ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಆತ್ಮನಿರ್ಭರ ಭಾರತ್ ನ್ನು ಪೈಪ್ ಲೈನ್ ಯೋಜನೆಗಳಲ್ಲಿ ಮೈಲಿಗಲ್ಲಾಗಿಸಲು ಶ್ರೀ ಧರ್ಮೇಂದ್ರ ಪ್ರಧಾನ್ ಇಂಗಿತ
Posted On:
22 MAY 2020 1:46PM by PIB Bengaluru
ಆತ್ಮನಿರ್ಭರ ಭಾರತ್ ನ್ನು ಪೈಪ್ ಲೈನ್ ಯೋಜನೆಗಳಲ್ಲಿ ಮೈಲಿಗಲ್ಲಾಗಿಸಲು ಶ್ರೀ ಧರ್ಮೇಂದ್ರ ಪ್ರಧಾನ್ ಇಂಗಿತ
ಸುಮಾರು 8000 ಕೋ.ರೂ.ಗಳ ಯೋಜನೆಗಳ ಪರಾಮರ್ಶೆ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗು ಉಕ್ಕು ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಗುರುವಾರದಂದು ತೈಲ ಮತ್ತು ಅನಿಲ ಕಂಪೆನಿಗಳಿಂದ ಅನುಷ್ಟಾನದ ವಿವಿಧ ಹಂತಗಳಲ್ಲಿರುವ ಅಂದಾಜು 8000 ಕೋ.ರೂ.ಗಳ ಪೈಪ್ ಲೈನ್ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿದರು. ಆತ್ಮನಿರ್ಭರ ಭಾರತದ ಬಗ್ಗೆ ಪ್ರಸ್ತಾಪ ಮಾಡಿದ ಅವರು ಈ ಯೋಜನೆಗಳಲ್ಲಿ ಸಂಪೂರ್ಣ ದೇಶೀಯತೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಗೈಲ್ ರೂ.1000 ಕೋಟಿಗೂ ಅಧಿಕ ಮೊತ್ತದ ಪೈಪ್ ಲೈನ್ ಟೆಂಡರ್ ಗಳನ್ನು ಸಂಸ್ಕರಿಸುತ್ತಿದ್ದು, 2020 ರ ಸೆಪ್ಟೆಂಬರ್ ವೇಳೆಗೆ ಸುಮಾರು 1 ಲಕ್ಷ ಎಂ.ಟಿ. ಉಕ್ಕನ್ನು 800 ಕಿಲೋ ಮೀಟರ್ ಪೈಪ್ ಲೈನಿಗಾಗಿ ಖರೀದಿ ಆರಂಭಿಸಲಿದೆ. ದೇಶೀಯ ಬಿಡ್ಡರ್ ಗಳಿಗೆ ಇದೊಂದು ಅವಕಾಶವಾಗಿರುತ್ತದೆ. ಈ ಪ್ರಮಾಣವು ಹಾಲಿ ಹಣಕಾಸು ವರ್ಷದ ಕೊನೆಯಲ್ಲಿ ದುಪ್ಪಟ್ಟಾಗುವ ನಿರೀಕ್ಷೆ ಇದ್ದು, ಇದು ಮೇಕ್ ಇನ್ ಇಂಡಿಯಾಕ್ಕೆ ಉತ್ತೇಜನ ನೀಡಲಿದೆ. ಮತ್ತು ಅದು ಸ್ವಾವಲಂಬಿ ಭಾರತ ಗುರಿ ಸಾಧನೆಗೆ ದಾರಿ ಮಾಡಿಕೊಡಲಿದೆ.
ಪ್ರಧಾನ ಮಂತ್ರಿ ಉರ್ಜಾ ಗಂಗಾ, ಜೆ.ಎಚ್.ಬಿ.ಡಿ.ಪಿ.ಎಲ್. ಪೈಪ್ ಲೈನ್ ಯೋಜನಾ ಕಾಮಗಾರಿಗಳು ಲಾಕ್ ಡೌನ್ ಬಳಿಕದ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಪುನರಾರಂಭಗೊಂಡಿವೆ. ಮತ್ತು ಇದು ಪೂರ್ವ ಭಾರತವನ್ನು ಪಶ್ಚಿಮ ಹಾಗು ಕೇಂದ್ರೀಯ ನೈಸರ್ಗಿಕ ಅನಿಲ ಪೈಪ್ ಲೈನ್ ಕಾರಿಡಾರ್ ಜೊತೆ ಬೆಸೆಯಲಿದೆ. ದೇಶದ ಅನಿಲ ಆಧಾರಿತ ಆರ್ಥಿಕತೆಗೆ ಇದರಿಂದ ಉತ್ತೇಜನ ದೊರೆಯಲಿದೆ.
ಇಂಡಿಯನ್ ಆಯಿಲ್ ದಕ್ಷಿಣ ಭಾರತದಲ್ಲಿ 1450 ಕಿಲೋ ಮೀಟರ್ ಉದ್ದದ ನೈಸರ್ಗಿಕ ಅನಿಲ ಪೈಪ್ ಲೈನ್ ಯೋಜನೆಯನ್ನು ಅನುಷ್ಟಾನಿಸುತ್ತಿದ್ದು, ಇದರ ಯೋಜನಾ ವೆಚ್ಚ 6025 ಕೋ.ರೂ.ಗಳು. ಭಾರತದಲ್ಲಿ ಸುಮಾರು 1.65 ಲಕ್ಷ ಎಂ.ಟಿ.ಉಕ್ಕಿನ ಪೈಪ್ ಗಳನ್ನು ಉತ್ಪಾದಿಸುವ ಸಾಮರ್ಥ್ಯ ಇದ್ದು, ವೆಚ್ಚ 2060 ಕೋ.ರೂ.ಗಳಷ್ಟಾಗಲಿದೆ. ಇದು ಆತ್ಮ ನಿರ್ಭರ ಅಭಿಯಾನವನ್ನು ಬೆಂಬಲಿಸುತ್ತದೆ.
ಇಂದ್ರಧನುಷ್ ಅನಿಲ ಜಾಲ ಲಿಮಿಟೆಡ್ , ಈಶಾನ್ಯದಲ್ಲಿ ನೈಸರ್ಗಿಕ ಅನಿಲ ಪೈಪ್ ಲೈನ್ ಜಾಲವನ್ನು ಅಭಿವೃದ್ದಿಪಡಿಸುತ್ತಿದ್ದು, ಎಲ್ಲಾ 8 ಈಶಾನ್ಯ ರಾಜ್ಯಗಳಿಗೆ ಅಡೆ ತಡೆ ರಹಿತ ನೈಸರ್ಗಿಕ ಅನಿಲ ಪೂರೈಕೆಯನ್ನು ಖಾತ್ರಿಪಡಿಸಲಿದೆ. ಅವುಗಳ ಆರ್ಥಿಕ ಬೆಳವಣಿಗೆಯನ್ನು ತ್ವರಿತಗೊಳಿಸಲಿದೆ ಮತ್ತು ಭಾರತದಲ್ಲಿ ಅನಿಲ ಆಧಾರಿತ ಆರ್ಥಿಕತೆ ಚಿಗುರಲು ಸಹಾಯ ಮಾಡಲಿದೆ. ಐ.ಜಿ.ಜಿ.ಎಲ್. ಸಂಸ್ಥೆಯು ಪೈಪ್ ಲೈನ್ ಗಳಿಗೆ ಸಂಬಂಧಿಸಿದ 950 ಕೋ.ರೂ.ಗಳಿಗೂ ಅಧಿಕ ಮೊತ್ತದ ಟೆಂಡರ್ ಗಳನ್ನು ಸಂಸ್ಕರಿಸುತ್ತಿದ್ದು, 73,000 ಎಂ.ಟಿ. ಉಕ್ಕಿನ ಖರೀದಿಯನ್ನು 2020 ರ ಜುಲೈ ವೇಳೆಗೆ 550 ಕಿಲೋ ಮೀಟರ್ ಕಾಮಗಾರಿಗಾಗಿ ದೇಶೀಯ ಬಿಡ್ದರ್ ಗಳಿಂದ ಖರೀದಿ ಆರಂಭಿಸಲಿದೆ. ಹಾಲಿ ಹಣಕಾಸು ವರ್ಷದ ಕೊನೆಯಲ್ಲಿ ಇದು ದುಪ್ಪಟ್ಟಾಗುವ ನಿರೀಕ್ಷೆ ಇದೆ.
***
(Release ID: 1626233)
Visitor Counter : 242
Read this release in:
Punjabi
,
English
,
Urdu
,
Marathi
,
Hindi
,
Assamese
,
Manipuri
,
Odia
,
Tamil
,
Telugu
,
Malayalam