಬಳಿಯೇ ಉದ್ಯೋಗ ಒದಗಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ಅವರು ತಿಳಿಸಿದರು.

ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನದ ಅಡಿಯಲ್ಲಿ ಬಾಳಿಕೆ ಬರುವಂಥ ಗ್ರಾಮೀಣ ಮೂಲಸೌಕರ್ಯ ನಿರ್ಮಾಣಕ್ಕಾಗಿ 50,000 ಕೋಟಿ ರೂಪಾಯಿ ವೆಚ್ಚ ಮಾಡುವುದಾಗಿ ಪ್ರಧಾನಮಂತ್ರಿ ಪ್ರಕಟಿಸಿದರು. ವಿವಿಧ ಕಾಮಗಾರಿಗಳ ಅಭಿವೃದ್ಧಿಗಾಗಿ ಗ್ರಾಮಗಳಲ್ಲಿ ಉದ್ಯೋಗಕ್ಕಾಗಿ 25 ಕಾರ್ಯ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು. 25 ಕಾಮಗಾರಿಗಳು ಅಥವಾ ಯೋಜನೆಗಳು ಗ್ರಾಮೀಣ ಅಗತ್ಯ ಪೂರೈಸುವುದಕ್ಕೆ ಸಂಬಂಧಿಸಿದ ಅಂದರೆ ಬಡವರ ಗ್ರಾಮೀಣ ವಸತಿ, ತೋಟ, ಜಲ ಜೀವನ್ ಮಿಷನ್ ಮೂಲಕ ಕುಡಿಯುವ ನೀರು, ಪಂಚಾಯತಿ ಭವನಗಳು, ಸಮುದಾಯ ಶೌಚಾಲಯಗಳು, ಗ್ರಾಮೀಣ ಮಂಡಿಗಳು, ಗ್ರಾಮೀಣ ರಸ್ತೆಗಳ ನಿರ್ಮಾಣ ಮತ್ತು ಇತರ ಮೂಲಸೌಕರ್ಯಗಳಾದ ಜಾನುವಾರು ಕೊಟ್ಟಿಗೆಗಳು, ಅಂಗನವಾಡಿ ಭವನ ಇತ್ಯಾದಿಗೆ ಸಂಬಂಧಿಸಿದ್ದಾಗಿರುತ್ತವೆ.

ಅಭಿಯಾನ ಗ್ರಾಮೀಣ ಪ್ರದೇಶಗಳಲ್ಲಿ ಆಧುನಿಕ ಸೌಲಭ್ಯಗಳನ್ನೂ ಒದಗಿಸುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಯುವಜನರು ಮತ್ತು ಮಕ್ಕಳಿಗೆ ನೆರವಾಗಲು ಪ್ರತಿ ಗ್ರಾಮೀಣ ಮನೆಗಳಿಗೆ ಅತಿ ವೇಗದ ಮತ್ತು ಅಗ್ಗದ ಇಂಟರ್ನೆಟ್ ಒದಗಿಸುವುದು ಅತ್ಯಗತ್ಯವಾಗಿದೆ ಎಂದು ಅವರು ತಿಳಿಸಿದರು. ಇದೇ ಮೊದಲ ಬಾರಿಗೆ ಗ್ರಾಮೀಣ ಪ್ರದೇಶಗಳು ನಗರ ಪ್ರದೇಶಗಳಿಗಿಂತಲೂ ಹೆಚ್ಚು ಅಂತರ್ಜಾಲ ಬಳಸುತ್ತಿವೆ ಎಂದು ಪ್ರಧಾನಿ ಹೇಳಿದರು. ಫೈಬರ್ ಕೇಬಲ್ ಅಳವಡಿಕೆ ಮತ್ತು ಇಂಟರ್ ನೆಟ್ ಅವಕಾಶ ಕಲ್ಪಿಸುವುದನ್ನು ಸಹ ಅಭಿಯಾನದ ಭಾಗವಾಗಿಸಲಾಗಿದೆ ಎಂದರು.

ಕಾಮಗಾರಿಗಳನ್ನು ತಮ್ಮ ಗ್ರಾಮಗಳಲ್ಲಿ ಇದ್ದುಕೊಂಡೇ, ತಮ್ಮ ಕುಟುಂಬದೊಂದಿಗೆ ಇದ್ದುಕೊಂಡೇ ಮಾಡಬಹುದಾಗಿದೆ ಎಂದರು.

ಆತ್ಮ ನಿರ್ಭರ ಅಂದರೆ ಸ್ವಾವಲಂಬಿ ಕೃಷಿಕರು ಕೂಡ ಆತ್ಮ ನಿರ್ಭರ ಭಾರತ (ಸ್ವಾವಲಂಬಿ ಭಾರತಕ್ಕೆ) ಅತ್ಯಾವಶ್ಯಕ ಎಂದು ಪ್ರಧಾನಮಂತ್ರಿ ತಿಳಿಸಿದರು. ಕೇಂದ್ರ ಸರ್ಕಾರ ಅನಗತ್ಯವಾದ ಕಾನೂನು ಮತ್ತು ನಿಯಂತ್ರಣಗಳ ಹಲವು ತೊಡಕುಗಳನ್ನು ತೆಗೆದುಹಾಕುವ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಇದರಿಂದ ರೈತರು ತಮ್ಮ ಉತ್ಪನ್ನವನ್ನು ದೇಶದ ಯಾವುದೇ ಭಾಗದಲ್ಲಿ ಮುಕ್ತವಾಗಿ ಮಾರಾಟ ಮಾಡಬಹುದಾಗಿದೆ ಮತ್ತು ತಮ್ಮ ಉತ್ಪನ್ನಕ್ಕೆ ಉತ್ತಮ ದರ ನೀಡುವ ವ್ಯಾಪಾರಿಗಳೊಂದಿಗೆ ನೇರವಾಗಿ ಸಂಪರ್ಕಿತರಾಗಬಹುದಾಗಿದೆ ಎಂದರು.

ರೈತರನ್ನು ಮಾರುಕಟ್ಟೆಗೆ ನೇರವಾಗಿ ಸಂಪರ್ಕಿಸಲಾಗುತ್ತಿದೆ ಮತ್ತು ಶೀಥಲೀಕರಣ ಘಟಕ ಮುಂತಾದ ಸಂಪರ್ಕಗಳಿಗಾಗಿ ಸರ್ಕಾರವು 1,00,000 ಕೋಟಿ ರೂ.ಗಳ ಹೂಡಿಕೆಯನ್ನು ಒದಗಿಸಿದೆ ಎಂದು ಶ್ರೀ ಮೋದಿ ಹೇಳಿದರು.

125 ದಿನಗಳ ಅಭಿಯಾನ, ಯಂತ್ರೋಪಾದಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, 25 ಪ್ರವರ್ಗದ ಕಾಮಗಾರಿ/ಚಟುವಟಿಕೆಗಳ ಕೇಂದ್ರೀಕೃತ ಅನುಷ್ಠಾನವನ್ನು ಒಳಗೊಂಡಿರುತ್ತದೆ, ಪ್ರತಿಯೊಂದೂ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್ ಮತ್ತು ಒಡಿಶಾ 6 ರಾಜ್ಯಗಳ 116 ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದಿರುಗಿದ ವಲಸೆ ಕಾರ್ಮಿಕರಿಗಾಗಿರುತ್ತದೆ. ಅಭಿಯಾನದ ಅವಧಿಯಲ್ಲಿ, ಲೋಕೋಪಯೋಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಇದಕ್ಕೆ 50,000 ಕೋಟಿ ರೂಪಾಯಿ ಸಂಪನ್ಮೂಲ ಒಳಗೊಂಡಿರುತ್ತದೆ.

ಅಭಿಯಾನ 12 ವಿವಿಧ ಸಚಿವಾಲಯಗಳು/ ಇಲಾಖೆಗಳ ನಡುವೆ ಒಮ್ಮತದ ಪ್ರಯತ್ನವಾಗಲಿದೆ; ಅವುಗಳೆಂದರೆ ಗ್ರಾಮೀಣಾಭಿವೃದ್ಧಿ, ಪಂಚಾಯತಿ ರಾಜ್, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ಗಣಿ, ಕುಡಿಯುವ ನೀರು ಮತ್ತು ನೈರ್ಮಲ್ಯ, ಪರಿಸರ, ರೈಲ್ವೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗಡಿ ರಸ್ತೆಗಳು, ದೂರಸಂಪರ್ಕ ಮತ್ತು ಕೃಷಿ, 25 ಸಾರ್ವಜನಿಕ ಮೂಲಸೌಕರ್ಯ ಕಾಮಗಾರಿಗಳು ಮತ್ತು ಜೀವನೋಪಾಯದ ಅವಕಾಶಗಳ ವರ್ಧನೆಗೆ ಸಂಬಂಧಿಸಿದ ಕಾಮಗಾರಿಗಳ ಅನುಷ್ಠಾನವನ್ನು ತ್ವರಿತಗೊಳಿಸುವುದಾಗಿದೆ. ಉಪಕ್ರಮದ ಪ್ರಮುಖ ಉದ್ದೇಶಗಳು:

  • ಮರಳಿರುವ ವಲಸಿಗರಿಗೆ ಮತ್ತು ಅದೇ ರೀತಿ ಬಾಧಿತ ಗ್ರಾಮೀಣ ಜನತೆಗೆ ಜೀವನೋಪಾಯ ಒದಗಿಸುವುದು.
  • ಗ್ರಾಮಗಳನ್ನು ಸಾರ್ವಜನಿಕ ಮೂಲಸೌಕರ್ಯಗಳಿಂದ ಪೂರ್ಣಗೊಳಿಸಿ ಮತ್ತು ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ಅಂದರೆ ರಸ್ತೆಗಳು, ವಸತಿ, ಅಂಗನವಾಡಿಗಳು, ಪಂಚಾಯತಿ ಭವನಗಳು, ವಿವಿಧ ಜೀವನೋಪಾಯ ಆಸ್ತಿಗಳು ಮತ್ತು ಸಮುದಾಯ ಸಂಕೀರ್ಣಗಳು ಇತ್ಯಾದಿ ನಿರ್ಮಿಸಲು.
  • 125 ವೈವಿಧ್ಯಮಯ ಕಾಮಗಾರಿಗಳ ಗೊಂಚಲು, ಪ್ರತಿ ವಲಸೆ ಕಾರ್ಮಿಕನಿಗೆ ಮುಂಬರುವ 125 ದಿನಗಳಲ್ಲಿ ತನ್ನ ಕೌಶಲ್ಯಕ್ಕೆ ಅನುಗುಣವಾಗಿ ಉದ್ಯೋಗಾವಕಾಶವನ್ನು ಪಡೆಯಲು ಸಾಧ್ಯವಾಗಿಸುತ್ತದೆ ಎಂಬುದನ್ನು ಖಾತ್ರಿ ಪಡಿಸುತ್ತದೆ. ಕಾರ್ಯಕ್ರಮವು ದೀರ್ಘಾವಧಿಯವರೆಗೆ ಜೀವನೋಪಾಯಗಳ ವಿಸ್ತರಣೆ ಮತ್ತು ಅಭಿವೃದ್ಧಿಗೆ ಅಣಿಗೊಳಿಸುತ್ತದೆ.

ಗ್ರಾಮೀಣಾಭಿವೃದ್ಧಿ ಸಚಿವಾಲಯ ಅಭಿಯಾನಕ್ಕೆ ನೋಡಲ್ ಸಚಿವಾಲಯವಾಗಿದ್ದು, ಅಭಿಯಾನವು ರಾಜ್ಯಸರ್ಕಾರಗಳ ಆಪ್ತ ಸಹಯೋಗದಲ್ಲಿ ಅನುಷ್ಠಾನಗೊಳ್ಳಲಿದೆ. ಜಂಟಿ ಕಾರ್ಯದರ್ಶಿ ಅಥವಾ ಮೇಲ್ಪಟ್ಟ ಶ್ರೇಣಿಯ ಕೇಂದ್ರ ನೋಡಲ್ ಅಧಿಕಾರಿಗಳನ್ನು ಗುರುತಿಸಲಾದ ಜಿಲ್ಲೆಗಳಲ್ಲಿ ವಿವಿಧ ಯೋಜನೆಗಳ ಸಕಾಲದ ಮತ್ತು ಸಮರ್ಥ ಅನುಷ್ಠಾನದ ಉಸ್ತುವಾರಿಗೆ ನೇಮಿಸಲಾಗುತ್ತದೆ.

ಜಿಕೆಆರ್.. ಕೈಗೊಳ್ಳಲಾಗುತ್ತಿರುವ ರಾಜ್ಯಗಳ ಪಟ್ಟಿ:

ಕ್ರ.ಸಂ

ರಾಜ್ಯಗಳ ಹೆಸರು

#ಜಿಲ್ಲೆಗಳು

ಆಶಯ ಜಿಲ್ಲೆಗಳು

1

ಬಿಹಾರ

32

12

2

ಉತ್ತರ ಪ್ರದೇಶ

31

5

3

ಮಧ್ಯಪ್ರದೇಶ

24

4

4

ರಾಜಾಸ್ಥಾನ

22

2

5

ಒಡಿಶಾ

4

1

6

ಜಾರ್ಖಂಡ್

3

3

ಒಟ್ಟು ಜಿಲ್ಲೆಗಳು

116

27

 

ಆದ್ಯತೆಯ ಮೇಲೆ ಕೈಗೊಳ್ಳಲಾಗುವ 25 ಕಾಮಗಾರಿಗಳು ಮತ್ತು ಚಟುವಟಿಕೆಗಳ ಪಟ್ಟಿಯನ್ನು ಕೆಳಕಂಡ ಕೋಷ್ಟಕದಲ್ಲಿ ನೀಡಲಾಗಿದೆ:

 

ಕ್ರ.ಸಂ.

ಕಾಮಗಾರಿ/ ಚಟುವಟಿಕೆ

ಕ್ರ.ಸಂ

ಕಾಮಗಾರಿ/ ಚಟುವಟಿಕೆ

1

ಸಮುದಾಯ ನೈರ್ಮಲ್ಯ ಕೇಂದ್ರಗಳ ನಿರ್ಮಾಣ (ಸಿಎಸ್.ಸಿ.)

14

ಜಾನುವಾರು ಕೊಟ್ಟಿಗೆಗಳ ನಿರ್ಮಾಣ

2

ಗ್ರಾಮ ಪಂಚಾಯ್ತಿ ಭವನ ನಿರ್ಮಾಣ

15

ಕೋಳಿ ಸಾಕಣೆ ಶೆಡ್ ನಿರ್ಮಾಣ

3

14ನೇ ಹಣಕಾಸು ಆಯೋಗದ ನಿಧಿ ಅಡಿಯಲ್ಲಿನ ಕಾಮಗಾರಿ.

16

ಮೇಕೆಗಾಗಿ ಶೆಡ್ ನಿರ್ಮಾಣ

4

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ

17

ಎರೆಹುಳು ಗೊಬ್ಬರ ವಿನ್ಯಾಸಗಳ ನಿರ್ಮಾಣ

5

ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು ಕಾಮಗಾರಿ

18

ರೈಲ್ವೆ

6

ಬಾವಿಗಳ ನಿರ್ಮಾಣ

19

ರುರ್ಬನ್

7

ತೋಟದ ಕಾಮಗಾರಿ

20

ಪಿಎಂ ಕುಸುಮ್

8

ತೋಟಗಾರಿಕೆ

21

ಭಾರತ್ ನೆಟ್

9

ಅಂಗನವಾಡಿ ಕೇಂದ್ರಗಳ ನಿರ್ಮಾಣ

22

ಕಾಂಪಾ ತೋಟಗಾರಿಕೆ

10

ಗ್ರಾಮೀಣ ವಸತಿ ಕಾಮಗಾರಿಗಳು

23

ಪ್ರಧಾನಮಂತ್ರಿ ಊರ್ಜಾ ಗಂಗಾ ಯೋಜನೆ

11

ಗ್ರಾಮೀಣ ಸಂಪರ್ಕ ಕಾಮಗಾರಿ

24

ಜೀವನೋಪಾಯಕ್ಕೆ ಕೆವಿಕೆ ತರಬೇತಿ

12

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಕಾಮಗಾರಿ

25

ಜಿಲ್ಲಾ ಖನಿಜ ಪ್ರತಿಷ್ಠಾನ ನ್ಯಾಸ (ಡಿಎಂಎಫ್.ಟಿ) ಕಾಮಗಾರಿ

13

ಕೃಷಿ ಹೊಂಡಗಳ ನಿರ್ಮಾಣ

 

 

 

***



(Release ID: 1632977) Visitor Counter : 348