ಗೃಹ ವ್ಯವಹಾರಗಳ ಸಚಿವಾಲಯ
ವಲಸೆ ಕಾರ್ಮಿಕರ ರೈಲು ಸಂಚಾರ ಕುರಿತು ಸಾಮಾನ್ಯ ಕಾರ್ಯನಿರ್ವಹಣೆ ಶಿಷ್ಟಾಚಾರ (ಎಸ್‌ಒಪಿ)
प्रविष्टि तिथि:
19 MAY 2020 1:14PM by PIB Bengaluru
ವಲಸೆ ಕಾರ್ಮಿಕರ ರೈಲು ಸಂಚಾರ ಕುರಿತು ಸಾಮಾನ್ಯ ಕಾರ್ಯನಿರ್ವಹಣೆ ಶಿಷ್ಟಾಚಾರ (ಎಸ್ಒಪಿ)
ಲಾಕ್ಡೌನ್ ಕ್ರಮಗಳ ಪರಿಷ್ಕೃತ ಮಾರ್ಗಸೂಚಿಗಳ ಮುಂದುವರಿಕೆಯಾಗಿ 17.05.2020 ರಂದು ಗೃಹ ಸಚಿವಾಲಯವು ವಲಸೆ ಕಾರ್ಮಿಕರ ರೈಲು ಸಂಚಾರ ಕುರಿತು ಪರಿಷ್ಕೃತ ಸಾಮಾನ್ಯ ಕಾರ್ಯನಿರ್ವಹಣೆ ಶಿಷ್ಟಾಚಾರ (ಎಸ್ಒಪಿ) ಹೊರಡಿಸಿದೆ.
ವಲಸೆ ಕಾರ್ಮಿಕರು ರೈಲುಗಳ ಮೂಲಕ ಸಂಚರಿಸಲು ಅನುವು ಮಾಡಿಕೊಡುವ ಎಸ್ಒಪಿಗಳು:
- ರೈಲ್ವೆ ಸಚಿವಾಲಯವು ಗೃಹ ಸಚಿವಾಲಯದೊಂದಿಗೆ ಸಮಾಲೋಚಿಸಿ ಶ್ರಮಿಕ್ ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ನೀಡುತ್ತದೆ.
- ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಮತ್ತು ಅಂತಹ ಇತರೆಡೆ ಸಿಲುಕಿರುವ ವ್ಯಕ್ತಿಗಳನ್ನು ಸ್ವೀಕರಿಸಲು ಮತ್ತು ಕಳುಹಿಸಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡಬೇಕು.
- ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಅವಶ್ಯಕತೆಯ ಆಧಾರದ ಮೇಲೆ, ನಿಲುಗಡೆಗಳು ಮತ್ತು ತಲುಪುವ ಸ್ಥಳವನ್ನು ಒಳಗೊಂಡಂತೆ ರೈಲಿನ ವೇಳಾಪಟ್ಟಿಯನ್ನು ರೈಲ್ವೆ ಸಚಿವಾಲಯ ಅಂತಿಮಗೊಳಿಸುತ್ತದೆ. ಇದನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ರೈಲ್ವೆ ಸಚಿವಾಲಯವು ಳಿಳಿಸುತ್ತದೆ ಮತ್ತು ಕಾರ್ಮಿಕರನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸೂಕ್ತ ವ್ಯವಸ್ಥೆಗಳನ್ನು ಮಾಡುವಂತೆ ತಿಳಿಸಲಾಗುವುದು.
- ರೈಲು ವೇಳಾಪಟ್ಟಿಯ ಪ್ರಚಾರ, ಪ್ರಯಾಣಿಕರ ಪ್ರವೇಶ ಮತ್ತು ಸಂಚಾರದ ಶಿಷ್ಟಾಚಾರಗಳು, ಬೋಗಿಗಳಲ್ಲಿ ಒದಗಿಸಬೇಕಾದ ಸೇವೆಗಳು ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸೇರಿ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ರೈಲ್ವೆ ಸಚಿವಾಲಯ ಮಾಡುತ್ತದೆ.
- ಕಾರ್ಮಿಕರನ್ನು ಕಳುಹಿಸುವ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮತ್ತು ರೈಲ್ವೆ ಸಚಿವಾಲಯ ಎಲ್ಲಾ ಪ್ರಯಾಣಿಕರನ್ನು ಕಡ್ಡಾಯವಾಗಿ ಪರೀಕ್ಷಿಸುವುದನ್ನು ಮತ್ತು ರೋಗಲಕ್ಷಣವಿಲ್ಲದ ಪ್ರಯಾಣಿಕರಿಗೆ ಮಾತ್ರ ರೈಲು ಹತ್ತಲು ಅವಕಾಶವಿರುವುದನ್ನು ಖಾತ್ರಪಡಿಸಿಕೊಳ್ಳುತ್ತವೆ.
- ರೈಲು ಹತ್ತುವಾಗ ಮತ್ತು ಪ್ರಯಾಣದ ಸಮಯದಲ್ಲಿ ಎಲ್ಲಾ ಪ್ರಯಾಣಿಕರು ಸಾಮಾಜಿಕ ಅಂತರವನ್ನು ಪಾಲಿಸಬೇಕು.
- ನಿಗದಿತ ತಲುಪುವ ಸ್ಥಳಕ್ಕೆ ಆಗಮಿಸಿದಾಗ, ಪ್ರಯಾಣಿಕರು ಅಲ್ಲಿನ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳು ಸೂಚಿಸಿರುವ ಆರೋಗ್ಯ ಶಿಷ್ಟಾಚಾರಗಳನ್ನು ಅನುಸರಿಸಬೇಕು.
Click here to see the Official Communication to the States/UTs
***
(रिलीज़ आईडी: 1625204)
आगंतुक पटल : 313
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam