ಪ್ರಧಾನ ಮಂತ್ರಿಯವರ ಕಛೇರಿ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ 25ನೇ ಸಂಸ್ಥಾಪನಾ ದಿನ ಉದ್ದೇಶಿಸಿ ಪ್ರಧಾನಮಂತ್ರಿ ಮಾಡಿದ ಭಾಷಣದ ಪಠ್ಯ
Posted On:
01 JUN 2020 12:19PM by PIB Bengaluru
ಈ ಘನ ವಿಶ್ವವಿದ್ಯಾಲಯದ 25ನೇ ಸಂಸ್ಥಾಪನಾ ದಿನವನ್ನು ಉದ್ಘಾಟಿಸುತ್ತಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ನಾನು ವಿಶ್ವವಿದ್ಯಾಲಯದ ಎಲ್ಲ ವೈದ್ಯಕೀಯ ಮತ್ತು ವೈಜ್ಞಾನಿಕ ಸಮುದಾಯವನ್ನು ಅಭಿನಂದಿಸುತ್ತೇನೆ.
ಇತ್ತೀಚಿನ ವರ್ಷಗಳಲ್ಲಿ, ವಿಶ್ವವಿದ್ಯಾಲಯ ಬೋಧನೆಯಲ್ಲಿ ಹಾಗೂ ವೈದ್ಯಕೀಯ ವ್ಯವಸ್ಥೆಯ ತರಬೇತಿಯಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದೆ.
25 ವರ್ಷ ಎಂದರೆ, ಈ ವಿಶ್ವವಿದ್ಯಾಲಯ ಇದೀಗ ಪ್ರೌಢಾವಸ್ಥೆಯಲ್ಲಿದೆ. ಇದು ಇನ್ನೂ ದೊಡ್ಡ ಮಟ್ಟದಲ್ಲಿ ಯೋಚಿಸುವ ಮತ್ತು ಇನ್ನೂ ಉತ್ತಮ ಕಾರ್ಯ ಮಾಡಬೇಕಾದ ವಯಸ್ಸು. ವಿಶ್ವವಿದ್ಯಾಲಯ ಮುಂದಿನ ದಿನಗಳಲ್ಲಿ ತನ್ನ ಶ್ರೇಷ್ಠತೆಯಲ್ಲಿ ಇನ್ನಷ್ಟು ಎತ್ತರಕ್ಕೆ ಏರಲಿದೆ ಎಂಬ ವಿಶ್ವಾಸ ನನಗಿದೆ. ಕೋವಿಡ್-19 ನಿರ್ವಹಣೆಯಲ್ಲಿ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಗೆಳೆಯರೇ, ಸಾಮಾನ್ಯ ಸಮಯದಲ್ಲಿ ಈ ಆಚರಣೆಗಳು ಖಂಡಿತ ದೊಡ್ಡ ಪ್ರಮಾಣದಲ್ಲಿರುತ್ತವೆ. ಜಾಗತಿಕ ಸಾಂಕ್ರಾಮಿಕ ಇಲ್ಲದಿದ್ದರೆ ಈ ವಿಶೇಷ ಸಂದರ್ಭದ ದಿನದಲ್ಲಿ ನಾನು ಬೆಂಗಳೂರಿನಲ್ಲಿ ನಿಮ್ಮೆಲ್ಲರೊಡನೆ ಇರಲು ಪ್ರೀತಿಯಿಂದ ಬಯಸುತ್ತಿದ್ದೆ.
ಆದರೆ ಎರಡು ಜಾಗತಿಕ ಮಹಾಯುದ್ಧಗಳ ನಂತರ ವಿಶ್ವ ಇಂದು ಅತಿದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಜಾಗತಿಕ ಯುದ್ಧಗಳ ನಂತರ ಹಾಗೂ ಆಪೂರ್ವದಲ್ಲಿ ಜಗತ್ತು ಬದಲಾಗಿತ್ತು. ಅದೇ ರೀತಿಯಲ್ಲಿ ಕೋವಿಡ್ ಮುನ್ನ ಮತ್ತು ಆನಂತರವೂ ಭಿನ್ನವಾಗಿರಲಿದೆ.
ಗೆಳೆಯರೇ, ಇಂತಹ ಸಮಯದಲ್ಲಿ ವಿಶ್ವ, ನಮ್ಮ ವೈದ್ಯರು, ನರ್ಸ್ ಗಳು, ವೈದ್ಯಕೀಯ ಸಿಬ್ಬಂದಿ ಮತ್ತು ವೈಜ್ಞಾನಿಕ ಸಮುದಾಯವನ್ನು ಭರವಸೆ ಮತ್ತು ಕೃತಜ್ಞತೆಯಿಂದ ನೋಡುತ್ತಿದೆ. ಇಡೀ ವಿಶ್ವ ನಿಮ್ಮಿಂದ ಆರೋಗ್ಯ ರಕ್ಷಣೆ ಮತ್ತು ಆರೈಕೆಯನ್ನು ಬಯಸುತ್ತಿದೆ.
ಕೋವಿಡ್-19 ವಿರುದ್ಧ ಭಾರತದ ದಿಟ್ಟ ಸಮರದ ಮೂಲ ನಮ್ಮ ಪರಿಶ್ರಮಿ ವೈದ್ಯಕೀಯ ಸಮುದಾಯ ಮತ್ತು ನಮ್ಮ ಕೊರೊನಾ ಯೋಧರು. ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರು ಯೋಧರ ಸಮವಸ್ತ್ರವಿಲ್ಲದೆಯೇ ಯೋಧರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈರಾಣು ನಮ್ಮ ಕಣ್ಣಿಗೆ ಕಾಣಿಸದ ಶತೃ. ಆದರೆ ನಮ್ಮ ಕೊರೊನಾ ಯೋಧರು ಸ್ಪಷ್ಟವಾಗಿ ಕಾಣುತ್ತಿದ್ದಾರೆ ಮತ್ತು ಅಗೋಚರ ವರ್ಸಸ್ ಗೋಚರಿಸುವ ನಡುವಿನ ಈ ಸಮರದಲ್ಲಿ ನಮ್ಮ ವೈದ್ಯಕೀಯ ಕಾರ್ಯಕರ್ತರು ಖಂಡಿತ ಗೆಲ್ಲುತ್ತಾರೆ. ಗೆಳೆಯರೇ, ಇದಕ್ಕೂ ಮುನ್ನ ಜಾಗತೀಕರಣದ ಚರ್ಚೆಗಳು ಕೇವಲ ಆರ್ಥಿಕ ವಿಷಯಗಳಿಗೆ ಸಂಬಂಧಿಸಿದವುಗಳಾಗಿರುತ್ತಿದ್ದವು. ಆದರೆ ಇದೀಗ ವಿಶ್ವ ಒಗ್ಗೂಡಬೇಕಿದೆ ಮತ್ತು ಮಾನವ ಕೇಂದ್ರಿತ ಅಭಿವೃದ್ಧಿ ಆಯಾಮಗಳ ಬಗ್ಗೆ ಗಮನಹರಿಸಬೇಕಿದೆ.
ಮುಂದುವರಿದ ರಾಷ್ಟ್ರಗಳು ಹಿಂದಿಗಿಂತಲೂ ಈಗ ಹೆಚ್ಚಿನ ಪ್ರಗತಿಯನ್ನು ಸಾಧಿಸಿವೆ. ಗೆಳೆಯರೇ, ಕಳೆದ ಆರು ವರ್ಷಗಳಿಂದೀಚೆಗೆ ನಾವು ಭಾರತದಲ್ಲಿ ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ.
ನಾವು ವಿಸ್ತೃತವಾಗಿನಾಲ್ಕು ಆಧಾರಸ್ಥಂಬಗಳ ಮೇಲೆ ಕಾರ್ಯೋನ್ಮುಖವಾಗಿದ್ದೇವೆ:
ಮೊದಲನೆಯದು ಆರೋಗ್ಯ ರಕ್ಷಣಾ ಮುನ್ನೆಚ್ಚರಿಕೆ. ಇದರಲ್ಲಿ ಯೋಗ, ಆಯುರ್ವೇದ ಮತ್ತು ಸಾಮಾನ್ಯ ದೈಹಿಕ ಕ್ಷಮತೆ ಕಾಯ್ದುಕೊಳ್ಳಲು ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಸೇರಿದೆ. ಜೀವನಶೈಲಿ ಸಂಬಂಧಿಸಿದ ರೋಗಗಳ ನಿಯಂತ್ರಣ ಪ್ರಮುಖ ಗುರಿಯಾಗಿಟ್ಟುಕೊಂಡು, ದೇಶಾದ್ಯಂತ ನಲವತ್ತು ಸಾವಿರಕ್ಕೂ ಅಧಿಕ ಸೌಖ್ಯ ಕೇಂದ್ರಗಳನ್ನು ತೆರೆಯಲಾಗಿದೆ. ಸ್ವಚ್ಛ ಭಾರತ ಮಿಷನ್ ಯಶಸ್ಸು ಆರೋಗ್ಯ ರಕ್ಷಣಾ ಮುನ್ನೆಚ್ಚರಿಕೆಯ ಒಂದು ಪ್ರಮುಖ ಅಂಶವಾಗಿದೆ.
ಎರಡನೇಯದೆಂದರೆ, ಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣೆ. ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಯೋಜನೆ ಆಯುಷ್ಮಾನ್ ಭಾರತ್ ಆಗಿದೆ. ಎರಡು ವರ್ಷದೊಳಗೆ ಒಂದು ಕೋಟಿ ಜನರು ಇದರ ಪ್ರಯೋಜನ ಪಡೆದಿದ್ದಾರೆ. ವಿಶೇಷವಾಗಿ ಮಹಿಳೆಯರು ಮತ್ತು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವವರು ಈ ಯೋಜನೆಯ ಪ್ರಮುಖ ಫಲಾನುಭವಿಗಳಾಗಿದ್ದಾರೆ.
ಮೂರನೇಯದೆಂದರೆ, ಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆಗಳು. ಭಾರತದಂತಹ ರಾಷ್ಟ್ರದಲ್ಲಿ ಸೂಕ್ತ ವೈದ್ಯಕೀಯ ಮೂಲಸೌಕರ್ಯ ಮತ್ತು ವೈದ್ಯಕೀಯ ಶಿಕ್ಷಣ ಮೂಲಸೌಕರ್ಯ ಅಗತ್ಯವಿದೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜುಗಳು ಅಥವಾ ಸ್ನಾತಕೋತ್ತರ ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ.
ದೇಶದಲ್ಲಿ 22 ಹೆಚ್ಚುವರಿ ಏಮ್ಸ್ ಗಳನ್ನು ಸ್ಥಾಪಿಸುವ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಕಳೆದ ಐದು ವರ್ಷಗಳಲ್ಲಿ ನಾವು ಮೂವತ್ತು ಸಾವಿರ ಎಂಬಿಬಿಎಸ್ ಸೀಟುಗಳನ್ನು ಮತ್ತು 15 ಸಾವಿರ ಸ್ನಾತಕೋತ್ತರ ಪದವಿ ಸೀಟುಗಳನ್ನು ಸೇರ್ಪಡೆ ಮಾಡಿದ್ದೇವೆ. ಇದು ಸ್ವಾತಂತ್ರ್ಯಾ ನಂತರ ಯಾವುದೇ ಸರ್ಕಾರ ಐದು ವರ್ಷದ ಅವಧಿಯಲ್ಲಿ ಮಾಡಿರುವ ಅತ್ಯಧಿಕ ಸೀಟು ಹೆಚ್ಚಳವಾಗಿದೆ. ಸಂಸತ್ತಿನ ಶಾಸನದ ಮೂಲಕ ಹಾಲಿ ಇರುವ ಭಾರತೀಯ ವೈದ್ಯಕೀಯ ಮಂಡಳಿಗೆ ಬದಲಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪಿಸಲಾಗುತ್ತಿದೆ. ಇದು ದೇಶದಲ್ಲಿ ವೈದ್ಯಕೀಯ ಶಿಕ್ಷಣ ಗುಣಮಟ್ಟ ಸುಧಾರಣೆಗೆ ದೀರ್ಘಾವಧಿಯಲ್ಲಿ ನೆರವಾಗುವುದಲ್ಲದೆ, ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ವೈದ್ಯಕೀಯ ಶಿಕ್ಷಣ ನೀಡಲು ಸಹಕಾರಿಯಾಗಲಿದೆ.
ನಾಲ್ಕನೆಯದೆಂದರೆ, ಎಲ್ಲ ಯೋಜನೆಗಳನ್ನು ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸುವುದು ಕಾಗದಗಳ ಮೇಲಿನ ಒಳ್ಳೆಯ ಚಿಂತನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಉತ್ತಮ ಆದರ್ಶವಾಗಿದೆ ಮತ್ತು ಒಳ್ಳೆಯ ಚಿಂತನೆಗಳು ಉತ್ತಮ ರೀತಿಯಲ್ಲಿ ಅನುಷ್ಠಾನಗೊಂಡಾಗ ಅವುಗಳು ಶ್ರೇಷ್ಠವಾಗುತ್ತವೆ. ಆದ್ದರಿಂದ ಅನುಷ್ಠಾನ ಅತ್ಯಂತ ಪ್ರಮುಖವಾದುದಾಗಿದೆ.
ಇಲ್ಲಿ ನಾನು, ಭಾರತದ ರಾಷ್ಟ್ರೀಯ ಪೌಷ್ಠಕಾಂಶ ಮಿಷನ್ ಹೇಗೆ ಯಶಸ್ವಿಯಾಯಿತು ಮತ್ತು ಅದು ಹೇಗೆ ಮಕ್ಕಳು ಮತ್ತು ತಾಯಂದಿರಿಗೆ ಸಹಾಯವಾಗುತ್ತಿದೆ ಎಂದು ಪ್ರಮುಖವಾಗಿ ಉಲ್ಲೇಖಿಸಲು ಬಯಸುತ್ತೇನೆ. ಭಾರತ 2025ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ದಿನದ 24 ಗಂಟೆಯೂ ಶ್ರಮಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಕ್ಷಯರೋಗ ನಿರ್ಮೂಲನೆಗೆ 2030ರ ಗುರಿ ಹೊಂದಲಾಗಿದೆ. ಅದಕ್ಕೂ ಐದು ವರ್ಷ ಮುನ್ನವೇ ನಾವು ಗುರಿ ಸಾಧನೆಗೆ ಮುಂದಾಗಿದ್ದೇವೆ. ಮಿಷನ್ ಇಂದ್ರ ಧನುಷ್ ಯೋಜನೆಯಲ್ಲಿ ಪ್ರತಿ ವರ್ಷ ಲಸಿಕೆ ಹಾಕುತ್ತಿರುವ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದೆ. ಗೆಳೆಯರೇ, ಕೇಂದ್ರ ಸರ್ಕಾರ, 50ಕ್ಕೂ ಅಧಿಕ ಬಗೆಯ ಭಿನ್ನ ಹಾಗೂ ಆರೋಗ್ಯ ಸಂಬಂಧಿ ವೃತ್ತಿಪರರ ಶಿಕ್ಷಣ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ಹೊಸ ಕಾನೂನಿಗೆ ಇತ್ತೀಚೆಗೆ ಅನುಮೋದನೆ ನೀಡಿದೆ. ಇದರಿಂದಾಗಿ ದೇಶದಲ್ಲಿ ಅರೆ ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಲಿದೆ. ಅಲ್ಲದೆ ಇದು ಇತರೆ ರಾಷ್ಟ್ರಗಳಿಗೆ ಕೌಶಲ್ಯ ಹೊಂದಿದ ಸಂಪನ್ಮೂಲ ಪೂರೈಸಲು ಭಾರತಕ್ಕೆ ನೆರವಾಗಲಿದೆ.
ಗೆಳೆಯರೇ, ಮೂರು ಅಂಶಗಳ ಬಗ್ಗೆ ಗರಿಷ್ಠ ಚರ್ಚೆ ಮಾಡಲು ಮತ್ತು ಭಾಗವಹಿಸಿದವರಲ್ಲಿ ನಾನು ಕರೆ ನೀಡುತ್ತೇನೆ.
ಒಂದು - ಟೆಲಿ ಮಿಡಿಸನ್ ನಲ್ಲಿ ಆಧುನಿಕ ಬೆಳವಣಿಗೆಗಳು. ನಾವು ಟೆಲಿಮೆಡಿಸನ್ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗುವಂತೆ ಮಾಡಲು ಹೊಸ ಮಾದರಿಯನ್ನು ಆಲೋಚಿಸಬೇಕು.
ಮತ್ತೊಂದು ಆರೋಗ್ಯ ವಲಯದಲ್ಲಿ ಮೇಕ್ ಇನ್ ಇಂಡಿಯಾಗೆ ಸಂಬಂಧಿಸಿದ್ದು. ಆರಂಭಿಕ ಪ್ರಯೋಜನಗಳು ನಮಗೆ ಸಕಾರಾತ್ಮಕವಾಗಿ ಚಿಂತಿಸಲು ಸಹಕಾರಿಯಾಗಿವೆ. ದೇಶೀಯ ಉತ್ಪಾದಕರು ಪಿಪಿಇ ಮತ್ತು ಎನ್-95 ಮಾಸ್ಕ್ ಗಳ ಉತ್ಪಾದನೆಯಲ್ಲಿ ಈಗಾಗಲೇ ತೊಡಗಿದ್ದಾರೆ ಮತ್ತು ಈವರೆಗೆ ಒಂದು ಕೋಟಿ ಪಿಪಿಇಗಳನ್ನು ಕೋವಿಡ್ ವಾರಿಯರ್ಸ್ ಗೆ ಪೂರೈಕೆ ಮಾಡಿದ್ದಾರೆ ಅಂತೆಯೇ ಎಲ್ಲ ರಾಜ್ಯಗಳಿಗೆ 1.2 ಕೋಟಿ ಮೇಕ್ ಇನ್ ಇಂಡಿಯಾ ಎನ್-95 ಮಾಸ್ಕ್ ಗಳನ್ನು ಪೂರೈಸಲಾಗಿದೆ.
ಮೂರನೇಯದು, ಆರೋಗ್ಯಕರ ಸಮಾಜಕ್ಕಾಗಿ ಮಾಹಿತಿ ತಂತ್ರಜ್ಞಾನ ಸಂಬಂಧಿ ಉಪಕರಣಗಳ ಬಳಕೆ, ನಿಮ್ಮೆಲ್ಲರ ಮೊಬೈಲ್ ಗಳಲ್ಲಿ ಆರೋಗ್ಯ ಸೇತು ಆಪ್ ಇದೆ ಎಂದು ನನಗೆ ಖಂಡಿತ ವಿಶ್ವಾಸವಿದೆ. ಆರೋಗ್ಯ ಪ್ರಜ್ಞೆ ಇರುವ 12 ಕೋಟಿ ಮಂದಿ ಅದನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಇದು ಕೊರೊನಾ ಸೋಂಕಿನ ವಿರುದ್ಧದ ಸಮರದಲ್ಲಿ ಅತ್ಯಂತ ಸಹಕಾರಿಯಾಗಿದೆ.
ಗೆಳೆಯರೇ, ನಿಮ್ಮೆಲ್ಲರಿಗೂ ಹೆಚ್ಚಿನ ಕಾಳಜಿ ಇರುವಂತಹ ವಲಯದ ಬಗ್ಗೆ ನನಗೆ ಅರಿವಿದೆ. ಕೆಲವು ಗುಂಪುಗಳ ವರ್ತನೆಯಿಂದಾಗಿ ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ನರ್ಸ್ ಗಳು ಮತ್ತು ಸಫಾಯಿ ಕರ್ಮಚಾರಿಗಳ ವಿರುದ್ಧ ಹಿಂಸಾ ಕೃತ್ಯಗಳು ನಡೆಯುತ್ತಿವೆ. ನಾನು ಇಲ್ಲಿ ಸ್ಪಷ್ಟವಾಗಿ ಹೇಳುವುದೇನೆಂದರೆ ಹಿಂಸೆ, ದೌರ್ಜನ್ಯ ಮತ್ತು ದುರ್ನಡತೆ ಒಪ್ಪುವಂತಹುದಲ್ಲ. ಯಾವುದೇ ರೀತಿಯ ಹಿಂಸಾಚಾರದಿಂದ ನಿಮ್ಮನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂಚೂಣಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸುವ ಎಲ್ಲರಿಗೂ 50 ಲಕ್ಷ ರೂ.ಗಳ ವರೆಗೆ ವಿಮಾ ವ್ಯಾಪ್ತಿ ಕಲ್ಪಿಸಲಾಗಿದೆ.
ಗೆಳೆಯರೇ, ಕಳೆದ 25 ವರ್ಷಗಳ ವಿಶ್ವವಿದ್ಯಾಲಯದ ಯಶಸ್ವಿ ಪಯಣವನ್ನು ನೋಡಿ ನನಗೆ ಸಂತೋಷವಾಗುತ್ತಿದೆ. ವಿಶ್ವವಿದ್ಯಾಲಯದಿಂದ ಹೊರಬಂದ ಸಾವಿರಾರು ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ, ಇಂತಹ ಸವಾಲಿನ ಸಂದರ್ಭದಲ್ಲಿ ಅಗತ್ಯವಿರುವ ಮತ್ತು ಬಡವರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವವಿದ್ಯಾಲಯ ರಾಜ್ಯ ಮತ್ತು ಇಡೀ ದೇಶಕ್ಕೆ ಉತ್ತಮ ಗುಣಮಟ್ಟದ ದಕ್ಷ ಆರೋಗ್ಯ ಸಿಬ್ಬಂದಿಯನ್ನು ಒದಗಿಸುವುದನ್ನು ಮುಂದುವರಿಸಲಿದೆ ಎಂಬ ವಿಶ್ವಾಸ ನನಗೆ ಖಂಡಿತ ಇದೆ. ಧನ್ಯವಾದಗಳು, ಧನ್ಯವಾದಗಳು, ತುಂಬಾ ಧನ್ಯವಾದಗಳು
***
(Release ID: 1628607)
Visitor Counter : 255
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam