ಪ್ರಧಾನ ಮಂತ್ರಿಯವರ ಕಛೇರಿ

ಕೇದಾರನಾಥ್ ಪುನರ್ನಿರ್ಮಾಣ ಯೋಜನೆಯ ಪರಾಮರ್ಶೆ ನಡೆಸಿದ ಪ್ರಧಾನಿ

Posted On: 10 JUN 2020 1:47PM by PIB Bengaluru

ಕೇದಾರನಾಥ್ ಪುನರ್ನಿರ್ಮಾಣ ಯೋಜನೆಯ ಪರಾಮರ್ಶೆ ನಡೆಸಿದ ಪ್ರಧಾನಿ

 

ಪ್ರಧಾನಮಂತ್ರಿಯವರಿಂದು ಉತ್ತರಾಖಂಡ ರಾಜ್ಯ ಸರ್ಕಾರದೊಂದಿಗೆ ಕೇದಾರನಾಥ ಧಾಮ್ ಅಭಿವೃದ್ಧಿ ಮತ್ತು ಪುನರ್ನಿರ್ಮಾಣ ಯೋಜನೆಯ ಕುರಿತಂತೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಾಮರ್ಶೆ ನಡೆಸಿದರು.

ದೇವಾಲಯದ ಪುನರ್ನಿರ್ಮಾಣದ ಬಗ್ಗೆ ತಮ್ಮ ದೃಷ್ಟಿಕೋನವನ್ನು ತಿಳಿಸಿದ ಪ್ರಧಾನಿ, ಕೇದಾರನಾಥ ಮತ್ತು ಬದ್ರಿನಾಥ್ನಂತಹ ಪವಿತ್ರ ತಾಣಗಳಿಗೆ ಸಮಯದ ಪರೀಕ್ಷೆಗೆ ಒಳಪಡುವಂಥ ಮತ್ತು ಹೆಚ್ಚು ಪರಿಸರ ಸ್ನೇಹಿಯಾದ ಸ್ವರೂಪ ಹಾಗೂ ಮಾದರಿಯಲ್ಲಿ ಮತ್ತು ಪ್ರಕೃತಿ ಮತ್ತು ಅದರ ಸುತ್ತಲ ಸಾಮರಸ್ಯದೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ರಾಜ್ಯ ಸರ್ಕಾರವು ರೂಪಿಸಬೇಕು ಎಂದರು.

ಪ್ರಸ್ತುತ ಪರಿಸ್ಥಿತಿಯನ್ನು ಮತ್ತು ಪವಿತ್ರ ಕ್ಷೇತ್ರಗಳಿಗೆ ಪ್ರವಾಸಿಗರು ಮತ್ತು ಯಾತ್ರಿಕರ ವಿಷಯದಲ್ಲಿ ತುಲನಾತ್ಮಕವಾಗಿ ಮೃದು ಒತ್ತಡವನ್ನು ಗಮನದಲ್ಲಿಟ್ಟುಕೊಂಡು, ಕಾರ್ಮಿಕರ ಪಡೆಯನ್ನು ಸರಿಯಾಗಿ ವಿತರಿಸಿ ನಿಯೋಜಿಸುವ ಮೂಲಕ ಮತ್ತು ವ್ಯಕ್ತಿಗತ ಅಂತರದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಸ್ತುತ ನಿರ್ಮಾಣ ಋತುವನ್ನು ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದರು. ಮುಂಬರುವ ವರ್ಷಗಳಲ್ಲಿ ಸುಸ್ಥಿರ ಪ್ರವಾಸೋದ್ಯಮ ಹರಿವು ಉತ್ತಮ ಪಡಿಸಲು ಸೌಲಭ್ಯ ಮತ್ತು ಮೂಲಸೌಕರ್ಯ ಸೃಷ್ಟಿ ನೆರವಾಗಲಿದೆ.

ನಿರ್ದಿಷ್ಟ ಸಲಹೆಗಳ ಭಾಗವಾಗಿ, ರಾಂಬನ್ನಿಂದ ಕೇದಾರನಾಥದವರೆಗಿನ ಮಾರ್ಗದಲ್ಲಿನ ಇತರ ಪಾರಂಪರಿಕ ಮತ್ತು ಧಾರ್ಮಿಕ ತಾಣಗಳ ಮತ್ತಷ್ಟು ಅಭಿವೃದ್ಧಿಗೆ ಪ್ರಧಾನಿ ನಿರ್ದೇಶನಗಳನ್ನು ನೀಡಿದರು. ಕಾಮಗಾರಿ ಕೇದಾರನಾಥದ ಮುಖ್ಯ ದೇವಾಲಯದ ಪುನರಾಭಿವೃದ್ಧಿಗೆ ಹೆಚ್ಚುವರಿಯಾದ ಕಾಮಕಾರಿಯಾಗಿರುತ್ತದೆ.

ವಾಸುಕಿ ತಾಲ್ ಗೆ ತೆರಳುವ ಪ್ರವಾಸಿಗರನ್ನು ಸ್ವಾಗತಿಸಲು ಬ್ರಹ್ಮಕಮಲ್ ವಾಟಿಕ (ಉದ್ಯಾನ) ಮತ್ತು ವಸ್ತುಸಂಗ್ರಹಾಲಯಗಳು, ಹಳೆಯ ಪಟ್ಟಣದ ವಸತಿ ನಿಲಯಗಳು ಮತ್ತು ಐತಿಹಾಸಿಕ ಮಹತ್ವದ ಆಸ್ತಿಗಳನ್ನು ಅವುಗಳ ಮೂಲ ವಾಸ್ತು ವಿನ್ಯಾಸವನ್ನು ಗಮನದಲ್ಲಿಟ್ಟುಕೊಂಡು ಪುನರ್ ಅಭಿವೃದ್ಧಿ ಹಾಗೂ ದೇವಾಲಯದಿಂದ ಸೂಕ್ತ ದೂರದಲ್ಲಿ ಇತರ ಸೌಲಭ್ಯಗಳಾದ ಪರಿಸರ ಸ್ನೇಹಿ ನಿಲುಗಡೆ ಪ್ರದೇಶ ಸಂಬಂಧಿಸಿದ ವಿಚಾರಗಳ ಕುರಿತೂ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.

ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ತ್ರಿವೇಂದ್ರ ಸಿಂಗ್ ರಾವತ್ ಮತ್ತು ಇತರ ಹಿರಿಯ ಅಧಿಕಾರಿಗಳು ಚರ್ಚೆಯಲ್ಲಿ ಭಾಗಿಯಾಗಿದ್ದರು.

***



(Release ID: 1630665) Visitor Counter : 223