ಆಯುಷ್

ಪ್ರಧಾನಮಂತ್ರಿ ಅವರಿಂದ ಮನ್ ಕಿ ಬಾತ್ ನಲ್ಲಿ “ನನ್ನ ಜೀವನ ನನ್ನ ಯೋಗ” ವಿಡಿಯೋ ಬ್ಲಾಗಿಂಗ್ ಸ್ಪರ್ಧೆ ಪ್ರಕಟ

Posted On: 31 MAY 2020 5:46PM by PIB Bengaluru

ಪ್ರಧಾನಮಂತ್ರಿ ಅವರಿಂದ ಮನ್ ಕಿ ಬಾತ್ ನಲ್ಲಿ ನನ್ನ ಜೀವನ ನನ್ನ ಯೋಗವಿಡಿಯೋ ಬ್ಲಾಗಿಂಗ್ ಸ್ಪರ್ಧೆ ಪ್ರಕಟ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನನ್ನ ಜೀವನನನ್ನ ಯೋಗ” (“ಜೀವನ ಯೋಗಎಂದೂ ಸಹ ಕರೆಯಬಹುದು) ವಿಡಿಯೋ ಬ್ಲಾಗಿಂಗ್ ಸ್ಪರ್ಧೆಯನ್ನು ಪ್ರಕಟಿಸಿದ್ದಾರೆ. ರಾಷ್ಟ್ರವನ್ನುದ್ದೇಶಿಸಿ ಅವರು ಮನ್ ಕಿ ಬಾತ್ ತಿಂಗಳ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವಿಷಯ ತಿಳಿಸಿದ್ದಾರೆ. ಸ್ಪರ್ಧೆಯನ್ನು ಆಯುಷ್ ಸಚಿವಾಲಯ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್) ಜಂಟಿಯಾಗಿ ನಡೆಸಲಿವೆ. ಸ್ಪರ್ಧೆಯಲ್ಲಿ ಸಾರ್ವಜನಿಕರ ಜೀವನದಲ್ಲಿ ಯೋಗದಿಂದ ಆಗಿರುವ ಪರಿವರ್ತನಾತ್ಮಕ ಪರಿಣಾಮಗಳ ಬಗ್ಗೆ ಗಮನಹರಿಸಲಾಗುವುದು ಮತ್ತು ಇದು 2020 ಜೂನ್ 21ರಂದು ಆಚರಿಸಲಿರುವ ಆರನೇ ಅಂತಾರಾಷ್ಟ್ರೀಯ ಯೋಗ ದಿನ(ಐಡಿವೈ) ಒಂದು ಪ್ರಮುಖ ಚಟುವಟಿಕೆಯಾಗಿದೆ. ಸ್ಪರ್ಧೆ 2020 ಮೇ 31 ರಂದು ಅಂದರೆ ಇಂದು ಆಯುಷ್ ಸಚಿವಾಲಯ ನಿರ್ವಹಿಸುವ ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಸ್ಪರ್ಧೆ ಇರುತ್ತದೆ.

ಹಿಂದಿನ ವರ್ಷಗಳ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಹಸ್ರಾರು ಮಂದಿ ಸೌಹಾರ್ದಯುತವಾಗಿ ಸಾಮೂಹಿಕ ಯೋಗ ಪ್ರದರ್ಶನಗಳನ್ನು ನೀಡಿದ್ದರು. ಆದರೆ ಕೋವಿಡ್-19 ಸಾಂಕ್ರಾಮಿಕ ಸ್ವರೂಪದ್ದಾಗಿರುವ ಹಿನ್ನೆಲೆಯಲ್ಲಿ ವರ್ಷ ಸಾಮೂಹಿಕವಾಗಿ ಸೇರುವುದು ಉಚಿತವಲ್ಲ. ಆದ್ದರಿಂದ ವರ್ಷ ಸಚಿವಾಲಯ ಜನರು ಮನೆಗಳಲ್ಲೇ ಯೋಗ ಮಾಡುವ ಹವ್ಯಾಸವನ್ನು ಉತ್ತೇಜಿಸುತ್ತಿದೆ. ನನ್ನ ಜೀವನ ನನ್ನ ಯೋಗವಿಡಿಯೋ ಬ್ಲಾಗಿಂಗ್ ಸ್ಪರ್ಧೆಯ ಮೂಲಕ ಆಯುಷ್ ಸಚಿವಾಲಯ ಮತ್ತು ಐಸಿಸಿಆರ್ ಯೋಗದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚು ಮೂಡಿಸುವುದಲ್ಲದೆ, 2020 ಐಡಿವೈನಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಳ್ಳಲು ಸಜ್ಜಾಗುವುದಕ್ಕೆ ಸ್ಫೂರ್ತಿ ನೀಡಲಾಗುತ್ತಿದೆ. ಸ್ಪರ್ಧೆಯಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್ ಬುಕ್, ಟ್ವಿಟರ್ ಮತ್ತು ಇನ್ ಸ್ಟಾಗ್ರಾಮ್ ಮೂಲಕ ಭಾಗವಹಿಸಬಹುದು. ವಿಡಿಯೋ ಸ್ಪರ್ಧೆ ಎಲ್ಲ ದೇಶಗಳ ಎಲ್ಲ ಜನರಿಗೆ ಮುಕ್ತವಾಗಿರುತ್ತದೆ.

ಸ್ಪರ್ಧೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಅಂತಾರಾಷ್ಟ್ರೀಯ ವಿಡಿಯೋ ಬ್ಲಾಗಿಂಗ್ ಸ್ಪರ್ಧೆ ಒಳಗೊಂಡಿದ್ದು, ಅದರಲ್ಲಿ ವಿಜೇತರನ್ನು ಅಯಾ ದೇಶದ ಒಳಗಿನವರಲ್ಲೇ ಆಯ್ಕೆ ಮಾಡಲಾಗುವುದು. ಆನಂತರ ನಾನಾ ದೇಶಗಳ ಸ್ಪರ್ಧೆ ವಿಜೇತರಲ್ಲಿ ಜಾಗತಿಕ ಬಹುಮಾನ ವಿಜೇತರನ್ನು ಆಯ್ಕೆ ಮಾಡಲಾಗುವುದು.

ಸ್ಪರ್ಧೆಗೆ ಪ್ರವೇಶಗಳನ್ನು ಬಯಸುವವರು, ಮೂರು ವಿಭಾಗಗಳಲ್ಲಿ ಸಲ್ಲಿಸಬಹುದು. ಅವುಗಳೆಂದರೆ ಯುವಕರು (18 ವರ್ಷದೊಳಗಿನವರು), ವಯಸ್ಕರು(18 ವರ್ಷ ಮೇಲ್ಪಟ್ಟವರು) ಮತ್ತು ಯೋಗ ವೃತ್ತಿಪರರು ಹಾಗೂ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆಗಳು ಇರಲಿವೆ. ಒಟ್ಟಾರೆ ಆರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. ಭಾರತೀಯ ಸ್ಪರ್ಧಿಗಳಿಗೆ ಬಹುಮಾನದ ಮೊತ್ತ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಕ್ಕೆ ಒಂದು ಲಕ್ಷ ರೂ., 50 ಸಾವಿರ ರೂ. ಮತ್ತು 25 ಸಾವಿರ ರೂ. ಇರುತ್ತದೆ, ಇದು ಪ್ರತಿಯೊಂದು ವಿಭಾಗದಲ್ಲೂ ಇರಲಿದ್ದು, ಮೊದಲ ಹಂತದಲ್ಲಿ ಆಯಾ ವಿಭಾಗಗಳಲ್ಲೇ ಪ್ರಶಸ್ತಿ ಪ್ರಕಟಿಸಲಾಗುವುದು. ಜಾಗತಿಕ ಪ್ರಶಸ್ತಿ ವಿಜೇತರ ವಿವರಗಳನ್ನು ಆಯುಷ್ ಸಚಿವಾಲಯದ ಯೋಗ ಪೋರ್ಟಲ್ ನಲ್ಲಿ ಸದ್ಯದಲ್ಲೇ ಪ್ರಕಟಿಸಲಾಗುವುದು.

ಜಗತ್ತಿನ ಎಲ್ಲರಿಗೂ ಸ್ಪರ್ಧೆಗಳು ಮುಕ್ತವಾಗಿರುತ್ತವೆ. ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ಯೋಗಾಭ್ಯಾಸದ ಮೂರು ನಿಮಿಷಗಳ, ಮೂರು ಪದ್ಧತಿಗಳ(ಕ್ರಿಯಾ, ಆಸನ, ಪ್ರಾಣಾಯಾಮ, ಬಂಧ ಅಥವಾ ಮುದ್ರಾ) ವಿಡಿಯೋವನ್ನು ಹೇಗೆ ಯೋಗ ಪದ್ಧತಿ ತಮ್ಮ ಜೀವನದ ಮೇಲೆ ಪರಿಣಾಮಬೀರಿದೆ ಎಂಬ ಕಿರು ವಿಡಿಯೋ ಸಂದೇಶ/ವಿವರಣೆ ಇರುವಂತೆ ಅಪ್ ಲೋಡ್ ಮಾಡಬೇಕು. ವಿಡಿಯೋವನ್ನು ಫೇಸ್ ಬುಕ್, ಟ್ವಿಟರ್ ಮತ್ತು ಇನ್ ಸ್ಟಾಗ್ರಾಮ್ ಹ್ಯಾಶ್ ಟ್ಯಾಗ್ #MyLifeMyYogaINDIAನಲ್ಲಿ ಮತ್ತು ಸೂಕ್ತ ವಿಭಾಗದಲ್ಲಿ ಹ್ಯಾಶ್ ಟ್ಯಾಗ್ ಬಳಸಿ ಅಪ್ ಲೋಡ್ ಮಾಡುವುದು. ಸ್ಪರ್ಧೆಯ ವಿಸ್ತೃತ ಮಾರ್ಗಸೂಚಿಗಳು ಆಯುಷ್ ಸಚಿವಾಲಯದ ಯೋಗ ಪೋರ್ಟಲ್ ನಲ್ಲಿ(https://yoga.ayush.gov.in/yoga/) ಲಭ್ಯ.

ಪ್ರಧಾನಮಂತ್ರಿಗಳು ಸ್ಪರ್ಧೆಯನ್ನು ಘೋಷಿಸಿರುವುದರಿಂದ ಬಗ್ಗೆ ಭಾರೀ ಕುತೂಹಲ ಹಾಗೂ ಆಸಕ್ತಿ ಸೃಷ್ಟಿಯಾಗಿದೆ. ಆಯುಷ್ ಸಚಿವಾಲಯ, ಆಸಕ್ತಿ ಸಾರ್ವಜನಿಕ ಆರೋಗ್ಯಕ್ಕೆ ಮಹತ್ವದ ಪ್ರಯೋಜನವಾಗಿ ಪರಿವರ್ತನೆಯಾಗಲಿದೆ ಎಂಬ ವಿಶ್ವಾಸದಲ್ಲಿದೆ. ಕೋವಿಡ್-19 ಸಾಂಕ್ರಾಮಿಕ ಸ್ಥಿತಿಗತಿ ಹಿನ್ನೆಲೆಯಲ್ಲಿ ಹಾಗೂ ಅದರ ನಿರ್ವಹಣೆಗೆ ನಾನಾ ಆಯಾಮಗಳಲ್ಲಿ ಯೋಗ ಸಕಾರಾತ್ಮಕ ಪರಿಣಾಮ ಬೀರಿದೆ ಎಂಬುದು ಇದೀಗ ಎಲ್ಲರಿಗೂ ಸ್ವೀಕೃತವಾಗಿದೆ.

***


(Release ID: 1628274) Visitor Counter : 306