ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೋವಿಡ್-19 ವಿರುದ್ಧ ಹೋರಾಟಕ್ಕೆ ಆತಂಕವಲ್ಲ, ಜಾಗೃತಿ ಅತಿ ಮುಖ್ಯ: ಡಾ. ಜಿತೇಂದ್ರ ಸಿಂಗ್

Posted On: 07 JUN 2020 5:33PM by PIB Bengaluru

ಕೋವಿಡ್-19 ವಿರುದ್ಧ ಹೋರಾಟಕ್ಕೆ ಆತಂಕವಲ್ಲ, ಜಾಗೃತಿ ಅತಿ ಮುಖ್ಯ: ಡಾ. ಜಿತೇಂದ್ರ ಸಿಂಗ್

ಕೋವಿಡ್-19 ರೋಗಿಗಳಾಗಿ ಭಾರತದ ಮೊದಲ ದೇಶೀಯ, ಕಡಿಮೆ ವೆಚ್ಚದ, ವೈರ್ ಲೆಸ್ ಮಾನಸಿಕ ಮಾನದಂಡಗಳ ನಿಗಾ ಇಡುವ ವ್ಯವಸ್ಥೆ- ಕೋವಿಡ್ ಬೀಪ್ ಉದ್ಘಾಟನೆ

ಕೋವಿಡ್ ಬೀಪ್ ಮೂಲ ಕೋವಿಡ್ ಗೆ ಪ್ರತಿರೋಧಕವಾಗಿ ಕೆಲಸ ನಿರ್ವಹಣೆ

 

ಕೇಂದ್ರ ಈಶಾನ್ಯ ರಾಜ್ಯಗಳ ಅಭಿವೃದ್ಧಿ (ಡಿಒಎನ್ಇಆರ್) ಸಚಿವ(ಸ್ವತಂತ್ರ ಖಾತೆ) ಮತ್ತು ಪ್ರಧಾನಮಂತ್ರಿಗಳ ಕಾರ್ಯಾಲಯದ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಇಂದು ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಆತಂಕವಲ್ಲ, ಜಾಗೃತಿಯೊಂದೇ ಅತಿಮುಖ್ಯ ಅಂಶ ಎಂದು ಹೇಳಿದ್ದಾರೆ. ಭಾರತದ ಮೊದಲ ದೇಶೀಯ ಕಡಿಮೆ ವೆಚ್ಚದ ವೈರ್ಲೆಸ್ ಕೋವಿಡ್-19 ರೋಗಿಗಳ ಮಾನಸಿಕ ಮಾನದಂಡಗಳ ನಿಗಾ ವ್ಯವಸ್ಥೆ ಕೋವಿಡ್ ಬೀಪ್ (ಇಸಿಐಎಲ್,ಇಎಸ್ಐಸಿ ಪಾಂಡ್ ಬಯೋಮ್ಡ್ ನಿರಂತರ ಆಕ್ಸಿಜಿನೇಷನ್ ಮತ್ತು ಪ್ರಮುಖ ಮಾಹಿತಿ ಪತ್ತೆ)ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದನ್ನು ಅಣು ಇಂಧನ ಇಲಾಖೆ ಹಾಗೂ ಐಐಟಿ ಹೈದ್ರಾಬಾದ್ ಸಹಭಾಗಿತ್ವದಲ್ಲಿ ಹೈದ್ರಾಬಾದ್ ಇಎಸ್ಐಸಿ ವೈದ್ಯಕೀಯ ಕಾಲೇಜು ಅಭಿವೃದ್ಧಿಪಡಿಸಿದೆ. ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ನಿಯಂತ್ರಣ ಮತ್ತು ಜಾಗೃತಿ ಕಾರ್ಯಕ್ರಮಗಳು ಅತ್ಯಂತ ಪ್ರಮುಖವಾದವು ಎಂದು ಬಲವಾಗಿ ಪ್ರತಿಪಾದಿಸಿದ ಅವರು, ಸುಮಾರು 2 ತಿಂಗಳ ಕಾಲ ಪರಿಣಾಮಕಾರಿ ಲಾಕ್ ಡೌನ್ ನಂತರ ಹಂತ ಹಂತವಾಗಿ ಇದೀಗ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದೆ ಎಂದರು.

https://ci3.googleusercontent.com/proxy/UXBg9tCEWrNlvyChMKqt2xwsbB-SoYbv8w4vUV2LPS2yZGvPtM03h1hkdymoJr8NbmZPQPO2pQ2hkwzCPXCYCfQStqBCb5m4NIyoVeMfGNak03EjI60x=s0-d-e1-ft#https://static.pib.gov.in/WriteReadData/userfiles/image/image001ZKJ7.jpg

ಹೈದ್ರಾಬಾದ್ ಇಎಸ್ಐಸಿ ವೈದ್ಯಕೀಯ ಕಾಲೇಜಿನ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಪ್ರತಿಷ್ಠಿತ ಸಂಸ್ಥೆಗಳಾದ ಐಐಟಿ ಹೈದ್ರಾಬಾದ್ ಇಸಿಐಎಲ್ ಮತ್ತು ಟಿಐಎಫ್ಆರ್ ಸಹಯೋಗದಲ್ಲಿ ಮತ್ತೊಂದು ಆವಿಷ್ಕಾರ ಮಾಡಿದೆ. ಅದು ಪ್ರಸಕ್ತ ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ವಿಮೆ ಹೊಂದಿರುವ ವ್ಯಕ್ತಿಗಳ ಕಲ್ಯಾಣಕ್ಕಾಗಿ ಉಪಕರಣವನ್ನು ತಯಾರಿಸಿ ತನ್ನ ಉತ್ಪನ್ನಗಳ ಪಟ್ಟಿಗೆ ಸೇರಿಸಿಕೊಂಡಿದೆ ಎಂದರು. ಡಾ. ಸಿಂಗ್ ಅವರು, ಕೋವಿಡ್ ಬೀಪ್ ಭಾರತದ ಪ್ರತಿಷ್ಠಿತ ಸಂಸ್ಥೆಗಳು, ಸಮನ್ವಯದಿಂದ ಒಗ್ಗೂಡಿದರೆ ದೇಶ ಎದುರಿಸುತ್ತಿರುವ ಹಲವು ಸವಾಲುಗಳಿಗೆ ಕಡಿಮೆ ವೆಚ್ಚದಲ್ಲಿ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ ಮತ್ತು ಮೂಲಕ ದೇಶ ನಿಜವಾದ ಅರ್ಥದಲ್ಲಿ ಆತ್ಮನಿರ್ಭರ ಸಾಧಿಸಲು ಸಾಧ್ಯವಾಗುತ್ತಿದೆ ಎಂದರು. ಕೋವಿಡ್ ಬೀಪ್ ನಿಜವಾದ ಕೋವಿಡ್ ಗೆ ಅತ್ಯಂತ ಪರಿಣಾಮಕಾರಿ ಆಂಟಿಡಾಟ್ ಆಗಿ ಉದಯವಾಗಿದೆ ಎಂದ ಅವರು, ಕೋವಿಡ್ ಸಾಂಕ್ರಾಮಿಕದಿಂದಾಗಿ ಇಡೀ ವಿಶ್ವ ಇಂದು ತತ್ತರಿಸಿ ಹೋಗಿದೆ ಎಂದು ಹೇಳಿದರು.

ಕೋವಿಡ್ ಬೀಪ್ ಇತ್ತೀಚಿನ ಆವೃತಿಯಲ್ಲಿ ಕೆಳಗಿನ ಅಂಶಗಳನ್ನು ಸೇರಿಸಿಕೊಳ್ಳಲಾಗಿದೆ:

. ಎನ್ಐಬಿಪಿ ನಿಗಾ ವ್ಯವಸ್ಥೆ: ಕೋವಿಡ್-19ನಿಂದಾಗಿ ವಯಸ್ಸಾದವರಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. ಆದ್ದರಿಂದ ಸನ್ನಿವೇಶದಲ್ಲಿ ಎನ್ಐಬಿಪಿ ನಿಗಾ ವ್ಯವಸ್ಥೆ ಅತ್ಯಂತ ಅವಶ್ಯಕವಾಗಿದೆ.

ಬಿ. ಇಸಿಜಿ ನಿಗಾ ವ್ಯವಸ್ಥೆ: ಪ್ರೊಪೈಲಾಕ್ಸಿಸ್ ಮತ್ತು ಅಥವಾ ಚಿಕಿತ್ಸೆಗಳಾದ ಹೈಡ್ರೋಕ್ಲೋರೊಕ್ವಿನ್ ಮತ್ತು ಅಝಿಥ್ರೋಮೈಸಿನ್ ಇತ್ಯಾದಿಗಳು ಹೃದಯದ ಮೇಲೆ ಪರಿಣಾಮ ಬೀರಲಿವೆ ಮತ್ತು ಆದ್ದರಿಂದ ಇಸಿಜಿ ಮಾನಿಟರಿಂಗ್ ಅತ್ಯಂತ ಪ್ರಮುಖವಾಗಿ ಬೇಕಾಗಿದೆ.

ಸಿ. ರೆಸ್ಪಿರೇಟರಿ ರೇಟ್: ಅದನ್ನು ಬಯೋ ಇಂಪೆಡೆನ್ಸ್ ಪದ್ದತಿಯ ಮೂಲಕ ಅಳೆಯಲಾಗುವುದು.

ಕೋವಿಡ್ ಬೀಪ್ ಸೋಂಕು ಪ್ರಸರಣವಾಗುವುದನ್ನು ಗರಿಷ್ಠ ಮಟ್ಟದಲ್ಲಿ ತಡೆಯುವುದಲ್ಲದೆ, ಪಿಪಿಇ ಮತ್ತಿತರ ಸಂಪನ್ಮೂಲಗಳನ್ನು ಉಳಿಸಲು ಸಹಾಯಕವಾಗಲಿದೆ.

ಅಣು ಇಂಧನ ಇಲಾಖೆಯ ಅಧೀನಕ್ಕೆ ಒಳಪಡುವ ಇಸಿಐಎಲ್ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ. ಸಿಂಗ್ ಅವರು, ಇಸಿಐಎಲ್ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿದಿದೆ ಎಂದರು. ಜನರ ಮನಸ್ಸಿಲ್ಲಿರುವ ಭಾವನೆಗೆ ಪರ್ಯಾಯವಾಗಿ, ಅಣು ಇಂಧನ ಇಲಾಖೆ ಕ್ರಿಯಾಶೀಲಾಗಿದೆ, ಮನುಕುಲದ ಹೆಚ್ಚಿನ ಕಲ್ಯಾಣಕ್ಕಾಗಿ ಅಣು ಇಂಧನವನ್ನು ಬಳಕೆ ಮಾಡುವುದನ್ನು ಉತ್ತೇಜಿಸುತ್ತಿದೆ. ಅದು ವಿದ್ಯುತ್ ಉತ್ಪಾದನೆಯಲ್ಲಾಗಿರಬಹುದು, ಕೃಷಿ ಉತ್ಪನ್ನ ಹೆಚ್ಚಳದಲ್ಲಾಗಿರಬಹುದು, ಆಹಾರ ಸಂರಕ್ಷಣೆಯಲ್ಲಾಗಿರಬಹುದು ಅಥವಾ ಮುಂಬೈನ ಟಿಎಂಸಿಯಲ್ಲಿ ಹೆಸರಾಂತ ಕ್ಯಾನ್ಸರ್ ಕೇಂದ್ರದ ಆಡಳಿತ ನಿರ್ವಹಣೆಯಲ್ಲೂ ಸಹ ಬಳಕೆ ಮಾಡಲಾಗುತ್ತಿದೆ, ಅಣು ಇಂಧನ ಇಲಾಖೆ ಸದಾ ದೇಶದ ಜೊತೆ ನಿಂತು, ಅಯಾ ಕಾಲದ ಅಗತ್ಯತೆಗಳಿಗೆ ಸ್ಪಂದಿಸುತ್ತಿದೆ.

https://ci6.googleusercontent.com/proxy/Aa97ZmMwAPazOdrAH1tXfjQKeqCJYz690P6ox42cqYSx72NnquLneyZqFNpT0BGDtEC1SKf1TR6t6WndmSbLn8y_mM554z_DkOHuBUh7hrvuXSqaRdVP=s0-d-e1-ft#https://static.pib.gov.in/WriteReadData/userfiles/image/image002J3LE.jpg

ಕೋವಿಡ್ ಬೀಪ್ ಅಭಿವೃದ್ಧಿ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಡಾ.ಸಿಂಗ್ ಅವರಿಗೂ ಮುನ್ನ, ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶ್ರೀ ಜಿ.ಕಿಷನ್ ರೆಡ್ಡಿ, ಅಣು ಇಂಧನ ಇಲಾಖೆ ಕಾರ್ಯದರ್ಶಿ ಶ್ರೀ ಕೆ.ಎನ್. ವ್ಯಾಸ್, ಹೈದರಾಬಾದ್ ಇಎಸ್ ಐಸಿ ವೈದ್ಯಕೀಯ ಕಾಲೇಜಿನ ಡೀನ್ ಪ್ರೊ.ಶ್ರೀನಿವಾಸ್, ಹೈದರಾಬಾದ್ ಇಸಿಐಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಿಯರ್ ಅಡ್ಮಿರಲ್ ಸಂಜಯ್ ಚೌಬೆ(ನಿವೃತ್ತ) ಮಾತನಾಡಿ, ಪ್ರಸಕ್ತ ಸನ್ನಿವೇಶದಲ್ಲಿ ಅಂತಹ ಸಂಶೋಧನೆಗಳ ಪ್ರಾಮುಖ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು.

***



(Release ID: 1630210) Visitor Counter : 208