ಇಂಧನ ಸಚಿವಾಲಯ
ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಮತ್ತು ಇತರೆ ವೈದ್ಯಕೀಯ ಸಿಬ್ಬಂದಿಗೆ ಪಿಎಫ್ ಸಿಯಿಂದ ಊಟ ಪೂರೈಕೆ
Posted On:
27 MAY 2020 5:24PM by PIB Bengaluru
ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಮತ್ತು ಇತರೆ ವೈದ್ಯಕೀಯ ಸಿಬ್ಬಂದಿಗೆ ಪಿಎಫ್ ಸಿಯಿಂದ ಊಟ ಪೂರೈಕೆ
ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಸಮರದ ಮತ್ತೊಂದು ಹೆಜ್ಜೆಯಾಗಿ ಕೇಂದ್ರದ ಇಂಧನ ಸಚಿವಾಲಯದಡಿ ಬರುವ ಸಾರ್ವಜನಿಕ ವಲಯದ ಉದ್ದಿಮೆ ಮತ್ತು ಭಾರತದ ಮುಂಚೂಣಿ ಎನ್ ಬಿಎಫ್ ಸಿ, ಇಂಧನ ಹಣಕಾಸು ನಿಗಮ ನಿಯಮಿತ(ಪಿಎಫ್ ಸಿ) ಏಷ್ಯಾದ ಅತಿದೊಡ್ಡ ಆಹಾರ ತಯಾರಿಕಾ ಕಂಪನಿ ತಾಜ್ ಸಾಟ್ಸ್ ಜೊತೆ ಒಪ್ಪಂದ ಮಾಡಿಕೊಂಡು ಮುಂಚೂಣಿಯಲ್ಲಿರುವ ಕೋವಿಡ್ ಯೋಧರಿಗೆ ಶುಚಿಯಾದ ಮತ್ತು ಪೌಷ್ಠಿಕಾಂಶದಿಂದ ಕೂಡಿದ ಆಹಾರವನ್ನು ಪೂರೈಸಲಿದೆ. ಅದರ ಭಾಗವಾಗಿ ಪಿಎಫ್ ಸಿ, ನವದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಮತ್ತು ಇತರ ಆರೋಗ್ಯ ಸಿಬ್ಬಂದಿಗೆ ಪ್ಯಾಕ್ ಮಾಡಿದ ಊಟದ ಬಾಕ್ಸ್ ಗಳನ್ನು ಒದಗಿಸುತ್ತಿದೆ.
ಈ ಉಪಕ್ರಮದಡಿ ಕಂಪನಿ ಒಟ್ಟು 64 ಲಕ್ಷ ರೂ.(ಅಂದಾಜು) ಹಣವನ್ನು ತಾಜ್ ಸಾಟ್ಸ್ ಗೆ ಉತ್ತಮ ಗುಣಮಟ್ಟದ ಮತ್ತು ಶುಚಿಯಾದ (ಪ್ಯಾಕ್ ಮಾಡಿದ ಊಟದ ಬಾಕ್ಸ್) ಅನ್ನು 2020ರ ಮೇ 25ರಿಂದ ಆರಂಭವಾಗಿ 60 ದಿನಗಳ ಕಾಲ ಪ್ರತಿ ದಿನ ಡಾ.ಆರ್ ಎಂಎಲ್ ಆಸ್ಪತ್ರೆಗೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಪೂರೈಸಲಿದೆ.
ಆರೋಗ್ಯ ಸಚಿವಾಲಯ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯನ್ನು ನವದೆಹಲಿಯಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ನಿಗದಿತ ಆಸ್ಪತ್ರೆ ಎಂದು ಆಯ್ಕೆ ಮಾಡಿದೆ. ಅಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ದಿನದ 24 ಗಂಟೆಗಳೂ ಕೋವಿಡ್-19 ರೋಗಿಗಳಿಗೆ ವೈದ್ಯಕೀಯ ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ.
ಇದಕ್ಕೂ ಮುನ್ನ ಪಿಎಫ್ ಸಿ ಕೋವಿಡ್-19 ವಿರುದ್ಧದ ಸಮರವನ್ನು ಬೆಂಬಲಿಸಿ ಪಿಎಂ-ಕೇರ್ಸ್ ನಿಧಿಗೆ 200 ಕೋಟಿ ರೂ. ದೇಣಿಗೆ ನೀಡಿದೆ. ಪಿಎಫ್ ಸಿಯ ಉದ್ಯೋಗಿಗಳು ಮುಂದೆ ಬಂದು, ತಮ್ಮ ಒಂದು ದಿನದ ವೇತನವನ್ನು ಪಿಎಂ-ಕೇರ್ಸ್ ನಿಧಿಗೆ ದಾನವಾಗಿ ನೀಡಿದ್ದಾರೆ. ಅಲ್ಲದೆ ಪಿಎಫ್ ಸಿ ತಲಾ 50,00,000 ರೂ.( ಐವತ್ತು ಲಕ್ಷ ರೂ. ಮಾತ್ರ)ಗಳನ್ನು ಉತ್ತರ ಪ್ರದೇಶದ ಸಿದ್ಧಾರ್ಥನಗರ ಮತ್ತು ಬುಲಂದ್ ಶಹರ್ ಜಿಲ್ಲಾಧಿಕಾರಿಗಳಿಗೆ ಕೊಡುಗೆಯಾಗಿ ನೀಡಿದೆ. ಅಲ್ಲದೆ 50,00,000 ರೂ.ಗಳನ್ನು( ಐವತ್ತು ಲಕ್ಷ ರೂ.ಗಳು ಮಾತ್ರ) ರಾಜಸ್ಥಾನದ ಕೋಟಾದಲ್ಲಿ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಲು ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ದೇಣಿಗೆಯಾಗಿ ನೀಡಿದೆ.
***
(Release ID: 1627307)
Visitor Counter : 260