ರಕ್ಷಣಾ ಸಚಿವಾಲಯ

ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಹಾಗು ಫ್ರೆಂಚ್ ಸಶಸ್ತ್ರ ಪಡೆಗಳ ಸಚಿವರ ನಡುವೆ  ದೂರವಾಣಿ ಮಾತುಕತೆಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಬಲಪಡಿಸಲು ಒಪ್ಪಿಗೆ ನೀಡಲಾಯಿತು

Posted On: 02 JUN 2020 2:26PM by PIB Bengaluru

ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಇಂದು ಫ್ರೆಂಚ್ ಸಶಸ್ತ್ರ ಪಡೆಗಳ ಸಚಿವ ಎಂ.ಎಸ್. ಫ್ಲಾರೆನ್ಸ್ ಪಾರ್ಲಿಯೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದರು. ಅವರು ಕೋವಿಡ್-19 ಪರಿಸ್ಥಿತಿ, ಪ್ರಾದೇಶಿಕ ಭದ್ರತೆ ಸೇರಿದಂತೆ ಪರಸ್ಪರ ಕಾಳಜಿಯ ವಿಷಯಗಳನ್ನು ಚರ್ಚಿಸಿದರು ಮತ್ತು ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಬಲಪಡಿಸಲು ಒಪ್ಪಿದರು. ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತ ಮತ್ತು ಫ್ರಾನ್ಸ್ ಸಶಸ್ತ್ರ ಪಡೆಗಳ ಕಾರ್ಯವನ್ನು ಉಭಯ ಸಚಿವರು ಶ್ಲಾಘಿಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗದ ಸಮಸ್ಯೆಗಳ ನಡುವೆಯೂ ರಾಫೆಲ್ ವಿಮಾನದ ಸಮಯೋಚಿತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಫ್ರಾನ್ಸ್ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು.

2020 ರಿಂದ 2022 ರವರೆಗೆ ಹಿಂದೂ ಮಹಾಸಾಗರ ನೌಕಾ ವಿಚಾರ ಸಂಕಿರಣದ (ಐಒಎನ್ಎಸ್) ಫ್ರೆಂಚ್ ಅಧ್ಯಕ್ಷತೆಯನ್ನು ರಕ್ಷಣಾ ಸಚಿವರು ಸ್ವಾಗತಿಸಿದರು. 2018 ಹಿಂದೂ ಮಹಾಸಾಗರ ಪ್ರದೇಶದ ಭಾರತ-ಫ್ರಾನ್ಸ್ ಜಂಟಿ ಕಾರ್ಯತಂತ್ರದ ದೃಷ್ಟಿಯನ್ನು ಪೂರೈಸಲು ಇಬ್ಬರು ಸಚಿವರು ಒಟ್ಟಾಗಿ ಕೆಲಸ ಮಾಡಲು ಒಪ್ಪಿದರು.

***



(Release ID: 1628904) Visitor Counter : 167