ಪ್ರಧಾನ ಮಂತ್ರಿಯವರ ಕಛೇರಿ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ 25ನೇ ಸಂಸ್ಥಾಪನಾ ದಿನ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ ಕೋವಿಡ್-19 ವಿರುದ್ಧದ ಸಮರದಲ್ಲಿ ಸೋಲರಿಯದ ವೈದ್ಯರು ಮತ್ತು ಆರೋಗ್ಯ ರಕ್ಷಣಾ ಕಾರ್ಯಕರ್ತರ ಪಾತ್ರಕ್ಕೆ ಮೆಚ್ಚುಗೆ ಅಗೋಚರ ಮತ್ತು ಸೋಲರಿಯದವರ ನಡುವಿನ ಸಮರದಲ್ಲಿ ಖಂಡಿತ ನಮ್ಮ ವೈದ್ಯಕೀಯ ವೃತ್ತಿಪರರು ಗೆಲುವು ಸಾಧಿಸುತ್ತಾರೆ - ಪ್ರಧಾನಿ ದೇಶದಲ್ಲಿ ಆರೋಗ್ಯ ರಕ್ಷಣಾ ವ್ಯವಸ್ಥೆ ಉತ್ತೇಜನಕ್ಕೆ ನಾಲ್ಕು ಆಧಾರಸ್ಥಂಬದ ಕಾರ್ಯಸೂಚಿ ಪ್ರಕಟಿಸಿದ; ಟೆಲಿ ಮೆಡಿಸನ್ ಸುಧಾರಣೆಗೆ ಮಾರ್ಗೋಪಾಯಗಳು, ಆರೋಗ್ಯ ವಲಯದಲ್ಲಿ ಮೇಕ್ ಇನ್ ಇಂಡಿಯಾ ಮತ್ತು ಐಟಿ ಆಧಾರಿತ ಆರೋಗ್ಯ ಸೇವೆಗಳ ಉತ್ತೇಜನಕ್ಕೆ ಕರೆ

Posted On: 01 JUN 2020 1:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 25ನೇ ಸಂಸ್ಥಾಪನಾ ದಿನವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.

ಪ್ರಧಾನಮಂತ್ರಿ ಅವರುಕೋವಿಡ್-19 ನಿರ್ವಹಣೆಯಲ್ಲಿ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎರಡು ಜಾಗತಿಕ ಮಹಾಯುದ್ಧಗಳ ನಂತರ ವಿಶ್ವ ಇಂದು ಅತಿದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆಜಾಗತಿಕ ಯುದ್ಧಗಳ ನಂತರ ಹಾಗೂ ಆಪೂರ್ವದಲ್ಲಿ ಜಗತ್ತು ಬದಲಾಗಿತ್ತುಅದೇ ರೀತಿಯಲ್ಲಿ ಕೋವಿಡ್ ಮುನ್ನ ಮತ್ತು ಆನಂತರವೂ ಭಿನ್ನವಾಗಿರಲಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಕೋವಿಡ್-19 ವಿರುದ್ಧ ಭಾರತದ ದಿಟ್ಟ ಸಮರದ ಮೂಲ ನಮ್ಮ ಪರಿಶ್ರಮಿ ವೈದ್ಯಕೀಯ ಸಮುದಾಯ ಮತ್ತು ನಮ್ಮ ಕೊರೊನಾ ಯೋಧರಾಗಿದ್ದಾರೆ ಎಂದು ಶ್ರೀ ಮೋದಿ ಹೇಳಿದರುವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರು ಯೋಧರ ಸಮವಸ್ತ್ರವಿಲ್ಲದೆಯೇ ಯೋಧರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ವೈರಾಣು ನಮ್ಮ ಕಣ್ಣಿಗೆ ಕಾಣಿಸದ ಶತೃಆದರೆ ನಮ್ಮ ಕೊರೊನಾ ಯೋಧರು ಸ್ಪಷ್ಟವಾಗಿ ಕಾಣುತ್ತಿದ್ದಾರೆ ಮತ್ತು ಅಗೋಚರ ವರ್ಸಸ್ ಗೋಚರಿಸುವ ನಡುವಿನ  ಸಮರದಲ್ಲಿ ನಮ್ಮ ವೈದ್ಯಕೀಯ ಕಾರ್ಯಕರ್ತರು ಖಂಡಿತ ಗೆಲ್ಲುತ್ತಾರೆ ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಧಾನಮಂತ್ರಿ ಅವರುಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರ ವಿರುದ್ಧ ಕೆಲವೆಡೆ ಹಿಂಸಾತ್ಮಕ ಘಟನೆಗಳು ಮತ್ತು ಕೆಲವು ಗುಂಪುಗಳು ನಡೆದುಕೊಂಡ ಸ್ವಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರುಅಂತಹವುಗಳನ್ನು ಹತ್ತಿಕ್ಕಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರುಅಲ್ಲದೆ ಸರ್ಕಾರ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂ.ವರೆಗೆ ವಿಮಾ ಸೌಕರ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

ಜಾಗತೀಕರಣ ಯುಗದ  ಸಂದರ್ಭದಲ್ಲಿ ಆರ್ಥಿಕ ವಿಷಯಗಳ ಕುರಿತಂತೆ ಚರ್ಚೆಗಳನ್ನು ನಡೆಸುವ ಬದಲು ಮಾನವ ಕೇಂದ್ರಿತ ಅಭಿವೃದ್ಧಿ ಅಂಶಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಪ್ರಧಾನಮಂತ್ರಿ ಅವರು ಕರೆ ನೀಡಿದರು.

ಮುಂದುವರಿದ ರಾಷ್ಟ್ರಗಳಲ್ಲಿ ಆರೋಗ್ಯ ವಲಯ ಹಿಂದೆಂದಿಗಿಂತಲೂ ಉತ್ತಮವಾಗಿದೆ ಎಂದ ಅವರುಸರ್ಕಾರ ಕಳೆದ ಆರು ವರ್ಷಗಳಿಂದೀಚೆಗೆ ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಶಿಕ್ಷಣ ವಲಯದಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಆರೋಗ್ಯ ರಕ್ಷಣೆ ಮತ್ತು ಅದರ ಮೂಲಸೌಕರ್ಯ ಸುಧಾರಣೆಗೆ ನಾಲ್ಕು ಆಧಾರ ಸ್ಥಂಬಗಳ ಕಾರ್ಯತಂತ್ರಕ್ಕೆ ಕರೆ ನೀಡಿದ ಪ್ರಧಾನಮಂತ್ರಿ ಅವರುಅದು ಸರ್ವರಿಗೂ ಲಭ್ಯವಾಗುವಂತಿರಬೇಕು ಎಂದು ಹೇಳಿದರು.

ಮೊದಲ ಆಧಾರಸ್ಥಂಬವೆಂದರೆಆರೋಗ್ಯ ರಕ್ಷಣಾ ಮುನ್ನೆಚ್ಚರಿಕೆಇದರಲ್ಲಿ ಯೋಗಆಯುರ್ವೇದ ಮತ್ತು ಸಾಮಾನ್ಯ ದೈಹಿಕ ಕ್ಷಮತೆ ಕಾಯ್ದುಕೊಳ್ಳಲು ಹೆಚ್ಚಿನ ಪ್ರಾಮುಖ್ಯತೆ ಹಾಗೂ ಒತ್ತು ನೀಡಬೇಕಾಗಿದೆಜೀವನಶೈಲಿ ಸಂಬಂಧಿಸಿದ ರೋಗಗಳ ನಿಯಂತ್ರಣ ಪ್ರಮುಖ ಗುರಿಯಾಗಿಟ್ಟುಕೊಂಡುದೇಶಾದ್ಯಂತ 40,000ಕ್ಕೂ ಅಧಿಕ ಸೌಖ್ಯ ಕೇಂದ್ರಗಳನ್ನು ತೆರೆಯಲಾಗಿದೆ ಎಂದರುಸ್ವಚ್ಛ ಭಾರತ ಮಿಷನ್ ಯಶಸ್ಸು ಆರೋಗ್ಯ ರಕ್ಷಣಾ ಮುನ್ನೆಚ್ಚರಿಕೆಯ ಒಂದು ಪ್ರಮುಖ ಅಂಶವಾಗಿದೆ.

ಎರಡನೇ ಆಧಾರಸ್ಥಂಬವೆಂದರೆಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣೆಪ್ರಧಾನಮಂತ್ರಿ  ಅವರುವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಯೋಜನೆ ಆಯುಷ್ಮಾನ್ ಭಾರತ್ ಯಶಸ್ಸನ್ನು ಪ್ರಮುಖವಾಗಿ ಪ್ರಸ್ತಾಪಿಸಿಯೋಜನೆ ಆರಂಭವಾಗಿ ಎರಡು ವರ್ಷದೊಳಗೆ ಒಂದು ಕೋಟಿ ಜನರು ವಿಶೇಷವಾಗಿ ಮಹಿಳೆಯರು ಮತ್ತು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವವರು ಇದರಿಂದ ಪ್ರಯೋಜನ ಪಡೆದಿದ್ದಾರೆ ಎಂದರು.

ಮೂರನೇ ಆಧಾರಸ್ಥಂಬವೆಂದರೆಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆಗಳುಪ್ರಧಾನಮಂತ್ರಿ ಅವರುಭಾರತದಂತಹ ರಾಷ್ಟ್ರದಲ್ಲಿ ಸೂಕ್ತ ವೈದ್ಯಕೀಯ ಮೂಲಸೌಕರ್ಯ ಮತ್ತು ವೈದ್ಯಕೀಯ ಶಿಕ್ಷಣ ಮೂಲಸೌಕರ್ಯ ಅಗತ್ಯವಿದೆ ಎಂದರು.

ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜುಗಳು ಅಥವಾ ಸ್ನಾತಕೋತ್ತರ ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು22 ಹೆಚ್ಚುವರಿ ಏಮ್ಸ್ ಗಳನ್ನು ಸ್ಥಾಪಿಸುವ ಕಾರ್ಯ ಕ್ಷಿಪ್ರಗತಿಯಲ್ಲಿ ದೇಶದಲ್ಲಿ ಪ್ರಗತಿಯಲ್ಲಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಎಂಬಿಬಿಎಸ್ ಗೆ 30,000 ಸೀಟುಗಳು ಮತ್ತು ಸ್ನಾತಕೋತ್ತರ ಪದವಿಗೆ 15,000 ಸೀಟುಗಳನ್ನು ಸೇರ್ಪಡೆ ಮಾಡಿದ್ದೇವೆಇದು ಸ್ವಾತಂತ್ರ್ಯಾ ನಂತರ ಯಾವುದೇ ಸರ್ಕಾರ ಐದು ವರ್ಷದ ಅವಧಿಯಲ್ಲಿ ಮಾಡಿರುವ ಅತ್ಯಧಿಕ ಸೀಟು ಹೆಚ್ಚಳವಾಗಿದೆ.

ಸಂಸತ್ತಿನ ಶಾಸನದ ಮೂಲಕ ಹಾಲಿ ಇರುವ ಭಾರತೀಯ ವೈದ್ಯಕೀಯ ಮಂಡಳಿಗೆ ಬದಲಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಧಾನಮಂತ್ರಿ ಅವರು ಮಾತನಾಡಿದರು.

ನಾಲ್ಕನೇ ಆಧಾರಸ್ಥಂಬವೆಂದರೆಎಲ್ಲ ಯೋಜನೆಗಳನ್ನು ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸುವುದು ಮತ್ತು ಒಳ್ಳೆಯ ಚಿಂತನೆಗಳ ಯಶಸ್ಸಿಗೆ ಇದು ಅತ್ಯಂತ ಪ್ರಮುಖವಾದುದಾಗಿದೆ.

ಅವರುಹೇಗೆ ರಾಷ್ಟ್ರೀಯ ಪೌಷ್ಠಕಾಂಶ ಮಿಷನ್ ಅನುಷ್ಠಾನ ಮಾಡಬೇಕುಮಕ್ಕಳು ಮತ್ತು ತಾಯಂದಿರಿಗೆ ಸಹಾಯವಾಗಿದೆ ಎಂದು ಉದಾಹರಣೆ ನೀಡಿದ ಅವರುಹೇಗೆ ಭಾರತ  2025 ವೇಳೆಗೆ ಕ್ಷಯರೋಗವನ್ನು ಮುಕ್ತಗೊಳಿಸುವ ದೃಢತೆಯನ್ನು ಹೊಂದಿದೆ ಎಂದರುಜಾಗತಿಕ ಮಟ್ಟದಲ್ಲಿ ಕ್ಷಯರೋಗ ನಿರ್ಮೂಲನೆಗೆ 2030 ಗುರಿ ಹೊಂದಲಾಗಿದೆಅದಕ್ಕೂ ಐದು ವರ್ಷ ಮುನ್ನವೇ ನಾವು ಗುರಿ ಸಾಧಿಸುವ ವಿಶ್ವಾಸವಿದೆ ಎಂದರು.

ಮಿಷನ್ ಇಂದ್ರಧನುಷ್ ಯೋಜನೆ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರುಪ್ರತಿ ವರ್ಷ ಲಸಿಕೆ ಹಾಕುತ್ತಿರುವ ಪ್ರಮಾಣದ ವ್ಯಾಪ್ತಿ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದರು.

ಕೇಂದ್ರ ಸರ್ಕಾರ, 50ಕ್ಕೂ ಅಧಿಕ ಬಗೆಯ ಭಿನ್ನ ಹಾಗೂ ಆರೋಗ್ಯ ಸಂಬಂಧಿ ವೃತ್ತಿಪರರ ಶಿಕ್ಷಣ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ಹೊಸ ಕಾನೂನಿಗೆ ಇತ್ತೀಚೆಗೆ ಅನುಮೋದನೆ ನೀಡಿದೆಇದರಿಂದಾಗಿ ದೇಶದಲ್ಲಿ ಅರೆವೈದ್ಯಕೀಯ ಸಿಬ್ಬಂದಿ ಕೊರತೆ ನೀಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಟೆಲಿ ಮೆಡಿಸನ್ ನಲ್ಲಿ ಆಧುನಿಕ ಬೆಳವಣಿಗೆಗಳುಮೇಕ್ ಇನ್ ಇಂಡಿಯಾ ಮೂಲಕ ಹೇಗೆ ಆರೋಗ್ಯ ವಲಯ ಪ್ರಯೋಜನ ಪಡೆದುಕೊಳ್ಳಬಹುದು ಮತ್ತು ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಐಟಿ ಸಂಬಂಧಿತ ಸೇವೆಗಳನ್ನು ಹೇಗೆ ಬಳಸಿಕೊಳ್ಳಬಹುದು –  ಮೂರು ವಿಷಯಗಳ ಕುರಿತಂತೆ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಚರ್ಚೆ ನಡೆಸಬೇಕು ಮತ್ತು ಚಿಂತನೆ ಮಾಡಬೇಕು ಎಂದು ಕರೆ ನೀಡಿದರು.

ಮೇಕ್ ಇನ್ ಇಂಡಿಯಾ ವಲಯದಲ್ಲಿ ಆರಂಭದಲ್ಲಿ ಹೇಗೆ ಪ್ರಯೋಜನ ಪಡೆದುಕೊಳ್ಳಲಾಯಿತು ಎಂಬ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರುದೇಶೀಯ ಉತ್ಪಾದಕರು ಪಿಪಿಇ ಮತ್ತು ಎನ್-95 ಮಾಸ್ಕ್ ಗಳ ಉತ್ಪಾದನೆಯಲ್ಲಿ ಈಗಾಗಲೇ ತೊಡಗಿಈವರೆಗೆ ಒಂದು ಕೋಟಿ ಪಿಪಿಇಗಳು ಮತ್ತು 1.5 ಕೋಟಿ ಮಾಸ್ಕ್ ಗಳನ್ನು ಪೂರೈಸಿದ್ದಾರೆ ಎಂದು ಹೇಳಿದರು.

ಪ್ರಧಾನಮಂತ್ರಿ ಅವರುಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಆರೋಗ್ಯ ಸೇತು ಆಪ್ ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

***



(Release ID: 1628608) Visitor Counter : 187