ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಯಾರೂ ಹಸಿವಿನಿಂದ ಬಳಲದಂತೆ ರಾಜ್ಯಗಳು ಫಲಾನುಭವಿಗಳಿಗೆ ಆಹಾರ ಧಾನ್ಯಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು: ಶ್ರೀ ರಾಮ್ ವಿಲಾಸ್ ಪಾಸ್ವಾನ್

Posted On: 22 MAY 2020 5:37PM by PIB Bengaluru

ಯಾರೂ ಹಸಿವಿನಿಂದ ಬಳಲದಂತೆ ರಾಜ್ಯಗಳು ಫಲಾನುಭವಿಗಳಿಗೆ ಆಹಾರ ಧಾನ್ಯಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು:

ಶ್ರೀ ರಾಮ್ ವಿಲಾಸ್ ಪಾಸ್ವಾನ್

ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಎಫ್ಸಿಐ ಆಹಾರ ವಿತರಣೆಯ ಜೀವನಾಡಿಯಾಗುತ್ತದೆ: ಶ್ರೀ ಪಾಸ್ವಾನ್

ಶ್ರೀ ಪಾಸ್ವಾನ್ ಅವರು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು, ಎನ್ಎಫ್ಎಸ್ಎ, ಪಿಎಂಜಿಕೆಎ, ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಮತ್ತು ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಉಪಕ್ರಮವನ್ನು ಪರಿಶೀಲಿಸಿದರು

 

ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರು ಇಂದು ಇಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು ಮತ್ತು ಆಹಾರ ಕಾರ್ಯದರ್ಶಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ (ಡಿಒಎಫ್ಪಿಡಿ) ಪ್ರಮುಖ ಯೋಜನೆಗಳ ಅನುಷ್ಠಾನವನ್ನು ಶ್ರೀ ಪಾಸ್ವಾನ್ ಪರಿಶೀಲಿಸಿದರು. ಆತ್ಮನಿರ್ಭರ್ ಪ್ಯಾಕೇಜ್ ಮತ್ತು ಪಿಎಂಜಿಕೆಎಇ ಅಡಿಯಲ್ಲಿ ಒದಗಿಸಲಾದ ಆಹಾರ ಧಾನ್ಯಗಳು ಮತ್ತು ಬೇಳೆಕಾಳು ಧಾನ್ಯಗಳಿಗೆ ಸಂಬಂಧಿಸಿದಂತೆ ಆಹಾರ ಮತ್ತು ಸಾರ್ವಜನಿಕ ವಿತರಣೆಗಾಗಿ ಕೇಂದ್ರ, ಎಫ್ಸಿಐ ಮತ್ತು ನ್ಎ ಫ್ ಡಿ ಒದಗಿಸಿದ ನೆರವಿಗಾಗಿ ದೇಶದ ವಿವಿಧ ರಾಜ್ಯಗಳ ಆಹಾರ ಸಚಿವರು ಪ್ರಧಾನಮಂತ್ರಿ ಮತ್ತು ಕೇಂದ್ರ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಈಶಾನ್ಯ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿನ ರಾಜ್ಯಗಳು ಆಹಾರ ಧಾನ್ಯಗಳ ವಿತರಣೆಯನ್ನು ವಾಯು, ಸಮುದ್ರ ಮತ್ತು ರೈಲು ಮಾರ್ಗಗಳ ಮೂಲಕ ಸಮಯೋಚಿತವಾಗಿ ಮಾಡಿರುವುದಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದವು.

ಬಡಜನರಿಗೆ ಮತ್ತು ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯಗಳು ಮತ್ತು ಬೇಳೆಕಾಳು ಧಾನ್ಯಗಳ ವಿತರಣೆಯಲ್ಲಿ ಮತ್ತು ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಉಪಕ್ರಮದೊಂದಿಗೆ ಮುಂದುವರಿಯುವುದಕ್ಕಾಗಿ ಶ್ರೀ ಪಾಸ್ವಾನ್ ರಾಜ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಹಾರ ಧಾನ್ಯಗಳ ಸಂಗ್ರಹ ಕಾರ್ಯವು ಉತ್ತಮವಾಗಿ ಮುಂದುವರಿಯುತ್ತಿದೆ ಎಂದು ಅವರು ತೃಪ್ತಿ ವ್ಯಕ್ತಪಡಿಸಿದರು.

 

 

ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರು ಇಲ್ಲಿ ವಿಡಿಯೋ ಸಂವಾದದ ಮೂಲಕ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು ಮತ್ತು ಆಹಾರ ಕಾರ್ಯದರ್ಶಿಗಳೊಂದಿಗೆ ಪರಿಶೀಲನಾ ಸಭೆಯನ್ನು ನಡೆಸಿದರು.

ದೇಶದ ವಿವಿಧ ರಾಜ್ಯಗಳ ಆಹಾರ ಮಂತ್ರಿಗಳು ಮತ್ತು ಆಹಾರ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ ಶ್ರೀ ಪಾಸ್ವಾನ್ ರವರು ಯಾರೂ ಹಸಿವಿನಿಂದ ಬಳಲದೇ ಇರಲು ಆಹಾರ ಧಾನ್ಯಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು. 'ಆಂಫಾನ್' ಚಂಡಮಾರುತದಿಂದ ಪೀಡಿತವಾದ ಒಡಿಶಾ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳೂ ಸಹ ಕಾಳಜಿ ವಹಿಸಬೇಕು ಎಂದು ಸಚಿವರು ಒತ್ತಿ ಹೇಳಿದರು. ಭಾರತೀಯ ಆಹಾರ ನಿಗಮ (ಎಫ್ಸಿಐ) ವು ಆಹಾರ ವಿತರಣೆಯ ಜೀವನಾಡಿಯಾಗಿ ಮಾರ್ಪಟ್ಟಿದೆ ಮತ್ತು ರಸ್ತೆ, ರೈಲು ಮತ್ತು ವಾಯುಮಾರ್ಗದ ಮೂಲಕ ಆಹಾರ ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ದೇಶಾದ್ಯಂತ ವಿತರಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಹಾರ ಧಾನ್ಯಗಳು ಮತ್ತು ಬೇಳೆಕಾಳುಗಳ ವಿತರಣೆಯ ವಿವರಗಳನ್ನು ಸಚಿವರು ಪಡೆದುಕೊಂಡರು. ಅವರು ಪ್ರತಿ ರಾಜ್ಯದ ಯಶಸ್ಸು ಮತ್ತು ಅಡೆತಡೆಗಳು ಮತ್ತು ವಿಶಿಷ್ಟವಾದ ಸಮಸ್ಯೆಗಳನ್ನು ಆಲಿಸಿದರು. ಒಂದು ರಾಷ್ಟ್ರ ಒಂದು ಪಡಿತರ ಚೀಟಿ (ಒಎನ್ಒಎಸ್) ಯೋಜನೆಯ ಅನುಷ್ಠಾನದ ಬಗ್ಗೆಯೂ ಅವರು ಮಾಹಿತಿ ಪಡೆದರು.

ಆತ್ಮನಿರ್ಭರ ಭಾರತ ಪ್ಯಾಕೇಜ್

ಆತ್ಮನಿರ್ಭರ ಭಾರತ ಪ್ಯಾಕೇಜ್ ಅಡಿಯಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ವಿತರಣೆಗಾಗಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (ಡಿ ಎಫ್ ಪಿ ಡಿ) ಈಗಾಗಲೇ 8 ಲಕ್ಷ ಮೆಟ್ರಿಕ್ ಟನ್ ಗೋಧಿ / ಅಕ್ಕಿ ಮತ್ತು 39,000 ಮೆಟ್ರಿಕ್ ಟನ್ ಬೇಳೆಕಾಳುಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರವು ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಗೋಧಿ / ಅಕ್ಕಿಯನ್ನು 8 ಕೋಟಿ ವಲಸಿಗ ಮತ್ತು ಸಿಲುಕಿಕೊಂಡಿರುವ ಕಾರ್ಮಿಕರಿಗೆ ಮತ್ತು ತಿಂಗಳಿಗೆ ಒಂದು ಕೆಜಿ ಬೇಳೆಕಾಳುಗಳನ್ನು ಎರಡು ತಿಂಗಳವರೆಗೆ (ಮೇ ಮತ್ತು ಜೂನ್ 2020) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಯಾವುದೇ ಎನ್ಎಫ್ಎಸ್ ವ್ಯಾಪ್ತಿಗೆ ಅಥವಾ ಪಿಡಿಎಸ್ ಯೋಜನೆಗಳಿಗೆ ಒಳಪಡದ 1.96 ಕೋಟಿ ವಲಸೆ ಕುಟುಂಬಗಳಿಗೆ ವಿತರಿಸುತ್ತಿದೆ. ಆಹಾರ ಧಾನ್ಯಗಳ ವಿತರಣೆಯು 15 ಜೂನ್ 2020 ಮೊದಲು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಈಗಾಗಲೇ 17 ರಾಜ್ಯಗಳು ಆಹಾರ ಧಾನ್ಯಗಳನ್ನು ಪಡೆದಿದ್ದು, ಹರಿಯಾಣ ಮತ್ತು ತ್ರಿಪುರ ರಾಜ್ಯಗಳು ಈಗಾಗಲೇ ಯೋಜನೆಯಡಿ ಆಹಾರ ಧಾನ್ಯಗಳ ವಿತರಣೆಯನ್ನು ಪ್ರಾರಂಭಿಸಿವೆ ಎಂದು ಶ್ರೀ ಪಾಸ್ವಾನ್ ಹೇಳಿದರು. ಯೋಜನೆಗಾಗಿ 3500 ಕೋಟಿ ರೂ.ಗಳ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವು ರಾಜ್ಯದೊಳಗಿನ ಸಾರಿಗೆ, ವಿತರಕರ ಲಾಭ ಸೇರಿದಂತೆ ಭರಿಸಲಿದೆ ಎಂದು ಅವರು ಹೇಳಿದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಫಲಾನುಭವಿಗಳ ಪಟ್ಟಿಯನ್ನು ಮುಂಚಿತವಾಗಿ ಒದಗಿಸುವ ಅಗತ್ಯವಿಲ್ಲ, ಆದರೆ ಜುಲೈ 15, 2020 ರೊಳಗೆ ಆಹಾರ ಧಾನ್ಯಗಳ ವಿತರಣಾ ವರದಿಯನ್ನು ಕಳುಹಿಸಲು ಕೋರಲಾಗಿದೆ.

ಪಿಎಮ್-ಜಿಕೆಎವೈ ಯೋಜನೆ

ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎ) ಯಡಿಯಲ್ಲಿ, ಡಿಬಿಟಿ (ನೇರ ಲಾಭ ವರ್ಗಾವಣೆ) ಮೋಡ್ನಲ್ಲಿರುವ ಯುಟಿಗಳು ಸೇರಿದಂತೆ 2020 ಏಪ್ರಿಲ್ನಿಂದ ಜೂನ್ ವರೆಗೆ ಮೂರು ತಿಂಗಳ ಅವಧಿಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 80 ಕೋಟಿ ಎನ್ಎಫ್ಎಸ್ ಫಲಾನುಭವಿಗಳಿಗೆ ಹೆಚ್ಚುವರಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ.

ಪಿಎಮ್ಜಿಕೆಎ ಅಡಿಯಲ್ಲಿ 90% ಕ್ಕೂ ಹೆಚ್ಚು ಆಹಾರ ಧಾನ್ಯಗಳನ್ನು 2020 ಏಪ್ರಿಲ್ ತಿಂಗಳಲ್ಲಿ ಬಹುತೇಕ ಎಲ್ಲಾ ರಾಜ್ಯಗಳು (ಪಂಜಾಬ್, ಸಿಕ್ಕಿಂ, ದೆಹಲಿ, ಮಧ್ಯಪ್ರದೇಶ ಮತ್ತು ಜಾರ್ಖಂಡ್ ಹೊರತುಪಡಿಸಿ) ವಿತರಿಸಿವೆಎಂದು ಶ್ರೀ ಪಾಸ್ವಾನ್ ಹೇಳಿದರು. ಪ್ರಸಕ್ತ ತಿಂಗಳಿಗೆ ಸುಮಾರು 61%ರಷ್ಟು ಆಹಾರ ಧಾನ್ಯಗಳನ್ನು ರಾಜ್ಯಗಳು ವಿತರಿಸಿದೆ. ದೆಹಲಿ, ಪಶ್ಚಿಮ ಬಂಗಾಳ, ಮಣಿಪುರ, ಕೇರಳ ಮತ್ತು ಬಿಹಾರ ರಾಜ್ಯಗಳು ಮೇ ತಿಂಗಳಿನಿಂದ ಆಹಾರ ಧಾನ್ಯಗಳ ವಿತರಣೆಯನ್ನು ಪ್ರಾರಂಭಿಸಿಲ್ಲ ಅಥವಾ ಅದು 10% ಕ್ಕಿಂತ ಕಡಿಮೆಯಿದೆ.

ಪಿಎಮ್‌-ಜಿಕೆಎವೈ ಅಡಿಯಲ್ಲಿ ಬೇಳೆಕಾಳುಗಳ ವಿತರಣೆ

ಪಿಎಮ್‌-ಜಿಕೆಎವೈ ಯೋಜನೆಗೆ ಮುಂದಿನ ಮೂರು ತಿಂಗಳಿಗೆ ಒಟ್ಟು 5.87 ಲಕ್ಷ ಮೆಟ್ರಿಕ್ ಟನ್ ಬೇಳೆಕಾಳುಗಳ ಅವಶ್ಯಕತೆ ಇದೆ . ಎನ್ ಎಫ್ ಡಿ ತಿಳಿಸಿದಂತೆ, ಸುಮಾರು 4.05 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ )ಬೇಳೆಕಾಳುಗಳನ್ನು ರವಾನಿಸಲಾಗಿದೆ. ರಾಜ್ಯಗಳು 3.02 ಎಲ್ಎಂಟಿ ಬೇಳೆಕಾಳುಗಳನ್ನು ಸ್ವೀಕರಿಸಿದ್ದು, ಸುಮಾರು 1.27 ಎಲ್ಎಂಟಿ ಬೇಳೆಕಾಳುಗಳನ್ನು 21 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳ ಫಲಾನುಭವಿಗಳಿಗೆ ವಿತರಿಸಲಾಗಿದೆ. 5,000 ಕೋಟಿ ರೂ.ಗಳ ಯೋಜನೆಯ ಆರ್ಥಿಕ ಹೊಣೆಯನ್ನು ಭಾರತ ಸರ್ಕಾರ ಭರಿಸುತ್ತಿದೆ ಎಂದು ಶ್ರೀ ಪಾಸ್ವಾನ್ ಹೇಳಿದರು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ

ಎನ್ಎಫ್ಎಸ್ ಅಡಿಯಲ್ಲಿ ಮಾಸಿಕ ಹಂಚಿಕೆಯಾದ 93% ಕ್ಕಿಂತ ಹೆಚ್ಚು ಆಹಾರ ಧಾನ್ಯಗಳನ್ನು ಏಪ್ರಿಲ್ 2020 ರಲ್ಲಿ ವಿತರಿಸಲಾಗಿದೆ ಎಂದು ಶ್ರೀ ಪಾಸ್ವಾನ್ ಮಾಹಿತಿ ನೀಡಿದರು, ರಾಜ್ಯಗಳು ಮೇ ತಿಂಗಳ ಒಟ್ಟು ಆಹಾರ ಧಾನ್ಯ ಹಂಚಿಕೆಯ 75%ರಷ್ಟನ್ನು ವಿತರಿಸಿವೆ.

ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ

ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ (ಒಎನ್ಒಸಿ) ಯೋಜನೆಯಡಿಯಲ್ಲಿ, ಪಿಡಿಎಸ್ ಫಲಾನುಭವಿಗಳು ಬಯೋಮೆಟ್ರಿಕ್ ಪರಿಶೀಲನೆಯೊಂದಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ತಮ್ಮ ಪಡಿತರವನ್ನು ' ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ ' ವ್ಯಾಪ್ತಿಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಲ್ಲಿಯಾದರೂ ಪಡೆಯಬಹುದು. 1 ಮೇ 2020 ರಂದು 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಫಲಾನುಭವಿಗಳು 'ಒನ್ ನೇಷನ್ ಒನ್ ಕಾರ್ಡ್' ಯೋಜನೆಯಲ್ಲಿ ಸೇರಿದರು. ಒರಿಸ್ಸಾ, ನಾಗಾಲ್ಯಾಂಡ್ ಮತ್ತು ಮಿಜೋರಾಂ ಎಂಬ 3 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಜೂನ್ 2020 ವೇಳೆಗೆ ಮತ್ತು ಆಗಸ್ಟ್ 2020 ವೇಳೆಗೆ ಉತ್ತರಾಖಂಡ್, ಸಿಕ್ಕಿಂ ಮತ್ತು ಮಣಿಪುರವನ್ನು ಆನ್ಲೈನ್ ಪ್ಲಾಟ್ಫಾರ್ಮ್ಗೆ ಸೇರ್ಪಡೆಗೊಳಿಸಲಾಗುವುದು, ಒಟ್ಟು 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಯೋಜನೆಯ ಭಾಗವಾಗಲಿವೆ. 31 ಮಾರ್ಚ್ 2021 ರೊಳಗೆ ಒಎನ್ಒಸಿ ಯೋಜನೆಯಡಿ ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಳ್ಳಲು ಸರ್ಕಾರ ಯೋಜಿಸುತ್ತಿದೆ ಎಂದು ಶ್ರೀ ಪಾಸ್ವಾನ್ ಹೇಳಿದರು.

ಆಹಾರ ಧಾನ್ಯಗಳ ಖರೀದಿ

(ಗೋಧಿ/ ಅಕ್ಕಿ)

ವಿಡಿಯೋ ಸಂವಾದದಲ್ಲಿ ಮೇ 21, 2020 ವೇಳೆಗೆ, ಆರ್ಎಂಎಸ್ 2020-21ರಲ್ಲಿ 319.95 ಎಲ್ಎಂಟಿ ಇದ್ದು, ಇದು 2019-20 ಕಳೆದ ವರ್ಷದಲ್ಲಿ 326.15 ಎಲ್ಎಂಟಿಯಾಗಿತ್ತು. ಕೋವಿಡ್-19 ದೆಸೆಯಿಂದಾಗಿ ಸಂಗ್ರಹವು ತಡವಾಗಿ ಪ್ರಾರಂಭವಾಗಿರುವುದರಿಂದ ವರ್ಷದ ಗೋಧಿ ಖರೀದಿಯು 1.90% ಕಡಿಮೆಯಾಗಿದೆ. ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ ನಂತರ ಮತ್ತು ಮಂಡಿಗಳಲ್ಲಿ ಸಾಮಾಜಿಕ ದೂರವನ್ನು ಖಚಿತಪಡಿಸಿಕೊಂಡ ನಂತರ ಸಂಗ್ರಹಣೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಶ್ರೀ ಪಾಸ್ವಾನ್ ರವರು ಪ್ರಸ್ತುತ ಸಂಗ್ರಹದ ರೀತಿಯಲ್ಲಿ, ಋತುವಿನಲ್ಲಿ 400 ಎಲ್ಎಂಟಿ ಗುರಿ ಸಾಧಿಸುವ ಸಾಧ್ಯತೆಯಿದೆ ಎಂದು ಹೇಳಿದರು.

21 ಮೇ 2020 ರಂತೆ, ಕೆಎಂಎಸ್ 2019-20ರಲ್ಲಿ ಒಟ್ಟು ಅಕ್ಕಿ ಸಂಗ್ರಹವು 460.89 ಎಲ್ಎಂಟಿ ಆಗಿದ್ದು, ಇದು 2018-19 ಅವಧಿಯಲ್ಲಿ 407.86 ಎಲ್ಎಂಟಿ ಸಂಗ್ರಹಕ್ಕಿಂತ 13% ಹೆಚ್ಚಾಗಿದೆ.

ಲಾಕ್ಡೌನ್ನಿಂದ ಉಂಟಾಗುವ ವ್ಯಾಪಕ ಸವಾಲುಗಳ ಮಧ್ಯೆ ಪ್ರೋತ್ಸಾಹದಾಯಕ ಸಂಗ್ರಹವು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವ್ಯಾಪಕವಾದ ತಂಡದ ಕೆಲಸದ ಫಲಿತಾಂಶವಾಗಿದೆ ಎಂದು ಶ್ರೀ ಪಾಸ್ವಾನ್ ಹೇಳಿದ್ದಾರೆ. ಕೇಂದ್ರದ ಉಗ್ರಾಣಕ್ಕೆ ಇಂತಹ ದೃಢವಾದ ಒಳಹರಿವಿನೊಂದಿಗೆ, ಎಫ್ಸಿಐ ತನ್ನ ಧಾನ್ಯಗಳನ್ನು ತಾಜಾ ದಾಸ್ತಾನುಗಳೊಂದಿಗೆ ತ್ವರಿತವಾಗಿ ತುಂಬಲು ಸಾಧ್ಯವಾಗುತ್ತದೆ , ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರ ಅಗತ್ಯಗಳನ್ನು ಪೂರೈಸಲು ಆಹಾರ ಧಾನ್ಯಗಳ ಎಲ್ಲಾ ಹೆಚ್ಚುವರಿ ಅವಶ್ಯಕತೆಗಳನ್ನು ಪೂರೈಸಿದ ನಂತರವೂ. ಎಫ್ಸಿಐ 600 ಎಲ್ಎಂಟಿಗಿಂತ ಹೆಚ್ಚು ಆಹಾರ ಧಾನ್ಯದ ದಾಸ್ತಾನು ಹೊಂದಿದ್ದರೆ, ಎನ್ಎಫ್ಎಸ್ ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಬೇಡಿಕೆಗಳನ್ನು ಪೂರೈಸಲು ಸುಮಾರು 60 ಎಲ್ಎಂಟಿ ಆಹಾರ ಧಾನ್ಯಗಳು ಒಂದು ತಿಂಗಳಿಗೆ ಅಗತ್ಯವಿದೆ ಎಂದು ಹೇಳಿದರು.

ಆಹಾರ ಸಬ್ಸಿಡಿ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು1 ಜನವರಿ 2020 ರಿಂದ ಇಲ್ಲಿಯವರೆಗೆ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 28,847 ಕೋಟಿ ರೂ.ಗಳ ಸಹಾಯಧನವನ್ನು ನೀಡಲಾಗಿದೆ ಎಂದು ಶ್ರೀ ಪಾಸ್ವಾನ್ ಹೇಳಿದರು, ಇದು ಕಳೆದ ವರ್ಷ ಇದೇ ಅವಧಿಯ 12,356 ಕೋಟಿ ರೂ.ಗಳ ಸಬ್ಸಿಡಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಆಹಾರ ಧಾನ್ಯಗಳ ಸಂಗ್ರಹ ವಿಕೇಂದ್ರೀಕರಣದಲ್ಲಿ ಇಲಾಖೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದೆ ಎಂದು ಅವರು ಹೇಳಿದರು.

***


(Release ID: 1626508) Visitor Counter : 318