ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂಧನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಸಭೆ

Posted On: 28 MAY 2020 7:35AM by PIB Bengaluru

ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂಧನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಸಭೆ

 

ಪ್ರಧಾನಮಂತ್ರಿಯವರು ನಿನ್ನೆ ಸಂಜೆ ಇಂಧನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯ ಚಟುವಟಿಕೆಗಳ ಪರಾಮರ್ಶೆ ನಡೆಸಿದರು. ವಿದ್ಯುತ್ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಪರಿಷ್ಕೃತ ದರ ನೀತಿ ಮತ್ತು ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆ 2020 ಕುರಿತಂತೆ ಪರಾಮರ್ಶಿಸಲಾಯಿತು.

ಪ್ರಧಾನಮಂತ್ರಿಯವರು ಕಾರ್ಯದಕ್ಷತೆಯ ಹೆಚ್ಚಳ ಮತ್ತು ವಿದ್ಯುತ್ ವಲಯದ ಆರ್ಥಿಕ ಸುಸ್ಥಿರತೆಯನ್ನು ಸುಧಾರಿಸುವಾಗ ಗ್ರಾಹಕರ ಸಂತೃಪ್ತಿಯನ್ನು ಹೆಚ್ಚಿಸುವ ಅಗತ್ಯವೂ ಇದೆ ಎಂದು ಪ್ರತಿಪಾದಿಸಿದರು.

ವಿವಿಧ ರಾಜ್ಯಗಳು ಮತ್ತು ವಲಯಗಳಲ್ಲಿನ ವಿದ್ಯುತ್ ಕ್ಷೇತ್ರದ ಸಮಸ್ಯೆಗಳನ್ನು ಅದರಲ್ಲೂ ವಿದ್ಯುತ್ ವಿತರಣಾ ವಲಯದ ಸಮಸ್ಯೆಗಳನ್ನು ಅವರು ಉಲ್ಲೇಖಿಸಿದರು. ಒಂದು-ಗಾತ್ರಕ್ಕೆ ಸರಿಹೊಂದುವ-ಎಲ್ಲ ಪರಿಹಾರವನ್ನು ಹುಡುಕುವ ಬದಲು, ಪ್ರತಿ ರಾಜ್ಯವು ಅದರ ಕಾರ್ಯಕ್ಷಮತೆಯನ್ನು ಸುಧಾರಿಸಲು ಪ್ರೋತ್ಸಾಹಿಸಲು ರಾಜ್ಯ-ನಿರ್ದಿಷ್ಟ ಪರಿಹಾರಗಳನ್ನು ಸಚಿವಾಲಯ ಜಾರಿಗೆ ತರಬೇಕು ಎಂದರು.

ಡಿಸ್ಕಾಂಗಳು ತಮ್ಮ ದಕ್ಷತೆಯ ಮಾನದಂಡಗಳನ್ನು ಪ್ರಕಟಿಸುವಂತೆ ಮೂಲಕ ಜನರು ಹೇಗೆ ತಮ್ಮ ಡಿಸ್ಕಾಂಗಳು ಅವರ ಸಹವರ್ತಿಗಳಿಗಿಂತ ಹೇಗೆ ನ್ಯಾಯಯುತವಾಗಿದ್ದಾರೆ ಎಂಬುದು ಜನರಿಗೆ ತಿಳಿಯುವುದನ್ನು ಖಾತ್ರಿ ಪಡಿಸಿಕೊಳ್ಳಲು ಪ್ರಧಾನಿಯವರು ಇಂಧನ ಸಚಿವಾಲಯಕ್ಕೆ ಸಲಹೆ ಮಾಡಿದರು. ವಿದ್ಯುತ್ ವಲಯದಲ್ಲಿನ ಸಾಧನಗಳ ಬಳಕೆ ಮೇಕ್ ಇನ್ ಇಂಡಿಯಾ ಆಗಬೇಕು ಎಂದು ಅವರು ಪ್ರತಿಪಾದಿಸಿದರು.

ಹೊಸ ಮತ್ತು ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದಂತೆ, ಸೌರ ವಿದ್ಯುತ್ ಚಾಲಿತ ನೀರಿನ ಪಂಪ್ಗಳಿಂದ ಹಿಡಿದು ವಿಕೇಂದ್ರೀಕೃತ ಸೌರ ಶೀಥಲೀಕರಣ ಘಟಕಗಳವರೆಗಿನ ಕೃಷಿ ಕ್ಷೇತ್ರದ ಸಂಪೂರ್ಣ ಪೂರೈಕೆ ಸರಪಳಿಗೆ ಸಂಪೂರ್ಣ ವಿಧಾನದ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಛಾವಣಿ ಮೇಲಿನ ಸೌರ ಮಾದರಿಗಳ ನಾವಿನ್ಯತೆ ಕುರಿತು ಪ್ರತಿಪಾದಿಸಿದ ಅವರು, ಪ್ರತಿ ರಾಜ್ಯವೂ ಕನಿಷ್ಠ ಒಂದು ನಗರವನ್ನು (ರಾಜಧಾನಿ ಅಥವಾ ಯಾವುದೇ ಖ್ಯಾತ ಪ್ರವಾಸಿ ತಾಣ) ಛಾವಣಿ ಮೇಲಿನ ಸೌರ ವಿದ್ಯುತ್ ಉತ್ಪಾದನೆ ಮೂಲಕ ಸಂಪೂರ್ಣ ಸೌರ ನಗರ ಮಾಡುವಂತೆ ತಿಳಿಸಿದರು. ಭಾರತದಲ್ಲಿ ಇಂಗಾಟ್ಸ್, ವಾಫೆರ್ಸ್, ಸೆಲ್ ಗಳು ಮತ್ತು ಮಾಡ್ಯೂಲ್ಗಳ ತಯಾರಿಕೆಗಾಗಿ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಒತ್ತು ನೀಡಲಾಯಿತು, ಇದು ಹಲವಾರು ಇತರ ಅನುಕೂಲಗಳ ಜೊತೆಗೆ ಉದ್ಯೋಗವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿಯವರು ಇಂಗಾಲದ ತಟಸ್ಥ ಲಡಾಖ್ ಯೋಜನೆಯನ್ನು ತ್ವರಿತಗೊಳಿಸಲು ಮತ್ತು ಸೌರ ಮತ್ತು ಪವನ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಕರಾವಳಿ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ಒತ್ತು ನೀಡಬೇಕೆಂದು ಬಯಸಿದರು.

***



(Release ID: 1627393) Visitor Counter : 203