ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಪ್ರಧಾನಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ 6.8 ಕೋಟಿ ಉಚಿತ ಅಡುಗೆ ಅನಿಲ ಸಿಲಿಂಡರ್‌ ವಿತರಣೆ

Posted On: 21 MAY 2020 2:52PM by PIB Bengaluru

ಪ್ರಧಾನಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ 6.8 ಕೋಟಿ ಉಚಿತ ಅಡುಗೆ ಅನಿಲ ಸಿಲಿಂಡರ್ವಿತರಣೆ

 

ಕೋವಿಡ್-19 ನಿಂದ ಸಂಕಷ್ಟಕ್ಕೊಳಗಾದವರಿಗೆ ಆರ್ಥಿಕ ಸಹಾಯ ಸೌಲಭ್ಯಗಳ ಸ್ಪಂದನದ ಭಾಗವಾಗಿ, ಭಾರತ ಸರ್ಕಾರವುಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ಎಂಬ ಬಡವರ ಪರವಾದ ಯೋಜನೆಯನ್ನು ಪ್ರಾರಂಭಿಸಿದೆ. ಯೋಜನೆಯಡಿಯಲ್ಲಿ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಎಪ್ರಿಲ್ 01, 2020 ರಿಂದ 3 ತಿಂಗಳವರೆಗೆ 8 ಕೋಟಿ ಪಿ.ಎಂ.ಯು.ವೈ. ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ಗಳನ್ನು ಒದಗಿಸುತ್ತದೆ. ಏಪ್ರಿಲ್, 2020 ರಲ್ಲಿ, ತೈಲ ಮಾರಾಟ ಸಂಸ್ಥೆಗಳು ಪಿ.ಎಂ.ಜಿ.ಕೆ.ಪಿ. ಅಡಿಯಲ್ಲಿ ಪಿ.ಎಂ.ಯು.ವೈ. ಫಲಾನುಭವಿಗಳಿಗೆ 453.02 ಲಕ್ಷ ಸಿಲಿಂಡರ್ ಗಳನ್ನು ವಿತರಿಸಿವೆ. ದಿನಾಂಕ ಮೇ,20,2020 ವರೆಗೆ, ತೈಲ ಮಾರಾಟ ಸಂಸ್ಥೆಗಳು ಒಟ್ಟು 679.92 ಲಕ್ಷ ಸಿಲಿಂಡರ್ಗಳನ್ನು ಪಿ.ಎಂ.ಯು.ವೈ ಫಲಾನುಭವಿಗಳಿಗೆ ಪ್ಯಾಕೇಜ್ ಅಡಿಯಲ್ಲಿ ತಲುಪಿಸಿವೆ. ಫಲಾನುಭವಿಗಳಿಗೆ ನೇರ ಪ್ರಯೋಜನ ವರ್ಗಾವಣೆ ಮೂಲಕ ಮುಂಚಿತವಾಗಿ ಹಣವನ್ನು ಅವರ ಖಾತೆಗಳಲ್ಲಿ ನೀಡಲಾಗುತ್ತದೆ, ಇದರಿಂದಾಗಿ ಸೌಲಭ್ಯವನ್ನು ಪಡೆಯಲು ಯಾವುದೇ ತೊಂದರೆಗಳಿಲ್ಲ. ಎಲ್.ಪಿ.ಜಿ ಸಿಲಿಂಡರ್ ವಿತರಣೆಯ ಸರಬರಾಜು ಸರಪಳಿಯಲ್ಲಿ ಕೆಲಸ ಮಾಡುವ ವಿತರಣಾ ಸಿಬ್ಬಂದಿ- ಕೊರೊನ ಯೋಧರು- ಸಿಲಿಂಡರ್ಗಳ ಸಮಯೋಚಿತ ಪೂರೈಕೆಯನ್ನು ಖಾತರಿಪಡಿಸುವುದಲ್ಲದೆ, ನೈರ್ಮಲ್ಯ ಮತ್ತು ವಿವಿಧ ಆರೋಗ್ಯ ಮಾರ್ಗಸೂಚಿಗಳ ಬಗ್ಗೆ ಫಲಾನುಭವಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

***


(Release ID: 1625887) Visitor Counter : 305