ವಾರ್ತಾ ಮತ್ತು ಪ್ರಸಾರ ಸಚಿವಾಲಯ

ದೇಶದ ಸಮುದಾಯ ರೇಡಿಯೋಗಳನ್ನು ಉದ್ದೇಶಿಸಿ ನಾಳೆ ಭಾಷಣ ಮಾಡಲಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್

Posted On: 21 MAY 2020 4:17PM by PIB Bengaluru

ದೇಶದ ಸಮುದಾಯ ರೇಡಿಯೋಗಳನ್ನು ಉದ್ದೇಶಿಸಿ ನಾಳೆ ಭಾಷಣ ಮಾಡಲಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್

 

ವಿನೂತನ ಜನಸಂಪರ್ಕ ಉಪಕ್ರಮವಾಗಿ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ನಾಳೆ ಅಂದರೆ 2020 ಮೇ 22ರಂದು ಸಂಜೆ 7 ಗಂಟೆಗೆ ದೇಶದ ಸಮುದಾಯ ರೇಡಿಯೋಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅವರ ಭಾಷಣವನ್ನು ಏಕಕಾಲದಲ್ಲಿ ದೇಶದ ಎಲ್ಲ ಸಮುದಾಯ ರೇಡಿಯೋಗಳಲ್ಲಿ ಪ್ರಸಾರ ಮಾಡಲಾಗುವುದು.

ಭಾಷಣ ಎರಡು ವಿಭಾಗಗಳಲ್ಲಿ ಪ್ರಸಾರವಾಗಲಿದೆ, ಒಂದು ಹಿಂದಿ ಮತ್ತು ಒಂದು ಇಂಗ್ಲೀಷ್ ನಲ್ಲಿ. ಕೇಳುಗರು ಎಫ್.ಎಂ.ಗೋಲ್ಡ್ ವಾಹಿನಿ (100.1 ತರಂಗಾಂತರ)ದಲ್ಲಿ 7.30ಕ್ಕೆ ಹಿಂದಿಯಲ್ಲಿ ಮತ್ತು 9.10ಕ್ಕೆ ಇಂಗ್ಲೀಷ್ ನಲ್ಲಿ ಆಲಿಸಬಹುದಾಗಿದೆ.

ಕೋವಿಡ್ ಸಂಬಂಧಿ ಸಂವಹನಕ್ಕಾಗಿ ದೇಶದ ಎಲ್ಲ ವರ್ಗದವರನ್ನು ತಲುಪುವ ಸರ್ಕಾರದ ಪ್ರಯತ್ನಗಳ ಭಾಗ ಇದಾಗಿದೆ. ದೇಶಾದ್ಯಂತ ಸುಮಾರು 290 ಸಮುದಾಯ ರೇಡಿಯೋಗಳಿವೆ ಮತ್ತು ಅವು ತಳಮಟ್ಟದ ಜನಸಂಖ್ಯೆಯನ್ನು ತಲುಪಲು ಮಹತ್ವದ ಸಾಮೂಹಿಕ ವೇದಿಕೆಯಾಗಿದೆ. ಭಾರತದ ಕುಗ್ರಾಮಗಳಲ್ಲಿರುವ ಜನರನ್ನು ತಲುಪಲು ಸಮುದಾಯ ರೇಡಿಯೂ ಶಕ್ತಿಯನ್ನು ಬಳಸಿಕೊಳ್ಳುವುದು ಭಾಷಣದ ಉದ್ದೇಶವಾಗಿದೆ.

ಇದೇ ಮೊದಲ ಬಾರಿಗೆ ಸಚಿವರು ಏಕಕಾಲದಲ್ಲಿ ಎಲ್ಲ ಸಮುದಾಯ ರೇಡಿಯೋಗಳ ಕೇಳುಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾಷಣದ ವೇಳೆ ಸಚಿವರು ಸಮುದಾಯ ರೇಡಿಯೋ ಕೇಂದ್ರಗಳಿಂದ ಬರುವ ಪ್ರಶ್ನೆಗಳಿಗೂ ಸಹ ಉತ್ತರಿಸಲಿದ್ದಾರೆ.

https://ci6.googleusercontent.com/proxy/yN26govnySrMKp85lrAOX4weceX41QON7cRfNNFYQ2Byp4nAcbalpz3wyuCxjwwDz7L3nGFPaKY2sJSUIX4DT0hVACtRvnnuKgPcM_r_My7I6uKcwQ6X=s0-d-e1-ft#https://static.pib.gov.in/WriteReadData/userfiles/image/image00138M7.jpg

***(Release ID: 1625884) Visitor Counter : 157