ಹಣಕಾಸು ಸಚಿವಾಲಯ

ಕೇಂದ್ರದಿಂದ ರಾಜ್ಯಗಳಿಗೆ ಜಿಎಸ್ ಟಿ ಪರಿಹಾರವಾಗಿ 36,400 ಕೋಟಿ ರೂ. ಬಿಡುಗಡೆ

Posted On: 04 JUN 2020 8:28PM by PIB Bengaluru

ಕೇಂದ್ರದಿಂದ ರಾಜ್ಯಗಳಿಗೆ ಜಿಎಸ್ ಟಿ ಪರಿಹಾರವಾಗಿ 36,400 ಕೋಟಿ ರೂ. ಬಿಡುಗಡೆ

 

ಕೋವಿಡ್-19 ಚಿಕಿತ್ಸಾ ವೆಚ್ಚಗಳನ್ನು ರಾಜ್ಯ ಸರ್ಕಾರಗಳು ಭರಿಸಬೇಕಾಗಿರುವುದರಿಂದ ಅವುಗಳ ಸಂಪನ್ಮೂಲದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸ್ಥಿತಿಗತಿಯನ್ನು ಗಮನದಲ್ಲಿರಿಸಿಕೊಂಡು, ಕೇಂದ್ರ ಸರ್ಕಾರ ಇಂದು 2019 ಡಿಸೆಂಬರ್ ನಿಂದ 2020 ಫೆಬ್ರವರಿ ಅವಧಿಯವರೆಗೆ ಜಿಎಸ್ ಟಿ ಪರಿಹಾರವಾಗಿ ರಾಜ್ಯಗಳು/ಶಾಸನಸಭೆಗಳಿರುವ ಕೇಂದ್ರಾಡಳಿತ ಪ್ರದೇಶಗಳಿಗೆ 36,400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ರಾಜ್ಯಗಳು ಮತ್ತು ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳಿಗೆ 2019 ಏಪ್ರಿಲ್ನವೆಂಬರ್ ವರೆಗಿನ ಅವಧಿಯ ಜಿಎಸ್ ಟಿ ಪರಿಹಾರ 1,15,096 ಕೋಟಿ ರೂಪಾಯಿಗಳನ್ನು ಮೊದಲೇ ಬಿಡುಗಡೆ ಮಾಡಲಾಗಿತ್ತು.

***



(Release ID: 1629542) Visitor Counter : 255