ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಡಿ ಒಂದು ಕೋಟಿ ಚಿಕಿತ್ಸೆ

Posted On: 21 MAY 2020 6:16PM by PIB Bengaluru

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಡಿ ಒಂದು ಕೋಟಿ ಚಿಕಿತ್ಸೆ

ಆಯುಷ್ಮಾನ್ ಭಾರತ್; ಒಂದು ಕೋಟಿ ಚಿಕಿತ್ಸೆ ಮತ್ತು ಆನಂತರ ಮೈಲಿಗಲ್ಲು ದಾಟಿದ ಅಂಗವಾಗಿ ಆಯೋಜಿಸಿದ್ದ ವೆಬಿನಾರ್ ಉದ್ದೇಶಿಸಿ ಮಾತನಾಡಿದ ಡಾ. ಹರ್ಷವರ್ಧನ್

 

ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಖಾತ್ರಿ ಯೋಜನೆ - ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ(ಎಬಿ-ಪಿಎಂಜೆಎವೈ)ಅಡಿ ಇಂದು ಒಂದು ಕೋಟಿ ಚಿಕಿತ್ಸೆಗಳನ್ನು ಪೂರೈಸಿದೆ. ಮಹತ್ವದ ಮೈಲಿಗಲ್ಲು ಸಾಧಿಸಿದ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಸಾರ್ವಜನಿಕ ಆರೋಗ್ಯ ವಿಚಾರಗಳ ಕುರಿತಂತೆ ಮುಕ್ತ ಸಂವಾದ ನಡೆಸುವ ವೆಬಿನಾರ್ ಸರಣಿ ಆರೋಗ್ಯ ಧಾರಾ ಮೊದಲ ಆವೃತಿಗೆ ಚಾಲನೆ ನೀಡಿದರು. ಇಂದಿನ ವೆಬಿನಾರ್ ಶೀರ್ಷಿಕೆ ಆಯುಷ್ಮಾನ್ ಭಾರತ್: ಒಂದು ಕೋಟಿ ಚಿಕಿತ್ಸೆಗಳು ಮತ್ತು ಆನಂತರಎಂಬುದಾಗಿತ್ತು. ವೆಬಿನಾರ್ ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಕೂಡ ಭಾಗವಹಿಸಿದ್ದರು.

ಎನ್ಎಚ್ಎ ಸಿಇಒ ಡಾ. ಇಂದು ಭೂಷಣ್ ಅವರು, ಎಬಿ-ಪಿಎಂಜೆಎವೈ ಸಾಧನೆ ಕುರಿತಂತೆ ಪ್ರಾತ್ಯಕ್ಷಿಕೆ ನೀಡಿದರು ಮತ್ತು ಮುಂದಿರುವ ಪಯಣದ ಬಗ್ಗೆ ಚರ್ಚಿಸಿದರು. ವೆಬಿನಾರ್ ಅನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಎಲ್ಲ ಅಧಿಕೃತ ಸಾಮಾಜಿಕ ಮಾಧ್ಯಮ ಪುಟಗಳ ಮೂಲಕ ವೆಬ್ ಕಾಸ್ಟ್ ಮಾಡಲಾಯಿತು ಮತ್ತು ಎಲ್ಲ ಸಾರ್ವಜನಿಕರಿಗೆ ಮುಕ್ತವಾಗಿ ವೀಕ್ಷಿಸಲು ಅವಕಾಶವಿತ್ತು.

ಸಂದರ್ಭದಲ್ಲಿ ಮಾತನಾಡಿದ ಡಾ. ಹರ್ಷವರ್ಧನ್ ಅವರು, “ಆಯುಷ್ಮಾನ್ ಭಾರತ್ ಪಿಎಂಜೆಎವೈ ಯೋಜನೆ ಆರಂಭವಾಗಿ ಎರಡು ವರ್ಷದೊಳಗೆ ದೇಶದ ಬಡಕುಟುಂಬಗಳ ರೋಗಿಗಳಿಗೆ ಒಂದು ಕೋಟಿ ಚಿಕಿತ್ಸೆಗಳನ್ನು ನೀಡುವ ಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಚಿಕಿತ್ಸೆಗಳ ಮೌಲ್ಯ 13,412 ಕೋಟಿ ರೂ.ಗಳು ಮೊತ್ತವನ್ನು 21,565 ನೋಂದಾಯಿತ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳ ಸಂಪರ್ಕ ಜಾಲಕ್ಕೆ ನೀಡಲಾಗಿದೆಎಂದರು. ಆಯುಷ್ಮಾನ್ ಭಾರತ್ ತನ್ನೆಲ್ಲಾ ಮಾನವೀಯ ಧೋರಣೆಗಳೊಂದಿಗೆ ಮುಂದುವರಿಯಲಿದೆ ಮತ್ತು ಮುಂದಿನ ತಿಂಗಳುಗಳು ಮತ್ತು ವರ್ಷಗಳಲ್ಲಿ ಅದು ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಸವಾಲುಗಳನ್ನು ಎದುರಿಸಲಿದೆ’’ ಎಂದು ಹೇಳಿದರು.

ಅಲ್ಲದೆ ಅವರು, “ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಖಾತ್ರಿ ಯೋಜನೆಯಾಗಿದೆ. ಇದನ್ನು 2018ರಲ್ಲಿ ಆರಂಭಿಸಲಾಯಿತು. ಇದರಲ್ಲಿ ಸಮಾಜದ ಬಡ ಹಾಗೂ ದುರ್ಬಲ ವರ್ಗದ ಭಾರತೀಯರಿಗೆ ತೃತೀಯ ಹಂತದ ಆರೋಗ್ಯ ರಕ್ಷಣಾ ಸೇವೆಗಳನ್ನು ಒದಗಿಸಲಾಗುವುದು. ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ಗಳವರೆಗೆ ಆರೋಗ್ಯ ವ್ಯಾಪ್ತಿ ಹೊಂದಿರುತ್ತದೆ. ಇದರ ಉದ್ದೇಶ ದೇಶದ ಬಡ ಹಾಗೂ ದುರ್ಬಲ ವರ್ಗದ 10.74 ಕೋಟಿಗೂ ಅಧಿಕ ಕುಟುಂಬಗಳಿಗೆ ಆರ್ಥಿಕ ಅಪಾಯದ ರಕ್ಷಣೆಯನ್ನು ಖಾತ್ರಿಪಡಿಸುವುದಾಗಿದೆ ಮತ್ತು ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆಎಂದು ಹೇಳಿದರು.

ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿರುವ ವಿಶೇಷವಾಗಿ ಕೋವಿಡ್-19ನಂತಹ ಸಂಕಷ್ಟದ ಸಮಯದಲ್ಲೂ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವ ಎಲ್ಲ ರಾಜ್ಯಗಳಿಗೆ ಸಚಿವರು ಕೃತಜ್ಞತೆಗಳನ್ನು ಸಲ್ಲಿಸಿದರು. ಭಾರತ ಸರ್ಕಾರ ಎಲ್ಲ 53 ಕೋಟಿ ಆಯುಷ್ಮಾನ್ ಭಾರತ್ ಎಬಿ-ಪಿಎಂಜೆಎವೈ ಫಲಾನುಭವಿಗಳಿಗೆ ಉಚಿತವಾಗಿ ಕೋವಿಡ್-19 ಚಿಕಿತ್ಸೆ ಮತ್ತು ಪರೀಕ್ಷೆ ಸೇವೆಯನ್ನು ವಿಸ್ತರಿಸಲು ನಿರಂತರ ಪ್ರಯತ್ನಗಳನ್ನು ನಡೆಸಿದೆ ಮತ್ತು ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಗೆ ಒಳಪಡಿಸಲು ಭಾರತ ಸರ್ಕಾರ ತನ್ನೆಲ್ಲಾ ಸಂಕಲ್ಪ ಮತ್ತು ಸಾಮರ್ಥ್ಯವನ್ನು ಬಲವರ್ಧನೆ ಮಾಡುತ್ತಿದೆ. ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತರು ಮತ್ತು ಎಲ್ಲ ನೋಂದಾಯಿತ ಆಸ್ಪತ್ರೆಗಳ ಅವಿರತ ಪ್ರಯತ್ನಗಳಿಂದಾಗಿ ಒಂದು ಕೋಟಿ ಚಿಕಿತ್ಸೆಗಳನ್ನು ನೀಡುವ ಸಾಧನೆ ಮಾಡಲು ಸಹಾಯಕವಾಗಿದೆಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಾ. ಹರ್ಷವರ್ಧನ್ ಅವರು, ‘ಆಸ್ಕ್ ಆಯುಷ್ಮಾನ್ಎಂಬ ವಾಟ್ಸ್ ಅಪ್ ಚಾಟ್ ಬಾಟ್ ಅನ್ನು ಉದ್ಘಾಟಿಸಿದರು. ದಿನದ 24 ಗಂಟೆಗಳು ಕಾರ್ಯ ನಿರ್ವಹಿಸುವ ಕೃತಕ ಬುದ್ಧಿಮತ್ತೆ ಆಧರಿಸಿದ ಇದು, ಎಬಿ-ಪಿಎಂಜೆಎವೈ ಯೋಜನೆಯ ನಾನಾ ಆಯಾಮಗಳ ಬಗ್ಗೆ ಅಂದರೆ ಯೋಜನೆಯ ಪ್ರಯೋಜನಗಳು, ಯೋಜನೆಯ ಅಂಶಗಳು, -ಕಾರ್ಡ್ ಮಾಡಿಸುವ ವಿಧಾನ, ಸಮೀಪದ ನೋಂದಾಯಿತ ಆಸ್ಪತ್ರೆಯನ್ನು ಗುರುತಿಸುವುದು, ಪ್ರತಿಕ್ರಿಯೆಯನ್ನು ಹಂಚಿಕೊಳ್ಳುವುದು ಮತ್ತು ಕುಂದುಕೊರತೆಗಳನ್ನು ದಾಖಲಿಸುವ ಪ್ರಕ್ರಿಯೆ ಬಗ್ಗೆ ಮಾಹಿತಿ ಒದಗಿಸಲಿದೆ. ಚಾಟ್ ಬಾಟ್ ಮತ್ತೊಂದು ಪ್ರಮುಖ ಅಂಶವೆಂದರೆ ಇದು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರತಿಕ್ರಿಯಿಸುವ ಸಾಮರ್ಥ್ಯ ಹೊಂದಿದೆ ಮತ್ತು ಇದು ಬಳಕೆದಾರರು ಟೈಪ್ ಮಾಡಿದ ವಿಷಯವನ್ನು ಮಾತನ್ನಾಗಿ ಪರಿವರ್ತಿಸುವ ಅಂಶ ಹೊಂದಿದೆ ಮತ್ತು ಇದನ್ನು ಎಲ್ಲ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಾರ್ವತ್ರಿಕವಾಗಿ ಬಳಸಬಹುದಾಗಿದೆ.

ಅಲ್ಲದೆ ಕೇಂದ್ರ ಸಚಿವರು ಇದೇ ವೇಳೆ ಆಸ್ಪತ್ರೆ ಶ್ರೇಯಾಂಕ ಡ್ಯಾಶ್ ಬೋರ್ಡ್ಗೆ ಚಾಲನೆ ನೀಡಿದರು. ಇದು ಫಲಾನುಭವಿಗಳ ಪ್ರತಿಕ್ರಿಯೆ ಆಧರಿಸಿ ನೋಂದಾಯಿತ ಆಸ್ಪತ್ರೆಗಳಿಗೆ ಶ್ರೇಯಾಂಕ ನೀಡುವ ಮಹತ್ವದ ಹೆಜ್ಜೆಯಾಗಿದೆ. ಶ್ರೇಯಾಂಕದಿಂದ ಎನ್ಎಚ್ಎ ಸಾಕ್ಷ್ಯವನ್ನು ಆಧರಿಸಿ, ಗುಣಮಟ್ಟ ವೃದ್ಧಿಗೆ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯಕವಾಗುತ್ತದೆ ಮತ್ತು ಎಲ್ಲಾ ನೋಂದಾಯಿತ ಸೌಕರ್ಯಗಳಿಗೆ ಆರೋಗ್ಯ ಆರೈಕೆ ಮಾನದಂಡಗಳನ್ನು ನಿಗದಿಪಡಿಸಲು ಮತ್ತು ಫಲಾನುಭವಿಗಳ ಅನುಭವವನ್ನು ಮತ್ತಷ್ಟು ಸುಧಾರಿಸಲು ಸಾಧ್ಯವಾಗುತ್ತದೆ.

ಡಾ. ಹರ್ಷವರ್ಧನ್ ಅವರು, ಎಬಿ-ಪಿಎಂಜೆಎವೈ ಒಂದು ಕೋಟಿ ಚಿಕಿತ್ಸೆಗಳನ್ನು ನೀಡಿದ ಅಂಗವಾಗಿ ಎಬಿ-ಪಿಎಂಜೆಎವೈ ಫಲಾನುಭವಿ -ಕಾರ್ಡ್ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಅಲ್ಲದೆ, ಹಿಂದಿ ಆವೃತ್ತಿಯ ಆಯುಷ್ಮಾನ್ ಭಾರತ್ ಪಿಎಂಜೆಎವೈ ವೆಬ್ ಸೈಟ್ ಅನ್ನೂ ಸಹ ಬಿಡುಗಡೆ ಮಾಡಿದರು. ಇದು ಬಳಕೆದಾರರ ಸ್ನೇಹಿಯಾಗಿದ್ದು, ಅತ್ಯಂತ ಪರಿಣಾಮಕಾರಿಯಾಗಿ ಜನಸಮೂಹಕ್ಕೆ ಅಗತ್ಯ ಮಾಹಿತಿಯನ್ನು ಒದಗಿಸಲಿದೆ.

ಶ್ರೀ ಅಶ್ವಿನಿ ಕುಮಾರ್ ಚೌಬೆ ತಮ್ಮ ಭಾಷಣದಲ್ಲಿ ಎಂಒಎಚ್ಎಫ್ ಡಬ್ಲ್ಯೂ ಮತ್ತು ಎನ್ಎಚ್ಎ ನಿರಂತರವಾಗಿ ಎಲ್ಲ ಬಗೆಯ ಪರೀಕ್ಷೆಗಳು, ಚಿಕಿತ್ಸೆಗಳು ಮತ್ತು ಆಸ್ಪತ್ರೆಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವುದೂ ಹಾಗೂ ಅಭಿವೃದ್ಧಿಗೊಳಿಸುತ್ತಿರುವುದರಿಂದ ಮತ್ತು ಫಲಾನುಭವಿಗಳಿಗೆ ಸೂಕ್ತ ಮಾರ್ಗಸೂಚಿ ಹಾಗೂ ಮಾಹಿತಿ ಒಳನೋಟ ನೀಡುತ್ತಿರುವುದರಿಂದ ಕೋವಿಡ್-19 ಕುರಿತಂತೆ ಸುತ್ತಮುತ್ತಲಿನ ಮಿಥ್ಯೆಗಳನ್ನು ಮತ್ತು ವದಂತಿಗಳನ್ನು ದೂರಮಾಡಲು ಹೆಚ್ಚಿನ ಸಹಾಯಕವಾಗಿದೆ ಎಂದರು.

ನೀತಿ ಆಯೋಗದ ಸದಸ್ಯ(ಆರೋಗ್ಯ) ಡಾ. ವಿನೋದ್ ಪಾಲ್, ಎಬಿ-ಪಿಎಂಜೆಎವೈ 2018ರಲ್ಲಿ ಆರಂಭವಾದಾಗಿನಿಂದ ಸಮಾಜದ ಬಡ ಮತ್ತು ದುರ್ಬಲ ವರ್ಗದ ಭಾರತೀಯರಿಗೆ ಮೂರನೇ ಹಂತದ ಚಿಕಿತ್ಸೆಗಳನ್ನು ಕೈಗೆಟಕುವ ದರದ ರೂಪದಲ್ಲಿ ಒದಗಿಸುತ್ತಿದೆ. ಪಿಎಂಜೆಎವೈ ಗುರಿ ಎಂದರೆ 10 ಕೋಟಿಗೂ ಅಧಿಕ ಬಡವರಿಗೆ ಹಾಗೂ ದುರ್ಬಲ ವರ್ಗದ ಕುಟುಂಬಗಳಿಗೆ ಆರ್ಥಿಕ ಅಪಾಯದಿಂದ ರಕ್ಷಣೆಯನ್ನು ಖಾತ್ರಿಪಡಿಸುವುದಾಗಿದೆ ಮತ್ತು ಇದರಿಂದ ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದರು.

ಶ್ರೀಮತಿ ಇಂದು ಭೂಷಣ್, ಎನ್ಎಚ್ಎ, ಸಂದರ್ಭವನ್ನು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಸಮರ್ಪಕ ಬಳಕೆಗೆ ನೈಪುಣ್ಯತೆ ಮತ್ತು ಖಾಸಗಿ ವಲಯದ ಸಂಪರ್ಕ ಜಾಲದ ಬೆಂಬಲವನ್ನು ಪಡೆದುಕೊಂಡಿದೆ. ಭಾರತ ಸರ್ಕಾರ, ಎಲ್ಲ ರೀತಿಯಲ್ಲೂ ಸಜ್ಜಾಗಿದ್ದು, ರಾಷ್ಟ್ರೀಯ ಕೋವಿಡ್ ಸಹಾಯವಾಣಿ ಸಂಖ್ಯೆ 1075 ಮೂಲಕ ನಿರ್ವಹಣೆಗೆ ಕ್ರಮಗಳನ್ನು ಕೈಗೊಂಡಿದ್ದು, ಅದರ ಮೂಲಕ ಕೋವಿಡ್-19 ಪಾಸಿಟಿವ್ ರೋಗಿಗಳು ಮತ್ತು ಅವರ ಕುಟುಂಬದಿಂದ ಸಹಸ್ರಾರು ಕರೆಗಳನ್ನು ಮಾಡಲಾಗಿದೆ ಎಂದರು.

***


(Release ID: 1625880) Visitor Counter : 346