ರಕ್ಷಣಾ ಸಚಿವಾಲಯ

ಸಮುದ್ರ ಸೇತು ಕಾರ್ಯಾಚರಣೆಯ 2ನೇ ಹಂತ

Posted On: 16 MAY 2020 11:25AM by PIB Bengaluru

ಸಮುದ್ರ ಸೇತು ಕಾರ್ಯಾಚರಣೆಯ 2ನೇ ಹಂತ - ಸಂಕಷ್ಟದಲ್ಲಿ ಸಿಲುಕಿದ್ದ ಭಾರತೀಯ ಪ್ರಜೆಗಳನ್ನು ಹೊತ್ತು ಮಾಲೆಯಿಂದ ನಿರ್ಗಮಿಸಿದ ಐಎನ್ಎಸ್ ಜಲಶ್ವಾ

 

ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ಸಮುದ್ರ ಮಾರ್ಗದ ಮೂಲಕ ಸ್ವದೇಶಕ್ಕೆ ಕರೆತರುವ ಭಾರತೀಯ ನೌಕಾಪಡೆಯ ಸಮುದ್ರ ಸೇತು ಕಾರ್ಯಾಚರಣೆಯ ಭಾಗವಾಗಿ ನೌಕಾಪಡೆಯ ಹಡಗು ಜಲಶ್ವಾ, 588 ಭಾರತೀಯ ಪ್ರಜೆಗಳನ್ನು ಹೊತ್ತು ಮಾಲೆ ಬಂದರಿನಿಂದ 2020 ಮೇ 15ರಂದು ನಿರ್ಗಮಿಸಿದೆ. 588 ಜನರಲ್ಲಿ ಆರು ಗರ್ಭಿಣಿಯರು ಮತ್ತು 21 ಮಕ್ಕಳಿದ್ದಾರೆ.

ಮಾಲೆಯಲ್ಲಿ ಮಳೆ ಹಾಗೂ ಗಂಟೆಗೆ 30-40 ಮೈಲು ವೇಗದ ಬಿರುಗಾಳಿಯ ನಡುವೆಯೇ ಹಡಗಿನ ಸಿಬ್ಬಂದಿ ಪ್ರಯಾಣಿಕರಿಗೆ ವೈದ್ಯಕೀಯ ಶಿಷ್ಟಾಚಾರ ಮತ್ತು ಸುರಕ್ಷತಾ ಕ್ರಮಗಳು ಸೇರಿದಂತೆ ತಪಾಸಣೆ ಹಾಗೂ ಇನ್ನಿತರ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ. ಪ್ರತಿಕೂಲ ಹವಾಮಾನದಿಂದಾಗಿ ನಿರ್ಗಮನದ ಮುಂಚಿನ ಎಲ್ಲ ಅಗತ್ಯ ತಪಾಸಣಾ ಚಟುವಟಿಕೆಗಳನ್ನು ಹಡಗಿನಲ್ಲೇ ಕೈಗೊಳ್ಳಲಾಯಿತು.

https://ci5.googleusercontent.com/proxy/NYHHiEauNVEc7basBuFC45m03lPbjGZeU7J1753Zy59QXCSbJgia3bEIVo0A1rcREBVBRF0Y77Udq-s2SDjghvuhuL0T_wDp7Ye01YrloWq0xXK5V8SnZeA=s0-d-e1-ft#https://static.pib.gov.in/WriteReadData/userfiles/image/PIC(1)(1)V2N9.jpeg

ಹಡಗು ಇಂದು ಮುಂಜಾನೆ ಮಾಲೆಯಿಂದ ಕೊಚ್ಚಿಯತ್ತ ಪ್ರಯಾಣ ಬೆಳೆಸಿತು.

***



(Release ID: 1624405) Visitor Counter : 123