ಸಂಪುಟ

ಸಿಲುಕಿರುವ ವಲಸಿಗರಿಗೆ/ ವಲಸಿಗರಿಗೆ ಆಹಾರ ಧಾನ್ಯ ಹಂಚಿಕೆಯ

Posted On: 20 MAY 2020 2:23PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎರಡು ತಿಂಗಳು ಉಚಿತವಾಗಿ ಸುಮಾರು 8 ಕೋಟಿ ವಲಸಿಗರು/ಸಿಲುಕಿರುವ ವಲಸಿಗರಿಗೆ ಕೇಂದ್ರ ಪೂಲ್‌ನಿಂದ ತಿಂಗಳಿಗೆ ಪ್ರತಿ ವ್ಯಕ್ತಿಗೆ 5 ಕೆಜಿ (ಮೇ ಮತ್ತು ಜೂನ್, 2020) ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಲು ತನ್ನ ಪೂರ್ವಾನ್ವಯ ಅನುಮೋದನೆಯನ್ನು ನೀಡಿದೆ.

ಇದು ಅಂದಾಜು 2,982.27 ಕೋಟಿ ರೂ.ಗಳ ಆಹಾರ ಸಹಾಯ ಧನವನ್ನು ನೀಡುತ್ತದೆ. ಅಂತರ-ರಾಜ್ಯ ಸಾರಿಗೆ ಮತ್ತು ನಿರ್ವಹಣಾ ಶುಲ್ಕಗಳು ಮತ್ತು ವ್ಯಾಪಾರಿಗಳ ಲಾಭಾಂಶ / ಹೆಚ್ಚುವರಿ ವ್ಯಾಪಾರಿಗಳ ಲಾಭಾಂಶ ವೆಚ್ಚ ಸುಮಾರು 127.25 ಕೋಟಿ ರೂ.ಗಳಷ್ಟಿದ್ದು, ಇದನ್ನು ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಭರಿಸಲಿದೆ. ಆ ಪ್ರಕಾರವಾಗಿ ಭಾರತ ಸರ್ಕಾರದ ಒಟ್ಟು ಸಹಾಯಧನ ಒಟ್ಟು 3,109.52 ಕೋಟಿ ಎಂದು ಅಂದಾಜು ಮಾಡಲಾಗಿದೆ.

ಈ ಹಂಚಿಕೆಯು ಕೋವಿಡ್ 19ರಿಂದಾಗಿ ಉಂಟಾದ ಆರ್ಥಿಕ ಅಡ್ಡಿಯಿಂದ ವಲಸಿಗರು/ಸಿಲುಕಿರುವ ವಲಸಿಗರು ಎದುರಿಸುತ್ತಿರುವ ಕಷ್ಟವನ್ನು ತಗ್ಗಿಸಲಿದೆ.

***


(Release ID: 1625343) Visitor Counter : 234