ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಎನ್ ಪಿಪಿಎ ಸೂಚನೆ ನಂತರ ಎನ್-95 ಮಾಸ್ಕ್ ಉತ್ಪಾದಕರು, ಆಮದುದಾರರು ಮತ್ತು ಪೂರೈಕೆದಾರರಿಂದ ಎನ್-95 ಮಾಸ್ಕ್ ಗಳ ಬೆಲೆ ಇಳಿಕೆ

Posted On: 25 MAY 2020 5:28PM by PIB Bengaluru

ಎನ್ ಪಿಪಿಎ ಸೂಚನೆ ನಂತರ ಎನ್-95 ಮಾಸ್ಕ್ ಉತ್ಪಾದಕರು, ಆಮದುದಾರರು ಮತ್ತು ಪೂರೈಕೆದಾರರಿಂದ

ಎನ್-95 ಮಾಸ್ಕ್ ಗಳ ಬೆಲೆ ಇಳಿಕೆ

 

ಕೇಂದ್ರ ಸರ್ಕಾರ ಎನ್-95 ಮಾಸ್ಕ್ ಗಳನ್ನು ಅತ್ಯಾವಶ್ಯಕ ವಸ್ತುಗಳ ಕಾಯ್ದೆ 1955 ಅಡಿಯಲ್ಲಿ ಅವಶ್ಯಕ ಸಾಮಗ್ರಿ ಎಂದು ದಿನಾಂಕ 13 ಮಾರ್ಚ್ 2020ರಂದು ಅಧಿಸೂಚನೆ ಹೊರಡಿಸಿದೆ. ಹಾಗಾಗಿ ಕಾಯ್ದೆ ಅನ್ವಯ ಮಾಸ್ಕ್ ಗಳನ್ನು ದಾಸ್ತಾನು ಮಾಡುವುದು, ಅಕ್ರಮವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಅತ್ಯವಶ್ಯಕ ವಸ್ತು ಅಥವಾ ಸಾಮಗ್ರಿ ಅಕ್ರಮ ಮಾರಾಟ ಮತ್ತು ದಾಸ್ತಾನು ವಿರುದ್ಧ ನಿಗಾ ಇಡಲು ಎನ್ ಪಿಪಿಎ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 ಅಡಿ ತನ್ನ ಅಧಿಕಾರವನ್ನು ಬಳಸಿ, 2020 ಮಾರ್ಚ್ 13ರಂದು ಆದೇಶವನ್ನು ಹೊರಡಿಸಿ, ಶಸ್ತ್ರ ಚಿಕಿತ್ಸ ಉಪಕರಣಗಳು, ರಕ್ಷಣಾ ಮಾಸ್ಕ್ ಗಳು, ಹ್ಯಾಂಡ್ ಸ್ಯಾನಿಟೈಸರ್ ಮತ್ತು ಗ್ಲೌಸ್ ಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುವಂತೆ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಖಾತ್ರಿಪಡಿಸಬೇಕು ಮತ್ತು ಅವುಗಳ ಬೆಲೆ ಪ್ಯಾಕೆಟ್ ಗಳ ಮೇಲೆ ಮುದ್ರಿತವಾಗಿರುವ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿತ್ತು.

ದೇಶದಲ್ಲಿ ಎನ್-95 ಮಾಸ್ಕ್ ಗೆ ಹೆಚ್ಚುವರಿ ಬೆಲೆ ನಿಗದಿಪಡಿಸಲಾಗಿದೆ ಮತ್ತು ಅವುಗಳನ್ನು ಅಕ್ರಮ ದಾಸ್ತಾನು ಮಾಡಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಬಂದಿವೆ. ನಿಟ್ಟಿನಲ್ಲಿ ಎನ್ ಪಿಪಿಎ, ಎಲ್ಲ ರಾಜ್ಯಗಳ ಔಷಧ ನಿಯಂತ್ರಕರು/ಆಹಾರ ಮತ್ತು ಔಷಧ ಆಡಳಿತಕ್ಕೆ ಸಂಬಂಧಿಸಿದ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು. ಕೆಲವು ಎಸ್ ಡಿಸಿಗಳು/ಎಫ್ ಡಿಎಗಳು ಹಲವೆಡೆ ದಾಳಿ ನಡೆಸಿದ ಮತ್ತು ಅತ್ಯವಶ್ಯಕ ವಸ್ತುಗಳ ಅಕ್ರಮ ಮಾರಾಟ ಮತ್ತು ದಾಸ್ತಾನು ಹೊಂದಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವ ವರದಿಗಳು ಬಂದಿವೆ. ಸಂಬಂಧ ಗೌರವಾನ್ವಿತ ಬಾಂಬೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಕೂಡ ಸಲ್ಲಿಕೆಯಾಗಿದ್ದು, ಸರ್ಕಾರಕ್ಕೆ ಎನ್-95 ಮಾಸ್ಕ್ ಗೆ ಬೆಲೆ ಮಿತಿ ನಿಗದಿಪಡಿಸುವಂತೆ ಸೂಚಿಸಬೇಕೆಂದು ಕೋರಲಾಗಿದೆ.

ಸರ್ಕಾರ ದೇಶದಲ್ಲಿ ಅಗತ್ಯ ಪ್ರಮಾಣದ ಎನ್-95 ಮಾಸ್ಕ್ ಗಳು ಯಾವುದೇ ಅಡೆತಡೆ ಇಲ್ಲದೆ ಪೂರೈಕೆಯಾಗುವುದನ್ನು ಖಾತ್ರಿಪಡಿಸಲು ತೀವ್ರ ಪ್ರಯತ್ನಗಳನ್ನು ನಡೆಸುತ್ತಿದೆ. ಅದಕ್ಕಾಗಿ ಸರ್ಕಾರ ಸಗಟು ದರದಲ್ಲಿ ಉತ್ಪಾದಕರು/ಆಮದುದಾರರು/ಪೂರೈಕೆದಾರರಿಂದ ಭಾರೀ ಪ್ರಮಾಣದ ಎನ್-95 ಮಾಸ್ಕ್ ಗಳನ್ನು ನೇರವಾಗಿ ಖರೀದಿ ಮಾಡುತ್ತಿದೆ. ಎನ್-95 ಮಾಸ್ಕ್ ಗಳಿಗೆ ಅಧಿಕ ಬೆಲೆ ವಿಧಿಸುತ್ತಿರುವ ವಿಚಾರದ ಬಗ್ಗೆ ಎನ್ ಪಿಪಿಎ ಮಧ್ಯ ಪ್ರವೇಶಿಸಿ ಬೆಲೆಗಳನ್ನು ತಗ್ಗಿಸಿದೆ. ನಿಟ್ಟಿನಲ್ಲಿ ದೇಶಾದ್ಯಂತ ಕೈಗೆಟಕುವ ದರದಲ್ಲಿ ಎನ್-95 ಮಾಸ್ಕ್ ಲಭ್ಯವಾಗುವುದನ್ನು ಖಾತ್ರಿಪಡಿಸಲು ಎನ್ ಪಿಪಿಎ 2020 ಮೇ 21ರಂದು ಸಲಹಾ ಸೂಚಿಯೊಂದನ್ನು ಎಲ್ಲಾ ಎನ್-95 ಮಾಸ್ಕ್ ಉತ್ಪಾದಕರು/ಆಮದುದಾರರು/ಪೂರೈಕೆದಾರರಿಗೆ ಹೊರಡಿಸಿ, ಸರ್ಕಾರೇತರ ಖರೀದಿಗಳಿಗೆ ದರದಲ್ಲಿ ಏಕರೂಪತೆ ಕಾಯ್ದುಕೊಳ್ಳಬೇಕು ಮತ್ತು ಕೈಗೆಟಕುವ ದರದಲ್ಲಿ ಅವುಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದೆ. ಅಲ್ಲದೆ, ಎನ್ ಪಿಪಿಎ ಗೌರವಾನ್ವಿತ ಬಾಂಬೆ ಹೈಕೋರ್ಟ್ ಮುಂದೆ ಎನ್-95 ಮಾಸ್ಕ್ ಗೆ ದರ ನಿಗದಿಪಡಿಸಿರುವ ಸಂಬಂಧ ಹೇಳಿಕೆಯೊಂದನ್ನು ಸಲ್ಲಿಸಿ, ದೇಶದಲ್ಲಿ ಎನ್-95 ಮಾಸ್ಕ್ ಗಳ ಬೇಡಿಕೆ ಮತ್ತು ಪೂರೈಕೆ ನಡುವಿನ ವ್ಯತ್ಯಾಸವನ್ನು ಗಮನಿಸಿ ಎನ್ ಪಿಪಿಎ, ಎಲ್ಲಾ ಉತ್ಪಾದಕರು/ಆಮದುದಾರರು/ಪೂರೈಕೆದಾರರಿಗೆ ಬೆಲೆಗಳನ್ನು ಸ್ವಯಂಪ್ರೇರಿತವಾಗಿ ಇಳಿಕೆ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದೆ.

ಮಧ್ಯೆ ಎನ್ ಪಿಪಿಎ, ಇಂದು ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯನ್ನು ತಳ್ಳಿಹಾಕಿದೆ. ಪತ್ರಿಕೆಯಲ್ಲಿ ಎನ್ ಪಿಪಿಎ ಮಾಸ್ಕ್ ಗಳಿಗೆ ಸರ್ಕಾರಕ್ಕೆ ಖರೀದಿಸಲು ಮೂರು ಪಟ್ಟು ಹೆಚ್ಚು ಬೆಲೆ ನಿಗದಿ ಮಾಡಿದೆ ಎಂದು ಆರೋಪಿಸಿತ್ತು. ಪತ್ರಿಕೆ ತನ್ನ ಸುದ್ದಿಯಲ್ಲಿ ಸರ್ಕಾರದ ಖರೀದಿ ದರವನ್ನು ನಿಗದಿಪಡಿಸಿದೆ ಎಂದು ಉಲ್ಲೇಖಿಸಿರುವ ದರ ತರ್ಕಬದ್ಧವಲ್ಲದ ಮತ್ತು ವಂಚನೆಕಾರಿ ಹಾಗೂ ಗೊಂದಲಕಾರಿಯಾಗಿದೆ.

ಸಲಹೆಯನ್ನು ನೀಡಿದ ನಂತರ ದೇಶದಲ್ಲಿ ಬಹುತೇಕ ಎನ್-95 ಮಾಸ್ಕ್ ಉತ್ಪಾದಕರು ಮತ್ತು ಆಮದುದಾರರು ಮಾಸ್ಕ್ ಗಳ ಬೆಲೆಯನ್ನು ಶೇ.47ರಷ್ಟು ಗಣನೀಯವಾಗಿ ಇಳಿಕೆ ಮಾಡಿದ್ದಾರೆ ಮತ್ತು ಅವುಗಳು ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. ಇತರೆ ಎನ್-95 ಮಾಸ್ಕ್ ಉತ್ಪಾದಕರು/ಆಮದುದಾರರು ಸರ್ಕಾರದ ಸಲಹೆಯನ್ನು ಅನುಸರಿಸಿ, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಎಲ್ಲ ಉತ್ಪಾದಕರು ಆಮದುದಾರರು ಬೆಲೆಯನ್ನು ಇಳಿಕೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.

***


(Release ID: 1626834) Visitor Counter : 352