ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್-19 ಕೇಂದ್ರೀಕೃತ ಆರೋಗ್ಯ ಮತ್ತು ಅಪಾಯ ಸಂವಹನ ಕಾರ್ಯಕ್ರಮಗಳ ಕುರಿತು ಮಾಹಿತಿಯ ಕರಪತ್ರ

Posted On: 08 JUN 2020 1:31PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ

ಕೋವಿಡ್-19 ಕೇಂದ್ರೀಕೃತ ಆರೋಗ್ಯ ಮತ್ತು ಅಪಾಯ ಸಂವಹನ ಕಾರ್ಯಕ್ರಮಗಳ ಕುರಿತು ಮಾಹಿತಿಯ ಕರಪತ್ರ ಬಿಡುಗಡೆ

ಇದು ತಳಮಟ್ಟದಲ್ಲಿ ಅಧಿಕೃತ ಮಾಹಿತಿಯನ್ನು ಆಕರ್ಷಕ, ಆಸಕ್ತಿದಾಯಕ ಮತ್ತು ಸಂವಾದಾತ್ಮಕವಾಗಿ ಪೂರೈಸುತ್ತದೆ

ವಿಶೇಷವಾಗಿ ಗುರುತಿಸಲಾದ ವಲಯಗಳನ್ನು ಅವಲಂಬಿಸಿ ವಿಶೇಷ ಸಂವಹನ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ

ಆರೋಗ್ಯ ಮತ್ತು ಅಪಾಯ ವಿಷಯದಲ್ಲಿ ಸಂವಹನ ಕುರಿತು ಇತ್ತೀಚೆಗೆ ಪ್ರಾರಂಭಿಸಲಾದ ಕಾರ್ಯಕ್ರಮಕ್ಕಾಗಿ "ಕೋವಿಡ್"‌ ಅನ್ನು ಕೇಂದ್ರೀಕರಿಸಿ ವಿಜ್ಞಾನ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ವರ್ಷ (ಯಶ್)  -19 ಎಂಬ ಮಾಹಿತಿ ಕರಪತ್ರವನ್ನು ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ & ಟೆಕ್ನಾಲಜಿ ಕಮ್ಯುನಿಕೇಷನ್ (ಎನ್.ಸಿ.ಎಸ್.ಟಿ.ಸಿ), ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ.ಎಸ್.ಟಿ) ಬಿಡುಗಡೆ ಮಾಡಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ವಿಶೇಷವಾಗಿ ಉಂಟಾಗುವ ಅಪಾಯಗಳು, ಬಿಕ್ಕಟ್ಟುಗಳು, ವಿಪತ್ತುಗಳು ಮತ್ತು ಅನಿಶ್ಚಿತತೆಗಳ ಸಮಸ್ಯೆಗಳನ್ನು ಪರಿಹರಿಸಲು ದೇಶದಲ್ಲಿ ಇಂತಹ ಬೃಹತ್ಕಾರ್ಯಕ್ರಮದ ಪ್ರಾರಂಭ ಮತ್ತು ಅಗತ್ಯತೆಯ ಬಗ್ಗೆ ಕರಪತ್ರವು ಮಾಹಿತಿಯನ್ನು ಹೊಂದಿದೆಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ನಿಭಾಯಿಸಲು ಉತ್ತಮ ಸನ್ನದ್ಧತೆಗಾಗಿ ವಿಜ್ಞಾನ ಮತ್ತು ಆರೋಗ್ಯದ ಬಗ್ಗೆ ಸಾರ್ವಜನಿಕ ತಿಳುವಳಿಕೆ ಮತ್ತು ಜಾಗೃತಿಯನ್ನು ಹೆಚ್ಚಿಸಲು ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಪ್ರೊ.ಅಶುತೋಷ್ ಶರ್ಮಾ ಮಾತನಾಡಿ, “ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್, ಜಾನಪದ ಮತ್ತು ಸಂವಾದಾತ್ಮಕ ಮಾಧ್ಯಮಗಳನ್ನು ಒಳಗೊಂಡಂತೆ ಜಾಗೃತಿ ಮತ್ತು ಅರಿವು ಸುತ್ತಲೂ ನಿರ್ಮಿಸಲಾದ ವ್ಯಾಪಕವಾದ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ರೂಪಿಸಲಾಗಿದೆಕರಪತ್ರದಲ್ಲಿ ನೀಡಲಾಗಿರುವ ವಿಜ್ಞಾನ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ವರ್ಷ (ಯಶ್) - 19  ಕಾರ್ಯಕ್ರಮದ ಲಾಂಛನವನ್ನು ಶಾಂತಿ ಮತ್ತು ಆನಂದದ ಅಲೆಯನ್ನು ಸೃಷ್ಟಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಪರಿಸ್ಥಿತಿಯನ್ನು ದೊಡ್ಡದಾಗಿ ಜಯಿಸುವ ಪ್ರಜ್ಞೆಯನ್ನು ಚಿತ್ರಿಸುತ್ತದೆ ಮತ್ತು ವಿಜ್ಞಾನ, ಆರೋಗ್ಯ, ಮತ್ತು ಸಂದೇಶಗಳನ್ನು ಮುಂದಕ್ಕೆ ಕೊಂಡೊಯ್ಯುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆಎಂದು ಹೇಳಿದರು.

ತಳಮಟ್ಟದಲ್ಲಿ ಅಧಿಕೃತ ಮಾಹಿತಿಯನ್ನು ಆಕರ್ಷಕ, ಆಸಕ್ತಿದಾಯಕ ಮತ್ತು ಸಂವಾದಾತ್ಮಕ ರೀತಿಯಲ್ಲಿ ಒದಗಿಸುವ ದೃಷ್ಟಿಯಿಂದ, ಕೋವಿಡ್- 19 ಅನ್ನು ಕೇಂದ್ರೀಕರಿಸಿ ಆರೋಗ್ಯ ಮತ್ತು ಅಪಾಯದ ಸಂವಹನ ಕುರಿತು ಸಮಗ್ರ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆರಾಷ್ಟ್ರೀಯ ವಿಜ್ಞಾನ ಮತ್ತು ಆರೋಗ್ಯದ ಸಂವಹನ ಕಾರ್ಯಕ್ರಮವನ್ನು ಯೋಜಿಸಲಾಗಿದೆ. ಇದು ದೇಶದಾದ್ಯಂತ ಎಲ್ಲಡೆ ಮತ್ತು ತಲುಪುವ ಯಾಂತ್ರಿಕ ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ಜಾರಿಗೆ ತರಲಾಗಿದೆರಾಜ್ಯಗಳ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಗಳು ಕಾರ್ಯಯೋಜನೆಯಲ್ಲಿ ಭಾಗಿಯಾಗಿವೆ. ಕಾರ್ಯಕ್ರಮದ ಮೂರು ಪ್ರಮುಖ ಅಂಶಗಳೆಂದರೆಸಾಫ್ಟ್ವೇರ್ಮಾಹಿತಿ ವಿಷಯ ಅಭಿವೃದ್ಧಿ, ಸಾಮರ್ಥ್ಯ ಅಭಿವೃದ್ಧಿ, ಹಾಗೂ ಪ್ರಸಾರ ಮತ್ತು ಜನರಿಗೆ ತಲಪವಿಕೆ.

ಚಟುವಟಿಕೆಗಳು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮಧ್ಯ ಮತ್ತು ಈಶಾನ್ಯ ಆರು ಪ್ರದೇಶಗಳಲ್ಲಿ ಹರಡಿವೆ. ವಿಶೇಷವಾಗಿ ಗುರುತಿಸಲಾದ ವಲಯಗಳನ್ನು ಅವಲಂಬಿಸಿ ವಿಶೇಷ ಸಂವಹನ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ, ಮತ್ತು ಸಮುದಾಯ ಆರೋಗ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗಾಗಿ ಸಂವಹನಕಾರರು ಮತ್ತು ಸ್ವಯಂಸೇವಕರ ಸಂಪರ್ಕ ಮತ್ತು ತರಬೇತಿ ಒಂದು ಪ್ರಯೋಜನವಾಗಿದೆ. ಕೋವಿಡ್-19 ನಿಂದ ಉಂಟಾದ ಸಾಂಕ್ರಾಮಿಕ ರೋಗದ ಪ್ರಸ್ತುತ ಸನ್ನಿವೇಶವು ವೈಜ್ಞಾನಿಕ ಅರಿವು ಮತ್ತು ಆರೋಗ್ಯ ಸನ್ನದ್ಧತೆಯು ಅಧಿಕೃತ ವೈಜ್ಞಾನಿಕ ಮಾಹಿತಿಯ ಅನುವಾದ ಮತ್ತು ಬಳಕೆಯೊಂದಿಗೆ ಪರಿಸ್ಥಿತಿಯನ್ನು ಎದುರಿಸಲು ಸಹಾಯ ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಮತ್ತು ಕೋವಿಡ್ ಒಳಗೊಂಡಿರುವ ಅಪಾಯಗಳನ್ನು ತಿಳಿಸಲು ಮತ್ತು ಸುಗಮಗೊಳಿಸುತ್ತದೆ.

 ಮಾಹಿತಿ ಕರಪತ್ರವು ಆರೋಗ್ಯದ ಬಗ್ಗೆ ತಳಮಟ್ಟದ ಸ್ಪಂದನೆ, ಮೆಚ್ಚುಗೆ ಮತ್ತು ಪ್ರತಿಕ್ರಿಯೆಯನ್ನು ಪ್ರೋತ್ಸಾಹಿಸಲು ಉತ್ತೇಜಿಸಲು ಮತ್ತು ಜನರ ಜೀವನವನ್ನು ದೊಡ್ಡ ಪ್ರಮಾಣದಲ್ಲಿ ಉಳಿಸಲು ಮತ್ತು ರೂಪಿಸಲು, ಹಾಗೆಯೇ ಆತ್ಮವಿಶ್ವಾಸವನ್ನು ಹೆಚ್ಚಿಸಲು, ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಮತ್ತು ಅವುಗಳಲ್ಲಿ ಆರೋಗ್ಯ ಪ್ರಜ್ಞೆಯನ್ನು ಉತ್ತೇಜಿಸಲು ಸಮಗ್ರ ಮತ್ತು ಪರಿಣಾಮಕಾರಿ ವಿಜ್ಞಾನ ಮತ್ತು ಆರೋಗ್ಯ ಸಂವಹನ ಪ್ರಯತ್ನವನ್ನು ಮಾಡಿದೆ. ಕರಪತ್ರವನ್ನು www.dst.gov.in ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

(ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಎನ್.ಸಿ.ಎಸ್.ಟಿ.ಸಿ, ಸಲಹೆಗಾರ ಮತ್ತು ಮುಖ್ಯಸ್ಥ ಡಾ.ಮನೋಜ್ ಕುಮಾರ್ ಪಟೈರಿಯಾ ಅವರನ್ನು ಸಂಪರ್ಕಿಸಿ, mkp[at]nic[dot]in, ದೂ: 9868114548)

***



(Release ID: 1630212) Visitor Counter : 188