PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 16 MAY 2020 7:09PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

ಆರೋಗ್ಯ ಕಾರ್ಯದರ್ಶಿಯವರು 30 ಕೋವಿಡ್ -19 ಅತಿ ಹೆಚ್ಚು ಪ್ರಕರಣಗಳಿರುವ ಮುನಿಪಲ್ ಪ್ರದೇಶಗಳೊಂದಿಗೆ ಸಂವಾದ ನಡೆಸಿದರು; ಕೋವಿಡ್ 19 ಕಂಟೈನ್ಮೆಂಟ್ ಮತ್ತು ನಿರ್ವಹಣೆ ಕ್ರಮಗಳ ಪರಾಮರ್ಶಿಸಿದರು; ಚೇತರಿಕೆ ದರ 35.09ಕ್ಕೆ ಹೆಚ್ಚಳವಾಗಿದೆ

ಈ 30 ಮುನಿಸಿಪಲ್ ಪ್ರದೇಶಗಳು ಕೆಳಗಿನ ರಾಜ್ಯಗಳು/ಯುಟಿಗಳಿಗೆ ಸೇರಿವೆ: ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ದೆಹಲಿ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ರಾಜಾಸ್ಥಾನ, ಉತ್ತರ ಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್ ಮತ್ತು ಒಡಿಶಾ. ಕೋವಿಡ್ -19 ಪ್ರಕರಣಗಳ ನಿರ್ವಹಣೆಗಾಗಿ ನಗರಸಭೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕೈಗೊಂಡ ಕ್ರಮಗಳನ್ನು ಪರಾಮರ್ಶಿಸಿದರು. ಈವರೆಗೆ ಒಟ್ಟು 30,150 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 2233 ರೋಗಿಗಳು ಗುಣಮುಖರಾಗಿದ್ದಾರೆ. ಇದು ಒಟ್ಟು ಚೇತರಿಕೆ ದರವನ್ನು ಶೇ.35.09ಕ್ಕೆ ತೆಗೆದುಕೊಂಡು ಹೋಗಿದೆ. ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ ಈಗ 85,940 ಆಗಿದೆ. ನಿನ್ನೆಯಿಂದ, ಭಾರತದಲ್ಲಿ ಕೋವಿಡ್-19 ದೃಢವಾದ ಪ್ರಕರಣಗಳ ಸಂಖ್ಯೆಯಲ್ಲಿ 3970 ಹೆಚ್ಚಳ ಕಂಡುಬಂದಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1624465

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ -19 ವಿರುದ್ಧ ಹೋರಾಡುತ್ತಿರುವ ಭಾರತೀಯ ಆರ್ಥಿಕತೆಗೆ ಬೆಂಬಲ ನೀಡಲು ಆತ್ಮನಿರ್ಭರ ಭಾರತ ಅಭಿಯಾನದ 4ನೇ ಕಂತಿನ ವಿವರಗಳನ್ನು ಪ್ರಸ್ತುತಪಡಿಸಿದರು

ವಿವರಗಳಿಗೆ: https://pib.gov.in/PressReleseDetail.aspx?PRID=1624465

ಕೃಷಿ ಮೂಲಸೌಕರ್ಯವರ್ಧನೆ, ಸಾಗಣೆ, ಸಾಮರ್ಥ್ಯ ವರ್ಧನೆ, ಕೃಷಿ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣೆಗೆ ಆಡಳಿತ ಮತ್ತು ಆಡಳಿತಾತ್ಮಕ ಸುಧಾರಣೆ ಕುರಿತು ಹಣಕಾಸು ಸಚಿವರು ಪ್ರಕಟಿಸಿದ ಕ್ರಮಗಳು

ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಮೂಲಸೌಕರ್ಯ ಸಾಗಣೆ, ಸಾಮರ್ಥ್ಯವರ್ಧನೆ, ಕೃಷಿ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣೆ ವಲಯದ ಆಡಳಿತ ಮತ್ತು ಆಡಳಿತಾತ್ಮಕ ಸುಧಾರಣೆಗಳ ಕುರಿತಂತೆ 3ನೇ ಕಂತಿನ ಕ್ರಮಗಳನ್ನು ಪ್ರಕಟಿಸಿದರು. ಇದರಲ್ಲಿ ರೈತರಿಗಾಗಿ ಫಾರ್ಮ್ ಗೇಟ್ ಮೂಲಸೌಕರ್ಯ ಒದಗಿಸಲು 1 ಲಕ್ಷ ಕೋಟಿ ಕೃಷಿ ಮೂಲಸೌಕರ್ಯ ನಿಧಿ; ಸೂಕ್ಷ್ಮ ಆಹಾರ ಉದ್ದಿಮೆಯ ರೂಪುರೇಷೆ ಯೋಜನೆಗೆ 10 ಸಾವಿರ ಕೋಟಿ ರೂ. ; ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ 20 ಸಾವಿರ ಕೋಟಿ ರೂ. ; ರಾಷ್ಟ್ರೀಯ ಜಾನುವಾರ ರೋಗನಿಯಂತ್ರಣ ಕಾರ್ಯಕ್ರಮ, 15 ಸಾವಿರ ಕೋಟಿ ರೂ. ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ ; ಗಿಡಮೂಲಿಕೆ ಕೃಷಿಗೆ ಉತ್ತೇಜನಕ್ಕೆ 4000 ಕೋಟಿ ರೂ ಹಂಚಿಕೆ, ಜೇನು ಸಾಕಾಣಿಕೆ ಉಪಕ್ರಮಕ್ಕೆ 500 ಕೋಟಿ ರೂ; ಕೃಷಿ ವಲಯದ ಆಡಳಿತ ಮತ್ತು ಆಡಳಿತಾತ್ಮಕ ಸುಧಾರಣೆಗೆ ಕ್ರಮ; ರೈತರಿಗೆ ಉತ್ತಮ ಬೆಲೆ ದೊರಕಿಸಲು ಅವಶ್ಯಕ ವಸ್ತುಗಳ ಕಾಯಿದೆಗೆ ತಿದ್ದುಪಡಿ; ರೈತರಿಗೆ ಮಾರುಕಟ್ಟೆ ಆಯ್ಕೆ ನೀಡಲು ಕೃಷಿ ಮಾರುಕಟ್ಟೆ ಸುಧಾರಣೆ; ಕೃಷಿ ಉತ್ಪನ್ನ ದರ ಮತ್ತು ಗುಣಮಟ್ಟದ ಖಾತ್ರಿ.

ವಿವರಗಳಿಗೆ: https://pib.gov.in/PressReleseDetail.aspx?PRID=1624153

ಕೋವಿಡ್ 19ರಿಂದ ಭಾರತದ ಬಡವರನ್ನು ಸಂರಕ್ಷಿಸಲು ವಿಶ್ವಬ್ಯಾಂಕ್ ನಿಂದ  1 ಶತಕೋಟಿ ಡಾಲರ್

ಭಾರತದ ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಬಾಧಿತರಾಗಿರುವ ಬಡ ಮತ್ತು ದುರ್ಬಲ ಕುಟುಂಬಗಳಿಗೆ ಸಾಮಾಜಿಕ ನೆರವು ನೀಡುವ ಭಾರತದ ಪ್ರಯತ್ನಗಳನ್ನು ಬೆಂಬಲಿಸಲು ಭಾರತದ ಕೋವಿಡ್-19 ಸಾಮಾಜಿಕ ಸಂರಕ್ಷಣಾ ಸ್ಪಂದನಾ ಕಾರ್ಯಕ್ರಮವನ್ನು ತ್ವರಿತಗೊಳಿಸಲು ಭಾರತ ಸರ್ಕಾರ ಮತ್ತು ವಿಶ್ವಬ್ಯಾಂಕ್ ಪ್ರಸ್ತಾಪಿತ 1 ಶತಕೋಟಿ ಡಾಲರ್ ಪೈಕಿ, 750 ದಶಲಕ್ಷ ಡಾಲರ್ ಗೆ ಭಾರತ ಸರ್ಕಾರ ಮತ್ತು ವಿಶ್ವಬ್ಯಾಂಕ್ ಅಂಕಿತ ಹಾಕಿವೆ. ಇದರೊಂದಿಗೆ ಕೋವಿಡ್ 19 ತುರ್ತು ಸ್ಪಂದನೆಯ ನಿಟ್ಟಿನಲ್ಲಿ ಬ್ಯಾಂಕ್ ಭಾರತಕ್ಕೆ 2 ಶತಕೋಟಿ ಡಾಲರ್ ಗಳ ಒಟ್ಟು ಬದ್ಧತೆ ನೀಡಲಿದೆ. 1 ಶತಕೋಟಿ ಡಾಲರ್ ಬೆಂಬಲವನ್ನು ಕಳೆದ ತಿಂಗಳು ಭಾರತದ ಆರೋಗ್ಯ ಕ್ಷೇತ್ರದ ತುರ್ತು ಸ್ಪಂದನೆಗಾಗಿ ವಿಶ್ವಬ್ಯಾಂಕ್ ಪ್ರಕಟಿಸಿತ್ತು.

ವಿವರಗಳಿಗೆ: https://pib.gov.in/PressReleseDetail.aspx?PRID=1624156

ಕೇಂದ್ರ ಇಂಧನ ಸಚಿವಾಲಯ ರಾಜ್ಯಗಳು/ ಕೇಂದ್ರಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ 90 ಸಾವಿರ ಕೋಟಿ ಪ್ಯಾಕೇಜ್ ಪ್ರಕಟಿಸಿದ್ದಾರೆ

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಲಾಗಿರುವ ಪತ್ರಗಳಲ್ಲಿ ಆರ್.ಇ.ಸಿ ಮತ್ತು ಪಿಎಫ್.ಸಿ. ಗಳು ತುರ್ತಾಗಿ ಡಿಸ್ಕಾಂಗಳಿಗೆ ತತ್ ಕ್ಷಣವೇ ಸಾಲ ನೀಡುವಂತೆ ಸೂಚಿಸಿದ್ದು, ಅದು ಉದಯ್ ಅಡಿಯಲ್ಲಿ ನಿಗದಿಪಡಿಸಿದ ಕಾರ್ಯ ಬಂಡವಾಳದ ಮಿತಿಯಲ್ಲಿ ಮತ್ತಷ್ಟು ಸಾಲ ಪಡೆಯಲು ಅವಕಾಶ ಹೊಂದಿದೆ. ಇದಲ್ಲದೆ, ಉದಯ್ ಕಾರ್ಯ ಬಂಡವಾಳದ ಮಿತಿಯಲ್ಲಿ ಹೆಡ್‌ ರೂಮ್ ಹೊಂದಿಲ್ಲದ ಆದರೆ ವಿದ್ಯುತ್ ಬಾಕಿ ರೂಪದಲ್ಲಿ ರಾಜ್ಯ ಸರ್ಕಾರದಿಂದ ಪಡೆಯಬಹುದಾದ ಮತ್ತು ವಿತರಿಸದ ಸಬ್ಸಿಡಿಯನ್ನು ಹೊಂದಿರುವ ಡಿಸ್ಕಾಮ್‌ ಗಳು ಸಾಲಗಳಿಗೆ ರಾಜ್ಯ ಸರ್ಕಾರದಿಂದ ಪಡೆಯಬಹುದಾದ ಮಟ್ಟಿಗೆ ಅರ್ಹವಾಗುತ್ತವೆ.

ವಿವರಗಳಿಗೆ: https://pib.gov.in/PressReleseDetail.aspx?PRID=1624496

ಮೋದಿ ಸರ್ಕಾರದ ವಿಶ್ವಾಸ - ರೈತರ ಕಲ್ಯಾಣದ ಮೂಲಕ ಮಾತ್ರ ಭಾರತದ ಕಲ್ಯಾಣ; ರೈತರಿಗೆ ಅಧಿಕಾರ ನೀಡಿದಾಗ, ದೇಶವು ಸ್ವಾವಲಂಬಿಯಾಗುತ್ತದೆ: ಶ್ರೀ ಅಮಿತ್ ಶಾ

ಭಾರತದ ಕಲ್ಯಾಣವು ಅದರ ರೈತರ ಕಲ್ಯಾಣದ ಮೇಲೆ ಅವಲಂಬಿಸಿದೆ ಎಂದು ಮೋದಿ ಸರ್ಕಾರ ನಂಬುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದ್ದಾರೆ. ರೈತರಿಗೆ ನೀಡಲಾಗಿರುವ ಅಭೂತಪೂರ್ವವಾದ ನೆರವು ರೈತರನ್ನು ಸಬಲೀಕರಿಸುವ ಮೂಲಕ ದೇಶವನ್ನು ಸ್ವಾವಲಂಬಿಯನ್ನಾಗಿಸುವ ಪ್ರಧಾನಮಂತ್ರಿ ಮೋದಿ ಅವರ ದೂರದರ್ಶಿತ್ವವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಅಮಿತ್ ಶಾ ಅವರ ರೀತ್ಯ, ಪ್ರತೀಕೂಲ ಸನ್ನಿವೇಶದಲ್ಲೂ ಪ್ರಧಾನಮಂತ್ರಿ ಮೋದಿ ಅವರ ರೈತರ ವಿಚಾರದಲ್ಲಿನ ಸಂವೇದನಾಶೀಲತೆ ವಿಶ್ವಕ್ಕೆ ಮಾದರಿಯಾಗಿದೆ,

ವಿವರಗಳಿಗೆ: https://pib.gov.in/PressReleseDetail.aspx?PRID=1624162

ಶ್ರೀ ಮನ್ಸುಖ್ ಮಾಂಡವೀಯ ಅವರು, ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಭಾರತೀಯ ಆರ್ಥಿಕತೆಗೆ ಬೆಂಬಲ ನೀಡಲು ಆತ್ಮ ನಿರ್ಭರ ಭಾರತ ಅಭಿಯಾನದಡಿಯಲ್ಲಿ ಪ್ರಕಟಿಸಲಾಗಿರುವ ಕ್ರಮಗಳನ್ನು ಸ್ವಾಗತಿಸಿದ್ದಾರೆ

ಈವರೆಗೆ ಮೂರು ಕಂತಿನಲ್ಲಿ ಹಣಕಾಸು ಸಚಿವರು ಪ್ರಕಟಿಸಿರುವ ವಿವರಗಳು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಧೈರ್ಯದಿಂದ ಎದುರಿಸುತ್ತಿರುವ ಭಾರತದ ನಾಗರಿಕರ ಮತ್ತು ಅದರ ಆರ್ಥಿಕತೆ ಸುಧಾರಿಸುವಲ್ಲಿ ಬಹಳ ದೂರ ಸಾಗಲಿದೆ ಎಂದು  ಶ್ರೀ ಮಾಂಡವೀಯ ಅವರು ಹೇಳಿದ್ದಾರೆ. 

ವಿವರಗಳಿಗೆ: https://pib.gov.in/PressReleseDetail.aspx?PRID=1624143

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಎಂ.ಎಚ್.: ವಲಸೆ ಕಾರ್ಮಿಕರು ಮನೆಗೆ ನಡೆದುಕೊಂಡು ಮರಳುತ್ತಿಲ್ಲ ಮತ್ತು ಉದ್ದೇಶಕ್ಕಾಗಿ ಸರ್ಕಾರವು ನಿರ್ದಿಷ್ಟವಾಗಿ ನಡೆಸುತ್ತಿರುವ ಬಸ್ಗಳಲ್ಲಿ ಮತ್ತು ಶ್ರಮಿಕ್ವಿಶೇಷ ರೈಲುಗಳಲ್ಲಿ ಮಾತ್ರ ಪ್ರಯಾಣ ಮಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ

ಎಂ.ಎಚ್.ಎ. ಮತ್ತೊಮ್ಮೆ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ವಲಸೆ ಕಾರ್ಮಿಕರು ನಡೆದುಕೊಂಡು ತಮ್ಮ ಮನೆಗಳಿಗೆ ಮರಳುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿದೆ. ರೈಲ್ವೆ ಸಚಿವಾಲಯವು ದಿನಕ್ಕೆ 100 ಕ್ಕೂ ಹೆಚ್ಚು 'ಶ್ರಮಿಕ್' ವಿಶೇಷ ರೈಲುಗಳನ್ನು ಓಡಿಸುತ್ತಿದ್ದು, ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ರೈಲುಗಳನ್ನು ವ್ಯವಸ್ಥೆ ಮಾಡಲು ಸಿದ್ಧವಾಗಿದೆ ಎಂದು ಅದರ ಸಂವಹನ ತಿಳಿಸಿದೆ. ಈ ವ್ಯವಸ್ಥೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ ಮತ್ತು ಕಾಲ್ನಡಿಗೆಯಲ್ಲಿ ಹೋಗದಂತೆ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಸಲಹೆ ನೀಡಬೇಕು, ಅವರು ತಮ್ಮ ಪ್ರಯಾಣಕ್ಕೆ ಅನುಕೂಲವಾಗುವಂತೆ ಸರ್ಕಾರವು ವಿಶೇಷವಾಗಿ ನಡೆಸುತ್ತಿರುವ ಬಸ್ಸುಗಳು / ರೈಲುಗಳಲ್ಲಿ ಪ್ರಯಾಣಿಸಬೇಕು ಎಂದು ಹೇಳಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1624232

ಪಿಎಂಜಿಕೆವೈ ಅಡಿಯಲ್ಲಿ ಪಿಎಂಯುವೈ ಫಲಾನುಭವಿಗಳು ಈವರೆಗೆ 6.28 ಕೋಟಿ ಉಚಿತ ಸಿಲಿಂಡರ್ ಗಳನ್ನು ಪಡೆದುಕೊಂಡಿದ್ದಾರೆ;  8432 ಕೋಟಿ ರೂ. ಗಳನ್ನು ಪಿಎಂಯುವೈ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರಿಂದು ಪಿಎಂಯುವೈ ಫಲಾನುಭವಿಗಳು, ಅನಿಲು ವಿತರಕರು ಮತ್ತು ಓಎಂಸಿ ಅಧಿಕಾರಿಗಳೊಂದಿಗೆ ವೆಬಿನರ್ ಮೂಲಕ ಸಂವಾದ ನಡೆಸಿದರು. ಪಿಎಂಯುವೈ ಈಗಷ್ಟೇ ತನ್ನ ಯಶಸ್ವೀ ಪಯಣದ ನಾಲ್ಕು ವರ್ಷ ಪೂರೈಸಿದೆ ಎಂದರು. ಬಿಕ್ಕಟ್ಟಿನ ಆರಂಭಿಕ ದಿನಗಳಲ್ಲಿಯೇ ಮೋದಿ ಸರ್ಕಾರವು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆಯನ್ನು ಘೋಷಿಸಿತು, ಇದರಲ್ಲಿ ಪಿಎಂಯುವೈ ಫಲಾನುಭವಿಗಳಿಗೆ 3 ತಿಂಗಳ ಕಾಲ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ನೀಡುವುದೂ ಒಳಗೊಂಡಿದೆ ಎಂದರು. ಅವರ ಖಾತೆಗಳಿಗೆ ಮುಂಗಡವಾಗಿ 8432 ಕೋಟಿ ರೂ ವರ್ಗಾಯಿಸಲಾಗಿದ್ದು., ಇಲ್ಲಿಯವರೆಗೆ 6.28 ಕೋಟಿ ಪಿಎಂಯುವೈ ಫಲಾನುಭವಿಗಳು ಉಚಿತ ಸಿಲಿಂಡರ್ ಪಡೆದಿದ್ದಾರೆ. ಅಭೂತಪೂರ್ವ ಬಿಕ್ಕಟ್ಟಿನ ಸಮಯದಲ್ಲಿ ತಮ್ಮನ್ನು ನೋಡಿಕೊಂಡಿದ್ದಕ್ಕಾಗಿ ಪಿಎಂಯುವೈ ಫಲಾನುಭವಿಗಳು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1624309

ಉಳಿದಲ್ಲೇ ಉಳಿದಿದ್ದ 1.4 ದಶಲಕ್ಷಕ್ಕೂ ಹೆಚ್ಚು ಜನರು, 15ನೇ ಮೇ ಮಧ್ಯರಾತ್ರಿಯವರೆಗೆ ಅಂದರೆ, 15 ದಿನಗಳಲ್ಲಿ, ತಮ್ಮ ತವರು ರಾಜ್ಯಗಳಿಗೆ ಮರಳಿದ್ದಾರೆ

2020ರ ಮೇ 15ರ ಮಧ್ಯರಾತ್ರಿಯವರೆಗೆ ಒಟ್ಟು 1074 ಶ್ರಮಿಕ ವಿಶೇಷ ರೈಲುಗಳು ದೇಶದ ನಾನಾ ಭಾಗಗಳಿಂದ ಕಾರ್ಯಾಚರಣೆ ಮಾಡಿದ್ದು, ಕಳೆದ 15 ದಿನಗಳ ಅವಧಿಯಲ್ಲಿ ಉಳಿದಲ್ಲೇ ಉಳಿದಿದ್ದ 1.4 ದಶಲಕ್ಷ ಜನರನ್ನು ಅವರವರ ತವರು ರಾಜ್ಯಗಳಿಗೆ ಮರಳಿದ್ದಾರೆ. ಕಳೆದ ಮೂರು ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಪ್ರತಿ ನಿತ್ಯ ಪ್ರಯಾಣಿಸಿದ್ದಾರೆ. 1074 ಶ್ರಮಿಕ ವಿಶೇಷ ರೈಲುಗಳು ವಿವಿಧ ರಾಜ್ಯಗಳಿಂದ ತೆರಳಿವೆ.

ವಿವರಗಳಿಗೆ: https://pib.gov.in/PressReleseDetail.aspx?PRID=1624361

8 ಕೋಟಿ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯವನ್ನು ಆತ್ಮ ನಿರ್ಭರ ಭಾರತ ಅಭಿಯಾನದಡಿ ಒದಗಿಸಲಾಗುತ್ತಿದೆ

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಕೋವಿಡ್ 19 ಪರಿಸ್ಥಿತಿಯಲ್ಲಿ ವಲಸಿಗರು ಎದುರಿಸುತ್ತಿರುವ ಸಮಸ್ಯೆ ತಗ್ಗಿಸಲು ಮತ್ತು ಅವರಿಗೆ ಹಾಗೂ ಅವರ ಕುಟುಂಬದವರಿಗೆ ಆಹಾರ ಧಾನ್ಯ ಲಭ್ಯತೆ ಖಾತ್ರಿ ಪಡಿಸಲು 8 ಎಲ್.ಎಂ.ಟಿ. ಆಹಾರ ಧಾನ್ಯವನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ ಮತ್ತು ಭಾರತ ಸರ್ಕಾರ, ರಾಜ್ಯದೊಳಗಿನ ಸಾಗಾಟದ ವೆಚ್ಚ, ಮಾರಾಟಗಾರರ ಲಾಭದ ಭಾಗ ಸೇರಿದಂತೆ ಇದರ ವಿತರಣೆಯ ಸಂಪೂರ್ಣ ವೆಚ್ಚ ಭರಿಸಲಿದೆ ಎಂದರು. 23 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು 2020ರ ಆಗಸ್ಟ್ ಹೊತ್ತಿಗೆ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯ ಭಾಗವಾಗಲಿವೆ.

ವಿವರಗಳಿಗೆ: https://pib.gov.in/PressReleseDetail.aspx?PRID=1624455

ಮಾರುವವರು ಮತ್ತು ಖರೀದಿದಾರರ ನಡುವೆ ರೇರಾದ ಸಮರ್ಥ ಅನುಷ್ಠಾನ ವಿಶ್ವಾಸ ಪುನರ್ ಸ್ಥಾಪಿಸಲಿದೆ: ಹರ್ದೀಪ್ ಎಸ್. ಪುರಿ

ರೇರಾದ ಬಹು ಮುಖ್ಯ ಉದ್ದೇಶ ಖರೀದಿದಾರರು ಮತ್ತು ಮಾರಾಟಗಾರರ ನಡುವೆ ವಿಶ್ವಾಸ ಮತ್ತೆ ಮೂಡಲು ನೆರವಾಗುವುದಾಗಿದೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಎಸ್ ಪುರಿ ಹೇಳಿದ್ದಾರೆ. ಇದು ರೇರಾದ ಸಮರ್ಥ ಮತ್ತು ನಿಜ ಅನುಷ್ಠಾನದಿಂದ ಮಾತ್ರ ಪುನರ್ ಸ್ಥಾಪನೆ ಆಗಲಿದೆ ಎಂದು ತಿಳಿಸಿದ್ದಾರೆ. ಪ್ರಸಕ್ತ ಕೋವಿಡ್ 19 ಸಾಂಕ್ರಾಮಿಕದಿಂದ ಎದುರಾಗಿರುವ ಸವಾಲುಗಳ ಕುರಿತು ಮಾತನಾಡಿದ ಅವರು, ರಿಯಲ್ ಎಸ್ಟೇಟ್ ವಲಯದ ಮೇಲೆ ಬೀರಿರುವ ಪರಿಣಾಮದಿಂದ ಪ್ರಾಜೆಕ್ಟ್ ಗಳು ವಿಳಂಬವಾಗಿವೆ ಎಂದರು. ಲಾಕ್ ಡೌನ್ ಆರಂಭಿಕ ಅವಧಿಯಲ್ಲಿ, ನಿರ್ಮಾಣ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿತ್ತು. ಪರಿಸ್ಥಿತಿ ಪರಾಮರ್ಶಿಸಿದ ತರುವಾಯ ಸರ್ಕಾರ ಕೆಲವು ಕ್ರಮಗಳೊಂದಿಗೆ ನಿರ್ಮಾಣ ಚಟುವಟಿಕೆ ನಡೆಸಲು2020ರ ಏಪ್ರಿಲ್ 30ರಿಂದ ಅವಕಾಶ ನೀಡಿದೆ ಎಂದರು.

ವಿವರಗಳಿಗೆ: https://pib.gov.in/PressReleseDetail.aspx?PRID=1624419                   

ಓಪಿ ಸಮುದ್ರ ಸೇತು ಹಂತ -2 – ಐಎನ್ಎಸ್ ಜಲಾಶ್ವ ಭಾರತೀಯ ನಾಗರಿಕರನ್ನು ಹೊತ್ತು ಮಾಲೆಯಿಂದ ತೆರಳಿದೆ

ವಿದೇಶದಲ್ಲಿರುವ ಭಾರತೀಯ ನಾಗರಿಕರನ್ನು ಸಮುದ್ರ ಮಾರ್ಗದ ಮೂಲಕ ದೇಶಕ್ಕೆ ಮರಳಿ ಕರೆತರುವ ಸಮುದ್ರ ಸೇತು ಕಾರ್ಯಕ್ರಮದ ಭಾಗವಾಗಿ, ಭಾರತೀಯ ನೌಕಾಪಡೆಯ ಹಡಗು  ಜಲಾಶ್ವ 588 ಭಾರತೀಯ ನಾಗರಿಕರನ್ನು ಹೊತ್ತು ಮೇ 15ರಂದು ಮಾಲ್ಡೀವ್ಸ್ ಮಾಲೆಯ ಬಂದರಿನಿಂದ ಪ್ರಯಾಣ ಬೆಳೆಸಿತು. ಈ 588 ಜನರಲ್ಲಿ ಆರು ಗರ್ಭಿಣಿಯರು ಮತ್ತು 21 ಮಕ್ಕಳು ಸೇರಿದ್ದಾರೆ. ಹಡಗು ಇಂದು ಬೆಳಿಗ್ಗೆ ಮಾಲೆಯಿಂದ ಕೊಚ್ಚಿಗೆ ಹೊರಟಿತು.

ವಿವರಗಳಿಗೆ: https://pib.gov.in/PressReleseDetail.aspx?PRID=1624293

ಮಾನವ ಸಂಪನ್ಮೂಲ ಸಚಿವರು "ಸಾಂಕ್ರಾಮಿಕ ಮತ್ತು ಲಾಕ್ಡೌನ್ ಮಾನಸಿಕಸಾಮಾಜಿಕ ಪರಿಮಾಮ ಮತ್ತು ಹೇಗೆ ನಿಭಾಯಿಸುವುದು" ಎಂಬ ಬಗ್ಗೆ ಏಳು ಶೀರ್ಷಿಕೆಗಳನ್ನು -ಲಾಂಚ್ ಮಾಡಿದ್ದಾರೆ

ಎನ್.ಬಿ.ಟಿ. ಇಂಡಿಯಾ ಪ್ರಕಟಿಸಿರುವ  ಸಾಂಕ್ರಾಮಿಕ ಮತ್ತು ಲಾಕ್ ಡೌನ್ ನಿಂದ ಮಾನಸಿಕ – ಸಾಮಾಜಿಕ ಪರಿಣಾಮಗಳು ಮತ್ತು ಅವುಗಳನ್ನು ಹೇಗೆ ನಿಭಾಯಿಸಬೇಕು ಎಂಬ ಕೊರೊನಾ ಅಧ್ಯಯನ ಸರಣಿಯ 7 ಪುಸ್ತಕಗಳ ಮುದ್ರಿತ ಮತ್ತು ಇ- ಆವೃತ್ತಿಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಶ್ರೀ ರಮೇಶ್ ಪೋಖ್ರೀಯಾಲ್ ಅವರು  ಲಾಂಚ್ ಮಾಡಿದರು. ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, "ಈ ದಿನಗಳಲ್ಲಿ ಜಗತ್ತು ಎದುರಿಸುತ್ತಿರುವ ಭೀಕರ ಸನ್ನಿವೇಶಗಳನ್ನು ಎದುರಿಸಲು, ಎನ್‌.ಬಿಟಿ ಗಮನಾರ್ಹ ಮತ್ತು ಸಾಟಿಯಿಲ್ಲದ ಪುಸ್ತಕಗಳನ್ನು ಹೊರತಂದಿದೆ ಮತ್ತು ಪುಸ್ತಕಗಳು ಜನರ ಮಾನಸಿಕ ಯೋಗಕ್ಷೇಮಕ್ಕೆ ಮಾರ್ಗದರ್ಶಕವಾಗಿ ಕಾರ್ಯನಿರ್ವಹಿಸುತ್ತವೆ ಎಂದು ನಾನು ಭಾವಿಸುತ್ತೇನೆ" ಎಂದರು.

ವಿವರಗಳಿಗೆ: https://pib.gov.in/PressReleseDetail.aspx?PRID=1624148

ವಿಜ್ಞಾನಿಗಳು ಕೋವಿಡ್ -19 ನಿಗ್ರಹಿಸಲು ಸಂಚಾರಿ ಒಳಾಂಗಣ ಸೋಂಕು ನಿವಾರಕ ಸ್ಪ್ರೇ ಅಭಿವೃದ್ಧಿಪಡಿಸಿದ್ದಾರೆ

ಸ್ಪ್ರೇಗಳು ಸುಪ್ತ ಪ್ರದೇಶವನ್ನು ತಲುಪಲು ಮತ್ತು ಸಮಗ್ರವಾಗಿ ಸ್ವಚ್ಛಗೊಳಿಸಲು ಮಾಪಿಂಗ್ ವೈಶಿಷ್ಟ್ಯಗಳು ಮತ್ತು ವಿಸ್ತರಿಸಬಹುದಾದ ಅವಕಾಶವನ್ನು ಸಹ ಹೊಂದಿದೆ, ಪ್ರಸ್ತುತ ಕೋವಿಡ್-19 ಬಿಕ್ಕಟ್ಟನ್ನೂ ಮೀರಿ ತಂತ್ರಜ್ಞಾನವು ಪ್ರಸ್ತುತತೆಯನ್ನು ಹೊಂದಿರುತ್ತದೆ

ವಿವರಗಳಿಗೆ: https://pib.gov.in/PressReleseDetail.aspx?PRID=16244297

ಕೋವಿಡ್ 19 ನಿಗ್ರಹಕ್ಕಾಗಿ ರೋಗಪತ್ತೆ ಪರಿಹಾರ ಮತ್ತು ಅಪಾಯ ತಗ್ಗಿಸುವ ಶ್ರೇಣೀಕರಣ ತಂತ್ರಗಳ ಅಭಿವೃದ್ಧಿಗಾಗಿ  . ಇಂಟೆಲ್ ಇಂಡಿಯಾ ಮತ್ತು ಐಐಐಟಿ- ಹೈದ್ರಾಬಾದ್ ನೊಂದಿಗೆ ಸಿಎಸ್.ಐಆರ್ ಸಹಯೋಗ

ವಿವರಗಳಿಗೆ: https://pib.gov.in/PressReleseDetail.aspx?PRID=1624122

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಅಸ್ಸಾಂ: ಗುವಾಹಟಿಯಲ್ಲಿ ಆಲೂ ಗೋದಾಮು ಪ್ರಕರಣಕ್ಕೆ ಸಂಬಂಧಿಸಿದ ಇನ್ನೂ ಇಬ್ಬರು ವ್ಯಕ್ತಿಗಳಲ್ಲಿ ಕೋವಿಡ್ -19 ಸೋಂಕು ದೃಢಪಟ್ಟಿದೆ. ಒಟ್ಟು ಪ್ರಕರಣ 91 ಕ್ಕೆ ಏರಿಕೆಯಾಗಿದೆ ಎಂದು ಅಸ್ಸಾಂ ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ.
  • ಮಣಿಪುರ: ಕೋವಿಡ್ ಪರೀಕ್ಷೆಯ ಸಾಮರ್ಥ್ಯವನ್ನು ಹೆಚ್ಚಿಸಲು ಮಣಿಪುರದ ರಿಮ್ಸ್ ಮತ್ತು ಜೆಎನ್‌.ಐಎಂಎಸ್ ಆಸ್ಪತ್ರೆಗಳು ಟ್ರೂನಾಟ್ ಯಂತ್ರಗಳನ್ನು ಸ್ಥಾಪಿಸಿವೆ, ರಾಜ್ಯದಲ್ಲಿ ಎರಡು ಸಕ್ರಿಯ ಪ್ರಕರಣಗಳ ಸ್ಥಿತಿ ಸ್ಥಿರವಾಗಿದೆ. ಇಬ್ಬರ ನಿಕಟ ಸಂಪರ್ಕಗಳ ನಿಗಾ ಇಡಲಾಗಿದೆ.
  • ಮಿಜೋರಾಂ: ಮಿಜೋರಾಂನಲ್ಲಿನ ಚರ್ಚುಗಳು ಚರ್ಚ್ ಸಭಾಂಗಣಗಳನ್ನು ಕ್ವಾರಂಟೈನ್ ಸೌಲಭ್ಯಗಳಾಗಿ ಬಳಸಬೇಕೆಂಬ ರಾಜ್ಯ ಸರ್ಕಾರದ ಮನವಿಯನ್ನು ಅಂಗೀಕರಿಸಿವೆ, ಇಡೀ ಸಾಂಸ್ಥಿಕ ಕ್ವಾರಂಟೈನ್ ಅವಧಿಯಲ್ಲಿ ತಮ್ಮ ಸ್ವಂತ ನಿಧಿಯಿಂದ ಆಹಾರ ಒದಗಿಸುತ್ತವೆ.
  • ನಾಗಾಲ್ಯಾಂಡ್: ಬೆಂಗಳೂರಿನಲ್ಲಿ ನಾಗಾ ಹುಡುಗಿ ಆಸ್ಪತ್ರೆಗೆ ದಾಖಲಾದ ನಂತರ ಸಾವನ್ನಪ್ಪಿದ್ದಾಳೆ. ಪರೀಕ್ಷೆಗಾಗಿ ಕಳುಹಿಸಲಾದ ಮಾದರಿಗಳು ಮತ್ತು ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಕೊರೊನಾ ವೈರಸ್ ಏಕಾಏಕಿ ಮಧ್ಯೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲು ದಿಮಾಪುರ್ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ
  • ಸಿಕ್ಕಿಂ: ಸ್ಥಳೀಯರ ದೂರುಗಳ ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿ ಆಹಾರ ಸಾಮಗ್ರಿಗಳಿಗೆ ಅಧಿಕ   ದರ ವಿಧಿಸುತ್ತಿರುವ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನಿಗಾ ವಹಿಸುತ್ತಿದೆ.
  • ಕೇರಳ: ಕೋವಿಡ್ ಪ್ರಸರಣದ ಮೂರನೇ ಹಂತವು ಹೆಚ್ಚು ಅಪಾಯಕಾರಿ ಮತ್ತು ಸಣ್ಣ ಅಜಾಗರೂಕತೆ ಅಥವಾ ತಪ್ಪು ಕೋವಿಡ್ -19 ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಕೋವಿಡ್ ಪ್ರಕರಣಗಳ ಸಂಖ್ಯೆಯು ರಾಜ್ಯದಲ್ಲಿ ಹೆಚ್ಚಾಗುತ್ತಿರುವುದರಿಂದ, ಹೊಸ ಕೊರೊನಾ ವೈರಸ್ ನಿಂದ ಆಕ್ರಮಣವು ಸಂಭವಿಸಬಹುದು, ಅದು ಆನುವಂಶಿಕ ರೂಪಾಂತರಕ್ಕೆ ಒಳಗಾಗಬಹುದು; ಭಾರೀ ಮಳೆಯಿಂದಾಗಿ ತಾಪಮಾನದಲ್ಲಿ ಕುಸಿತವು ಪ್ರಸರಣ ದರವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚೆನ್ನೈನಿಂದ ಬಂದ ಒಬ್ಬ ರೋಗಿಯಿಂದಲೇ ಸೋಂಕು 15 ಜನರಿಗೆ ಹರಡಿದೆ. ನಿನ್ನೆ ಇನ್ನೂ 16 ಪ್ರಕರಣಗಳಿಗೆ ರಾಜ್ಯ ಸಾಕ್ಷಿಯಾಗಿದೆ. ವಯನಾಡ್ ನಲ್ಲಿ ಅತಿ ಹೆಚ್ಚು 19 ಪ್ರಕರಣಗಳು ವರದಿಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ ಒಂದು ಪಂಚಾಯಿತ್ ಅನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಏತನ್ಮಧ್ಯೆ, ವಂದೇ ಭಾರತ್ 2.0 ಕೊಲ್ಲಿಯಿಂದ ಇನ್ನೂ ಮೂರು ವಿಮಾನಗಳು ಇಂದು ರಾತ್ರಿ ಬರಲಿವೆ. ಕೇರಳೀಯರನ್ನು ಮನೆಗೆ ಕರೆತರುವ ದೆಹಲಿಯಿಂದ ಬರುವ ರೈಲುಗಾಗಿ ಕೇರಳ ಎನ್‌.ಒಸಿಯನ್ನು ದೆಹಲಿ ಸರ್ಕಾರಕ್ಕೆ ನೀಡಿದೆ.
  • ತಮಿಳುನಾಡು: ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ 12,000 ಕ್ಕೂ ಹೆಚ್ಚು ಕೇಂದ್ರಗಳನ್ನು ಸ್ಥಾಪಿಸಲಾಗುವುದು, ಪರೀಕ್ಷಾ ಕೋಣೆಗಳಲ್ಲಿ ವೈಯಕ್ತಿಕ ಅಂತರ ಖಚಿತಪಡಿಸಿಕೊಳ್ಳಲು, ಪ್ರತಿ ಕೋಣೆಯಲ್ಲಿ ಕೇವಲ 10 ವಿದ್ಯಾರ್ಥಿಗಳಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವರು ಹೇಳಿದ್ದಾರೆ. ಲಾಕ್‌ ಡೌನ್ ಸಮಯದಲ್ಲಿ ತಸ್ಮ್ಯಾಕ್ ಮಳಿಗೆಗಳನ್ನು ತೆರೆಯದಂತೆ ನಿರ್ದೇಶಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿರುವ ಹಿನ್ನೆಲೆಯಲ್ಲಿ ಚೆನ್ನೈ, ತಿರುವಳ್ಳೂರು ಮತ್ತು ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ತಮಿಳುನಾಡಿನಾದ್ಯಂತ ಮದ್ಯದಂಗಡಿಗಳು ಮತ್ತೆ ತೆರೆದಿವೆ. ರಾಜ್ಯದಲ್ಲಿ ಮತ್ತೆ 434 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಕೋವಿಡ್ ಪ್ರಕರಣಗಳ ಸಂಖ್ಯೆ 10,000 ಗಡಿಯನ್ನು ಶುಕ್ರವಾರ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7435, ಸಾವು: 71, ಬಿಡುಗಡೆಯಾದವರು : 2240; ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು 5637.
  • ಕರ್ನಾಟಕ: ಮುಖ್ಯಮಂತ್ರಿಗಳು ಇಂದು ಅನುದಾನರಹಿತ ಶಿಕ್ಷಣ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಲಾಕ್‌ ಡೌನ್ ಅವಧಿಯಲ್ಲಿ ಬೋಧಕ ಸಿಬ್ಬಂದಿಗೆ ಪೂರ್ಣ ವೇತನ ನೀಡುವಂತೆ ತಿಳಿಸಿರು. ಏತನ್ಮಧ್ಯೆ, ಕೈಗಾರಿಕಾ ಸಚಿವರು ಹೊಸ ಮಾನದಂಡಗಳಿಗೆ ಸರಿಹೊಂದುವಂತೆ ಕೈಗಾರಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲು ವಿನಂತಿಸಿದ್ದಾರೆ. ಇಂದು ಮಧ್ಯಾಹ್ನ 12 ರವರೆಗೆ 23 ಹೊಸ ಪ್ರಕರಣಗಳು ವರದಿಯಾಗಿವೆ; ಬೆಂಗಳೂರು 14, ಹಾಸನ 3 ಮತ್ತು ಮಂಡ್ಯ, ಬಾಗಲಕೋಟೆ, ಉಡುಪಿ, ದಾವಣಗೆರೆ, ಧಾರವಾಡ ಮತ್ತು ಬಳ್ಳಾರಿಯಲ್ಲಿ ತಲಾ ಒಂದು. ರಾಜ್ಯದಲ್ಲಿ ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ 1079 ತಲುಪಿವೆ. ಸಕ್ರಿಯ ಪ್ರಕರಣಗಳು: 548, ಗುಣಮುಖರಾದವರು: 494, ಸಾವು: 36.
  • ಆಂಧ್ರಪ್ರದೇಶ: ಮದ್ಯದ ಅಕ್ರಮ ತಯಾರಿಕೆ ಮತ್ತು ಸಾಗಣೆ ಹಾಗೂ ಮರಳಿನ ಅಕ್ರಮ ಸಾಗಾಟ ತಡೆಯಲು (ಮದ್ಯ ಮತ್ತು ಮರಳು) ವಿಶೇಷ ಜಾರಿ ಶಾಖೆ ತೆರೆಯಲು ರಾಜ್ಯ ನಿರ್ದರಿಸಿದೆ. ಸರ್ಕಾರದಿಂದ ಅನುಮತಿದೊರೆಯದೆ ಎ.ಪಿ.ಎಸ್.ಆರ್.ಟಿ.ಸಿ. ಹೈದ್ರಾಬಾದ್ ನಿಂದ ಆಂಧ್ರದ ವಿವಿಧ ಜಾಗಗಳಿಗೆ ಬಸ್ ಸೇವೆಯನ್ನು ಮುಂದೂಡಿದೆ. ಕೆಂಪು ವಲಯದ ಲ್ಲಿನ ಕುಟುಂಬಗಳಿಗೆ ಅವಶ್ಯಕ ವಸ್ತುಗಳು ಮತ್ತು ಇತರ ವಸ್ತುಗಳನ್ನು ರಾಜ್ಯ ವಿತರಿಸಿದೆ.  ಕಳೆದ 24 ಗಂಟೆಗಳಲ್ಲಿ 9628 ಮಾದರಿ ಪರೀಕ್ಷೆಯ ತರುವಾಯ 48 ಹೊಸ ಪ್ರಕರಣಗಳು, ಒಂದು ಸಾವು ವರದಿಯಾಗಿದ್ದು, 101 ಜನರು ಬಿಡುಗಡೆಯಾಗಿದ್ದಾರೆ. 10 ಸೋಂಕಿನ ಪ್ರಕರಣಗಳು ಇತರ ರಾಜ್ಯಗಳಿಂದ ಬಂದವರಲ್ಲಿ ಕಾಣಿಸಿಕೊಂಡಿದೆ. ಒಟ್ಟು ಪ್ರಕರಣಗಲು 2205, ಸಕ್ರಿಯ 803, ಗುಣವಾದವರು 1354. ಸಾವು 49,. ಸೋಂಕಿನ ಪ್ರಕರಣಗಳಲ್ಲಿ ಪ್ರಮುಖವಾಗಿರುವ ಜಿಲ್ಲೆಗಳು: ಕರ್ನೂಲ್ (608), ಗುಂಟೂರು (413) ಮತ್ತು ಕೃಷ್ಣ (367).
  • ತೆಲಂಗಾಣ: ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ವಾಪಸ್ ಕರೆತರುವ ಕಾರ್ಯಕ್ರಮದ ಭಾಗವಾಗಿ, ನ್ಯೂಯಾರ್ಕ್ (ಯುಎಸ್ಎ) ಯಿಂದ ದೆಹಲಿ ಮೂಲಕ ಏರ್ ಇಂಡಿಯಾ ವಿಮಾನವು 121 ಪ್ರಯಾಣಿಕರೊಂದಿಗೆ ಶನಿವಾರ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಮೇ 15 ರಂತೆ ತೆಲಂಗಾಣದಲ್ಲಿ ಒಟ್ಟು ಪ್ರಕರಣಗಳು 1454. ಒಟ್ಟು ಚೇತರಿಸಿಕೊಂಡ ಪ್ರಕರಣಗಳು 959, ಸಕ್ರಿಯ 461 ಮತ್ತು ಸಾವುಗಳು 34.
  • ಮಹಾರಾಷ್ಟ್ರ: ರಾಜ್ಯದಲ್ಲಿ 1576 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಆ ಮೂಲಕ ಸೋಂಕಿತ ರೋಗಿಗಳ ಸಂಖ್ಯೆಯನ್ನು 29,100 ಕ್ಕೆ ತಲುಪಿದೆ. ಇತ್ತೀಚಿನ ನವೀಕರಣದ ಪ್ರಕಾರ ಪ್ರಸ್ತುತ ರಾಜ್ಯದಲ್ಲಿ 21,467 ಸಕ್ರಿಯ ಪ್ರಕರಣಗಳಿವೆ. ಕರೋನಾ ವೈರಸ್ ಸೋಂಕು ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೊಂದಿಗೆ ಸಮನ್ವಯ ಸಾಧಿಸಲು ಮಹಾರಾಷ್ಟ್ರ ಸರ್ಕಾರ ಕ್ರಮವಾಗಿ ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಾಜ್ಯ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿದೆ. ಅವರು ಆರೋಗ್ಯ ಕಾರ್ಯಕರ್ತರ ಸಾಮಾಜಿಕ ಭದ್ರತೆಯನ್ನೂ ನೋಡಿಕೊಳ್ಳುತ್ತಾರೆ.
  • ಗುಜರಾತ್: ರಾಜ್ಯದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ 9931 ಕ್ಕೆ ಏರಿದೆ. 340 ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. 261 ಸೋಂಕು ಪ್ರಕರಣಗಳು ಅಹಮದಾಬಾದ್‌ನಿಂದ ವರದಿಯಾಗಿದೆ. ಸೂರತ್‌ನಲ್ಲಿ 2000 ಕ್ಕೂ ಹೆಚ್ಚು ವಿದ್ಯುತ್ ಮಗ್ಗದ ಘಟಕಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಲಾಕ್‌ ಡೌನ್ 4 ಸಮಯದಲ್ಲಿ ವ್ಯಾಪಾರಿಗಳು ಮಾರುಕಟ್ಟೆ ಮತ್ತೆ ತೆರೆಯುವ ಭರವಸೆ ಹೊಂದಿದ್ದಾರೆ.
  • ರಾಜಸ್ಥಾನ: ಕೋವಿಡ್ -19 177 ಹೊಸ ಪ್ರಕರಣಗಳು ಮಧ್ಯಾಹ್ನ 2 ರವರೆಗೆ ವರದಿಯಾಗಿವೆ. ಇಂದು. ಈ ಸೋಂಕಿನ ಪ್ರಕರಣಗಳಲ್ಲಿ 122 ಜೈಪುರದಲ್ಲಿ, 21 ಪ್ರಕರಣಗಳು ಡುಂಗರಪುರದಲ್ಲಿ ವರದಿಯಾಗಿವೆ. ಇದು ರಾಜ್ಯದಲ್ಲಿ ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆಯನ್ನು 4924ಕ್ಕೆ ತೆಗೆದುಕೊಂಡು ಹೋಗಿದೆ, ಚೇತರಿಸಿಕೊಂಡ ರೋಗಿಗಳ ಸಂಖ್ಯೆ 2785 ರಷ್ಟಿದೆ ಮತ್ತು 2480 ರೋಗಿಗಳನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಲಾಗಿದೆ.
  • ಮಧ್ಯಪ್ರದೇಶ: ಇತ್ತೀಚಿನ ವರದಿಯ ಪ್ರಕಾರ, ಮಧ್ಯಪ್ರದೇಶದಲ್ಲಿ 169 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಒಟ್ಟು ರೋಗಿಗಳ ಸಂಖ್ಯೆ 4,595 ಕ್ಕೆ ಏರಿದೆ. ಹೊಸ ಪ್ರಕರಣಗಳಲ್ಲಿ 69 ಪ್ರಕರಣಗಳು ಇಂದೋರ್‌ನ ಹಾಟ್‌ ಸ್ಪಾಟ್‌ನಿಂದ ವರದಿಯಾಗಿದೆ. ನಿನ್ನೆ 112 ರೋಗಿಗಳು ಚೇತರಿಸಿಕೊಂಡಿದ್ದರೆ, ಇತ್ತೀಚಿನ ಮಾಹಿತಿಯ ಪ್ರಕಾರ 2073 ಸಕ್ರಿಯ ಪ್ರಕರಣಗಳಿವೆ. 3.12 ಲಕ್ಷ ವಲಸೆ ಕಾರ್ಮಿಕರು ಈವರೆಗೆ ವಿವಿಧ ರಾಜ್ಯಗಳಿಂದ ರಾಜ್ಯಕ್ಕೆ ಮರಳಿದ್ದಾರೆ. ಈ ಪೈಕಿ 86 ಸಾವಿರ ಕಾರ್ಮಿಕರು 72 ರೈಲುಗಳ ಮೂಲಕ ಮರಳಿದ್ದಾರೆ ಮತ್ತು ಉಳಿದ ಎರಡು ಲಕ್ಷ 26 ಸಾವಿರ ಕಾರ್ಮಿಕರು ಬಸ್ಸುಗಳು ಮತ್ತು ಇತರ ಸಾರಿಗೆ ವಿಧಾನಗಳ ಮೂಲಕ ಬಂದಿದ್ದಾರೆ.
  • ಗೋವಾ: ರಾಜ್ಯಕ್ಕೆ ಮರಳಿದ 154 ಗೋವಾದ ನಾವಿಕರನ್ನು ವಾಸ್ಕೋ-ಡಾ-ಗಾಮಾದ 4 ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಏತನ್ಮಧ್ಯೆ, ಮಾರ್ಗಾವೊದ ಇಎಸ್ಐ ಆಸ್ಪತ್ರೆಗೆ ದಾಖಲಾದ ಎಲ್ಲಾ ಎಂಟು ಕೋವಿಡ್ -19 ರೋಗಿಗಳು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ವರದಿಯಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಐ ಬಿ ವಾಸ್ತವ ಪರೀಶೀಲನೆ

***



(Release ID: 1624515) Visitor Counter : 248