ಹಣಕಾಸು ಸಚಿವಾಲಯ

ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ವಾರಾಣಸಿಯ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

Posted On: 20 JUN 2020 2:17PM by PIB Bengaluru

ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ವಾರಾಣಸಿಯ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

 

ಗೌರವಾನ್ವಿತ ಪ್ರಧಾನಮಂತ್ರಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಾರಾಣಸಿಯಲ್ಲಿ ಕೈಗೊಂಡಿರುವ ನಾನಾ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ದ್ರೋಣ್ ಕ್ಯಾಮರಾ ಮೂಲಕ ಸೆರೆಸಹಿಡಿದಿದ್ದ ಕಾಶಿ ವಿಶ್ವನಾಥ ಮಂದಿರ ಪ್ರಾಂಗಣದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ನೋಟವನ್ನು ಪ್ರಮುಖವಾಗಿ ಪ್ರದರ್ಶಿಸಲಾಯಿತು. ಕೋವಿಡ್ ಪರಿಣಾಮಕಾರಿ ನಿಯಂತ್ರಣಕ್ಕೆ ಕೈಗೊಂಡಿರುವ ಪ್ರಯತ್ನಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ವಾರಾಣಸಿಯ ಜನಪ್ರತಿನಿಧಿಗಳೂ ಸಹ ಭಾಗವಹಿಸಿದ್ದರು, ಅವರೆಂದರೆ ಶ್ರೀ ನೀಲಕಂಠ ತಿವಾರಿ, ಗೌರವಾನಿತ್ವ ರಾಜ್ಯ ಸಚಿವರು(ಸ್ವತಂತ್ರ ಹೊಣೆಗಾರಿಕೆ), ಜಿಒಯುಪಿ ಮತ್ತು ಶಾಸಕರು, ವಾರಾಣಸಿ (ದಕ್ಷಿಣ), ಶ್ರೀ ರವೀಂದ್ರ ಜೈಸ್ವಾಲ್ , ಗೌರವಾನಿತ್ವ ರಾಜ್ಯ ಸಚಿವರು(ಸ್ವತಂತ್ರ ಹೊಣೆಗಾರಿಕೆ), ಜಿಒಯುಪಿ ಮತ್ತು ಶಾಸಕರು, ವಾರಾಣಸಿ (ಉತ್ತರ), ಶ್ರೀ ಸುರೇಂದ್ರ ನಾರಾಯಣ್ ಸಿಂಗ್, ಶಾಸಕರು, ರೋಹ್ ನಿಯಾ, ಶ್ರೀ ಸೌರಭ್ ಶ್ರೀವಾಸ್ತವ, ಶಾಸಕರು, ಶ್ರೀ ಲಕ್ಷ್ಮಣ್ ಆಚಾರ್ಯ, ವಿಧಾನಪರಿಷತ್ ಸದಸ್ಯರು, ಅಧಿಕಾರಿಗಳಾದ ಶ್ರೀ ದೀಪಕ್ ಅಗರವಾಲ್, ಆಯುಕ್ತರು, ವಾರಾಣಸಿ ವಿಭಾಗ, ಶ್ರೀ ಕೌಶಲ್ ರಾಜ್ ಶರ್ಮ, ಜಿಲ್ಲಾ ಮ್ಯಾಜಿಸ್ಟ್ರೇಟ್, ವಾರಾಣಸಿ, ಶ್ರೀ ಗೌರಂಗ್ ರಥಿ, ಮುನಿಸಿಪಲ್ ಆಯುಕ್ತರು, ವಾರಣಾಸಿ ಅವರುಗಳು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.

 • ಕಾಶಿ ವಿಶ್ವನಾಥ ಧಾಮ ಯೋಜನೆಯ ಕಾಮಗಾರಿಯ ಪ್ರಗತಿ ಪರಾಮರ್ಶಿಸಿದ ಪ್ರಧಾನಮಂತ್ರಿ ಅವರು, ಕಾಶಿ ವಿಶ್ವನಾಥ ಪರಿಸರ ಸುತ್ತಮುತ್ತಲಿನ ಅಭಿವೃದ್ಧಿ ವೇಳೆ, ಉತ್ಖನನದ ವೇಳೆ ಸಿಗುವ ಎಲ್ಲ ಪುರಾತನ ದೇವಾಲಯಗಳನ್ನು ಕಾಪಾಡಬೇಕು ಮತ್ತು ಸಂರಕ್ಷಿಸಬೇಕು ಎಂದು ನಿರ್ದೇಶನ ನೀಡಿದರು. ದೇವಾಲಯಗಳ ಐತಿಹಾಸಿಕ ಮತ್ತು ವಾಸ್ತು ಶಿಲ್ಪ ವೈಭವವನ್ನು ಉಳಿಸಲು ತಜ್ಞರ ನೆರವನ್ನು ಪಡೆದುಕೊಳ್ಳಬೇಕು. ದೇವಾಲಯಗಳು ಮತ್ತು ಅವುಗಳ ಪ್ರಾಮುಖ್ಯತೆಯ ಬಗ್ಗೆ ಕಾರ್ಬನ್ ಡೇಟಿಂಗ್ ನಡೆಸಬೇಕು ಮೂಲಕ ಕಾಶಿ ವಿಶ್ವನಾಥ್ ದೇವಾಲಯಕ್ಕೆ ಭೇಟಿ ನೀಡುವ ಎಲ್ಲ ಪ್ರವಾಸಿಗರು ಮತ್ತು ಭಕ್ತಾಧಿಗಳಿಗೆ ಬಗ್ಗೆ ತಿಳಿಸಿಕೊಡಬೇಕು. ಪ್ರಾಂಗಣಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ನೆರವಾಗಲು ಮಾರ್ಗದ ನಕ್ಷೆ ಒಳಗೊಂಡ ಸೂಕ್ತ ಪ್ರವಾಸಿ ಗೈಡ್ ಅನ್ನು ಕಾಶಿ ವಿಶ್ವನಾಥ್ ಟ್ರಸ್ಟ್ ಸಿದ್ಧಪಡಿಸಬೇಕು.
 • ಅಲ್ಲದೆ, ಪ್ರಧಾನಮಂತ್ರಿ ಅವರು ವಾರಾಣಸಿಯಲ್ಲಿ ಕೈಗೊಂಡಿರುವ ಎಲ್ಲ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದರು. ಸದ್ಯ ವಾರಾಣಸಿಯಲ್ಲಿ ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯಗಳಾದ ಆಸ್ಪತ್ರೆ ಕಟ್ಟಡಗಳು, ರಾಷ್ಟ್ರೀಯ ಜಲಮಾರ್ಗಗಳು, ವರ್ತುಲ ರಸ್ತೆಗಳು, ಬೈ ಪಾಸ್, ಇಂಡೋ-ಜಪಾನ್ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ ರುದ್ರಾಕ್ಷನಿರ್ಮಾಣ ಇತ್ಯಾದಿ ಸೇರಿ ಸುಮಾರು 8ಸಾವಿರ ಕೋಟಿ ರೂಪಾಯಿಗಳ ಮೊತ್ತದ ನೂರಕ್ಕೂ ಅಧಿಕ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಲಾಯಿತು.
 • ಅಭಿವೃದ್ಧಿ ಯೋಜನೆಗಳನ್ನು ನಿಗದಿತ ಗಡುವಿನಲ್ಲಿ ಪೂರ್ಣಗೊಳಿಸಲು ಕಾಮಗಾರಿಗಳನ್ನು ಚುರುಕುಗೊಳಿಸಬೇಕು ಮತ್ತು ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟವನ್ನೂ ಸಹ ಕಾಯ್ದುಕೊಳ್ಳಬೇಕು ಎಂದು ಪ್ರಧಾನಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮುಂದಿನ ತಲೆಮಾರಿನ ಮೂಲಸೌಕರ್ಯ ವೃದ್ಧಿಗೆ ನವೀಕರಿಸಬಹುದಾದ ಇಂಧನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಅವರು ನಿರ್ದೇಶನ ನೀಡಿದರು. ಇಡೀ ವಾರಾಣಾಸಿ ಜಿಲ್ಲೆಯಲ್ಲಿ ಬೀದಿ ದೀಪಗಳನ್ನು ಮತ್ತು ಮನೆಗಳಲ್ಲಿನ ದೀಪಗಳನ್ನು ಎಲ್ ಇಡಿ ಬಲ್ಬ್ ಗಳನ್ನು ಬದಲಾಯಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕೆಂದರು.
 • ಪ್ರವಾಸೋದ್ಯಮ ಉತ್ತೇಜನಕ್ಕೆ ಹಾಗೂ ಕಾಶಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಳಕ್ಕೆ , ಕ್ರೂಸ್ ಟೂರಿಸಂ, ಬೆಳಕು ಮತ್ತು ಧ್ವನಿ ಪ್ರದರ್ಶನ (ಲೈಟ್ ಅಂಡ್ ಸೌಂಡ್ ಷೋ), ಖಿದ್ ಕಿಯಾ ಮತ್ತು ದಶಾಶ್ವಮೇಧ ಘಾಟ್ ಗಳ ಪುನರುಜ್ಜೀವನ, ಗಂಗಾ ಅರತಿಯನ್ನು ಆಡಿಯೋ-ವಿಡಿಯೋ ಪರದೆಗಳ ಮೂಲಕ ಪ್ರದರ್ಶಿಸುವ ಕೆಲಸವನ್ನು ತ್ವರಿತಗೊಳಿಸಬೇಕು ಎಂದು ನಿರ್ದೇಶನ ನೀಡಿದರು. ವಿಶ್ವ ಪರಂಪರೆ ಒಂದು ಪ್ರಮುಖ ತಾಣ ಕಾಶಿ ಎಂಬುದನ್ನು ಉತ್ತೇಜಿಸಲು ಹಾಗೂ ಜನಪ್ರಿಯಗೊಳಿಸಲು ಎಲ್ಲ ಪ್ರಯತ್ನಗಳು ನಡೆಸಬೇಕು. ವಾರಪೂರ್ತಿ ಜಪಾನ್, ಥೈಲ್ಯಾಂಡ್ ಇತ್ಯಾದಿ ಉತ್ಸವಗಳನ್ನು, ಎಲ್ಲಿ ಬೌದ್ಧ ಧರ್ಮ ಆಚರಣೆ ಚಾಲ್ತಿ ಇರುವ ಕಡೆ ಅವರ ಕಲೆ ಮತ್ತು ಸಂಸ್ಕೃತಿಯ ಪರಂಪರೆಯನ್ನು ಉತ್ತೇಜಿಸಲು ಅಂತಹ ಹಬ್ಬಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದರು.
 • ಕಾಶಿಯ ಪರಂಪರೆಯನ್ನು ಪ್ರತಿಬಿಂಬಿಸುವ ಸೂಕ್ತ ರಸ್ತೆಯನ್ನು ಆಯ್ಕೆ ಮಾಡಿಕೊಂಡು, ಅದನ್ನು ಸ್ಥಳೀಯ ಜನರ ಸಕ್ರೀಯ ಪಾಲುದಾರಿಕೆಯೊಂದಿಗೆ ಮಾದರಿ ರಸ್ತೆಯನ್ನಾಗಿ ಗೌರವ ಪಥವನ್ನಾಗಿ ಅಭಿವೃದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.
 • ಜನಪ್ರಿಯ ಪ್ರವಾಸಿತಾಣವಾದ ಕಾಶಿ, ನೈರ್ಮಲ್ಯ ಮತ್ತು ಶುಚಿತ್ವ ಮಾನದಂಡಗಳಲ್ಲಿ ಅತ್ಯಂತ ಶ್ರೇಷ್ಠವಾಗಿರಬೇಕು ಎಂದು ಅವರು ನಿರ್ದೇಶನ ನೀಡಿದರು. ಯಾಂತ್ರೀಕೃತ ಕಸ ಗುಡಿಸುವುದು ಮತ್ತು ಸ್ವಚ್ಛತೆ ಕೈಗೊಳ್ಳುವುದು, ಶೇ.100ಕ್ಕೆ ನೂರರಷ್ಟು ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹ ಮಾಡುವುದು ಮತ್ತು ಪರಿಸರವನ್ನು ಅತ್ಯಂತ ಸಕಾರಾತ್ಮಕ ಮತ್ತು ಆರೋಗ್ಯಕರಗೊಳಿಸುವುದು ಸೇರಿದಂತೆ ಬಯಲು ಬಹಿರ್ದೆಸೆ ಮುಕ್ತ ಪ್ಲಸ್ (ಒಡಿಎಫ್ ಪ್ಲಸ್ ) ನಿಗದಿತ ಮಟ್ಟವನ್ನು ತಲುಪಲು ಎಲ್ಲ ರೀತಿಯ ಪ್ರಯತ್ನಗಳನ್ನು ಕೈಗೊಳ್ಳಬೇಕೆಂದರು.
 • ವಾರಣಾಸಿಯಲ್ಲಿ ವಿಶ್ವದರ್ಜೆಯ ಸಂವಹನ ಮತ್ತು ಸಂಪರ್ಕ ಮೂಲಸೌಕರ್ಯ ಅಭಿವೃದ್ಧಿ ಕುರಿತಂತೆಯೂ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು. ವಾರಾಣಾಸಿ ಮತ್ತು ಹಲ್ದಿಯಾ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಜಲಮಾರ್ಗದ ತಾಣವನ್ನಾಗಿ ವಾರಾಣಸಿಯನ್ನು ಅಭಿವೃದ್ಧಿಪಡಿಸಬೇಕೆಂದು ಪ್ರಧಾನಮಂತ್ರಿ ನಿರ್ದೇಶನ ನೀಡಿದರು. ಸರಕು ಸಾಗಾಣೆ ಮತ್ತು ಪ್ರಯಾಣಿಕರ ಸಂಚಾರ (ಪ್ರಮುಖ ಬಂದರು ನಗರಗಳಲ್ಲಿರುವಂತೆ)ಕ್ಕೆ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ಯೋಜನೆಯನ್ನು ರೂಪಿಸಬೇಕೆಂದರು. ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಆಧುನೀಕರಣ ಮತ್ತು ವಿಸ್ತರಣೆ ಕಾಮಗಾರಿಯನ್ನು ಆದ್ಯತೆ ಮೇಲೆ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದ ಅವರು, ಮೂಲಕ ಕಾಶಿಯನ್ನು ಅತ್ಯಾಧುನಿಕ ರೈಲು, ರಸ್ತೆ, ಜಲ ಮತ್ತು ವಾಯು ಸಂಪರ್ಕವಿರುವ ಮುಂಚೂಣಿ ನಗರವನ್ನಾಗಿ ಮಾಡಬೇಕು ಎಂದರು.
 • ಆತ್ಮ ನಿರ್ಭರ ಭಾರತ ಘೋಷಣೆಗಳ ಪ್ರಗತಿಯನ್ನು ಪರಾಮರ್ಶಿಸಿದ ಪ್ರಧಾನಮಂತ್ರಿ ಅವರು, ಯೋಜನೆಯ ಪ್ರಯೋಜನ ಎಲ್ಲ ಪ್ರಜೆಗಳಿಗೂ ತ್ವರಿತವಾಗಿ ತಲುಪಬೇಕು ಎಂದರು. ಬೀದಿ ಬದಿ ವ್ಯಾಪಾರಿಗಳಿಗಾಗಿ ರೂಪಿಸಿರುವ ಪಿಎಂ ಸ್ವಾನಿಧಿ ಯೋಜನೆಯ ಪ್ರಗತಿಯನ್ನು ಅತ್ಯಂತ ನಿಕಟ ರೀತಿಯಲ್ಲಿ ನಿಗಾವಹಿಸಲಾಗುತ್ತಿದೆ ಎಂದರು. ಎಲ್ಲ ಬೀದಿ ಬದಿ ವ್ಯಾಪಾರಿಗಳು ಸೂಕ್ತ ತಂತ್ರಜ್ಞಾನ ಮತ್ತು ಮೂಲಸೌಕರ್ಯದೊಂದಿಗೆ ಸಜ್ಜಾಗಬೇಕು, ಅವರು ನಗದುರಹಿತ ವಹಿವಾಟು ನಡೆಸಲು ಸಾಧ್ಯವಾಗುವಂತೆ ಸಹಾಯಬೇಕು. ವ್ಯಾಪಾರಿಗಳ ಬ್ಯಾಂಕ್ ಖಾತೆಗಳನ್ನು ತೆರೆಸಬೇಕು ಮತ್ತು ಅವರ ವಹಿವಾಟು ಮತ್ತು ಸಾಲದ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಲಿಂಕ್ ಮಾಡಬೇಕು, ಆಗ ಅವರು ಪಿಎಂ ಸ್ವಾನಿಧಿ ಯೋಜನೆಯಲ್ಲಿ ಖಾತ್ರಿ ರಹಿತ ಸಾಲದ ಪ್ರಯೋಜನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬಹುದಾಗಿದೆ.
 • ಸರಕಾರದ ಆದ್ಯತೆಗಳಲ್ಲಿ ರೈತರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಬಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, ರೈತರ ಆದಾಯವೃದ್ಧಿಗೆ ಎಲ್ಲ ರೀತಿಯ ಗಂಭೀರ ಪ್ರಯತ್ನಗಳು ನಡೆಯುತ್ತಿವೆ ಎಂದರು. ಜೇನು ಸಾಕಾಣಿಕೆಗೆ ಉತ್ತೇಜನ ನೀಡಬೇಕೆಂದು ನಿರ್ದೇಶನ ನೀಡಿದ ಅವರು, ಜೇನಿನ ಮೇಣದಿಂದಾಗಿಯೂ ರೈತರ ಆದಾಯವೃದ್ಧಯಾಗುತ್ತದೆ ಎಂದರು. ವಾರಾಣಸಿಯಲ್ಲಿ ಆದ್ಯತೆ ಮೇಲೆ ಪ್ಯಾಕೇಜಿಂಗ್ ಘಟಕವನ್ನು ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಇದರಿಂದ ರೈತರು ತಮ್ಮ ಉತ್ಪನ್ನಗಳಿಗೆ ವಾರಾಣಸಿಯಲ್ಲೇ ಉತ್ತಮ ಬೆಲೆ ಪಡೆಯಲಿದ್ದಾರೆ, ಆವರ ಉತ್ಪನ್ನಗಳ ರಫ್ತಿಗೂ ಸಹಕಾರಿಯಾಗಲಿದೆ ಎಂದರು. ಅಪೆಡಾ (ವಾಣಿಜ್ಯ ಸಚಿವಾಲಯ) ಸಹಭಾಗಿತ್ವದಲ್ಲಿ ತರಕಾರಿ ಮತ್ತು ಮಾವಿನ ಹಣ್ಣಿನ ರಫ್ತಿನ ಉತ್ತೇಜನಕ್ಕೆ ಆಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
 • ತ್ಯಾಜ್ಯದಿಂದ ಇಂಧನ ಅಥವಾ ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ಸೇರಿದಂತೆ ಉತ್ಪತ್ತಿಯಾದ ತ್ಯಾಜ್ಯದಿಂದ ಸಂಪತ್ತು ಸೃಷ್ಟಿಗೆ ಹೆಚ್ಚಿನ ಒತ್ತು ನೀಡಬೇಕೆಂದು ನಿರ್ದೇಶನ ನೀಡಿದ ಅವರು,ಅಂತಹ ಗೊಬ್ಬರವನ್ನು ರೈತರು ಜನಪ್ರಿಯಗೊಳಿಸಬೇಕು ಮತ್ತು ಉತ್ತೇಜನ ನೀಡಬೇಕೆಂದರು. ನಿಟ್ಟಿನಲ್ಲಿ, ಶೂನ್ಯ ಬಜೆಟ್ ಕೃಷಿಯನ್ನು ಉತ್ತೇಜನ ನೀಡಬೇಕು ಮತ್ತು ರೈತರಿಗೆ ಅದರಿಂದ ಇರುವ ಅಗಾಧ ಪ್ರಯೋಜನಗಳು ಮತ್ತು ಅನುಕೂಲಗಳ ಬಗ್ಗೆ ತಿಳಿಸಬೇಕು ಎಂದರು
 • ಪ್ರಸಕ್ತ ಕೋವಿಡ್ ಸಾಂಕ್ರಾಮಿಕ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ವಿವರವಾಗಿ ಪರಾಮರ್ಶಿಸಲಾಯಿತು. ಪ್ರಧಾನಮಂತ್ರಿ ಅವರು, ಸೋಂಕು ಪರೀಕ್ಷೆ, ಸಂಪರ್ಕ ಪತ್ತೆ ಮತ್ತು ವಿಧಾನದ ಮೂಲಕ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಯನ್ನು ಖಾತ್ರಿಪಡಿಸಲು ಆರೋಗ್ಯಸೇತು ಆಪ್ ಪರಿಣಾಮಕಾರಿಯಾಗಿ ಮತ್ತು ವ್ಯಾಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು. ಜಿಲ್ಲಾಡಳಿತ ಆಹಾರ, ವಸತಿ ಮತ್ತು ಕ್ವಾರಂಟೈನ್ ಸೌಕರ್ಯಗಳಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
 • ವಾಪಸ್ ಬಂದಿರುವ ವಲಸೆ ಕಾರ್ಮಿಕರ ಸೂಕ್ತ ಕೌಶಲ್ಯವನ್ನು ಗುರುತಿಸುವ ಕೆಲಸ ಆದ್ಯತೆಯ ಮೇಲೆ ಆಗಬೇಕು ಎಂದು ನಿರ್ದೇಶನ ನೀಡಿದ ಅವರು, ಅವರ ಕೌಶಲ್ಯ ಆಧರಿಸಿ ಲಾಭದಾಯಕ ಉದ್ಯೋಗ ಒದಗಿಸಿ ಕೊಡಬೇಕು ಎಂದರು. ಸಂಕಷ್ಟದ ಸಮಯದಲ್ಲಿ ಕೈಗೊಂಡ ಪ್ರಧಾನಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆ ಮತ್ತು ರಾಜ್ಯ ಸರ್ಕಾರದ ಕೋವಿಡ್ ಪರಿಹಾರ ಕ್ರಮಗಳ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಪ್ರಧಾನಿ ಅವರು ಪ್ರತಿಕ್ರಿಯೆಯನ್ನು ಪಡೆದುಕೊಂಡರು.
 • ಪ್ರಧಾನಮಂತ್ರಿ ಅವರು, ಇದೇ ವೇಳೆ ತಮ್ಮ ದೂರದೃಷ್ಟಿಯನ್ನು ಪ್ರತಿಬಿಂಬಿಸುವ ನೀತಿ ಆಯೋಗ ರೂಪಿಸಿರುವ ಗ್ರಾಮ ಪಂಚಾಯತಿ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯನ್ನೂ ಸಹ ನಡೆಸಿದರು. ವಾರಾಣಸಿ ಜಿಲ್ಲೆಯನ್ನು 9 ಪ್ರಮುಖ ವಲಯಗಳಲ್ಲಿ ಅಂದರೆ ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್, ನೈರ್ಮಲೀಕರಣ, ಆರೋಗ್ಯ ಮತ್ತು ಪೌಷ್ಠಿಕಾಂಶ, ಶಿಕ್ಷಣ, ಸಾಮಾಜಿಕ ಕಲ್ಯಾಣ, ಕೃಷಿ ಮತ್ತು ಅದರ ಸಂಬಂಧಿ ಚಟುವಟಿಕೆಗಳು ಹಾಗೂ ಜೀವನೋಪಾಯ ಮತ್ತು ಕೌಶಲ್ಯ ವಿಭಾಗಗಳಲ್ಲಿ ಶ್ರೇಷ್ಠವನ್ನಾಗಿ ಮಾಡುವ ಗುರಿ ಹೊಂದಲಾಗಿದೆ.
 • ಅಂಗನವಾಡಿ ಕೇಂದ್ರಗಳಲ್ಲಿ ಸಾಧ್ಯವಾದಷ್ಟು ಪೌಷ್ಠಿಕಾಂಶಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದ ಅವರು, ಕೆಲಸದಲ್ಲಿ ಹೆಚ್ಚಾಗಿ ಮಹಿಳಾ ಸ್ವಸಹಾಯ ಗುಂಪುಗಳನ್ನು ಬಳಸಿಕೊಂಡು, ಮಕ್ಕಳಿಗೆ ಆಹಾರವನ್ನು ನೀಡಿ, ಅವರ ಪೌಷ್ಠಿಕಾಂಶವನ್ನು ವೃದ್ಧಿಗೊಳಿಸಬೇಕು ಎಂದರು. ಅಂಗನವಾಡಿ ಕೇಂದ್ರಗಳನ್ನು ನಾನಾ ಸಂಸ್ಥೆಗಳು ಮತ್ತು ಸಮುದಾಯಗಳ ಸದಸ್ಯರು ದತ್ತು ತೆಗೆದುಕೊಳ್ಳುತ್ತಿರುವ ಕುರಿತು ಪ್ರಧಾನಿ ಅವರು, ಅದರಲ್ಲಿ ಆರೋಗ್ಯಕರ ಮಗುವಿನ ಸ್ಪರ್ಧೆಗಳು ಆಯೋಜಿಸಬೇಕು. ಎದೆಹಾಲನ್ನು ಬಿಡುವ ಮಕ್ಕಳಿಗಾಗಿ ವೈವಿಧ್ಯಮಯ ಆಹಾರವನ್ನು ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದರು.
 • ವಾರಾಣಸಿಯ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡಲು ಆದ್ಯತೆ ನೀಡಬೇಕು ಎಂದ ಪ್ರಧಾನಮಂತ್ರಿ ಅವರು, ವಾರಾಣಸಿಯ ಜನರಿಗೆ ಗುಣಮಟ್ಟದ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಬೇಕು ಹಾಗೂ ಮೂಲಕ ಅವರ ಜೀವನಮಟ್ಟ ಸುಧಾರಿಸಬೇಕು ಎಂದು ಹೇಳಿದರು.

***(Release ID: 1632937) Visitor Counter : 110