ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ

ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯದಿಂದ ಕಳೆದ ಆರು ವರ್ಷಗಳ ಸಾಧನೆ ಮತ್ತು ಉಪಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಇನ್ಫೋಗ್ರಾಫಿಕ್ಸ್ ಬಿಡುಗಡೆ

Posted On: 31 MAY 2020 5:05PM by PIB Bengaluru

ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯದಿಂದ

ಕಳೆದ ಆರು ವರ್ಷಗಳ ಸಾಧನೆ ಮತ್ತು ಉಪಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಇನ್ಫೋಗ್ರಾಫಿಕ್ಸ್ ಬಿಡುಗಡೆ

 

ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯ ಕಳೆದ ಆರು ವರ್ಷಗಳ ತನ್ನ ಸಾಧನೆ ಮತ್ತು ಉಪಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಹಿಂದಿ ಹಾಗೂ ಇಂಗ್ಲೀಷ್ ತಲಾ ಐದು ಇನ್ಫೋಗ್ರಾಫಿಕ್ಸ್ ಗಳನ್ನು ಬಿಡುಗಡೆ ಮಾಡಿದೆ. ಇವು ಸಾಮಾಜಿಕ ಮಾಧ್ಯಮಗಳ ವೇದಿಕೆಗಳಿಗೆ ಹೆಚ್ಚು ಸೂಕ್ತವಾಗಿದ್ದು, ಐದು ವಿಸ್ತೃತ ವಿಷಯಗಳು/ಪಠ್ಯಗಳಡಿ ದೇಶಾದ್ಯಂತ ಸಚಿವಾಲಯ ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಕೈಗೊಂಡಿರುವ ಬಹುತೇಕ ಎಲ್ಲ ಯೋಜನೆಗಳ ವಿವರಗಳನ್ನು ಒಳಗೊಂಡಿವೆ. ಅವುಗಳೆಂದರೆ,

*ಕೌಶಲ್ಯಾಭಿವೃದ್ಧಿ, ಉದ್ಯೋಗ ಮತ್ತು ಉದ್ಯೋಗಾವಕಾಶಗಳು

*ಹುನಾರ್ ಹಾತ್- ಕರಕುಶಲ ಕರ್ಮಿಗಳು, ಬಾಣಸಿಗರುವ ಸೇರಿ ಇತ್ಯಾದಿಯವರ ಕೌಶಲ್ಯಾಭಿವೃದ್ಧಿಗೆ ಒತ್ತು, ವಿಶೇಷವಾಗಿ ಮಹಿಳೆಯರ ಸಬಲೀಕರಣ.

*ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮ (ಪಿಎಂಜೆವಿಕೆ)- ದೇಶಾದ್ಯಂತ ಅಲ್ಪಸಂಖ್ಯಾತ ಸಮುದಾಯುದವರು ಹೆಚ್ಚು ನೆಲೆಸಿರುವ ಪ್ರದೇಶಗಳಲ್ಲಿ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ವಲಯಗಳಿಗೆ ಒತ್ತು ನೀಡುವ ಜೊತೆಗೆ ಉದ್ಯೋಗಾಧಾರಿತ ಮೂಲಸೌಕರ್ಯ ವೃದ್ಧಿಗೆ ಗಮನ

*ಶೈಕ್ಷಣಿಕ ಸಬಲೀಕರಣ ಮತ್ತು

*ವಕ್ಫ್ ಆಸ್ತಿಗಳ ಬಳಕೆ- ವಕ್ಫ್ ಆಸ್ತಿಗಳನ್ನು ಸಮಾಜದ ಕಲ್ಯಾಣಕ್ಕೆ ಬಳಸುವುದನ್ನು ಖಾತ್ರಿಪಡಿಸಲು ದೇಶಾದ್ಯಂತ ಇರುವ ವಕ್ಫ್ ಆಸ್ತಿಗಳ ದಾಖಲೆಗಳ ಡಿಜಿಟಲೀಕರಣ ಮತ್ತು ಜಿಯೋ ಟ್ಯಾಗಿಂಗ್.

ಇನ್ಫೋಗ್ರಾಫಿಕ್ಸ್ ನಲ್ಲಿ ಚಿತ್ರಗಳು, ಛಾಯಾಚಿತ್ರಗಳು ಮತ್ತು ಸುಲಭವಾಗಿ ಅರ್ಥವಾಗುವಂತಹ ಪಠ್ಯವನ್ನು ಸಂದೇಶದ ರೂಪದಲ್ಲಿ ವಿನ್ಯಾಸಗೊಳಿಸಿ ನೀಡಲಾಗಿದೆ.

ಇಂಗ್ಲೀಷ್ ಮತ್ತು ಹಿಂದಿ ಇನ್ಫೋಗ್ರಾಫಿಕ್ಸ್ ಗಳಿಗೆ ಲಿಂಕ್ ಕ್ಲಿಕ್ ಮಾಡಿ)

 

***



(Release ID: 1628273) Visitor Counter : 125