ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಹೊಸ ಮಾಹಿತಿ

Posted On: 22 MAY 2020 6:45PM by PIB Bengaluru

ಕೋವಿಡ್-19 ಹೊಸ ಮಾಹಿತಿ

ಚೇತರಿಕೆಯ ಪ್ರಮಾಣವು 40.98% ರಷ್ಟು ಸುಧಾರಿಸಿದೆ

 

ಶ್ರೇಣೀಕೃತ, ಹತೋಟಿಯಲ್ಲಿಡುವ ಮತ್ತು ಸಕ್ರಿಯ ವಿಧಾನದ ಮೂಲಕ, ಕೋವಿಡ್-19 ತಡೆಗಟ್ಟುವಿಕೆಗೆ, ಹತೋಟಿಗಾಗಿ ಮತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ . ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ನಿನ್ನೆಯಿಂದ, ಭಾರತದಲ್ಲಿ ಕೋವಿಡ್-19 ದೃಢಪಡಿಸಿದ ಪ್ರಕರಣಗಳ ಸಂಖ್ಯೆಯಲ್ಲಿ 6088 ಹೆಚ್ಚಳ ಕಂಡುಬಂದಿದೆ. ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 1,18,447 ಆಗಿದೆ. ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುವ ಪ್ರಕರಣಗಳ ಸಂಖ್ಯೆ 66,330 ಆಗಿದೆ.

ಈವರೆಗೆ ಒಟ್ಟು 48,533 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 3234 ರೋಗಿಗಳು ಗುಣಮುಖರಾಗಿದ್ದಾರೆ. ಇದು ನಮ್ಮ ಒಟ್ಟು ಚೇತರಿಕೆಯ ಪ್ರಮಾಣವನ್ನು 40.98% ರಷ್ಟನ್ನಾಗಿ ಮಾಡಿದೆ.

ನಾವು ಲಾಕ್ಡೌನ್ 4.0 ಮೂಲಕ ಸಾಗುತ್ತಿರುವಾಗ, ಸೂಕ್ತವಾದ ಕೋವಿಡ್ ನಡವಳಿಕೆಯನ್ನು ನಮ್ಮ ಜೀವನಶೈಲಿಯ ಅವಿಭಾಜ್ಯ ಅಂಗವನ್ನಾಗಿ ಮಾಡುವಲ್ಲಿ ಜಾಗರೂಕರಾಗಿರುವುದು ಬಹಳ ಮುಖ್ಯ, ಇದರಲ್ಲಿ ನಿಯಮಿತವಾಗಿ ಕೈ ತೊಳೆಯುವುದು ಮತ್ತು ಕೈ ನೈರ್ಮಲ್ಯ, ಮುಖಗವಸುಗಳು / ಮುಖದ ಕವರ್ಗಳ ಬಳಕೆ, '2 ಗಜದ ದೂರದೈಹಿಕ ಆಂತರವನ್ನು ಕಾಯ್ದುಕೊಳ್ಳುವುದು', ವೃದ್ಧರ ಮತ್ತು ರೋಗಕ್ಕೆ ಹೆಚ್ಚು ಗುರಿಯಾಗುವಂತವರನ್ನು ನೋಡಿಕೊಳ್ಳುವುದು, ಆಯುಷ್ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಸ್ವರಕ್ಷಣೆ ಮಾಡಿಕೊಳ್ಳುವುದು, ಆರೋಗ್ಯ ಸೇತು ಆ್ಯಪ್ ಬಳಕೆ, ಮತ್ತು ಕೋವಿಡ್-19 ಚಿಕಿತ್ಸೆಗಾಗಿ ಯಾವುದೇ ಅಳುಕು, ಕಳಂಕವನ್ನು ಹೊಂದದೆ ಸಮಯಕ್ಕೆ ಸರಿಯಾಗಿ ರೋಗಲಕ್ಷಣಗಳನ್ನು ವರದಿ ಮಾಡುವ ಮೂಲಕ ಆರೋಗ್ಯವಂತರಾಗುವುದು, ಇವೆಲ್ಲವೂ ಮುಖ್ಯವಾಗಿವೆ.

ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1627020) Visitor Counter : 194