ರಕ್ಷಣಾ ಸಚಿವಾಲಯ

ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಹಾಗು ಫ್ರೆಂಚ್ ಸಶಸ್ತ್ರ ಪಡೆಗಳ ಸಚಿವರ ನಡುವೆ  ದೂರವಾಣಿ ಮಾತುಕತೆಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಬಲಪಡಿಸಲು ಒಪ್ಪಿಗೆ ನೀಡಲಾಯಿತು

ಪ್ರಕಟಣಾ ದಿನಾಂಕ: 02 JUN 2020 2:26PM by PIB Bengaluru

ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಇಂದು ಫ್ರೆಂಚ್ ಸಶಸ್ತ್ರ ಪಡೆಗಳ ಸಚಿವ ಎಂ.ಎಸ್. ಫ್ಲಾರೆನ್ಸ್ ಪಾರ್ಲಿಯೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದರು. ಅವರು ಕೋವಿಡ್-19ರ ಪರಿಸ್ಥಿತಿ, ಪ್ರಾದೇಶಿಕ ಭದ್ರತೆ ಸೇರಿದಂತೆ ಪರಸ್ಪರ ಕಾಳಜಿಯ ವಿಷಯಗಳನ್ನು ಚರ್ಚಿಸಿದರು ಮತ್ತು ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಬಲಪಡಿಸಲು ಒಪ್ಪಿದರು. ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತ ಮತ್ತು ಫ್ರಾನ್ಸ್‌ನ ಸಶಸ್ತ್ರ ಪಡೆಗಳ ಕಾರ್ಯವನ್ನು ಉಭಯ ಸಚಿವರು ಶ್ಲಾಘಿಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗದ ಸಮಸ್ಯೆಗಳ ನಡುವೆಯೂ ರಾಫೆಲ್ ವಿಮಾನದ ಸಮಯೋಚಿತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಫ್ರಾನ್ಸ್ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು.

2020 ರಿಂದ 2022 ರವರೆಗೆ ಹಿಂದೂ ಮಹಾಸಾಗರ ನೌಕಾ ವಿಚಾರ ಸಂಕಿರಣದ (ಐಒಎನ್‌ಎಸ್) ಫ್ರೆಂಚ್ ಅಧ್ಯಕ್ಷತೆಯನ್ನು ರಕ್ಷಣಾ ಸಚಿವರು ಸ್ವಾಗತಿಸಿದರು. 2018 ರ ಹಿಂದೂ ಮಹಾಸಾಗರ ಪ್ರದೇಶದ ಭಾರತ-ಫ್ರಾನ್ಸ್ ಜಂಟಿ ಕಾರ್ಯತಂತ್ರದ ದೃಷ್ಟಿಯನ್ನು ಪೂರೈಸಲು ಇಬ್ಬರು ಸಚಿವರು ಒಟ್ಟಾಗಿ ಕೆಲಸ ಮಾಡಲು ಒಪ್ಪಿದರು.

***


(ಪ್ರಕಟಣೆ ಐ.ಡಿ.: 1628903) ವಿಸಿಟರ್ ಕೌಂಟರ್ : 249
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Manipuri , Bengali , Punjabi , Odia , Tamil , Telugu , Kannada , Malayalam