ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ

ತಳಮಟ್ಟದ ಪರಿಸ್ಥಿತಿ ಪರಾಮರ್ಶಿಸಲು ಆಹಾರ ಸಂಸ್ಕರಣಾ ಉದ್ಯಮದ ಭಾಗಿದಾರರ ಜೊತೆಗೆ ನಿರಂತರವಾಗಿ ವಿಡಿಯೊ ಕಾನ್ಫರೆನ್ಸ್ ನಡೆಸುತ್ತಿರುವ ಶ್ರೀಮತಿ ಹರ್ ಸಿಮ್ರತ್ ಕೌರ್ ಬಾದಲ್

Posted On: 30 MAY 2020 2:50PM by PIB Bengaluru

ಕೋವಿಡ್-19 ಪರಿಸ್ಥಿತಿಯ ನಡುವೆ ಉದ್ಯಮದಿಂದ ಸ್ವೀಕರಿಸಿದ 585 ಸಮಸ್ಯೆಗಳ ಪೈಕಿ 581ಅನ್ನು ಬಗೆಹರಿಸಿದ

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ಕುಂದುಕೊರತೆ ವಿಭಾಗ

ತಳಮಟ್ಟದ ಪರಿಸ್ಥಿತಿ ಪರಾಮರ್ಶಿಸಲು ಆಹಾರ ಸಂಸ್ಕರಣಾ ಉದ್ಯಮದ ಭಾಗಿದಾರರ ಜೊತೆಗೆ ನಿರಂತರವಾಗಿ ವಿಡಿಯೊ ಕಾನ್ಫರೆನ್ಸ್ ನಡೆಸುತ್ತಿರುವ ಶ್ರೀಮತಿ ಹರ್ ಸಿಮ್ರತ್ ಕೌರ್ ಬಾದಲ್

 

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ಕುಂದುಕೊರತೆ ವಿಭಾಗ ಸಕಾಲದಲ್ಲಿ ಸಕ್ರಿಯ ಧೋರಣೆಯೊಂದಿಗೆ ತಾನು ಸ್ವೀಕರಿಸಿದ 585 ದೂರುಗಳ ಪೈಕಿ 581 ಅನ್ನು ಬಗೆಹರಿಸಿದೆ. ಸಮಸ್ಯೆಗಳನ್ನು ಕಾರ್ಯಪಡೆ ಕೈಗೆತ್ತಿಕೊಂಡು ಅವುಗಳಿಗೆ ಸಂಬಂಧಿಸಿದಂತೆ ಆಯಾ ರಾಜ್ಯ ಸರ್ಕಾರಗಳು ಮತ್ತು ಹಣಕಾಸು ಸಚಿವಾಲಯ, ಗೃಹ ಸಚಿವಾಲಯ ಸೇರಿದಂತೆ ಇತರೆ ಸಂಬಂಧಿಸಿದ ಪ್ರಾಧಿಕಾರಗಳು ಮತ್ತು ಇತರರೊಡನೆ ಚರ್ಚಿಸಿ ಬಗೆಹರಿಸಿದೆ. ಕಾರ್ಯಪಡೆ ರಾಜ್ಯಗಳಲ್ಲಿನ ಆಹಾರ ಸಂಸ್ಕರಣೆದಾರರು ಮತ್ತು ಉದ್ಯಮದ ಪ್ರಮುಖ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ಆಹಾರ ಮತ್ತು ಅದರ ಸಂಬಂಧಿ ಉದ್ಯಮಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯಗಳು/ಸವಾಲುಗಳು ಎದುರಾದರೆ ಅವುಗಳನ್ನು ತಕ್ಷಣವೇ ಗರಿಷ್ಠ ಸಾಮರ್ಥ್ಯದೊಂದಿಗೆ ಪರಿಹರಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದೆ. ರಾಷ್ಟ್ರವ್ಯಾಪಿ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಆಹಾರಧಾನ್ಯಗಳ ಉತ್ಪಾದನೆ ಅಥವಾ ಪೂರೈಕೆಯಲ್ಲಿ ಆಗುವ ಅಡಚಣೆಗಳು ಸೇರಿದಂತೆ ಯಾವುದೇ ಕುಂದುಕೊರತೆಗಳು ಅಥವಾ ಸಮಸ್ಯೆಗಳನ್ನು ಆಹಾರ ಸಂಸ್ಕರಣಾ ಉದ್ಯಮ ಎದುರಿಸಿದರೆ ಅವುಗಳನ್ನು covidgrievance-mofpi[at]gov[dot]in. ವಿಳಾಸಕ್ಕೆ ಮೇಲ್ ಮಾಡಬಹುದು.

ಸಚಿವಾಲಯದಲ್ಲಿ ಒಂದು ನಿಗದಿತ ಕಾರ್ಯಪಡೆ ಹಾಗೂ ಕುಂದುಕೊರತೆ ವಿಭಾಗವನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಇನ್ವೆಸ್ಟ್ ಇಂಡಿಯಾದ ಸದಸ್ಯರು ಒಳಗೊಂಡಿದ್ದಾರೆ. ಉದ್ಯಮದವರು ನೇರವಾಗಿ ತಮ್ಮ ಕುಂದುಕೊರತೆ ಕೋಶವನ್ನು ತಲುಪಬಹುದು ಅಥವಾ ಇತರೆ ಉದ್ಯಮದ ಸಂಘಟನೆಗಳೊಂದಿಗೆ ತಲುಪಬಹುದು. ಕುಂದುಕೊರತೆ ಕೋಶ ಸ್ವೀಕರಿಸಿದ ಪ್ರಮುಖ ಸಮಸ್ಯೆಗಳಲ್ಲಿ ಕೆಳಗಿನವು ಸೇರಿವೆ.

  1. ಲಾಕ್ ಡೌನ್ ನಿಂದಾಗಿ ಪ್ಲಾಂಟ್ ಗಳ ಸ್ಥಗಿತ
  2. ಸಾಗಾಣೆ ಸಂಬಂಧಿ ವಿಷಯಗಳು, ಗೋದಾಮು ಬಂದ್
  3. ಕಾರ್ಮಿಕರ ಅಲಭ್ಯತೆ
  4. ಸಿಬ್ಬಂದಿ ಮತ್ತು ಕೆಲಸಗಾರರ ಸಂಚಾರ

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವೆ ಶ್ರೀಮತಿ ಹರ್ ಸಿಮ್ರತ್ ಕೌರ್ ಬಾದಲ್, ತಳಮಟ್ಟದಲ್ಲಿ ಪರಿಸ್ಥಿತಿಯನ್ನು ಮೇಲೆ ನಿರಂತರವಾಗಿ ನಿಗಾಇರಿಸಲು ಉದ್ಯಮದ ಸಂಘಟನೆಗಳು, ಕೋಲ್ಡ್ ಚೈನ್ ಡೆವಲಪರ್ ಗಳು, ರಫ್ತುದಾರರು ಮತ್ತಿತರರ ಜೊತೆ ಸರಣಿ ವಿಡಿಯೋ ಸಂವಾದ ಸಭೆಗಳ ನಡೆಸುತ್ತಿದ್ದಾರೆ.

ಸಚಿವಾಲಯ ಕೋಲ್ಡ್ ಚೈನ್ ಪ್ರಮೋಟರ್ ಜೊತೆಗಿನ ವಿಡಿಯೊ ಸಂವಾದದ ವೇಳೆ ಹಲವು ಸಮಸ್ಯೆಗಳನ್ನು ಸ್ವೀಕರಿಸಿತು ಮತ್ತು ಅವುಗಳ ಕುರಿತಂತೆ ಕಾರ್ಯಪಡೆ ಪ್ರಾಮಾಣಿಕವಾಗಿ ಸ್ಪಂದಿಸಿ, ಇತರೆ ಭಾಗಿದಾರರ ಜೊತೆ ಅವುಗಳ ಬಗ್ಗೆ ಚರ್ಚಿಸಿ ಪರಿಹಾರಗಳನ್ನು ದೊರಕಿಸಿಕೊಟ್ಟಿದೆ. ಪರಿಸ್ಥಿತಿ ಸಹಜಸ್ಥಿತಿ ಬರುವವರೆಗ ಆಹಾರ ಮತ್ತು ಅದರ ಸಂಬಂಧಿ ಉದ್ಯಮಗಳ ಅಗತ್ಯತೆಯನ್ನು ಗಮನದಲ್ಲಿರಿಸಿಕೊಂಡು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸಾಗಾಣೆ ಮತ್ತು ಪೂರೈಕೆ ಕುರಿತ ಉನ್ನತಾಧಿಕಾರ ಸಮಿತಿಯಲ್ಲಿ ಎಂಒಎಫ್ ಪಿಐ ಸದಸ್ಯತ್ವ ಹೊಂದಿದ್ದು, ಕಟಾವು ಮಾಡಿದ ಕೃಷಿ ಉತ್ಪನ್ನವನ್ನು ಉದ್ಯಮಕ್ಕೆ ಪೂರೈಸಲು ಮೂಲಕ ರೈತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಕೋವಿಡ್ ಬಿಕ್ಕಟ್ಟಿನಿಂದಾಗಿ ಆಹಾರ ಸಂಸ್ಕರಣಾ ಉದ್ಯಮದ ಮೇಲೆ ಕನಿಷ್ಠ ಪರಿಣಾಮಗಳಾಗುವಂತೆ ನೋಡಿಕೊಳ್ಳಲು ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯ ಹಲವು ಕ್ರಮಗಳನ್ನು ಕೈಗೊಂಡಿದೆ.

***



(Release ID: 1628052) Visitor Counter : 202