ಸಂಪುಟ ಕಾರ್ಯಾಲಯ

ತೀವ್ರ ಕೋವಿಡ್ ಬಾಧಿತ 13 ನಗರಗಳ ಸ್ಥಿತಿಗತಿ ಪರಾಮರ್ಶೆ ನಡೆಸಿದ ಸಂಪುಟ ಕಾರ್ಯದರ್ಶಿ

Posted On: 28 MAY 2020 3:50PM by PIB Bengaluru

ತೀವ್ರ ಕೋವಿಡ್ ಬಾಧಿತ 13 ನಗರಗಳ ಸ್ಥಿತಿಗತಿ ಪರಾಮರ್ಶೆ ನಡೆಸಿದ ಸಂಪುಟ ಕಾರ್ಯದರ್ಶಿ

 

ಸಂಪುಟ ಕಾರ್ಯದರ್ಶಿ, ಕೋವಿಡ್-19ನಿಂದ ತೀವ್ರವಾಗಿ ಬಾಧಿತವಾಗಿರುವ 13 ನಗರಗಳ ಸ್ಥಿತಿಗತಿ ಕುರಿತಂತೆ ಪೌರಾಡಳಿತ ಆಯುಕ್ತರು ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳೊಂದಿಗೆ ಪರಾಮರ್ಶೆ ನಡೆಸಿದರು. ಸಂಬಂಧಿಸಿದ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.

13 ನಗರಗಳು ಕೊರೊನಾ ಸೋಂಕಿನಿಂದ ತೀವ್ರ ಬಾಧಿತವಾಗಿದ್ದು, ನಗರಗಳಲ್ಲಿ ದೇಶದ ಶೇ.70ರಷ್ಟು ಸೋಂಕಿನ ಪ್ರಕರಣಗಳು ಇರುವುದರಿಂದ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

13 ನಗರಗಳೆಂದರೆ ಮುಂಬೈ, ಚೆನ್ನೈ, ದೆಹಲಿ/ನವದೆಹಲಿ, ಅಹಮದಾಬಾದ್, ಥಾಣೆ, ಪುಣೆ, ಹೈದ್ರಾಬಾದ್, ಕೋಲ್ಕತಾ/ಹೌರಾ, ಇಂದೋರ್(ಮಧ್ಯಪ್ರದೇಶ), ಜೈಪುರ, ಜೋಧ್ ಪುರ, ಚೆಂಗಲಪಟ್ಟು ಮತ್ತು ತಿರುವಳ್ಳೂರು(ತಮಿಳುನಾಡು)

ಸಭೆಯಲ್ಲಿ ಕೋವಿಡ್-19 ಪ್ರಕರಣಗಳ ನಿಯಂತ್ರಣಕ್ಕೆ ಮುನಿಸಿಪಲ್ ಕಾರ್ಪೊರೇಷನ್ ಗಳ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು.

ನಗರ ಪ್ರದೇಶಗಳಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಹೆಚ್ಚಿನ ಸೋಂಕಿನ ಅಪಾಯವಿರುವಂತಹ ಪ್ರದೇಶಗಳನ್ನು ಗುರುತಿಸುವುದು, ಖಚಿತಪಡಿಸಿಕೊಳ್ಳುವ ಪ್ರಮಾಣ, ಸಾವನ್ನಪ್ಪುತ್ತಿರುವವರ ಪ್ರಮಾಣ, ದುಪ್ಪಟ್ಟಾಗುತ್ತಿರುವವರ ಪ್ರಮಾಣ, ಒಂದು ಮಿಲಿಯನ್ ಜನರಿಗೆ ಮಾಡಬೇಕಾದ ಪರೀಕ್ಷೆಗಳು ಸೇರಿದಂತೆ ಹಲವು ಕಾರ್ಯತಂತ್ರಗಳನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ನಿರ್ಬಂಧಿತ ವಲಯಗಳನ್ನು ಭೌಗೋಳಿಕವಾಗಿ ಗುರುತಿಸಲು ಒತ್ತು ನೀಡಬೇಕು ಎಂದು ಕೇಂದ್ರ ಸೂಚಿಸಿದೆ. ಅಲ್ಲದೆ ಪ್ರಕರಣಗಳನ್ನು ಗುರುತಿಸುವುದು, ಸಂಪರ್ಕಗಳನ್ನು ಪತ್ತೆ ಹಚ್ಚುವುದು ಮತ್ತು ಅವರ ಭೌಗೋಳಿಕ ಪ್ರಸರಣವನ್ನು ಗುರುತಿಸಿ ಕ್ರಮ ಕೈಗೊಳ್ಳುವ ಅಂಶಗಳನ್ನು ಅದರಲ್ಲಿ ವ್ಯಾಖ್ಯಾನಿಸಲಾಗಿದೆ. ಇದರಿಂದಾಗಿ ನಿಗದಿತ ಮಾನದಂಡವನ್ನು ಅನುಸರಿಸುವ ಜೊತೆಗೆ ಲಾಕ್ ಡೌನ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಂಶಗಳು ಒಳಗೊಂಡಿವೆ.

ಮುನಿಸಿಪಲ್ ಕಾರ್ಪೊರೇಷನ್ ಗಳು ಅಗತ್ಯತೆಗೆ ತಕ್ಕಂತೆ ವಸತಿ ಪ್ರದೇಶಗಳು, ಮೊಹಲ್ಲಾಗಳು, ಮುನಿಸಿಪಲ್ ವಾರ್ಡ್ ಗಳು ಅಥವಾ ಪೊಲೀಸ್ ಠಾಣೆ ವ್ಯಾಪ್ತಿ, ಮುನ್ಸಿಪಲ್ ವಲಯ ನಗರಗಳನ್ನು ನಿರ್ಬಂಧಿತ ವಲಯಗಳು ಎಂದು ನಿಯೋಜಿಸುವ ನಿರ್ಧಾರವನ್ನು ಕೈಗೊಳ್ಳಬಹುದು.

ಸ್ಥಳೀಯ ಮಟ್ಟದ ತಾಂತ್ರಿಕ ಮಾಹಿತಿಗಳನ್ನು ಮತ್ತು ಸ್ಥಳೀಯ ನಗರಾಭಿವೃದ್ಧಿ ಸಂಸ್ಥೆಯಿಂದ ಮಾಹಿತಿಯಿಂದ ಆಧರಿಸಿ, ಜಿಲ್ಲಾಡಳಿತ ಪ್ರದೇಶಗಳನ್ನು ಸೂಕ್ತ ರೀತಿಯಲ್ಲಿ ಗುರುತಿಸಬೇಕು ಎಂದು ನಗರಗಳಿಗೆ ಸೂಚಿಸಲಾಯಿತು.

***



(Release ID: 1628015) Visitor Counter : 189