ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಹೊಸ ಮಾಹಿತಿ

Posted On: 07 JUN 2020 5:46PM by PIB Bengaluru

ಕೋವಿಡ್ -19 ಹೊಸ ಮಾಹಿತಿ

ಸಂಘಟಿತ ಕ್ರಿಯೆಯ ಮೂಲಕ ದೃಢ ನಿಶ್ಚಯದಿಂದ ಮುಂದೆ ಸಾಗುವೆವು

 

ಮಾಧ್ಯಮಗಳ ಒಂದು ವರ್ಗದಲ್ಲಿ, ಕೋವಿಡ್-19 ನಿಯಂತ್ರಿಸುವ ಮತ್ತು ನಿರ್ವಹಿಸುವತ್ತ ಸರಕಾರದ ಪ್ರಯತ್ನಗಳಲ್ಲಿ ತಾಂತ್ರಿಕ ತಜ್ಞರ ಸಲಹೆಯಿಲ್ಲವೆಂದು ಕಳವಳ ವ್ಯಕ್ತಪಡಿಸುವ ಕೆಲವು ವರದಿಗಳಿವೆ.

ಆತಂಕಗಳು ಮತ್ತು ಆರೋಪಗಳು ಸತ್ಯಕ್ಕೆ ದೂರವಾಗಿವೆ ಮತ್ತು ಆಧಾರರಹಿತವಾಗಿವೆ. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಹರಿಸಲು ತಾಂತ್ರಿಕ ಮತ್ತು ಕಾರ್ಯತಂತ್ರದ ಪರಿಣಿತಿಯನ್ನು, ವೈಜ್ಞಾನಿಕ ವಿಚಾರಗಳು ಮತ್ತು ಸಂಬಂಧಪಟ್ಟ ಕ್ಷೇತ್ರದ ನಿರ್ದಿಷ್ಟ ಮಾರ್ಗದರ್ಶನಕ್ಕಾಗಿ ಸರ್ಕಾರ ನಿರಂತರವಾಗಿ ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಕೋವಿಡ್-19ಕ್ಕಾಗಿ ರಾಷ್ಟ್ರೀಯ ಕಾರ್ಯಪಡೆ (ಎನ್ಟಿಎಫ್)ಯನ್ನು ಕಾರ್ಯದರ್ಶಿ ಡಿಎಚ್ಆರ್-ಕಮ್-ಡಿಜಿ-ಐಸಿಎಂಆರ್ ಸದಸ್ಯ (ಆರೋಗ್ಯ) ಎನ್ಐಟಿಐ ಆಯೋಗ್ ಅವರೊಂದಿಗೆ ಅಧ್ಯಕ್ಷರಾಗಿ ಮತ್ತು ಕಾರ್ಯದರ್ಶಿಯಾಗಿ (ಡಿಒಹೆಚ್ಡಬ್ಲ್ಯು) ಮತ್ತು ಕಾರ್ಯದರ್ಶಿ (ಡಿಎಚ್ಆರ್) ಸಹ-ಅಧ್ಯಕ್ಷರಾಗಿ ರಚಿಸಲಾಗಿದೆ. ಎನ್ ಟಿ ಎಫ್ ಕಾರ್ಯಪಡೆಯು ಸರ್ಕಾರ ಮತ್ತು ಸರ್ಕಾರದ ಹೊರಗಿನ ತಾಂತ್ರಿಕ / ಕ್ಷೇತ್ರದ ತಜ್ಞರು ಸೇರಿದಂತೆ 21 ಸದಸ್ಯರನ್ನು ಒಳಗೊಂಡಿದೆ. ಕಾರ್ಯಪಡೆಯ ಪ್ರಮುಖ ಪರಿಣತಿಯು ಸಾರ್ವಜನಿಕ ಆರೋಗ್ಯ ಮತ್ತು / ಅಥವಾ ಸಾಂಕ್ರಾಮಿಕ ರೋಗಶಾಸ್ತ್ರದಿಂದ ಬಂದಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಸಂಕೀರ್ಣತೆ ಮತ್ತು ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ತಂಡವು ಔಷಧಿ, ವೈರಾಲಜಿ, ಔಷಧಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಠಾನ ಮತ್ತು ಸಂಬಂಧಪಟ್ಟ ತಜ್ಞರನ್ನು ಹೊಂದಿದೆ.

ಇದಲ್ಲದೆ, ಕಾರ್ಯಪಡೆ ತಜ್ಞರ ನಾಲ್ಕು ಗುಂಪುಗಳನ್ನು ರಚಿಸಿದೆ. ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಕಣ್ಗಾವಲು (13 ಸದಸ್ಯರು) ಮತ್ತು ಕಾರ್ಯಾಚರಣೆ ಸಂಶೋಧನೆ (15 ಸದಸ್ಯರು) ಕುರಿತ ತಜ್ಞರ ಗುಂಪುಗಳು ಸಂಪೂರ್ಣವಾಗಿ ಸರ್ಕಾರಿ ಮತ್ತು ಸರ್ಕಾರೇತರ ರಂಗದ ಸಾರ್ವಜನಿಕ ಆರೋಗ್ಯ ಮತ್ತು ಸಾಂಕ್ರಾಮಿಕ ರೋಗ ತಜ್ಞರನ್ನು ಒಳಗೊಂಡಿವೆ.

ಕಾರ್ಯಪಡೆಯು 20 ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದೆ ಮತ್ತು ಸಾಂಕ್ರಾಮಿಕ ರೋಗಕ್ಕೆ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರತಿಸ್ಪಂದನೆಗೆ ವ್ಯವಸ್ಥಿತವಾಗಿ ಸೇವೆಯನ್ನು ನೀಡಿದೆ. ಇತರ ಸೇವೆಗಳ ಪೈಕಿ, ಕಾರ್ಯಪಡೆಯು ಪರೀಕ್ಷೆ, ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ಕಣ್ಗಾವಲು ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದೆ. ಎನ್ಟಿಎಫ್ ಜೊತೆಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಜ್ಞರ ತಂಡವನ್ನು ರಚಿಸಿದ್ದು, ಸಾರ್ವಜನಿಕ ಆರೋಗ್ಯ ತಜ್ಞರನ್ನು ಸದಸ್ಯರನ್ನಾಗಿ ಹೊಂದಿದೆ.

ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಭಾರತವು ಕೈಗೊಂಡ ನಿರ್ಧಾರಗಳ ಬಗ್ಗೆಯೂ ಮಾಧ್ಯಮಗಳ ಒಂದು ವಿಭಾಗವು ವರದಿ ಮಾಡುತ್ತಿದೆ. ಕೋವಿಡ್-19 ಪ್ರಕರಣಗಳು ಶೀಘ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಅನೇಕ ಪಾಶ್ಚಿಮಾತ್ಯ ದೇಶಗಳು ಅನುಭವಿಸಿದಂತೆ, ಪ್ರಕರಣಗಳ ದ್ವಿಗುಣಗೊಳ್ಳುವ ಪ್ರಮಾಣವು ಹೆಚ್ಚಿನ ಪ್ರಕರಣದ ಹೊರೆ ಮತ್ತು ಹೆಚ್ಚಿನ ಮರಣದ ಅಪಾಯಕ್ಕೆ ಎಡೆ ಮಾಡುಕೊಡುತ್ತದೆ. ಶೀಘ್ರದಲ್ಲೇ ಕೋವಿಡ್-19 ರೋಗಿಗಳಿಂದಾಗಿ ನಮ್ಮ ಆರೋಗ್ಯ ವ್ಯವಸ್ಥೆಗಳ ಮೇಲೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆಯು ನಿಜವೆಂದು ತೋರುತ್ತದೆ.

ರಾಷ್ಟ್ರವು ಎದುರಿಸುತ್ತಿರುವ ಪರಿಸ್ಥಿತಿಗನುಗುಣವಾಗಿ ನೀತಿಗಳು ಮತ್ತು ಕಾರ್ಯತಂತ್ರಗಳನ್ನು ನಿರ್ಣಯಿಸಬೇಕಾಗಿದೆ. ವೈರಸ್ ಒಂದು ಹೊಸ ಏಜೆಂಟ್, ಅದರ ಬಗ್ಗೆ ಇನ್ನೂ ಎಲ್ಲವೂ ತಿಳಿದುಬಂದಿಲ್ಲ. ತಳಮಟ್ಟದಲ್ಲಿ ಪಡೆದ ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ಸರ್ಕಾರವು ಕಾರ್ಯತಂತ್ರವನ್ನು ಉತ್ತಮಗೊಳಿಸುತ್ತಿದೆ.

ಸಾರ್ವಜನಿಕ ಆರೋಗ್ಯದಲ್ಲಿ ತಿಳಿದಿರುವಂತೆ, ಸಾಂಕ್ರಾಮಿಕದ ವಿವಿಧ ಹಂತಗಳನ್ನು ವಿವಿಧ ರೀತಿಯ ಕ್ರಮಗಳಿಂದ ನಿಭಾಯಿಸಬೇಕಿದೆ. ವಾಸ್ತವವಾಗಿ, ಸೂಕ್ಷ್ಮ, ಹಂತವಾರು ಪ್ರತಿಸ್ಪಂದನೆಯು, ಚೇತರಿಕೆಗೊಳ್ಳುವ ಆರೋಗ್ಯ ವ್ಯವಸ್ಥೆಯ ಸಕಾರಾತ್ಮಕ ಲಕ್ಷಣವೆಂದು ತಿಳಿದುಬಂದಿದೆ. ಜನರು, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಜಾಗತಿಕ ಆರೋಗ್ಯ ಸಮುದಾಯವು ಕೋವಿಡ್-19ಅನ್ನು ಎದುರಿಸಲು ಕೈಗೊಂಡಿರುವ ಭಾರತದ ಪೂರ್ವಭಾವಿ ಮತ್ತು ಸಕ್ರಿಯ ವಿಧಾನವನ್ನು ಶ್ಲಾಘಿಸಿದೆ. ಎಲ್ಲಾ ರಾಜ್ಯ ಸರ್ಕಾರಗಳ ನಡುವೆ ಲಾಕ್ ಡೌನ್ ಬಗ್ಗೆ ಎಲ್ಲೆಡೆ ಒಮ್ಮತವಿತ್ತು.

ಲಕ್ಷಾಂತರ ಸೋಂಕುಗಳು ಮತ್ತು ಸಾವಿರಾರು ಸಾವುಗಳನ್ನು ತಪ್ಪಿಸಲು ಲಾಕ್ಡೌನ್ ಮತ್ತು ಇತರ ನಿರ್ಬಂಧಗಳ ಪರಿಣಾಮದ ಬಗ್ಗೆ ಜೊತೆಗೆ ಆರೋಗ್ಯ ವ್ಯವಸ್ಥೆಯಲ್ಲಿ ಅಗಾಧವಾದ ಪ್ರಯೋಜನಗಳು ಮತ್ತು ಜನರ ಸಿದ್ಧತೆಯ ಬಗ್ಗೆ ಸರ್ಕಾರವು ಈಗಾಗಲೇ ಮಾಹಿತಿಯನ್ನು ಹಂಚಿಕೊಂಡಿದೆ. ಯುಕೆ, ಇಟಲಿ, ಸ್ಪೇನ್ ಮತ್ತು ಜರ್ಮನಿಯಂತಹ ಲಾಕ್ಡೌನ್ ಅನ್ನು ಸರಾಗಗೊಳಿಸುವ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಅತಿ ಕಡಿಮೆ ಪ್ರಕರಣಗಳು / ಲಕ್ಷ ಜನಸಂಖ್ಯೆಗೆ ವರದಿ ಮಾಡಿದೆ, 17.23 ಪ್ರಕರಣಗಳು / ಲಕ್ಷ ಜನಸಂಖ್ಯೆ ಮತ್ತು 0.49 ಸಾವುಗಳು / ಲಕ್ಷ ಜನಸಂಖ್ಯೆ (ಜೂನ್ 6 ವಿಶ್ವ ಆರೋಗ್ಯ ಸಂಸ್ಥೆಯ ಪರಿಸ್ಥಿತಿ ವರದಿಯ ಪ್ರಕಾರ 2020).

ಕೋವಿಡ್-19 ಅನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ವಿವಿಧ ನೀತಿ ನಿರ್ಧಾರಗಳು, ಮಧ್ಯಸ್ಥಿಕೆಗಳು ಮತ್ತು ಕಾರ್ಯತಂತ್ರಗಳನ್ನು ಸಾರ್ವಜನಿಕ ವಲಯದಲ್ಲಿ ಇರಿಸಲಾಗಿದೆ ಮತ್ತು ಅದರ ಪ್ರಭಾವವನ್ನು ವಿವಿಧ ಮಾಧ್ಯಮ ವೇದಿಕೆಗಳು, ನಿಯಮಿತ ಮಾಧ್ಯಮ ಸಂಕ್ಷಿಪ್ತತ ವಿವರಗಳು, ವಿವಿಧ ಸಚಿವಾಲಯಗಳು / ಇಲಾಖೆಗಳಿಂದ (ರಾಷ್ಟ್ರೀಯ ಮತ್ತು ರಾಜ್ಯ) ದೈನಂದಿನ ಪತ್ರಿಕಾ ಪ್ರಕಟಣೆಗಳ ಮೂಲಕ ಹಾಗೂ ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ಚರ್ಚೆಗಳ ಮೂಲಕ ಜನರೊಂದಿಗೆ ಹಂಚಿಕೊಳ್ಳಲಾಗಿದೆ.

***


(Release ID: 1630209) Visitor Counter : 269