ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ನಾವಲ್ ಕೊರೊನಾವೈರಸ್ ನೊಂದಿಗೆ ಹೇಗೆ ಬದುಕಬೇಕು ಎಂಬುದರ ಕುರಿತು ಐದು ಸಲಹೆಗಳು

Posted On: 02 JUN 2020 10:49AM by PIB Bengaluru

ಎಪ್ಪತ್ತು ದಿನಗಳ ಲಾಕ್ಡೌನ್ ನಂತರ, ಅನ್ಲಾಕ್ 1.0 ವನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಅಧಿಕೃತವಾಗಿ ಗೊತ್ತುಪಡಿಸಿದ ಲಾಕ್ಡೌನ್ 5.0, ಜೂನ್ 1, 2020 ರಿಂದ, ಆರ್ಥಿಕತೆ ಮತ್ತು ಸಾಮಾನ್ಯ ಜೀವನವು ನಿಯಂತ್ರಿತವಾಗಿ ಮತ್ತು ಹಂತ ಹಂತವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಇದು ಹೊಸ ರೀತಿಯ ಸಾಮಾನ್ಯಜೀವನ ಪ್ರಾರಂಭವಾಗಿದೆ. ಇದು ದೀರ್ಘಾವಧಿಯ ಪ್ರಯಾಣವಾಗಲಿದೆ. ತಜ್ಞರು ಮತ್ತು ಅಧಿಕಾರಿಗಳು ನಾವು ವೈರಸ್ನೊಂದಿಗೆ ಬದುಕಲು ಕಲಿಯಬೇಕುಎಂದು ಸೂಚಿಸುತ್ತಿದ್ದಾರೆ. ಲಸಿಕೆ ದೊರೆಯಲು ಇನ್ನೂ ಕೆಲವು ತಿಂಗಳುಗಳ ಕಾಲ ಆಗುವುದರಿಂದ, ನಾವು ಹೊಸ ರೀತಿಯ ಸಾಮಾನ್ಯ ಜೀವನವನ್ನು ಬದುಕಬೇಕಾಗಿದೆ. ಇಂಡಿಯಾ ಸೈನ್ಸ್ ವೈರ್ ಜೊತೆ ಮಾತನಾಡಿದ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಕೆ.ವಿಜಯ್ ರಾಘವನ್ ಅವರು ವೈರಸ್ನೊಂದಿಗೆ ಬದುಕಲುಐದು ಸಲಹೆಗಳನ್ನು ನೀಡಿದರು.

ಒಂದೋ ನಾವು ವೈರಸ್ ಅನ್ನು ಬದಲಾಯಿಸಬೇಕು, ಅಥವಾ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು; ವೈರಸ್ ಅನ್ನು ಬದಲಾಯಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಪ್ರೊ.ವಿಜಯ್ ರಾಘವನ್ ಹೇಳುತ್ತಾರೆ. ಔಷಧಗಳು ಮತ್ತು ಲಸಿಕೆಗಳ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ, ಆದರೆ ಅವುಗಳು ಸರಿಯಾದ ಕ್ಲಿನಿಕಲ್ ಪರೀಕ್ಷೆಗಳ ನಂತರ, ವ್ಯಾಪಕವಾದ ಬಳಕೆಗೆ ಲಭ್ಯವಾಗಲು, ಸಮಯ ತೆಗೆದುಕೊಳ್ಳುತ್ತದೆ. ಎಲ್ಲರಿಗೂ ಔಷಧಗಳು ಮತ್ತು ಲಸಿಕೆಗಳನ್ನು ಉತ್ಪಾದಿಸುವುದು ಸಹ ಸಮಯ ತೆಗೆದುಕೊಳ್ಳುತ್ತದೆ. ಇದರ ಮಧ್ಯೆ, ಸಾಂಕ್ರಾಮಿಕ ರೋಗವನ್ನು ಎದುರಿಸಲು ನಮ್ಮನ್ನು ನಾವು ಬದಲಾಯಿಸಿಕೊಳ್ಳಬಹುದು.

ಪ್ರೊ. ರಾಘವನ್ ಅವರ ಐದು ಸಲಹೆಗಳು ಇಲ್ಲಿವೆ:

1. ನೀವು ಮನೆಯಿಂದ ಹೊರಗೆ ಬಂದಾಗ ಮುಖಗವಸು ಧರಿಸಿರಿ

ಒಬ್ಬ ವ್ಯಕ್ತಿಯು ಮಾತನಾಡುವಾಗ ಸುಮಾರು 1000 ಸಣ್ಣ ಹನಿಗಳ ಲಾಲಾರಸ ಹೊರಬರುತ್ತದೆ ಎಂದು ಇತ್ತೀಚಿನ ಅಧ್ಯಯನಗಳಿಂದ ಗೊತ್ತಾಗಿದೆ. ವ್ಯಕ್ತಿಯು ನಾವೆಲ್ ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದರೆ, ಪ್ರತಿಯೊಂದು ಹನಿಗಳು ಸಾವಿರಾರು ರೋಗಾಣುಗಳನ್ನು ಒಯ್ಯುತ್ತವೆ. ಸಾಮಾನ್ಯವಾಗಿ ಒಂದು ಮೀಟರ್ ಅಂತರದಲ್ಲಿ, ದೊಡ್ಡ ಹನಿಗಳು ನೆಲಕ್ಕೆ ಬೀಳುತ್ತವೆ. ಆದರೆ, ಸಣ್ಣ ಹನಿಗಳ ತಿರುಳು ಗಾಳಿಯಲ್ಲಿ ತೇಲುತ್ತದೆ. ಮುಖ್ಯವಾಗಿ ಅದು ಚೆನ್ನಾಗಿ ಗಾಳಿಯಾಡದ ಪ್ರದೇಶವಾಗಿದ್ದರೆ ಹೆಚ್ಚು ಸಮಯದವರೆಗೆ ಪರಿಸರದಲ್ಲಿ ತೇಲುತ್ತಿರುತ್ತದೆ. ವೈರಸ್ ಸೋಂಕಿಗೆ ಒಳಗಾದ ಅನೇಕ ಜನರು ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಆದ್ದರಿಂದ, ಅವರಿಗೆ ಸೋಂಕು ತಗಲಿದೆ ಎಂದು ಅವರಿಗೆ ತಿಳಿದಿಲ್ಲದಿರಬಹುದು. ಮುಖಗವಸು ಧರಿಸುವುದರಿಂದ ನಾವು ಸೋಂಕಿಗೆ ಒಳಗಾಗಿದ್ದರೆ ನಮ್ಮನ್ನು ಮಾತ್ರವಲ್ಲದೆ ಅದು ಇತರರನ್ನೂ ರಕ್ಷಿಸುತ್ತದೆ. "ಮನೆಯಲ್ಲಿ ತಯಾರಿಸಿದ ಮುಖಗವಸುಗಳನ್ನು ತಯಾರಿಸಲು ನಾವು ಕೈಪಿಡಿಯನ್ನು ಸಿದ್ಧಪಡಿಸಿದ್ದೇವೆ, ಅದನ್ನು ಅವರ ಮುಖದ ಹೊದಿಕೆಯನ್ನು ತಯಾರಿಸಲು ಬಳಸಬಹುದು" ಎಂದು ಪ್ರೊ. ರಾಘವನ್ ಹೇಳಿದರು.

2. ಜಾಗರೂಕ ಕೈ ನೈರ್ಮಲ್ಯದ ಅಭ್ಯಾಸ ಮಾಡಿಕೊಳ್ಳಿರಿ

ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದ ಅಧ್ಯಯನದ ಪ್ರಕಾರ ಚೀನಾದಲ್ಲಿ 75,465 ಕೋವಿಡ್-19 ಪ್ರಕರಣಗಳ ವಿಶ್ಲೇಷಣೆಯು ನಾವೆಲ್ ಕೊರೊನಾವೈರಸ್ ಮುಖ್ಯವಾಗಿ ಉಸಿರಾಟದ ಹನಿಗಳು ಮತ್ತು ಸಂಪರ್ಕ ವ್ಯಕ್ತಿಗಳ ಮೂಲಕ ಜನರ ನಡುವೆ ಹರಡುತ್ತದೆ ಎಂದು ತೋರಿಸುತ್ತದೆ. ಹೀಗಾಗಿ, ಸೋಂಕಿತ ಜನರೊಂದಿಗೆ ನೇರ ಸಂಪರ್ಕಕ್ಕೆ ಬಂದಾಗ ಕೋವಿಡ್-19 ವೈರಸ್ ಹರಡುತ್ತದೆ. ಅಥವಾ ನಾವು ಪರಿಸರದಲ್ಲಿ ಅಥವಾ ಸೋಂಕಿತ ವ್ಯಕ್ತಿಯು ಬಳಸುವ ವಸ್ತುಗಳ ಮೇಲ್ಮೈಗಳನ್ನು ಸ್ಪರ್ಶಿಸಿದಾಗ (ಉದಾ: ಬಾಗಿಲ ಹ್ಯಾಂಡಲ್ ಮತ್ತು ವಾಶ್ ರೂಮ್ ನಲ್ಲಿಗಳು). ನಮ್ಮ ಮುಖವನ್ನು ಮುಟ್ಟುವುದು ಒಂದು ಸಾಮಾನ್ಯ ಕ್ರಿಯೆ. ನಾವು ಕನಿಷ್ಟ ಮೂವತ್ತು ಸೆಕೆಂಡುಗಳ ಕಾಲ ಸೋಪಿನಿಂದ ನಮ್ಮ ಕೈಗಳನ್ನು ಚೆನ್ನಾಗಿ ತೊಳೆಯುವಾಗ, ನಮ್ಮ ಕೈಯಲ್ಲಿರುವ ವೈರಸ್ ಯಾವುದಾದರೂ ಇದ್ದರೆ ಅದು ನಾಶವಾಗುತ್ತದೆ. ಮಲ ಮತ್ತು ಮೌಖಿಕ ಮಾರ್ಗಗಳಿಂದಲೂ ವೈರಸ್ ಹರಡಬಹುದು ಎಂಬ ಅನಿಸಿಕೆಗಳಿವೆ. ಆದ್ದರಿಂದ ಕೈ ಕಾಲುಗಳನ್ನು ತೊಳೆಯುವುದು ಉತ್ತಮ ಎಂದು ಪ್ರೊ.ರಾಘವನ್ ಹೇಳುತ್ತಾರೆ.

3. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿರಿ

ಹೆಚ್ಚಾಗಿ, ಸೋಂಕು ನೇರ ಸಂಪರ್ಕದ ಮೂಲಕ ಅಥವಾ ಸೋಂಕಿತ ವ್ಯಕ್ತಿಯು ಹೊರಸೂಸಿದ ಹನಿಗಳನ್ನು ಉಸಿರಾಡುವ ಮೂಲಕ ಸಂಭವಿಸುತ್ತದೆ. ಸಾಮಾನ್ಯ ಪರಿಸ್ಥಿತಿಗಳಲ್ಲಿನ ಹನಿಗಳು ಸೋಂಕಿತ ವ್ಯಕ್ತಿಯಿಂದ ಒಂದು ಮೀಟರ್ ದೂರದಲ್ಲಿ ಚಲಿಸುತ್ತವೆ. ಮಾರುಕಟ್ಟೆಗಳು, ಕಚೇರಿಗಳು ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಒಂದರಿಂದ ಒಂದು ಮೀಟರ್ ದೂರವನ್ನು ಇಡುವುದು ಬಹಳ ಸಹಾಯ ಮಾಡುತ್ತದೆ. ರೋಗಲಕ್ಷಣಗಳನ್ನು ತೋರಿಸದೆ ಯುವಕರು ಸೋಂಕಿಗೆ ಒಳಗಾಗಬಹುದು, ಮತ್ತು ಅವರು ವಯಸ್ಸಾದವರಿಗೆ ಸೋಂಕು ತಗುಲಿಸಬಹುದು. ಆದ್ದರಿಂದ, ದೈಹಿಕ ದೂರವನ್ನು ಕಾಪಾಡಿಕೊಳ್ಳಲು ನಾವು ವಿಶೇಷ ಕಾಳಜಿ ವಹಿಸಬೇಕಾಗಿದೆ, ವಿಶೇಷವಾಗಿ ವಯಸ್ಸಾದವರಂತೆ ದುರ್ಬಲರು, ಅನೇಕ ವಿಧಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರು ಎಂದು ಪ್ರೊ.ರಾಘವನ್ ಹೇಳುತ್ತಾರೆ.

4. ಪರೀಕ್ಷೆ ಮತ್ತು ಟ್ರ್ಯಾಕಿಂಗ್

ಯಾರಾದರೂ ಕೋವಿಡ್-19 ಸೋಂಕಿರೆಂದು ತಿಳಿದುಬಂದರೆ, ಅವರು ಮೊದಲು ಎಲ್ಲೆಲ್ಲಿ ತಿರುಗಾಡಿದ್ದರು ಮತ್ತು ಯಾರುಯಾರನ್ನು ಭೇಟಿ ಮಾಡಿದ್ದರು ಎನ್ನುವುದನ್ನು ಗುರುತಿಸಬೇಕು. ನಾವು ಅವರನ್ನು ಪರೀಕ್ಷಿಸಲೇಬೇಕುಎಂದು ಪ್ರೊ.ರಾಘವನ್ ಹೇಳುತ್ತಾರೆ. ಸೋಂಕಿತ ವ್ಯಕ್ತಿ ಮಾತ್ರ ವೈರಸ್ ಅನ್ನು ಇತರರಿಗೆ ಹರಡಬಹುದು ಅಥವಾ ಮೇಲ್ಮೈಯನ್ನು ಕಲುಷಿತಗೊಳಿಸಬಹುದು ಮತ್ತು ವೈರಸ್ ಹರಡಬಹುದು. ಸೋಂಕಿತ ವ್ಯಕ್ತಿಗಳಲ್ಲಿ ಹೆಚ್ಚಿನವರನ್ನು ಗುರುತಿಸಿದರೆ, ನಂತರ ವೈರಸ್ ಹರಡುವುದನ್ನು ನಿಯಂತ್ರಿಸುವುದು ಸುಲಭವಾಗುತ್ತದೆ.

5. ಪ್ರತ್ಯೇಕತೆ

"ಸೋಂಕು ಧೃಡಪಟ್ಟ ಪ್ರಕರಣಗಳಾಗಿ ಗುರುತಿಸಲ್ಪಟ್ಟ ಜನರನ್ನು ಪ್ರತ್ಯೇಕವಿರಿಸಬೇಕು" ಎಂದು ಪ್ರೊ. ರಾಘವನ್ ಹೇಳುತ್ತಾರೆ. ಪ್ರತ್ಯೇಕವಿರಿಸಿದ ನಂತರ, ಸೋಂಕಿತ ವ್ಯಕ್ತಿಯು ಸರಿಯಾದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದು. ಇದಲ್ಲದೆ, ಅವರು ಪ್ರತ್ಯೇಕವಾಗಿರಿಸಿವುದರಿಂದ, ಸೋಂಕಿತ ವ್ಯಕ್ತಿಯು ಇತರರಿಗೆ ವೈರಸ್ ಅನ್ನು ಹರಡಲು ಸಾಧ್ಯವಿಲ್ಲ. ಇದರಿಂದ ಸೋಂಕಿನ ಹರಡುವಿಕೆಯನ್ನು ತಡೆಯಬಹುದು.

"ಕಡೆಯ ವ್ಯಕ್ತಿಯ ಜೊತೆ ಇದನ್ನು ಅತ್ಯಂತ ತ್ವರಿತವಾಗಿ ಕೈಗೊಂಡರೆ ಹಾಗೂ ಇದನ್ನು ಇತರ ಎಲ್ಲರನ್ನೂ ಅನುಸರಿಸಲು ಸಾಧ್ಯವಾದರೆ, ನಾವು ಔಷಧಗಳು ಮತ್ತು ಲಸಿಕೆಗಾಗಿ ಏನಾದರೂ ಮಾಡಲು ಕಾಯುತ್ತಿರುವಾಗ ನಾವು ಸಾಮಾನ್ಯ ಜೀವನದ ಮಾದರಿಯನ್ನು ಹೊಂದಬಹುದು. ನಾವು ಯಾವುದೇ ಕೆಲಸಗಳನ್ನು ಮಾಡದಿದ್ದರೆ ಮತ್ತು ಇವುಗಳಲ್ಲಿ ಯಾವುದನ್ನಾದರೂ ನಿರ್ಲಕ್ಷ್ಯ ಮಾಡಿದರೆ, ನಮಗೆ ಸಮಸ್ಯೆ ಎದುರಾಗುತ್ತದೆಎಂದು ಪ್ರೊ.ರಾಘವನ್ ಹೇಳಿದರು.

ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪರಿಸ್ಥಿತಿಗಳು ವಿಭಿನ್ನವಾಗಿವೆ ಎನ್ನುವುದರ ಬಗ್ಗೆ ಅವರು ಗಮನಸೆಳೆದರು. ಮುಂಬೈನ ಧಾರವಿಯಂತಹ ಜನನಿಬಿಡ ಪ್ರದೇಶದಲ್ಲಿ ಅನೇಕ ಜನರು ವಾಸಿಸುತ್ತಿರುವುದರಿಂದ ದೈಹಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಇದಲ್ಲದೆ, ಭಾರತದಲ್ಲಿ, ಹೆಚ್ಚಿನ ಕುಟುಂಬಗಳ ಮೂರು ತಲೆಮಾರುಗಳು ಒಟ್ಟಿಗೆ ವಾಸಿಸುತ್ತವೆ. ಇದರಿಂದಾಗಿ ದೈಹಿಕ ಅಂತರವನ್ನು ಅನುಷ್ಠಾನಗೊಳಿಸುವುದು ಕಷ್ಟಕರವಾಗಬಹುದು. ಆದ್ದರಿಂದ, ನಿರ್ದಿಷ್ಟ ಸಮಸ್ಯೆಗಳನ್ನು ಎದುರಿಸಲು ನಾವು ಕೆಲವು ನವೀನ ಪರಿಹಾರಗಳನ್ನು ಹೊಂದಿರಬೇಕು ಎಂದು ಪ್ರೊ.ಕೆ.ವಿಜಯ್ ರಾಘವನ್ ಹೇಳುತ್ತಾರೆ.

"ಏನು ಮಾಡಬೇಕೆಂದು ನಿರ್ಧರಿಸಲು ಅನೇಕ ಹಂತದ ಜವಾಬ್ದಾರಿಗಳಿವೆ. ಎಲ್ಲಕ್ಕಿಂತ ಮುಖ್ಯವಾದುದು ಸಂವಹನ ಮತ್ತು ಸಂವಹನದಲ್ಲಿರುವ ಸಂದೇಶವನ್ನು ನಾವೆಲ್ಲರೂ ಕಾರ್ಯರೂಪಕ್ಕೆ ತರುವುದು ಎಂದು ಪ್ರೊಫೆಸರ್ ಕೆ ವಿಜಯ್ ರಾಘವನ್ ಹೇಳಿದರು.

ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕಚೇರಿಯು ಜನನಿಬಿಡ ಪ್ರದೇಶಗಳಲ್ಲಿ ನೈರ್ಮಲ್ಯ ಮತ್ತು ನೈರ್ಮಲ್ಯಕ್ಕಾಗಿ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಮುಖ ಮತ್ತು ಬಾಯಿಗೆ ಮನೆಯಲ್ಲಿ ರಕ್ಷಣಾತ್ಮಕ ಕವರ್ಗಳ ಕೈಪಿಡಿಯನ್ನು ಅಭಿವೃದ್ಧಿಪಡಿಸಿದ್ದಾರೆ. Http://psa.gov.in/information-related-covid-19 ಜಾಲತಾಣದಲ್ಲಿ ಇವು ಅನೇಕ ಭಾರತೀಯ ಭಾಷೆಗಳಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಲು ಲಭ್ಯವಿದೆ.

***


(Release ID: 1628906) Visitor Counter : 242