ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಲಾಕ್ ಡೌನ್ ಸಮಯದಲ್ಲಿ ತಡವಾಗಿ ಬಾಕಿ ಪಾವತಿಗೆ ವಿಧಿಸುತ್ತಿದ್ದ ದಂಡದಿಂದ ಇಪಿಎಫ್ ಮತ್ತು ಎಂಪಿ ಕಾಯಿದೆ 1952ರಡಿ ಬರುವ ಉದ್ದಿಮೆಗಳಿಗೆ ಸ್ವಲ್ಪ ನಿರಾಳ

Posted On: 15 MAY 2020 5:14PM by PIB Bengaluru

ಲಾಕ್ ಡೌನ್ ಸಮಯದಲ್ಲಿ ತಡವಾಗಿ ಬಾಕಿ ಪಾವತಿಗೆ ವಿಧಿಸುತ್ತಿದ್ದ ದಂಡದಿಂದ ಇಪಿಎಫ್ ಮತ್ತು ಎಂಪಿ ಕಾಯಿದೆ 1952ರಡಿ ಬರುವ ಉದ್ದಿಮೆಗಳಿಗೆ ಸ್ವಲ್ಪ ನಿರಾಳ


ಕೋವಿಡ್-19 ಹರಡುವುದನ್ನು ತಡೆಯಲು ಭಾರತ ಸರ್ಕಾರ ನಿರಂತರ ಲಾಕ್ ಡೌನ್ ಘೋಷಣೆ ಹಿನ್ನೆಲೆಯಲ್ಲಿ ಮತ್ತು ಸಾಂಕ್ರಾಮಿಕದಿಂದ ಇತರೆ ಅಡಚಣೆಗಳಾಗುತ್ತಿರುವುದರಿಂದ, ಇಪಿಎಫ್ ಮತ್ತು ಎಂಪಿ ಕಾಯಿದೆ 1952ರಡಿ ಬರುವ ಉದ್ದಿಮೆಗಳು ಸಂಕಷ್ಟದಲ್ಲಿದ್ದು, ಅವುಗಳು ಮಾಮೂಲಿಯಂತೆ ಕಾರ್ಯನಿರ್ವಹಿಸಲಾಗುತ್ತಿಲ್ಲ ಮತ್ತು ಸಕಾಲಕ್ಕೆ ನಿಗದಿತ ಪಾವತಿಗಳನ್ನು ಮಾಡಲಾಗುತ್ತಿಲ್ಲ.

ಹಾಗಾಗಿ ಉದ್ದಿಮೆಗಳು ಎದುರಿಸುತ್ತಿರುವ ಕಷ್ಟಗಳನ್ನು ಮನಗಂಡು ಲಾಕ್ ಡೌನ್ ಸಮಯದ ಯಾವುದೇ ಅವಧಿಯಲ್ಲಿ ವಂತಿಗೆ ಪಾವತಿ ಅಥವಾ ಆಡಳಿತಾತ್ಮಕ ಶುಲ್ಕ ಸೇರಿ ಯಾವುದೇ ಮೊತ್ತ ಬಾಕಿ ಇದ್ದರೂ ಅವುಗಳನ್ನು ಕಾರ್ಯಾಚರಣೆ ಅಥವಾ ಆರ್ಥಿಕ ಕಾರಣಗಳಿದ್ದರೂ ಸಹ ಇಪಿಎಫ್ ಅವುಗಳನ್ನು ಪರಿಗಣಿಸಿ, ಅಂತಹ ವಿಳಂಬ ಪಾವತಿಗೆ ಯಾವುದೇ ದಂಡ ಶುಲ್ಕ ವಿಧಿಸದಿರಲು ನಿರ್ಧರಿಸಿದೆ.

ಕುರಿತಂತೆ 2020 ಮೇ.15ರಂದು ಇಪಿಎಫ್ಒ ದಿಂದ ಎಲ್ಲ ಪ್ರಾದೇಶಿಕ ಕಚೇರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ, ಇಪಿಎಫ್ ವೆಬ್ ಸೈಟ್ ಹೋಮ್ ಪೇಜ್ ನಲ್ಲಿ ಟ್ಯಾಬ್ ಕೋವಿಡ್-19 ಅಡಿ ಉಲ್ಲೇಖಿಸಲಾದ ಪ್ರಕರಣಗಳಲ್ಲಿ ದಂಡದ ಶುಲ್ಕ ವಿಧಿಸುವ ಕ್ರಮಗಳನ್ನು ಜರುಗಿಸಬಾರದು ಎಂದು ನಿರ್ದೇಶನ ನೀಡಲಾಗಿದೆ.

ಮೇಲಿನ ಕ್ರಮದಿಂದಾಗಿ ಸುಮಾರು 6.5ಲಕ್ಷ ಇಪಿಎಫ್ ವ್ಯಾಪ್ತಿಗೆ ಒಳಪಡುವ ಉದ್ದಿಮೆಗಳಿಗೆ ನಿಯಮಗಳ ಕಡ್ಡಾಯ ಪಾಲನೆಗೆ ಸ್ವಲ್ಪ ವಿನಾಯ್ತಿ ಸಿಗಲಿದ್ದು, ಇದರಿಂದಾಗಿ ಅವುಗಳು ದಂಡದ ರೂಪದಲ್ಲಿ ಪಾವತಿಸಬೇಕಾದ ಲಕ್ಷಾಂತರ ರೂ. ಉಳಿತಾಯವಾಗಲಿದೆ.


***


(Release ID: 1624236) Visitor Counter : 253