PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 29 MAY 2020 6:31PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

https://static.pib.gov.in/WriteReadData/userfiles/image/image005DCFM.jpg

ಕೋವಿಡ್-19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಹಂತ ಹಂತವಾಗಿ ಮತ್ತು ಸಾಕಷ್ಟು ಮುಂಚಿತವಾಗಿ ಹಾಗು  ಪೂರ್ವತಯಾರಿಯೊಂದಿಗೆ ಭಾರತ ಸರಕಾರವು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಜೊತೆಗೂಡಿ ಕೋವಿಡ್ -19 ನಿಯಂತ್ರಣ, ಹರಡುವಿಕೆ ತಡೆ ಮತ್ತು ನಿರ್ವಹಣೆಗೆ ಹಲವಾರು ಕ್ರಮಗಳನ್ನು ಅನುಷ್ಟಾನಿಸುತ್ತಿದೆ. ಇವುಗಳನ್ನು ನಿಯಮಿತವಾಗಿ ಪರಾಮರ್ಶಿಸಲಾಗುತ್ತದೆ ಮತ್ತು ಉನ್ನತ ಮಟ್ಟದಲ್ಲಿ ಇವುಗಳ ಮೇಲೆ ನಿಗಾ ಇಡಲಾಗುತ್ತದೆ. ಸಕ್ರಿಯ ವೈದ್ಯಕೀಯ ನಿಗಾದಲ್ಲಿರುವ ಪ್ರಕರಣಗಳ ಸಂಖ್ಯೆ 89,987. ಇದುವರೆಗೆ ಒಟ್ಟು 71,105 ಮಂದಿ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 3,414 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಒಟ್ಟು ಚೇತರಿಕೆ ದರ 42.89%.ಆಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1627188

https://static.pib.gov.in/WriteReadData/userfiles/image/image006TPA7.jpg

ರೈಲ್ವೇ ಸಚಿವಾಲಯದಿಂದ ಪ್ರಯಾಣಿಕರಿಗೆ ಮನವಿ

ವಲಸೆ ಕಾರ್ಮಿಕರು ಅವರ ತವರು ರಾಜ್ಯಗಳಿಗೆ ಮರಳುವುದನ್ನು ಖಾತ್ರಿಪಡಿಸುವ  ಉದ್ದೇಶದಿಂದ ಭಾರತೀಯ ರೈಲ್ವೇಯು ದೇಶಾದ್ಯಂತದಿಂದ ದಿನ ನಿತ್ಯ ಶ್ರಮಿಕ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಸೇವೆಯನ್ನು ಬಳಸುತ್ತಿರುವ ಕೆಲವು ವ್ಯಕ್ತಿಗಳು ಮೊದಲೇ ಇರುವ ವೈದ್ಯಕೀಯ ಸಂಕೀರ್ಣ ಸಮಸ್ಯೆಗಳಿಂದಾಗಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಲ್ಲಿ ಗಂಭೀರ ಅಪಾಯವನ್ನು ಆಹ್ವಾನಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಮೊದಲೇ ಇರುವ ವೈದ್ಯಕೀಯ ಸಮಸ್ಯೆಗಳಿಂದಾಗಿ  ಪ್ರಯಾಣದ ವೇಳೆ ಕೆಲವು ವ್ಯಕ್ತಿಗಳು ಮೃತ್ತಪಟ್ಟ ದುರದೃಷ್ಟಕರ  ಘಟನೆಗಳು ಸಂಭವಿಸಿವೆ. ಹೀಗೆ ಅಪಾಯಕ್ಕೀಡಾಗುವ ಸಂಭವ ಇರುವ ವ್ಯಕ್ತಿಗಳನ್ನು ಕೋವಿಡ್ -19 ರಿಂದ ರಕ್ಷಿಸಲು ರೈಲ್ವೇಯು ವೈದ್ಯಕೀಯ ಸಮಸ್ಯೆಗಳು ಇರುವ (ಉದಾಹರಣೆಗೆ -ರಕ್ತದ ಅಧಿಕ ಒತ್ತಡ , ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ , ಕ್ಯಾನ್ಸರ್, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು) ವ್ಯಕ್ತಿಗಳು, ಗರ್ಭಿಣಿಯರು, 10  ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 65 ವರ್ಷ ವಯೋಮಾನದ ವ್ಯಕ್ತಿಗಳು ತೀರಾ ಅಗತ್ಯ ಇಲ್ಲದಿದ್ದರೆ ರೈಲು ಮೂಲಕ ಪ್ರಯಾಣವನ್ನು ಕೈಗೊಳ್ಳದಿರುವುದು ಉತ್ತಮ ಎಂದು ರೈಲ್ವೇ ಸಚಿವಾಲಯವು ಸಲಹೆ ನೀಡಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1627561

ಶ್ರಮಿಕ್ ವಿಶೇಷ ರೈಲುಗಳಲ್ಲಿ ಪ್ರಯಾಣಿಸಿದ ಸುಮಾರು 50 ಲಕ್ಷ ಅನ್ಯ ರಾಜ್ಯಗಳ ವಲಸಿಗರಿಗೆ
ಸುಮಾರು 85 ಲಕ್ಷಕ್ಕೂ ಹೆಚ್ಚು ಉಚಿತ ಊಟ ಮತ್ತು ಸುಮಾರು 1.25 ಕೋಟಿ ಉಚಿತ ನೀರಿನ ಬಾಟಲಿಗಳನ್ನು ಭಾರತೀಯ ರೈಲ್ವೆ ವಿತರಿಸಿದೆ

ಶ್ರಮಿಕ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ಸುಮಾರು 50 ಲಕ್ಷ ವಲಸೆ ಕಾರ್ಮಿಕರಿಗೆ ಭಾರತೀಯ ರೈಲ್ವೇಯಿಂದ 85 ಲಕ್ಷಕ್ಕೂ ಅಧಿಕ ಉಚಿತ ಊಟ ಮತ್ತು ಸುಮಾರು 1.25 ಕೋಟಿ ಉಚಿತ ನೀರಿನ ಬಾಟಲುಗಳ ವಿತರಣೆ.

2020 ಮೇ 1 ರಿಂದ ಶ್ರಮಿಕ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ವಲಸೆ ಕಾರ್ಮಿಕರಿಗೆ ಭಾರತೀಯ ರೈಲ್ವೇಯಿಂದ 85 ಲಕ್ಷಕ್ಕೂ ಅಧಿಕ ಉಚಿತ ಊಟ ಮತ್ತು ಸುಮಾರು 1.25 ಕೋಟಿ ಉಚಿತ ನೀರಿನ ಬಾಟಲುಗಳನ್ನು  ವಿತರಣೆ ಮಾಡಲಾಗಿದೆ. ಶ್ರಮಿಕ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ಎಲ್ಲಾ ವಲಸೆಗಾರರಿಗೆ ಆಹಾರ  ಮತ್ತು ನೀರಿನ ಬಾಟಲುಗಳನ್ನು ಒದಗಿಸಲಾಗುತ್ತಿದೆ. .ಆರ್.ಸಿ.ಟಿ .ಸಿ.ಯು ಪೂರಿ, ತರಕಾರಿ ಉಪ್ಪಿನ ಕಾಯಿ, ರೋಟಿ ತರಕಾರಿ ಉಪ್ಪಿನ ಕಾಯಿ, ಬಾಳೆ ಹಣ್ಣು, ಬಿಸ್ಕತ್ತುಗಳು, ಕೇಕ್, ಬಿಸ್ಕತ್ ನಮ್ಕೀನ್  , ವೆಜ್ ಪುಲಾವ್ , ಪಾವ್ ಭಾಜಿ, ಲೆಮನ್ ರೈಸ್ ಉಪ್ಪಿನಕಾಯಿ, ಉಪ್ಪಿಟ್ಟು, ಅವಲಕ್ಕಿ ಉಪ್ಪಿನಕಾಯಿ ಇತ್ಯಾದಿಗಳನ್ನು ಪ್ರಯಾಣಿಸುವ ವಲಸೆಗಾರರಿಗೆ ಊಟವಾಗಿ ರೈಲ್ ನೀರ್ ಬಾಟಲಿಯೊಂದಿಗೆ ಒದಗಿಸುತ್ತಿದೆ. 2020 ಮೇ 28 ವರೆಗೆ ದೇಶಾದ್ಯಂತ ವಿವಿಧ ರಾಜ್ಯಗಳಿಂದ 3736 “ಶ್ರಮಿಕ ವಿಶೇಷರೈಲುಗಳು ಕಾರ್ಯಾಚರಿಸಿವೆ. 67 ಪ್ರಯಾಣದ ಸಿದ್ದತೆಯಲ್ಲಿವೆ. 27.05.2020 ರಂದು , 172 ಶ್ರಮಿಕ ವಿಶೇಷ ರೈಲುಗಳು ಪ್ರಾರಂಭವಾಗಿವೆ. ಇದುವರೆಗೆ 27  ದಿನಗಳಲ್ಲಿ 50 ಲಕ್ಷ ವಲಸೆಗಾರರನ್ನು 172 ಶ್ರಮಿಕ ವಿಶೇಷ ರೈಲುಗಳಲ್ಲಿ ಕರೆದೊಯ್ಯಲಾಗಿದೆ. ಇಂದು ಓಡಾಟ ಮಾಡುತ್ತಿರುವ ರೈಲುಗಳಿಗೆ ಯಾವುದೇ ದಟ್ಟಣೆ ಎದುರಾಗುತ್ತಿಲ್ಲ ಎಂಬ ಅಂಶ ಗಮನೀಯವಾದುದು.

ವಿವರಗಳಿಗೆ : https://pib.gov.in/PressReleseDetail.aspx?PRID=1627493

30 ರಾಜಧಾನಿ ಮಾದರಿಯ ವಿಶೇಷ ರೈಲುಗಳಿಗೆ ಮತ್ತು 200 ವಿಶೇಷ ಮೈಲ್ ಎಕ್ಸ್ ಪ್ರೆಸ್ ರೈಲುಗಳಿಗೆ ಸಂಬಂಧಿಸಿ ಸೂಚನೆಗಳನ್ನು ಪರಿಷ್ಕರಿಸಿದ ಭಾರತೀಯ ರೈಲ್ವೇ

12.05.2020 ರಿಂದ ಆರಂಭಗೊಂಡಿರುವ 30 ವಿಶೇಷ ರಾಜಧಾನಿ ರೀತಿಯ  ರೈಲುಗಳು ಮತ್ತು 01.06.2020 ರಿಂದ ಓಡಾಟ ಆರಂಭಿಸಲಿರುವ 200 ವಿಶೇಷ ಮೈಲ್ ಎಕ್ಸ್ ಪ್ರೆಸ್ ರೈಲುಗಳಿಗೆ (ಒಟ್ಟು 230 ರೈಲುಗಳು) ಸೂಚನೆಗಳನ್ನು ಭಾರತೀಯ ರೈಲ್ವೇಯು ಪರಿಷ್ಕರಿಸಿದೆ. ರೈಲ್ವೇ ಸಚಿವಾಲಯವು ಮುಂಗಡ ಕಾಯ್ದಿರಿಸುವ ಅವಧಿ (.ಆರ್.ಪಿ.) ಯನ್ನು ಎಲ್ಲಾ ವಿಶೇಷ ರೈಲುಗಳಿಗೆ ಅನ್ವಯಿಸುವಂತೆ 30 ದಿನಗಳಿಂದ 120 ದಿನಗಳಿಗೆ ಹೆಚ್ಚಿಸಲು ನಿರ್ಧರಿಸಿದೆ. ಪಾರ್ಸೆಲ್ ಮತ್ತು ಲಗ್ಗೇಜ್ ಮುಂಗಡ ಕಾಯ್ದಿರಿಸುವಿಕೆ ಎಲ್ಲಾ 230 ರೈಲುಗಳಲ್ಲಿಯೂ  ಅನುಮತಿಸಲಾಗಿದೆ. ಮೇಲಿನ ಬದಲಾವಣೆಗಳು ಮುಂಗಡ ಕಾಯ್ದಿರಿಸುವ  ದಿನಾಂಕ 2020 ಮೇ 31 ರಿಂದ ಅಂದು  ಗಂಟೆ 8.00 ರಿಂದ ಜಾರಿಗೆ ಬರುತ್ತವೆ.

ವಿವರಗಳಿಗೆhttps://pib.gov.in/PressReleseDetail.aspx?PRID=1627516

ವರ್ತಕರ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದ ಶ್ರೀ ಪೀಯುಶ್ ಗೋಯಲ್

ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವರಾದ ಶ್ರೀ ಪೀಯುಶ್ ಗೋಯಲ್ ಅವರು ವರ್ತಕರ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿಯಾದರು. ಲಾಕ್ ಡೌನ್ ಅವಧಿಯಲ್ಲಿ  ರಾಷ್ಟ್ರವು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಟ ನಿರತವಾಗಿತ್ತು ಮತ್ತು ಸಾಮರ್ಥ್ಯಗಳನ್ನು ಗಳಿಸಿತು ಎಂದು ಸಚಿವರು ಹೇಳಿದರು. ಹಲವಾರು ಸೂಚ್ಯಂಕಗಳು ಆರ್ಥಿಕ ಪುನಃಶ್ಚೇತನ ಆರಂಭಗೊಳ್ಳುತ್ತಿರುವ ಸೂಚನೆಗಳನ್ನು ಒದಗಿಸಿವೆ ಎಂದ ಅವರು ಕೋವಿಡ್ -19 ವಿರುದ್ದ ಹೋರಾಟಕ್ಕೆ ಹಣಕಾಸು ಸಚಿವರು ಪ್ರಕಟಿಸಿದ ಆತ್ಮನಿರ್ಭರ ಪ್ಯಾಕೇಜ್ ಎಂ.ಎಸ್.ಎಂ.. ಗಳಿಗೆ 3 ಲಕ್ಷ ಕೋ.ರೂ. ಸಾಲ ಖಾತ್ರಿಯನ್ನು ಒದಗಿಸಿದ್ದು, ಇದು ವರ್ತಕರನ್ನೂ ಒಳಗೊಂಡಿದೆ ಎಂದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರಕಾರವು ಪರಿವರ್ತನಾಶೀಲವಾದ ಉಪಕ್ರಮಗಳನ್ನು ಕೈಗೊಂಡಿದೆ, ಅವು ಭಾರತವನ್ನು ಬಲಿಷ್ಟ ರಾಷ್ಟ್ರವನ್ನಾಗಿಸಲು ಸಹಾಯ ಮಾಡಲಿವೆ ಎಂದೂ ಸಚಿವರು ಹೇಳಿದರು.

ವಿವರಗಳಿಗೆ : https://pib.gov.in/PressReleseDetail.aspx?PRID=1627566

ಕನಿಷ್ಟ ಬೆಂಬಲ ಬೆಲೆ ಪಟ್ಟಿಗೆ 23 ಹೆಚ್ಚುವರಿ ಕಿರು ಅರಣ್ಯ ಉತ್ಪತ್ತಿಗಳ ಸೇರ್ಪಡೆ, ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಘೋಷಣೆ

ಬುಡಕಟ್ಟು ವ್ಯವಹಾರಗಳ ಸಚಿವಾಲಯವು 23 ಹೆಚ್ಚುವರಿ ಕಿರು ಅರಣ್ಯ ಉತ್ಪತ್ತಿಗಳನ್ನು (ಎಂ.ಎಫ್.ಪಿ.) ಕೇಂದ್ರ ಸರಕಾರ ಬೆಂಬಲಿತ ಯೋಜನೆಯಾದ ಕನಿಷ್ಟ ಬೆಂಬಲ ಬೆಲೆ (ಎಂ.ಎಸ್.ಪಿ.) ಯಡಿ ತಂದಿದೆ. “ ಕನಿಷ್ಟ ಬೆಂಬಲ ಬೆಲೆಯಲ್ಲಿ (ಎಂ.ಎಸ್.ಪಿ.) ಕಿರು ಅರಣ್ಯ ಉತ್ಪತ್ತಿಗಳ (ಎಂ.ಎಫ್.ಪಿ.) ಮಾರಾಟ ವ್ಯವಸ್ಥೆ ಮತ್ತು ಎಂ.ಎಫ್. ಪಿ ಗಳಿಗಾಗಿ ಮೌಲ್ಯವರ್ಧನೆಯ ಸರಪಳಿಶೀರ್ಷಿಕೆಯ ಯೋಜನೆ ಅಡಿಯಲ್ಲಿ ಇದನ್ನು ಅಳವಡಿಸಲಾಗಿದ್ದು, ನಿರ್ಧಾರವು ಉತ್ಪನ್ನಗಳ ಸಂಖ್ಯೆಯನ್ನು 50 ರಿಂದ 73 ಕ್ಕೇರಿಸಿದೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಇಂದು ಉದ್ಭವಿಸಿರುವ ಅತ್ಯಂತ ಕಠಿಣ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಯೋಜನೆಯು ಬುಡಕಟ್ಟು ಎಂ.ಎಫ್. ಪಿ. ಸಂಗ್ರಾಹಕರಿಗೆ ಅತ್ಯಾವಶ್ಯಕವಾದ ಬೆಂಬಲವನ್ನು ನೀಡುತ್ತದೆ.

ವಿವರಗಳಿಗಾಗಿhttps://pib.gov.in/PressReleseDetail.aspx?PRID=1627631

2019-20 ವಾರ್ಷಿಕ ರಾಷ್ಟ್ರೀಯ ಆದಾಯ ತಾತ್ಕಾಲಿಕ ಅಂದಾಜು , ಮತ್ತು 2019-20  ತ್ರೈಮಾಸಿಕದ (ಕ್ಯೂ 4 ) ಒಟ್ಟು ದೇಶೀಯ ಉತ್ಪನ್ನದ ಅಂದಾಜು.

ನೈಜ ಜಿ.ಡಿ.ಪಿ. ಅಥವಾ ಒಟ್ಟು ದೇಶೀಯ ಉತ್ಪನ್ನ (ಜಿ.ಡಿ.ಪಿ.) ಸ್ಥಿರ (2011-12 ) ದರಗಳಲ್ಲಿ 2019-20 ರಲ್ಲೀಗ 145.66 ಲಕ್ಷ ಕೋ.ರೂ. ಗಳಷ್ಟಾಗಬಹುದೆಂದು ಅಂದಾಜಿಸಲಾಗಿದೆ. 2018-19   ವರ್ಷದಲ್ಲಿ ಮೊದಲ ಪರಿಷ್ಕೃತ ಅಂದಾಜು ಜಿ.ಡಿ.ಪಿ. ಯು 139.81 ಲಕ್ಷ ಕೋ.ರೂ. ಗಳಷ್ಟಿತ್ತು. ಎಂದು 2020 ಜನವರಿ 31 ರಂದು ಬಿಡುಗಡೆಯಾದ ಅಂಕಿ ಅಂಶಗಳು ಹೇಳಿದ್ದವು. 2018-19  ರಲ್ಲಿದ್ದ 6.1 ಶೇಕಡಾಕ್ಕೆ ಹೋಲಿಸಿದರೆ 2019-20  ರಲ್ಲಿ ಜಿ.ಡಿ.ಪಿ. ಬೆಳವಣಿಗೆ 4.2 ಶೇಕಡಾ ಎಂದು ಅಂದಾಜಿಸಲಾಗಿದೆ. ಚಾಲ್ತಿಯಲ್ಲಿರುವ ದರಗಳಲ್ಲಿ 2019-20  ರಲ್ಲಿ ಜಿ.ಡಿ.ಪಿ.ಯು ಅಂದಾಜು 203.40  ಲಕ್ಷ ಕೋ.ರೂ. ತಲುಪುವ ನಿರೀಕ್ಷೆ ಇದೆ. 2018-19 ರಲ್ಲಿ ಮೊದಲ ಪರಿಷ್ಕೃತ ಅಂದಾಜು 189.71 ಲಕ್ಷ ಕೋ.ರೂ.ಗಳಷ್ಟಾಗಿತ್ತು. 2018-19 ರಲ್ಲಿದ್ದ 11.0 ಶೇಕಡಾ ಬೆಳವಣಿಗೆ ದರಕ್ಕೆ ಹೋಲಿಸಿದಾಗ ಇದರ ಬೆಳವಣಿಗೆ ದರ 7.2 ಶೇಕಡಾ. ಸ್ಥಿರ (2011-12) ದರದಲ್ಲಿ ಜಿ.ಡಿ.ಪಿ.ಯು 2019-20 ತ್ರೈಮಾಸಿಕದಲ್ಲಿ 38.04 ಲಕ್ಷ ಕೋ.ರೂ.ಗಳೆಂದು ಅಂದಾಜಿಸಲಾಗಿದೆ. 2018-19  ತ್ರೈಮಾಸಿಕದಲ್ಲಿ ಇದು 36.90  ಲಕ್ಷ ಕೋ.ರೂ. ಗಳಷ್ಟಾಗಿದ್ದು, ಬೆಳವಣಿಗೆ 3.1 ಶೇಕಡಾದಷ್ಟಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1627671

2020 ಏಪ್ರಿಲ್ ನಲ್ಲಿ ಎಂಟು ಮುಖ್ಯ ಕೈಗಾರಿಕೆಗಳ ಸೂಚ್ಯಂಕ (ಮೂಲ ಆಧಾರ :2011-12=100)

2020 ಏಪ್ರಿಲ್ ತಿಂಗಳಲ್ಲಿ ಎಂಟು ಮುಖ್ಯ ಕೈಗಾರಿಕೆಗಳ ಬೆಳವಣಿಗೆ ದರ 38.1% (ತಾತ್ಕಾಲಿಕ) ರಷ್ಟು ಕಡಿಮೆಯಾಗಿದೆ. 2020 ಮಾರ್ಚ್ ತಿಂಗಳಲ್ಲಿ ಕುಸಿತ 9 % (ತಾತ್ಕಾಲಿಕ) ವಾಗಿತ್ತು. ಅದಕ್ಕೆ ಹೋಲಿಸಿದಾಗ ಏಪ್ರಿಲ್ ತಿಂಗಳಲ್ಲಿ ಅದು 38.1 % ಆಗಿದೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಕಾರಣದಿಂದಾಗಿ ಜಾರಿಯಲ್ಲಿರುವ ಲಾಕ್ ಡೌನ್ ನಿಂದಾಗಿ ವಿವಿಧ ಕೈಗಾರಿಕೋದ್ಯಮಗಳಾದ ಕಲ್ಲಿದ್ದಲು, ಸಿಮೆಂಟ್, ಉಕ್ಕು, ನೈಸರ್ಗಿಕ ಅನಿಲ, ತೈಲಾಗಾರ, ಕಚ್ಚಾ ತೈಲ, ಇತ್ಯಾದಿಗಳು ಉತ್ಪಾದನೆಯಲ್ಲಿ ಸಾಕಷ್ಟು ನಷ್ಟ ಅನುಭವಿಸಿವೆ.

ವಿವರಗಳಿಗೆ: https://pib.gov.in/PressReleseDetail.aspx?PRID=1627656

ರಾಷ್ಟ್ರೀಯ ಕೆರಿಯರ್ ನಲ್ಲಿ ಉಚಿತ ಆನ್ ಲೈನ್ ಉದ್ಯೋಗ ಕೌಶಲ್ಯ ತರಬೇತಿ ಆರಂಭ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ತನ್ನ ರಾಷ್ಟ್ರೀಯ ಉದ್ಯೋಗ ದೇವೆ ( ಎನ್.ಸಿ.ಎಸ್.) ಯೋಜನೆ ಅಡಿಯಲ್ಲಿ ಈಗ ಟಿ.ಸಿ.ಎಸ್. ..ಎನ್. ಸಹಭಾಗಿತ್ವದಲ್ಲಿ ನೊಂದಾಯಿತ ಉದ್ಯೋಗಾಕಾಂಕ್ಷಿಗಳಿಗೆ  ಆನ್ ಲೈನ್ ಮೂಲಕ ಉಚಿತ  ಉದ್ಯೋಗ ಕೌಶಲ್ಯ ತರಬೇತಿಯನ್ನು ಸಂಘಟಿಸಿದೆ. ಕೋರ್ಸು ಕಲಿಕೆದಾರರಿಗೆ ವ್ಯಕ್ತಿತ್ವ ವಿಕಸನವನ್ನು ಇನ್ನಷ್ಟು ಅಭಿವೃದ್ದಿಪಡಿಸಲು, ಸಾಂಸ್ಥಿಕ / ಕಾರ್ಪೋರೇಟ್ ನಡವಳಿಗಳನ್ನು , ಪರಸ್ಪರ ಸಂವಹನ ಕೌಶಲ್ಯಗಳ ಅಭಿವೃದ್ದಿ, ಪರಿಣಾಮಕಾರಿಯಾಗಿ ವಿವರ ನೀಡಿಕೆ ಮತ್ತು ಇಂದಿನ ಕೈಗಾರಿಕಾ ಕ್ಷೇತ್ರ ಅಪೇಕ್ಷಿಸುವ ಇತರ ಲಘು ಕೌಶಲ್ಯಗಳನ್ನು ಒದಗಿಸಲಿದೆ. ತರಬೇತಿ ಮಾದರಿಗಳು ಹಿಂದಿ ಮತ್ತು ಇಂಗ್ಲೀಷ್ ಗಳಲ್ಲಿ ಎನ್.ಸಿ.ಎಸ್. ಪೋರ್ಟಲಿನಲ್ಲಿ ಲಭ್ಯ ಇವೆ.

ವಿವರಗಳಿಗೆ: https://pib.gov.in/PressReleseDetail.aspx?PRID=1627652

ಶ್ರೀ ಧರ್ಮೇಂದ್ರ ಪ್ರಧಾನ್ ಅವರಿಂದ 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ 56 ಸಿ.ಎನ್.ಜಿ. ಸ್ಟೇಶನ್ ಗಳ ಲೋಕಾರ್ಪಣೆ

ಪರಿಸರ ಸ್ನೇಹಿಯಾಗಿರುವ  ಒತ್ತಡದಲ್ಲಿರುವ ನೈಸರ್ಗಿಕ ಅನಿಲ (ಕಂಪ್ರೆಸ್ಸ್ ಡ್ ನ್ಯಾಚುರಲ್ ಗ್ಯಾಸ್ ) ಲಭ್ಯತೆಯ ವ್ಯಾಪ್ತಿಯನ್ನು ವಿಸ್ತರಿಸುವ ಅಂಗವಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಹಾಗು ಉಕ್ಕು ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ ಅವರಿಂದು ಆನ್ ಲೈನ್ ಮೂಲಕ ಏರ್ಪಟ್ಟ ಕಾರ್ಯಕ್ರಮದಲ್ಲಿ 48 ಸಿ.ಎನ್.ಜಿ.ಸ್ಟೇಶನ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರಲ್ಲದೆ ದೇಶದಲ್ಲಿ ಇತರ 8 ಸಿ.ಎನ್.ಜಿ.ಸ್ತೇಶನ್ ಗಳನ್ನು ಉದ್ಘಾಟಿಸಿದರು. 56 ಸ್ಟೇಶನ್ ಗಳು 11 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿವೆ. ಸ್ಟೇಶನ್ ಗಳ ಕಾಮಗಾರಿ ಪೂರ್ಣಗೊಳ್ಳುವುದು ಕೊರೊನಾವೈರದ್ ಹರಡುವಿಕೆ ತಡೆಯಲು ಜಾರಿ ಮಾಡಲಾದ ದೇಶವ್ಯಾಪೀ ಲಾಕ್ ಡೌನ್ ನಿಂದಾಗಿ ವಿಳಂಬವಾಗಿತ್ತು. ಆದರೆ ಬಳಿಕ ನಿರ್ಬಂಧಗಳ ಸಡಿಲಿಕೆಯಾದುದರಿಂದ ಎಲ್ಲಾ ಸುರಕ್ಷಾ ಕ್ರಮಗಳನ್ನು ಕೈಗೊಂಡು ಮತ್ತು ಸಾಮಾಜಿಕ ಅಂತರ ಮಾನದಂಡಗಳನ್ನು ಅನುಸರಿಸಿಕೊಂಡು ಕಾಮಗಾರಿ ಪೂರ್ಣ ವೇಗದಿಂದ ನಡೆಯಿತು. ಇದರಿಂದಾಗಿ  ಸ್ಟೇಶನ್ ಗಳ ಕಾರ್ಯಾಚರಣೆಗಾಗಿ ಮೊದಲು ನಿಗದಿ ಮಾಡಲಾಗಿದ್ದ ವೇಳಾಪಟ್ಟಿಗಿಂತ ಕೊಂಚ ಮಾತ್ರವೇ ವಿಳಂಬವಾಯಿತು

ವಿವರಗಳಿಗೆ: https://pib.gov.in/PressReleseDetail.aspx?PRID=1627635

ಸಚಿವಾಲಯದ ಒಂದು ವರ್ಷದ ಸಾಧನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶ್ರೀ ರಾಂ ವಿಲಾಸ್ ಪಾಸ್ವಾನ್

ಕೋವಿಡ್ -19  ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಎಲ್ಲಾ ಪಿ.ಡಿ.ಎಸ್. ಮತ್ತು ಪಿ.ಡಿ.ಎಸ್. ಯೇತರ ಕಾರ್ಡುದಾರರಿಗೆ , ವಲಸೆ ಕಾರ್ಮಿಕರಿಗೆ  ಮತ್ತು ಕೇಂದ್ರ ಅಥವಾ ರಾಜ್ಯ ಸರಕಾರಗಳ ಯಾವುದೇ ಆಹಾರ ಧಾನ್ಯಗಳ ಯೋಜನೆಯಡಿಯಲ್ಲಿ ಬಾರದವರಿಗೆ  ಆಹಾರ ಧಾನ್ಯಗಳು ಮತ್ತು ಬೇಳೆ ಕಾಳುಗಳನ್ನು ಒದಗಿಸುವುದು ಸಚಿವಾಲಯದ ಮುಖ್ಯ ಆದ್ಯತೆಯಾಗಿತ್ತು ಎಂದು ಶ್ರೀ ರಾಂ ವಿಲಾಸ್ ಪಾಸ್ವಾನ್ ಹೇಳಿದರು. ಸಚಿವಾಲಯವು ರಾಜ್ಯ ಆಹಾರ ಸಚಿವರ ಜೊತೆ , ಕಾರ್ಯದರ್ಶಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಯಾವುದೇ ರಾಜ್ಯಕ್ಕೆ ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡುವಲ್ಲಿ ಯಾವುದೇ ತೊಂದರೆ ಎದುರಾಗದಂತೆ ನೋಡಿಕೊಳ್ಳುತ್ತಿದೆ ಎಂದರು. ಕಾಪು (ಬಫರ್ ) ದಾಸ್ತಾನು ಆಗಿ ಸಾಕಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯಗಳು ದಾಸ್ತಾನಿನಲ್ಲಿವೆ ಎಂದೂ ಅವರು ತಿಳಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1627669

ಮಡಗಾಸ್ಕರ್ ಆಂಟ್ಸಿರಾನಾನ ಬಂದರಿನಲ್ಲಿ .ಎನ್.ಎಸ್. ಕೇಸರಿ

ಮಿಷನ್ ಸಾಗರದ ಅಂಗವಾಗಿ ಭಾರತೀಯ ನೌಕಾದಳದ ಹಡಗು ಕೇಸರಿಯು 2020 ಮೇ 27 ರಂದು ಮಡಗಾಸ್ಕರ್ ಆಂಟ್ಸಿರಾನಾನ ಬಂದರು ಪ್ರವೇಶ ಮಾಡಿತು. ಇಂತಹ ಸಂಕಷ್ಟದ ಸಮಯದಲ್ಲಿ ಭಾರತ ಸರಕಾರವು ಕೋವಿಡ್ -19  ಜಾಗತಿಕ ಸಾಂಕ್ರಾಮಿಕ ನಿಭಾಯಿಸಲು ತನ್ನೊಂದಿಗೆ ಸ್ನೇಹಾಚಾರವನ್ನು ಹೊಂದಿರುವ ವಿದೇಶಗಳಿಗೆ ಸಹಾಯ ಹಸ್ತ ನೀಡುತ್ತಿದೆ. ಮತ್ತು ಕಾರಣಕ್ಕಾಗಿ .ಎನ್.ಎಸ್. ಕೇಸರಿಯು ಕೋವಿಡ್ ಸಂಬಂಧಿ ಅವಶ್ಯಕ ವೈದ್ಯಕೀಯ ಸವಲತ್ತುಗಳನ್ನು ಮಡಗಾಸ್ಕರಿನ ಜನತೆಗಾಗಿ ಕೊಂಡೊಯ್ದಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1627668

ಸೇನಾ ಕಮಾಂಡರುಗಳ ಸಮ್ಮೇಳನ: 27 -29, ಮೇ 2020  

2020 ಏಪ್ರಿಲ್ ತಿಂಗಳಲ್ಲಿ ನಡೆಯಬೇಕಿದ್ದ ಆದರೆ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಸೇನಾ ಕಮಾಂಡರುಗಳ ಸಮ್ಮೇಳನ ಎರಡು ಹಂತಗಳಲ್ಲಿ ಆಯೋಜನೆಯಾಗುತ್ತಿದೆ. ಇದು ಉನ್ನತ ಮಟ್ಟದ ದ್ವೈವಾರ್ಷಿಕ ಸಮ್ಮೇಳನವಾಗಿದ್ದು ಚಿಂತನಾ ಮಟ್ಟದ ಚರ್ಚೆಗಳನ್ನು ನಡೆಸುತ್ತದೆ ಮತ್ತು ಅವು ಪ್ರಮುಖ ನೀತಿ ನಿರ್ಧಾರಗಳಲ್ಲಿ ಅಡಕಗೊಳ್ಳುತ್ತವೆ. ಈಗ ಸಮ್ಮೇಳನದ ಮೊದಲ ಹಂತವು ಹೊಸದಿಲ್ಲಿಯ ಸೌತ್ ಬ್ಲಾಕಿನಲ್ಲಿ 2020 ಮೇ 27 ರಿಂದ 29 ರವರೆಗೆ ನಡೆಯಿತು.

ವಿವರಗಳಿಗೆ: https://pib.gov.in/PressReleseDetail.aspx?PRID=1627654

45,000 ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ  ಜೊತೆ ವೆಬಿನಾರ್ ಮೂಲಕ ಕೇಂದ್ರ ಎಚ್.ಆರ್.ಡಿ. ಸಚಿವರ ಸಂವಾದ

ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಇಂದು ವೆಬಿನಾರ್ ಮೂಲಕ ದೇಶಾದ್ಯಂತ 45,000  ಅಧಿಕ  ಉನ್ನತ ಶಿಕ್ಷಣ ಸಂಸ್ಥೆಗಳ (ಎಚ್...ಎಸ್.) ಮುಖ್ಯಸ್ಥರ ಜೊತೆ ಸಂವಾದ ನಡೆಸಿದರು. ಉಪ ಕುಲಪತಿಗಳು, / ರಿಜಿಸ್ಟ್ರಾರ್ ಗಳು, ಪ್ರಾಧ್ಯಾಪಕರು/ .ಕ್ಯು..ಸಿ. ಮುಖ್ಯಸ್ಥರು/ ಪ್ರಾಂಶುಪಾಲರು/ ಬೋಧಕ ಸಿಬ್ಬಂದಿಗಳನ್ನುದ್ದೇಶಿಸಿ  ಸಚಿವರು ಮಾತನಾಡಿದರು ಮತ್ತು ಸಂವಾದ ನಡೆಸಿದರು. ಇಂದಿನ ಪರಿಸ್ಥಿತಿಯನ್ನು ವ್ಯವಸ್ಥೆಯಲ್ಲಿಯ ಮಿತಿಗಳನ್ನು ಮೀರಲು ಒಂದು ಅವಕಾಶವಾಗಿ ಬಳಸಿಕೊಳ್ಳಬೇಕು ಎಂದವರು ಎಚ್... ಗಳಿಗೆ ಕರೆ ನೀಡಿದರು. ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆನ್ ಲೈನ್ ವಿಧಾನಕ್ಕೆ ಬದಲಾಗುವಂತೆ ಶ್ರೀ ಪೋಖ್ರಿಯಾಲ್ ಕರೆ ನೀಡಿದ್ದಲ್ಲದೆ, ಇದರಿಂದ ವಿದ್ಯಾರ್ಥಿಗಳ ಅಕಾಡೆಮಿಕ್ ಅಧಿವೇಶನ ಮತ್ತು ಎಚ್...ಗಳ ವೇಳಾಪಟ್ಟಿ ಅಸ್ತವ್ಯಸ್ತವಾಗುವುದಿಲ್ಲ ಎಂದರು. ಭಾರತದಲ್ಲಿ ಆನ್ ಲೈನ್ ಪರಿಸರ ವ್ಯವಸ್ಥೆಯನ್ನು ಸುಧಾರಿಸಬೇಕಾದ ತುರ್ತು ಆವಶ್ಯಕತೆ ಎಂದು ಹೇಳಿದ ಅವರು ಶಿಕ್ಷಣ ತಜ್ಞರು ಇದರ ತಲುಪುವಿಕೆಯನ್ನು ಹೆಚ್ಚಿಸಬೇಕು, ಆಗ ಆನ್ ಲೈನ್ ಶಿಕ್ಷಣ ಗ್ರಾಮೀಣ ಪ್ರದೇಶಗಳಿಗೆ ತಲುಪುತ್ತದೆ ಎಂದರು.

ವಿವರಗಳಿಗೆ : https://pib.gov.in/PressReleseDetail.aspx?PRID=1627487

ಪಶ್ಚಿಮ ನೌಕಾ ಕಮಾಂಡಿನಲ್ಲಿ ಅಲ್ಟ್ರಾವೊಯಿಲೆಟ್ ಕ್ರಿಮಿ ನಾಶಕ ಸೌಲಭ್ಯಗಳ ಅಭಿವೃದ್ದಿ

ಮುಂಬಯಿಯ ನೌಕಾ ಡಾಕ್ ಯಾರ್ಡ್ ಎದುರಾಗುತ್ತಿರುವ ಆವಶ್ಯಕತೆಗಳನ್ನು ಪೂರೈಸಲು ಯು.ವಿ. ಸ್ಯಾನಿಟೈಜೇಶನ್ ಸೌಲಭ್ಯವನ್ನು ರೂಪಿಸಿದೆ. ಯು.ವಿ . ವ್ಯವಸ್ಥೆಯನ್ನು ಸಲಕರಣೆಗಳು, ಬಟ್ಟೆಗಳು ಮತು ಇತರ ವಸ್ತುಗಳ ಕ್ರಿಮಿಗಳನ್ನು ನಾಶ ಮಾಡಲು ಮತ್ತು ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಬಳಸಲಾಗುವುದು. ದೊಡ್ಡ ಸಾಮಾನ್ಯ ಕೊಠಡಿಯನ್ನು ಯು.ವಿ. ವ್ಯವಸ್ಥೆಯಾಗಿ ಪರಿವರ್ತಿಸಲು ಜಾಣ್ಮೆ ಬೇಕಾಗಿದ್ದು, ಅದು ಸವಾಲಿನ ಕೆಲಸವಾಗಿತ್ತು. ಅಲ್ಯೂಮಿನಿಯಂ ಶೀಟುಗಳನ್ನು ಜೋಡಿಸುವ ಮೂಲಕ , ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಿ ಅದನ್ನು ಯು.ವಿ-ಸಿ ಬೆಳಕಿನ ವ್ಯವಸ್ಥೆಯಾಗಿ ಪರಿವರ್ತಿಸಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1627501

ಸಂಶೋಧಕರು ನೊವೆಲ್ ಕೊರೊನಾವೈರಸ್ ಕೃಷಿ ಮಾಡಿದ್ದು, ಔಷಧಿ ಪರೀಕ್ಷೆ ಮತ್ತು ಲಸಿಕೆ ಅಭಿವೃದ್ದಿಗೆ ನೆರವಾಗುವ ನಿರೀಕ್ಷೆ ಇದೆ

ಸೆಲ್ಯುಲಾರ್ ಮತ್ತು ಮಾಲಿಕ್ಯುಲಾರ್ ಜೀವವಿಜ್ಞಾನ ಕೇಂದ್ರ (ಸಿ.ಸಿ.ಎಂ.ಬಿ.) ವು ಕೊರೊನಾವೈರಸ್ (ಸಾರ್ಸ್ಕೋವ್ -2)   ಸ್ಥಿರ ಕೃಷಿಯನ್ನು ರೋಗಿಗಳ ಮಾದರಿಗಳಿಂದ ಮಾಡಿದೆ. ಸಿ.ಸಿ.ಎಂ.ಬಿ.ಯಲ್ಲಿಯ ವೈರಾಣು ತಜ್ಞರು ಸೋಂಕುಕಾರಕ ವೈರಸ್ ನ್ನು ಪ್ರತ್ಯೇಕಿಸಿದ್ದು, ಪ್ರಯೋಗಶಾಲೆಗಳಲ್ಲಿ ವೈರಸನ್ನು ಕೃಷಿ ಮಾಡಬಹುದಾದ ಸಾಧ್ಯತೆಯಿಂದಾಗಿ ಲಸಿಕೆ ಅಭಿವೃದ್ದಿ ಮತ್ತು ಕೋವಿಡ್ -19 ವಿರುದ್ದ ಸೆಣಸಾಡುವ ಸಾಮರ್ಥ್ಯದ ಔಷಧಿಯನ್ನು ಕಂಡು ಹುಡುಕುವ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಲು ಸಿ.ಸಿ.ಎಂ.ಬಿ.ಗೆ ಸಾಧ್ಯವಾಗಲಿದೆ.

ವಿವರಗಳಿಗೆhttps://pib.gov.in/PressReleseDetail.aspx?PRID=1627590

ಕೋವಿಡ್ -19 ನಿರ್ವಹಣೆ ಮತ್ತು ನಿಯಂತ್ರಣಕ್ಕಾಗಿ ಸೂರತ್ ಸ್ಮಾರ್ಟ್ ಸಿಟಿಯಿಂದ ಪ್ರಮುಖ .ಟಿ. ಉಪಕ್ರಮಗಳು.

ಸೂರತ್ ಮುನ್ಸಿಪಲ್  ಕಾರ್ಪೊರೇಶನ್ ಕೋವಿಡ್ -19 ವಿರುದ್ದ ಹೋರಾಡಲು ವಿವಿಧ .ಟಿ. ಉಪಕ್ರಮಗಳನ್ನು ಕೈಗೊಂಡಿದೆ. ಎಸ್.ಎಂ.ಸಿ.ಯು ಎಸ್.ಎಂ.ಸಿ. ಕೋವಿಡ್ -19 ಪತ್ತೆ ವ್ಯವಸ್ಥೆಯನ್ನು ಅಭಿವೃದ್ದಿ ಮಾಡಿದೆ. ಇದು ವೆಬ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಒಳಗೊಂಡಿದ್ದು  ಇದಕ್ಕೆ ಎಸ್.ಎಂ.ಸಿ. ಕೋವಿಡ್ -19 ಟ್ರ್ಯಾಕರ್ಎಂದು ನಾಮಕರಣ ಮಾಡಲಾಗಿದೆ. ವಿದೇಶದಿಂದ ಬಂದ ಅಥವಾ ಅಂತಾರಾಜ್ಯ ಪ್ರಯಾಣದ ಚರಿತ್ರೆ ಹೊಂದಿರುವ ಜನರನ್ನು ಮತ್ತು ಕೋವಿಡ್ -19 ಪಾಸಿಟಿವ್ ವ್ಯಕ್ತಿಗಳ ನೇರ ಸಂಪರ್ಕಕ್ಕೆ ಬಂದವರನ್ನು ಇದು ಪತ್ತೆ ಹಚ್ಚಿ ನಿಗಾ ಇರಿಸುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1627638

ಪಿ  ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಪಂಜಾಬ್: ಪಂಜಾಬ್ ಸರಕಾರವು ಇಂದು ರೈಲಿನಲ್ಲಿ ಪ್ರಯಾಣಿಸುವವರಿಗೆ (ಆಗಮಿಸುವ/ ನಿರ್ಗಮಿಸುವ ) ಹೆಚ್ಚುವರಿ ಮಾರ್ಗದರ್ಶಿಗಳನ್ನು ನೀಡಿದೆ. ಎಲ್ಲಾ ಪ್ರಯಾಣಿಕರೂ ಮುಖಗವಸುಗಳನ್ನು ಧರಿಸಿರಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು . ದೃಢೀಕೃತ ಟಿಕೇಟ್ ಹೊಂದಿದವರಿಗಷ್ಟೇ ರೈಲ್ವೇ ಪ್ಲಾಟ್ ಫಾರಂಗೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುವುದು. ಅಲ್ಲಿ ಅನವಶ್ಯಕ ಜನಜಂಗುಳಿಯನ್ನು ತಡೆಯಲು ಕ್ರಮ. (ಸಹಾಯಕರಿಗೂ ಅವಕಾಶ ಇಲ್ಲ.) ಎಲ್ಲಾ ಪ್ರಯಾಣಿಕರೂ ಪ್ಲಾಟ್ ಫಾರಂ ಪ್ರವೇಶಕ್ಕೆ ಮೊದಲು ಉಷ್ಣಾಂಶ ತಪಾಸಣೆಗೆ  ಒಳಗಾಗಬೇಕು ಮತ್ತು ರೈಲು ಹೊರಡುವುದಕ್ಕೆ 45 ನಿಮಿಷ ಮೊದಲು ರೈಲು ನಿಲ್ದಾಣದಲ್ಲಿರುವುದು ಕಡ್ಡಾಯ.
  • ರಿಯಾ: ಕೋವಿಡ್ -19 ಸೋಂಕು ಹರಡುವಿಕೆಯನ್ನು ನಿಯಂತ್ರಿಸುವುದು ರಾಜ್ಯ ಸರಕಾರದ ಆದ್ಯತೆ ಎಂದು ಗೃಹ ಸಚಿವರು ಹೇಳಿದ್ದಾರೆ. ಕೇಂದ್ರ ಗೃಹ ಸಚಿವಾಲಯ ನೀಡಿದ ಮಾರ್ಗದರ್ಶಿಗಳು  ಕಟ್ಟುನಿಟ್ಟಾಗಿ ಪಾಲನೆಯಾಗುವುದನ್ನು ಖಾತ್ರಿಪಡಿಸಲು  ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕು ತಡೆಯಲು ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಯೊಬ್ಬರೂ ಮುಖಗವಸು ಧರಿಸುವುದು ಕಡ್ದಾಯ, ಅದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದಕ್ಕೆ ನಿಷೇಧವಿದೆ. ನಿಯಮಗಳನ್ನು ಉಲ್ಲಂಘಿಸುವವರು ಎರಡೂ ಅಪರಾಧಗಳಿಗೆ ತಲಾ 500 ರೂ ದಂಡ ಪಾವತಿಸಬೇಕಾಗುತ್ತದೆ. ತಪ್ಪಿತಸ್ಥರು ದಂಡದ ಮೊತ್ತವನ್ನು ನಗದಾಗಿ ಪಾವತಿ ಮಾಡಬೇಕಾಗುತ್ತದೆಯೇ ಹೊರತು ನ್ಯಾಯಾಲಯದ ಮೂಲಕ ಅಲ್ಲ ಎಂದವರು ಹೇಳಿದ್ದಾರೆ.  
  • ಹಿಮಾಚಲ ಪ್ರದೇಶ: ದೇಶೀಯ ವಿಮಾನಗಳ ಮೂಲಕ ಮತ್ತು ರೈಲುಗಳ ಮೂಲಕ ಹಿಮಾಚಲ ಪ್ರದೇಶಕ್ಕೆ ಬರುವ ಪ್ರವಾಸಿಗರ ಚಲನ ವಲನಗಳಿಗಾಗಿ ಗುಣಮಟ್ಟ ಕಾರ್ಯಾಚರಣಾ ಪ್ರಕ್ರಿಯೆಗಳನ್ನು ರಾಜ್ಯ ಸರಕಾರ ಹೊರಡಿಸಿದೆ. ವಿಮಾನ, ರೈಲುಗಳನ್ನು ಹತ್ತುವುದಕ್ಕೆ ಮೊದಲು ಮತ್ತು ರಾಜ್ಯ ಪ್ರವೇಶಿಸುವುದಕ್ಕೆ ಮೊದಲು ಎಲ್ಲರೂ ಆಂಡ್ರಾಯ್ಡ್  ಮತ್ತು  ..ಎಸ್. ಫೋನುಗಳಲ್ಲಿ  ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ದಾಯ. ಸಾಮಾಜಿಕ ಅಂತರ ಪಾಲನೆ ಮತ್ತು ಗೃಹ ಸಚಿವಾಲಯ ಹಾಗು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ  ಹೊರಡಿಸಿದ ಇತರ ಮಾರ್ಗದರ್ಶಿಗಳನ್ನು ಒಳಗೊಂಡ ಶಿಷ್ಟಾಚಾರ ಅನುಸರಣೆ ಕಡ್ದಾಯ
  • ಮಹಾರಾಷ್ಟ್ರ: 2,598 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜ್ಯದಲ್ಲಿ ಕೋವಿಡ್ -19  ಪ್ರಕರಣಗಳ ಒಟ್ಟು ಸಂಖ್ಯೆ 59,546 ಕ್ಕೇರಿದೆ. 85 ಕೋವಿಡ್ -19 ರೋಗಿಗಳು ಮೃತಪಟ್ಟಿದ್ದಾರೆ. ಇವರಲ್ಲಿ 38 ಮಂದಿ ಮುಂಬಯಿಯವರು. ಇದರಿಂದ ಜಾಗತಿಕ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆ 1,982 ಕ್ಕೇರಿದೆ. ಹಲವಾರು ನಾಗರಿಕರು ತಮ್ಮ ಪಟ್ಟಣಗಳಿಗೆ ಮರಳಿ ಬರಲು ಆರಂಭಿಸಿದ ಬಳಿಕ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಹ್ಮದ್ ನಗರ , ಸಿಂಧು ದುರ್ಗ , ಮತ್ತು ನಾಂದೇಡ್ ಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿವೆ.
  • ಗುಜರಾತ್: 21 ಜಿಲ್ಲೆಗಳಿಂದ 367 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 15,572 ಕ್ಕೇರಿದೆ. ಕೊರೊನಾವೈರಸ್ ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ ಗುರುವಾರದಂದು 8000 ಗಡಿ ದಾಟಿದೆ. ಅಹ್ಮದಾಬಾದಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೆ , ಚೇತರಿಸಿಕೊಂಡು ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ 381 ರೋಗಿಗಳು ಬಿಡುಗಡೆಯಾಗಿದ್ದಾರೆ
  • ರಾಜಸ್ಥಾನ: ಇತ್ತೀಚಿನ ಅಂಕಿ ಅಂಶಗಳಲ್ಲಿ ರಾಜ್ಯದಲ್ಲಿ 91 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದರಿಂದ ರಾಜ್ಯದ ಒಟ್ಟು ಕೋವಿಡ್ -19 ದೃಢೀಕೃತ ಪ್ರಕರಣಗಳ ಸಂಖ್ಯೆ 8,158 ಕ್ಕೇರಿದೆ. ಇದರಲ್ಲಿ 4,855 ಮಂದಿ ಇದುವರೆಗೆ ಚೇತರಿಸಿಕೊಂಡಿದ್ದಾರೆ. ಹೊಸ ಸೋಂಕಿನ ಪ್ರಕರಣಗಳಲ್ಲಿ 42 ಪ್ರಕರಣಗಳು ಜಲಾವರ್ ಜಿಲ್ಲೆಯವು. ರಾಜ್ಯದಲ್ಲಿ 3.65 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ಇದುವರೆಗೆ ಮಾಡಲಾಗಿದೆ
  • ಮಧ್ಯ ಪ್ರದೇಶ: 192 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜ್ಯದಲ್ಲಿ ಕೋವಿಡ್ -19 ಪಾಸಿಟಿವ್ ಪ್ರಕರಣಗಳ ಒಟ್ಟು ಸಂಖ್ಯೆ 7,453 ಕ್ಕೇರಿದೆ. ಹಾಟ್ ಸ್ಪಾಟ್ ಇಂದೋರ್ ನಲ್ಲಿ  ಹೊಸ ಸೋಂಕಿನ ಗರಿಷ್ಟ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ, ಅಲ್ಲಿ 78 ಹೊಸ ಪ್ರಕರಣಗಳಿವೆ. ರಾಜ್ಯದಲ್ಲಿ ಇಂದಿನವರೆಗೆ 4,050 ರೋಗಿಗಳು ಚೇತರಿಸಿಕೊಂಡು ಗುಣಮುಖರಾಗಿದ್ದಾರೆ. ಅಲ್ಲಿ 3,082 ಆಕ್ಟಿವ್ ಪ್ರಕರಣಗಳಿವೆ.
  • ಛತ್ತೀಸ್ ಗಢ: ಇಂದು 5 ಹೊಸ ಕೋವಿಡ್ -19 ಪಾಸಿಟಿವ್  ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಇದರಿಂದಾಗಿ ಆಕ್ಟಿವ್ ಪ್ರಕರಣಗಳ ಸಂಖ್ಯೆ 321 ಕ್ಕೇರಿದೆ. ಹೊಸ ರೋಗಿಗಳು ಬಿಲಾಸ್ಪುರ (ಅವರಲ್ಲಿ ಇಬ್ಬರು) , ದುರ್ಗ್, ಮಹಾಸಮುಂಡ್ ಮತ್ತು ಜಗದಾಲ್ಪುರಕ್ಕೆ ಸೇರಿದವರು. ಗುರುವಾರದಂದು ರಾತ್ರಿ ಮುಂಗೇಲಿ ಜಿಲ್ಲೆಯಲ್ಲಿ ಒಂದು ಪಾಸಿಟಿವ್ ಪ್ರಕರಣ ವರದಿಯಾಗಿದೆ.
  • ಕೇರಳ: ರಾಜ್ಯದ ಕೋವಿಡ್ -19 ಸಾವಿನ ಸಂಖ್ಯೆ ಇಂದು 8 ಕ್ಕೇರಿತು. ಮಧುಮೇಹದಿಂದ ಬಳಲುತ್ತಿದ್ದ 68 ವರ್ಷದ ವ್ಯಕ್ತಿಯೊಬ್ಬರು ಇಂದು ಬೆಳಗ್ಗಿನ ಜಾವ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟರು. ರಾಜ್ಯದಲ್ಲಿ ಕೋವಿಡ್ -19 ಸಮುದಾಯಕ್ಕೆ ಹರಡುವ ಪ್ರಮಾಣದಲ್ಲಿಲ್ಲ ಎಂದು ಆರೋಗ್ಯ ಸಚಿವರು ಪುನರುಚ್ಚರಿಸಿದ್ದಾರೆ. ಕೆಲವಾರು ಕಾರ್ಯಾಚರಣಾ ತೊಡಕುಗಳಿದ್ದಾಗ್ಯೂ ರಾಜ್ಯ ಸರಕಾರವು ಬೀವ್ ಕ್ಯೂ ಆಪ್ ನ್ನು  ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದ  ಬಳಕೆಗೆ  ಮುಂದುವರೆಸಲು ತೀರ್ಮಾನಿಸಿದೆ. ಅಧಿಕಾರಿಗಳಿಗೆ ಇದರಲ್ಲಿರುವ ಸಮಸ್ಯೆಗಳನ್ನು ಆದಷ್ಟು ಬೇಗ ನಿವಾರಿಸುವಂತೆ ಸೂಚಿಸಲಾಗಿದೆ. ಏತನ್ಮಧ್ಯೆ ಮತ್ತೆ ಇಬ್ಬರು ಕೇರಳೀಯನ್ನರು  ಜೆದ್ದಾದಲ್ಲಿ ಕೋವಿಡ್ 19  ಕ್ಕೆ ಬಲಿಯಾಗಿದ್ದಾರೆ. ನಿನ್ನೆ 84 ಮಂದಿ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಇದರಿಂದ ರಾಜ್ಯದಲ್ಲಿ ಆಕ್ಟಿವ್ ಪ್ರಕರಣಗಳ ಸಂಖ್ಯೆ 526 ಕ್ಕೇರಿದೆ.
  • ತಮಿಳುನಾಡು: ಕೊಯಮುತ್ತೂರು ವಿಮಾನ ನಿಲ್ದಾಣದಲ್ಲಿ 9 ಪ್ರಯಾಣಿಕರು ಕೋವಿಡ್ -19 ಪಾಸಿಟಿವ್ ಆಗಿದ್ದಾರೆ. ಇವರಲ್ಲಿ ಐದು ಮಂದಿ ತಿರುಚ್ಚಿಯವರು, ಇಬ್ಬರು ನಮಕ್ಕಲ್ ನವರು ಮತ್ತು ಕೊಯಮುತ್ತೂರು ಹಾಗೂ ಈರೋಡಿನ ತಲಾ ಒಬ್ಬರು ಸೇರಿದ್ದಾರೆ. ಚೆನ್ನೈಯಲ್ಲಿರುವ ದಕ್ಷಿಣ ರೈಲ್ವೇ  ಕೇಂದ್ರ ಕಚೇರಿ ಮತ್ತು ಎರಡು .ಸಿ.ಎಫ್. ಕಚೇರಿಗಳನ್ನು ಅಲ್ಲಿಯ ಅಧಿಕಾರಿಗಳು ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆದ ಕಾರಣಕ್ಕಾಗಿ ಮುಚ್ಚಲಾಗಿದೆ. ನೊಯ್ಯಾಲ್ ನವೀಕರಣ ಯೋಜನೆಗೆ ಮುಖ್ಯಮಂತ್ರಿ ಶಿಲಾನ್ಯಾಸ ಮಾಡಿದರು. 230 ಕೋ.ರೂ.ಗಳ ಯೋಜನೆ 7,000 ಎಕರೆ ಕೃಷಿ ಭೂಮಿಗೆ ಅನುಕೂಲತೆಗಳನ್ನು ಒದಗಿಸಲಿದೆ. ನಿನ್ನೆ 827 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು : 19,372. ಆಕ್ಟಿವ್ ಪ್ರಕರಣಗಳು : 8676 . ಸಾವುಗಳು : 145 , ಚೇತರಿಕೆ ಬಳಿಕ ಬಿಡುಗಡೆಯಾದವರು: 10,548 . ಚೆನ್ನೈಯಲ್ಲಿ ಆಕ್ಟಿವ್ ಪ್ರಕರಣಗಳು  ; 6351.
  • ಕರ್ನಾಟಕ: ಇಂದು ಮಧ್ಯಾಹ್ನ 12 ಗಂಟೆಯವರೆಗೆ 178 ಹೊಸ ಪ್ರಕರಣಗಳು ವರದಿಯಾಗಿವೆ, ಮತ್ತು 35 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಹೊಸ ಪ್ರಕರಣಗಳುರಾಯಚೂರು 62, ಯಾದಗೀರ್ 60, ಉಡುಪಿ 15, ಕಲಬುರ್ಗಿ  15, ಬೆಂಗಳೂರು ನಗರ  10, ದಾವಣಗೆರೆ 4, ಮಂಡ್ಯ ಮತ್ತು ಮೈಸೂರುಗಳಲ್ಲಿ ತಲಾ ಎರಡು  ಮತ್ತು ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ , ಚಿತ್ರದುರ್ಗ ಹಾಗು ಧಾರವಾಡಗಳಲ್ಲಿ ತಲಾ ಒಂದು ಪ್ರಕರಣ. ರಾಜ್ಯದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳು 2711 ಕ್ಕೇರಿವೆ. ಆಕ್ಟಿವ್ ಪ್ರಕರಣಗಳು: 1763 ಚೇತರಿಸಿಕೊಂಡು ಬಿಡುಗಡೆಯಾದವರು; 869, ಮೃತಪಟ್ಟವರು : 47.
  • ಆಂಧ್ರ ಪ್ರದೇಶ: ರಾಜ್ಯವು ಪಂಚಾಯತ್ ರಾಜ್ ಕಾಯ್ದೆ ,1994 ಕ್ಕೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿರುವುದನ್ನು ಹೈಕೋರ್ಟ್ ರದ್ದು ಮಾಡಿದೆ. ರಾಜ್ಯ ಚುನಾವಣಾ ಆಯುಕ್ತರ (ಎಸ್..ಸಿ.) ಅಧಿಕಾರಾವಧಿ, ಅರ್ಹತೆ ಮತ್ತು ನೇಮಕಾತಿ ವಿಧಾನಕ್ಕೆ ಸಂಬಂಧಿಸಿ ಸರಕಾರ ಕ್ರಮ ಕೈಗೊಂಡಿತ್ತು.    ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪೀ ಲಾಕ್ ಡೌನ್ ಜಾರಿಯಲ್ಲಿರುವ ಕಾರಣಕ್ಕೆ  ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಿ ಕೈಗೊಂಡ ಏಕಪಕ್ಷೀಯ ನಿರ್ಧಾರಕ್ಕಾಗಿ ಎಸ್..ಸಿ. ಹುದ್ದೆಯಿಂದ ತೆಗೆದು ಹಾಕಲಾದ ಎನ್. ರಮೇಶ್ ಕುಮಾರ್ ಅವರನ್ನು ಮರು ನೇಮಕ ಮಾಡುವಂತೆ ರಾಜ್ಯಕ್ಕೆ ನಿರ್ದೇಶನ ನೀಡಿದೆ. ಕಳೆದ 24 ಗಂಟೆಗಳಲ್ಲಿ 33 ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು ಈರ್ವರು ಮೃತಪಟ್ಟಿದ್ದಾರೆ. 79 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಪ್ರಕರಣಗಳು ;2874, ಆಕ್ಟಿವ್ ;777. ಚೇತರಿಸಿಕೊಂಡವರು ;2037 , ಸಾವುಗಳು: 60. ಇತರ ರಾಜ್ಯಗಳಿಂದ ಬಂದವರಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳು 345, ಅದರಲ್ಲಿ ಆಕ್ಟಿವ್ 156. ವಿದೇಶಗಳಿಂದ ಮರಳಿದವರಲ್ಲಿ ಒಟ್ಟು ಪ್ರಕರಣಗಳು 111.
  • ತೆಲಂಗಾಣ: ಭಾರತೀಯ ಶಾಪಿಂಗ್ ಕೇಂದ್ರಗಳ ಅಸೋಸಿಯೇಶನ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಇತರ ಅಂಗಡಿ  ಮುಂಗಟ್ಟುಗಳಿಗೆ ತೆರೆಯಲು ಅವಕಾಶ ನೀಡಿದಂತೆ   ಮಾಲ್ ಗಳು ಮತ್ತು ಶಾಪಿಂಗ್ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಿದೆ. ಹೈದರಾಬಾದ್ ಮೂಲದವರೊಬ್ಬರು ಕೋವಿಡ್ -19 ರಿಂದಾಗಿ ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದು, ಅವರ ಅಂತ್ಯವಿಧಿಗಳನ್ನು ಅಲ್ಲಿಯೇ ನಡೆಸಲು ಒಪ್ಪಿಗೆ ನೀಡಿದ್ದರೂ ಇದುವರೆಗೆ ಮಾಡಲಾಗಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ. ಹೈದರಾಬಾದ್ 14 ಹಾಟ್ ಸ್ಪಾಟ್ ಮೆಟ್ರೋ ನಗರಗಳಲ್ಲಿ ಒಂದಾಗಿದ್ದು, ಕೋವಿಡ್ -19 ಹರಡುವಿಕೆಯ ರೀತಿಯ ಮೇಲೆ ನಿಗಾ ಇಡಲು ಆಯ್ಕೆಯಾದ ನಗರವೂ ಆಗಿದೆ. ಮತ್ತು ಅದು ರೋಗ ಲಕ್ಷಣ ರಹಿತ ಸಾಕ್ಷ್ಯಾಧಾರ ಪಡೆಯಲು ಮತ್ತು ಮಂದ ಸೋಂಕುಗಳ ವರ್ಗಾವಣೆ ಅಧ್ಯಯನಕ್ಕೂ ಅವಕಾಶ ಮಾಡಿಕೊಟ್ಟಿದೆ. ಮೇ 29 ರವರೆಗೆ ತೆಲಂಗಾಣದಲ್ಲಿ  ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 2,256. ಇದುವರೆಗೆ 175 ವಲಸೆಗಾರರು, 173 ಮಂದಿ ವಿದೇಶದಿಂದ ಹಿಂತಿರುಗಿದವರು ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ.
  • ಅರುಣಾಚಲ ಪ್ರದೇಶ: ಎಲ್ಲಾ ಹೊಟೇಲುಗಳು ಮತ್ತು ಇತರ ಕ್ವಾರಂಟೈನ್ ಕೇಂದ್ರಗಳನ್ನು ನಿಯಮಿತವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ ಮತ್ತು ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿಡಲು ಕಟ್ಟು ನಿಟ್ಟಾಗಿ ಶಿಷ್ಟಾಚಾರಗಳನ್ನು ಅನುಸರಿಸಲಾಗುತ್ತಿದೆ ಎಂದು ಇಟಾನಗರ ಜಿಲ್ಲಾಧಿಕಾರಿ ಹೇಳಿದ್ದಾರೆ.  491 ಎಂ.ಟಿ.ಗೂ ಅಧಿಕ ಬೇಳೆ ಕಾಳುಗಳನ್ನು ಅರುಣಾಚಲ ಪ್ರದೇಶದಲ್ಲಿಯ ನಫೇಡ್ ಈಗಾಗಲೇ ನಿಗದಿತ ದಾಸ್ತಾನುಗಾರಗಳಿಗೆ ಏಪ್ರಿಲ್ ಮತ್ತು ಮೇ ತಿಂಗಳುಗಳಿಗಾಗಿ ಪೂರೈಕೆ ಮಾಡಿದೆ.
  • ಅಸ್ಸಾಂ: ಎರಡು ಬಾರಿ ಪರೀಕ್ಷೆಯಲ್ಲೂ ಕೋವಿಡ್-19  ನೆಗೆಟಿವ್ ಬಂದ 6 ಮಂದಿ ರೋಗಿಗಳನ್ನು ಅಸ್ಸಾಂನಲ್ಲಿಯ ಜಿ.ಎಂ.ಸಿ.ಎಚ್. ನಿಂದ ಇಂದು ಬಿಡುಗಡೆ ಮಾಡಲಾಗಿದೆ.
  • ಮಣಿಪುರ: ಮಣಿಪುರ ವಿಶ್ವವಿದ್ಯಾಲಯ ಕೋವಿಡ್ -19 ಕಾರ್ಯ ಪಡೆ ಸಮಿತಿ ಸಭೆಯು ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ರಾಜ್ಯದ ಶೈಕ್ಷಣಿಕ ವೇಳಾಪಟ್ಟಿಯನ್ನು ಮುಂದಕ್ಕೆ ಕೊಂಡೊಯ್ಯುವ ಹಾದಿಗಳ ಬಗ್ಗೆ ಚರ್ಚಿಸಲಾಯಿತು.
  • ಮಿಜೋರಾಂ: ಮಧ್ಯಪ್ರದೇಶದಿಂದ ಮತ್ತು ಗುಜರಾತಿನಿಂದ ಮಿಜೋಗಳನ್ನು ಹೊತ್ತ ವಿಶೇಷ ರೈಲು ಇಂದು ಮಧ್ಯಾಹ್ನ ಮಿಜೋರಾಂನ ಕೊಲಾಸಿಬ್ ಜಿಲ್ಲೆಯ ಭೈರಾಬಿ ರೈಲ್ವೇ ನಿಲ್ದಾಣಕ್ಕೆ ತಲುಪಿತು. ಇದಕ್ಕೆ ಮೊದಲು ಕರ್ನಾಟಕದಿಂದ ಮಿಜೋಗಳನ್ನು ಹೊತ್ತ ರೈಲು ಇಂದು ಬೆಳಿಗ್ಗೆ ಮಿಜೋರಾಂನ ಭೈರಾಬಿ ತಲುಪಿತ್ತು. ರೈಲಿನಲ್ಲಿದ್ದ ರೋಗಿಯೊಬ್ಬರ ಸಹಿತ 77 ಸಹ ಪ್ರಯಾಣಿಕರನ್ನು ಪ್ರತ್ಯೇಕಿಸಿಡಲಾಗಿದೆ. ಆರ್.ಟಿ-ಪಿ.ಸಿ.ಆರ್ ಮತ್ತು ಆರ್..ಟಿ.ಯನ್ನು ಇವರೆಲ್ಲರಿಗೂ ನೀಡಲಾಗುವುದು ಎಂದು ಸಿ.ಎಂ..ಕೊಲಾಸಿಬ್ ಹೇಳಿದ್ದಾರೆ.
  • ನಾಗಾಲ್ಯಾಂಡ್: ಉಪ ಮುಖ್ಯಮಂತ್ರಿ ಅವರು ವೋಖಾ ಜಿಲ್ಲೆಯ ತಪಾಸಣಾ ಕೇಂದ್ರ ಸಹಿತ ಅಸ್ಸಾಂನೊಂದಿಗಿನ ಗಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ಭಾಗವು ಅಸ್ಸಾಂನ ಕೋವಿಡ್ -19 ಹಾಟ್ ಬೆಡ್ ಆಗಿರುವ ಮೇರಾಪಾನಿ ಪ್ರದೇಶದ ಜೊತೆ ಗಡಿಯನ್ನು ಹಂಚಿಕೊಂಡಿದೆ. ದಿಮಾಪುರದಲ್ಲಿಯ ಗಣೇಶನಗರ ಕ್ವಾರಂಟೈನ್ ಕೇಂದ್ರವು 1070 ವ್ಯಕ್ತಿಗಳನ್ನು ಸೇರಿಸಿಕೊಳ್ಳಲು ಸಿದ್ದಗೊಂಡಿದೆ. ; ಸೌಲಭ್ಯವನ್ನು ಸ್ಥಾಪಿಸುವಲ್ಲಿ ರಾಜ್ಯ ಪೊಲೀಸರ ಸಹಕಾರವನ್ನು ಮುಖ್ಯಮಂತ್ರಿ ನಿಫ್ಯು ರಿಯೋ ಕೊಂಡಾಡಿದ್ದಾರೆ.
  • ತ್ರಿಪುರಾ: ಕೋಲ್ಕೊತ್ತಾದಿಂದ ಮೊದಲ ಪ್ರಯಾಣಿಕ ವಿಮಾನ ಇಂದು ಅಗರ್ತಾಲಾದ ಎಂ.ಬಿ.ಬಿ. ವಿಮಾನನಿಲ್ದಾಣದಲ್ಲಿ 170  ಪ್ರಯಾಣಿಕರೊಂದಿಗೆ ಬಂದಿಳಿಯಿತು. ಮತ್ತು ವಿಮಾನ ಇಲ್ಲಿಯ 170 ಪ್ರಯಾಣಿಕರೊಂದಿಗೆ ಮರು ಪ್ರಯಾಣ ಬೆಳೆಸಿತು.

ಪಿ ಐ ಬಿ ವಾಸ್ತವ ಪರಿಶೀಲನೆ

***



(Release ID: 1628038) Visitor Counter : 283