PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 14 MAY 2020 6:55PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಡಾ. ಹರ್ಷವರ್ಧನ್ ಅವರಿಂದ ಕೊಬಾಸ್ 6800 ಪರೀಕ್ಷಾ ಯಂತ್ರ ರಾಷ್ಟ್ರಕ್ಕೆ ಸಮರ್ಪಣೆ; ಸುಮಾರು 14 ದಿನಗಳ ಬಳಿಕ ಕಳೆದ ಮೂರು ದಿನಗಳಿಂದೀಚೆಗೆ ದುಪ್ಪಟ್ಟಾಗುತ್ತಿದ್ದ ಅವಧಿ ಕುಸಿತ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್, ರಾಷ್ಟ್ರೀಯ ರೋಗನಿಯಂತ್ರಣ ಕೇಂದ್ರ(ಎನ್ ಸಿ ಡಿಸಿ)ಗೆ ಭೇಟಿ ನೀಡಿದರು ಮತ್ತು ಕೊಬಾಸ್ 6800 ಪರೀಕ್ಷಾ ಯಂತ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಕೋವಿಡ್-19 ಪ್ರಕರಣಗಳ ಪರೀಕ್ಷೆಗೆ ಸರ್ಕಾರ ಖರೀದಿಸಿರುವ ಮೊದಲ ಪರೀಕ್ಷಾ ಯಂತ್ರ ಇದಾಗಿದೆ. ಕೊಬಾಸ್ 6800 ಅತ್ಯಾಧುನಿಕ ಯಂತ್ರ ರೋಬೋಟಿಕ್ ಆಧರಿಸಿದ್ದು, ಇದು ಸೋಂಕು ಹರಡುವುದರ ಸಾಧ್ಯತೆಯನ್ನು ಕನಿಷ್ಠಗೊಳಿಸುತ್ತದೆ ಮತ್ತು ಇದನ್ನು ರಿಮೋಟ್ ಆಧರಿಸಿ ಬಳಕೆ ಮಾಡುವುದರಿಂದ ಹಾಗೂ ಸೀಮಿತ ಮಾನವರ ಹಸ್ತಕ್ಷೇಪ ಇರುವುದರಿಂದ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲುವ ಅಪಾಯವನ್ನು ತಗ್ಗಿಸುತ್ತದೆ.

ಡಾ. ಹರ್ಷವರ್ಧನ್, ದೇಶದ 500ಕ್ಕೂ ಅಧಿಕ ಪ್ರಯೋಗಾಲಯಗಳಲ್ಲಿ ಸುಮಾರು 20 ಲಕ್ಷ ಕೋವಿಡ್-19 ಪರೀಕ್ಷೆಗಳನ್ನು ನಡೆಸುವ ಮೂಲಕ ಇಂದು ನಾವು ಅತ್ಯಂತ ಪ್ರಮುಖ ಮೈಲುಗಲ್ಲನ್ನು ಸ್ಥಾಪಿಸಿದ್ದೇವೆ ಎಂದರು. ಇದಲ್ಲದೆ ಇಂದಿನ ಇನ್ನೊಂದು ಪ್ರಮುಖ ಸುದ್ದಿ ಎಂದರೆ ಕಳೆದ ಮೂರು ದಿನಗಳಿಂದೀಚೆಗೆ ದುಪ್ಪಟ್ಟಾಗುತ್ತಿದ್ದ ಅವಧಿ ಕನಿಷ್ಠ 13.9ಕ್ಕೆ ಇಳಿದಿದೆ. ಕಳೆದ 14 ದಿನಗಳಿಂದ ದುಪ್ಪಟ್ಟಾಗುತ್ತಿದ್ದ ಅವಧಿ 11.1ರಷ್ಟಿತ್ತು. ಸಾವಿನ ಪ್ರಮಾಣ ಶೇ.3.2ರಷ್ಟಿದೆ ಮತ್ತು ಗುಣಮುಖರಾಗುತ್ತಿರುವವರ ಪ್ರಮಾಣ ಮತ್ತಷ್ಟು ಸುಧಾರಿಸಿದ್ದು, ಇಂದು ಶೇ.33.6ರಷ್ಟಿದೆ. (ನಿನ್ನೆ ಶೇ.32.83)ರಷ್ಟಿದೆ. ನಿನ್ನೆಯವರೆಗೆ ಶೇ.3ರಷ್ಟು ಕೋವಿಡ್-19 ರೋಗಿಗಳು ಐಸಿಯುನಲ್ಲಿದ್ದರು, ಶೇ.0.39ರಷ್ಟು ವೆಂಟಿಲೇಟರ್ ಗಳಲ್ಲಿ ಮತ್ತು ಶೇ.2.7ರಷ್ಟು ಆಕ್ಸಿಜನ್ ನೆರವಿನಲ್ಲಿದ್ದರು. ಕಳೆದ 24 ಗಂಟೆಗಳಿಂದೀಚೆಗೆ 14 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂದು ಹೊಸ ಕೋವಿಡ್-19 ಪ್ರಕರಣ ಪತ್ತೆಯಾಗಿಲ್ಲ. 2020ರ ಮೇ 14ರ ವರೆಗೆ ದೇಶದಲ್ಲಿ ಒಟ್ಟು 78,003 ಪ್ರಕರಣಗಳು ವರದಿಯಾಗಿದ್ದು, ಆ ಪೈಕಿ 26,235 ಗುಣಮುಖರಾಗಿದ್ದಾರೆ ಮತ್ತು 2,549 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಿಂದೀಚೆಗೆ 3,722 ಹೊಸ ಪ್ರಕರಣಗಳು ಪತ್ತೆಯಾಗಿವೆ.

ವಿವರಗಳಿಗೆ: https://pib.gov.in/PressReleseDetail.aspx?PRID=1623957

ಪಿಎಂ ಕೇರ್ಸ್ ನಿಧಿಯಿಂದ ಕೋವಿಡ್-19 ವಿರುದ್ಧ ಹೋರಾಟಕ್ಕೆ 3100 ಕೋಟಿ ರೂ. ಹಂಚಿಕೆ

ಪಿಎಂ ಕೇರ್ಸ್(ಪ್ರಧಾನಮಂತ್ರಿಗಳ ನಾಗರಿಕರ ನೆರವಿನ ಮತ್ತು ಪರಿಹಾರದ ತುರ್ತು ಸಂದರ್ಭಗಳ) ನಿಧಿ ಟ್ರಸ್ಟ್ ಕೋವಿಡ್-19 ವಿರುದ್ಧ ಹೋರಾಟಕ್ಕೆ 3100 ಕೋಟಿ ರೂ.ಗಳನ್ನು ಹಂಚಿಕೆ ಮಾಡಲು ನಿರ್ಧರಿಸಿದೆ. ಇದರಲ್ಲಿ ಸುಮಾರು 2000 ಕೋಟಿ ರೂ.ಗಳನ್ನು ಖರೀದಿಗೆ ನಿಗದಿಪಡಿಸಲಾಗಿದೆ. 1000 ಕೋಟಿ ರೂ.ಗಳನ್ನು ವಲಸೆ ಕಾರ್ಮಿಕರ ಸೌಕರ್ಯಕ್ಕೆ ಬಳಸಲಾಗುವುದು ಮತ್ತು 100 ಕೋಟಿ ರೂ.ಗಳನ್ನು ಲಸಿಕೆ ಅಭಿವೃದ್ಧಿಗೆ ಬೆಂಬಲ ನೀಡಲು ಬಳಸಲಾಗುವುದು. ಭಾರತದಲ್ಲೇ ತಯಾರಿಸಿದ 50000 ವೆಂಟಿಲೇಟರ್ ಗಳನ್ನು ಪಿಎಂ ಕೇರ್ಸ್ ನಿಧಿಯಿಂದ ಸುಮಾರು 2,000 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸಲಾಗುವುದು. ವೆಂಟಿಲೇಟರ್ ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರ್ಕಾರಗಳು ನಡೆಸುವ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಬಳಸಲಾಗುವುದು. 1000 ಕೋಟಿ ರೂ.ಗಳನ್ನು ಪ್ರಧಾನಮಂತ್ರಿಗಳ ಕೇರ್ಸ್ ನಿಧಿಯಿಂದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಲಸೆ ಕಾರ್ಮಿಕರಿಗಾಗಿ ನೀಡಲಾಗುವುದು. ಹಣವನ್ನು ಜಿಲ್ಲಾ ಕಲೆಕ್ಟರ್ ಗಳು/ಮುನಿಸಿಪಲ್ ಆಯುಕ್ತರುಗಳಿಗೆ, ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆಗಳನ್ನು ಕಲ್ಪಿಸಲು, ವೈದ್ಯಕೀಯ ಚಿಕಿತ್ಸೆಗಳನ್ನು ಏರ್ಪಾಡು ಮಾಡಲು ಹಾಗೂ ಆಹಾರವನ್ನು ಒದಗಿಸಲು ಮತ್ತು ವಸತಿ ಸೌಕರ್ಯ ಕಲ್ಪಿಸುವ ಪ್ರಯತ್ನಗಳಿಗೆ ಬಳಸಲು ಅವಕಾಶ ನೀಡಲಾಗುವುದು. ಕೋವಿಡ್-19 ಲಸಿಕೆ ವಿನ್ಯಾಸಕಾರರು ಮತ್ತು ಅಭಿವೃದ್ಧಿಪಡಿಸುವವರಿಗೆ ಬೆಂಬಲ ನೀಡಲು 100 ಕೋಟಿ ರೂ.ಅನ್ನು ನೆರವು ನೀಡಲಾಗುವುದು. ಇದನ್ನು ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ಬಳಕೆ ಮಾಡಲಾಗುವುದು.

ವಿವರಗಳಿಗೆ: https://pib.gov.in/PressReleseDetail.aspx?PRID=1623699

ಕೋವಿಡ್-19 ವಿರುದ್ಧ  ಹೋರಾಡಲು ಭಾರತದ ಆರ್ಥಿಕತೆಯನ್ನು ಬೆಂಬಲಿಸಲು ಆತ್ಮನಿರ್ಭರ ಭಾರತ ಅಭಿಯಾನದಡಿ ಎರಡನೇ ಕಂತಿನ ವಿವರಗಳನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಬಿಡುಗಡೆ ಮಾಡಿದರು

ವಿವರಗಳಿಗೆ: https://pib.gov.in/PressReleseDetail.aspx?PRID=1623840

ರಿಯಲ್ ಎಸ್ಟೇಟ್ ವಲಯದಲ್ಲಿ ವ್ಯವಹಾರ ಸುಗಮಗೊಳಿಸುವುದನ್ನು ಖಾತ್ರಿಗೊಳಿಸುವ ಜೊತೆಗೆ ಗೃಹ ಖರೀದಿದಾರರ ಹಿತರಕ್ಷಣೆಗೆ ಸರ್ಕಾರ ಬದ್ಧ

ರಿಯಲ್ ಎಸ್ಟೇಟ್ ವಲಯದಲ್ಲಿ ವ್ಯವಹಾರ ಸುಗಮಗೊಳಿಸುವುದನ್ನು ಖಾತ್ರಿಗೊಳಿಸುವ ಜೊತೆಗೆ ಗೃಹ ಖರೀದಿದಾರರ ಹಿತವನ್ನು ಎತ್ತಿಹಿಡಿಯಲು ಹಾಗೂ ರಕ್ಷಿಸಲು ಸರ್ಕಾರ ಬದ್ಧವಿದೆ. ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಪ್ರಕಟ ಮಾಡಿದ ನಂತರ ಕೇಂದ್ರ ಸರ್ಕಾರ ಗೃಹ ಖರೀದಿದಾರರ ಹಿತರಕ್ಷಣೆ ಕುರಿತಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಾಗೂ ಅಲ್ಲಿನ ರಿಯಲ್ ಎಸ್ಟೇಟ್ ಅಭಿವೃದ್ಧಿ ಪ್ರಾಧಿಕಾರಗಳಿಗೆ ಸಹಜವಾಗಿ ರೇರಾ ಅಡಿ ಬರುವ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಆರು ತಿಂಗಳ ಅವಧಿಯನ್ನು ವಿಸ್ತರಿಸಿದೆ ಮತ್ತು ಕೋವಿಡ್-19 ಹಿನ್ನೆಲೆಯಲ್ಲಿ ಅಗತ್ಯಬಿದ್ದರೆ ಹೆಚ್ಚುವರಿಯಾಗಿ ಮತ್ತೆ ಮೂರು ತಿಂಗಳು ವಿಸ್ತರಣೆಗೆ ರಾಜ್ಯಗಳಿಗೆ ಅವಕಾಶ ನೀಡಲಾಗಿದೆ. ಕೇಂದ್ರ ವಸತಿ ವ್ಯವಹಾರಗಳ ಸಚಿವಾಲಯ ಕುರಿತಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಆಯಾ ರಾಜ್ಯಗಳ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಗಳಿಗೆ ಸುತ್ತೋಲೆಯನ್ನು ಹೊರಡಿಸಿ, ಪ್ರಸಕ್ತ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನೈಸರ್ಗಿಕ ವಿಪತ್ತು ಎಂದು ಪರಿಗಣಿಸಿ, ‘ಫೋರ್ಸ್ ಮಜೂರೆ’ ಎಂದು ಪ್ರಕಟಿಸಲು ಸೂಚಿಸಿದೆ. ಇದರಿಂದ ಗೃಹ ಖರೀದಿದಾರರ ಹಿತ ರಕ್ಷಣೆಯಾಗುವುದಲ್ಲದೆ, ಯೋಜನೆ ಕೆಲವು ತಿಂಗಳು ವಿಳಂಬವಾದರೂ ಯೋಜನೆಯನ್ನು ಖಂಡಿತವಾಗಿ ಪೂರ್ಣಗೊಳಿಸಿ ಮನೆ/ಫ್ಲಾಟ್ ಗಳು ಖರೀದಿದಾರರಿಗೆ ಲಭ್ಯವಾಗಲಿವೆ.

ವಿವರಗಳಿಗೆ : https://pib.gov.in/PressReleseDetail.aspx?PRID=1623805

ಮೂಲದಲ್ಲೇ ತೆರಿಗೆ ಕಡಿತ ಟಿಡಿಎಸ್ ಮತ್ತು ಮೂಲದಲ್ಲೇ ತೆರಿಗೆ ಸಂಗ್ರಹ  - ಟಿಸಿಎಸ್ ಕಡಿತ

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸಲು ತೆರಿಗೆ ಪಾವತಿದಾರರಿಗೆ ಹೆಚ್ಚಿನ ಹಣಕಾಸು ಲಭ್ಯವಾಗುವಂತೆ ಮಾಡಲು ವೇತನದಾರರಲ್ಲದ ನಿವಾಸಿಗಳಿಗೆ ಮಾಡುವ ಪಾವತಿಗಳಿಗೆ 2020ರ ಮೇ 14ರಿಂದ 2021ರ ಮಾರ್ಚ್ 31ರ ವರೆಗೆ ಮೂಲದಲ್ಲೇ ತೆರಿಗೆ ಕಡಿತ(ಟಿಡಿಎಸ್) ಪ್ರಮಾಣವನ್ನು ಶೇ.25ಕ್ಕೆ ಇಳಿಸಲಾಗಿದೆ. ಅಲ್ಲದೆ 2020ರ ಮೇ 14ರಿಂದ 2021ರ ಮಾರ್ಚ್ 31ರ ಅವಧಿಗೆ ನಿಗದಿತ ಸ್ವೀಕೃತಿಗಳಿಗೆ ಮೂಲದಲ್ಲೇ ತೆರಿಗೆ ಸಂಗ್ರಹ(ಟಿಸಿಎಸ್) ದರವನ್ನು ಶೇ.25ಕ್ಕೆ ಕಡಿತಗೊಳಿಸಲಾಗಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1623745

ಭಾರತೀಯ ರೈಲ್ವೆಯಿಂದ 15 ದಿನಗಳೊಳಗೆ ಶ್ರಮಿಕ ರೈಲುಗಳ ಮೂಲಕ 10 ಲಕ್ಷಕ್ಕೂ ಅಧಿಕ(ಒಂದು ಮಿಲಿಯನ್) ಪ್ರಯಾಣಿಕರನ್ನುತವರು ರಾಜ್ಯಗಳಿಗೆ  ಕರೆದೊಯ್ದು ದಾಖಲೆ ನಿರ್ಮಿಸಿದ ರೈಲ್ವೆ

 2020ರ ಮೇ 14ರ ವರೆಗೆ ದೇಶಾದ್ಯಂತ ಒಟ್ಟು 800 ಶ್ರಮಿಕ ರೈಲುಗಳ ಕಾರ್ಯಾಚರಣೆ ನಡೆದಿದೆ. 10 ಲಕ್ಷಕ್ಕೂ ಅಧಿಕ ಪ್ರಯಾಣಿಕರು ತಮ್ಮ ತವರು ರಾಜ್ಯಗಳನ್ನು ತಲುಪಿದ್ದಾರೆ. ರೈಲುಗಳ ಮೂಲಕ ಪ್ರಯಾಣಿಕರನ್ನು ಕಳುಹಿಸುವ ಮತ್ತು ಸ್ವೀಕರಿಸುವ ಎರಡೂ ರಾಜ್ಯಗಳ ಒಪ್ಪಿಗೆಯ ನಂತರ ಭಾರತೀಯ ರೈಲ್ವೆ, ರೈಲುಗಳ ಸಂಚಾರವನ್ನು ಕೈಗೊಂಡಿದೆ. ಈ 800 ರೈಲುಗಳು  ನಾನಾ ರಾಜ್ಯಗಳಿಂದ ಪ್ರಯಾಣಿಸಿ ನಿಗದಿತ ಸ್ಥಳಗಳನ್ನು ತಲುಪಿದೆ. ಆ ರಾಜ್ಯಗಳೆಂದರೆ ಆಂಧ್ರಪ್ರದೇಶ, ಬಿಹಾರ, ಛತ್ತೀಗಢ ಹಿಮಾಚಲಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮಿಝೋರಾಂ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮಬಂಗಾಳ.

ವಿವರಗಳಿಗೆ : https://pib.gov.in/PressReleseDetail.aspx?PRID=1623958

ಭಾರತೀಯ ರೈಲ್ವೆ 2020 ಮೇ 12ರಿಂದ ಆರಂಭವಾಗುವಂತೆ ವಿಶೇಷ ರೈಲುಗಳ ನಾನಾ ದರ್ಜೆಗಳಿಗೆ ಸೀಮಿತ ಟಿಕೆಟ್ ಗಳ ಕಾಯ್ದಿರಿಸುವಿಕೆ ಪಟ್ಟಿ ಮಾಡುವುದನ್ನು ಆರಂಭಿಸಲು ನಿರ್ಧರಿಸಿದೆ.

ಭಾರತೀಯ ರೈಲ್ವೆ, 2020ರ ಮೇ 12ರಿಂದ ಆರಂಭವಾಗುವಂತೆ ವಿಶೇಷ ರೈಲುಗಳಲ್ಲಿ ಆರ್ ಸಿ (ಕಾಯ್ದಿರಿಸುವಿಕೆ ವಿರುದ್ಧದ ರದ್ಧತಿ)ಯನ್ನು ಮತ್ತೆ ಆರಂಭಿಸಲು ನಿರ್ಧರಿಸಿದೆ. ಅಲ್ಲದೆ ಸೀಮಿತ ಸಂಖ್ಯೆಗೆ ಕಾಯ್ದಿರಿಸುವಿಕೆ ಟಿಕೆಟ್ ಪಟ್ಟಿಯನ್ನು ಆರಂಭಿಸಲು ಸಹ ನಿರ್ಧರಿಸಿದೆ. ವಿಶೇಷ ರೈಲುಗಳಿಗೆ ಸಂಬಂಧಿಸಿದಂತೆ ಇತರೆ ನಿಯಮಗಳಾದ ಕಾಯ್ದಿರಿಸುವಿಕೆ ಪಟ್ಟಿ ಅನ್ವಯವಾಗಲಿದೆ. ಆದರೆ ತತ್ಕಾಲ್/ಪ್ರೀಮಿಯಂ ತತ್ಕಾಲ್ ಕೋಟಾಗಳು ಇರುವುದಿಲ್ಲ. ಹಿರಿಯ ನಾಗರಿಕರ ಕೋಟಾ, ಮಹಿಳಾ ಕೋಟಾ ಮತ್ತು ದಿವ್ಯಾಂಗರ ಕೋಟಾ(ಎಚ್ ಪಿ) ಅವುಗಳು ಹಾಲಿ ನಿಯಮದಂತೆ ಮುಂದುವರಿಯಲಿವೆ. ಈ ಮೇಲಿನ ಬದಲಾವಣೆಗಳು 2020ರ ಮೇ 22 ರಿಂದ ಅನ್ವಯವಾಗಲಿದ್ದು, ಅವುಗಳಿಗೆ ಬುಕಿಂಗ್ 2020ರ ಮೇ 15ರ ನಂತರ ಆರಂಭವಾಗಲಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1623959

32ನೇ ಕಾಮನ್ವೆಲ್ತ್ ಆರೋಗ್ಯ ಸಚಿವರ ಸಭೆಯಲ್ಲಿ ಭಾಗವಹಿಸಿದ ಡಾ. ಹರ್ಷವರ್ಧನ್

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 32 ನೇ ಕಾಮನ್ವೆಲ್ತ್ ಆರೋಗ್ಯ ಸಚಿವರ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯ ಘೋಷ ವಾಕ್ಯ ಕೋವಿಡ್-19 ವಿರುದ್ಧ ಕಾಮನ್ವೆಲ್ತ್ ಸಮನ್ವಯ ಎಂಬುದಾಗಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1623948

ದೇಶಾದ್ಯಂತ ಶಿಕ್ಷಕರೊಂದಿಗೆ ವೆಬಿನಾರ್ ಮೂಲಕ ಸಂವಾದ ನಡೆಸಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಇಂದು ದೇಶಾದ್ಯಂತ ಶಿಕ್ಷಕರೊಂದಿಗೆ ವೆಬಿನಾರ್ ಮೂಲಕ ಸಂವಾದ ನಡೆಸಿ, ‘ಆಚಾರ್ಯ ದೇವೋ ಭವ’ ಸಂದೇಶವನ್ನು ನೀಡಿದರು. ಕೋವಿಡ್-19 ವಿರುದ್ಧ ವಿದ್ಯಾರ್ಥಿಗಳಲ್ಲಿ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವ ಶಿಕ್ಷಕರಿಗೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು. ಈ ವೆಬಿನಾರ್ ನಲ್ಲಿ ಸಚಿವರು ಎರಡು ಮಹತ್ವದ ಘೋಷಣೆಗಳನ್ನು ಮಾಡಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸದ್ಯದಲ್ಲೇ ನೀಟ್ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗುವುದು ಎಂದರು. ಅಲ್ಲದೆ ಅವರು, ಲಾಕ್ ಡೌನ್ ನಂತರ ನವೋದಯ ವಿದ್ಯಾಲಯದ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಲ್ಲಿ ಆಯ್ಕೆಯಾಗಿರುವ ಶಿಕ್ಷಕರಿಗೆ ನೇಮಕ ಪತ್ರ ವಿತರಿಸಲಾಗುವುದು ಎಂದರು. ಶಿಕ್ಷಕರು ತಮ್ಮ ಕರ್ತವ್ಯವನ್ನು ನಿರ್ವಹಿಸುವಂತೆ ಮನವಿ ಮಾಡಿದ ಅವರು, ಲಾಕ್ ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಕಲ್ಯಾಣವನ್ನು ಖಾತ್ರಿಪಡಿಸಬೇಕು ಎಂದರು.

ವಿವರಗಳಿಗೆ : https://pib.gov.in/PressReleseDetail.aspx?PRID=1623822

ಲಾಕ್ ಡೌನ್ ವೇಳೆ ಬೇಳೆ ಮತ್ತು ಎಣ್ಣೆ ಬೀಜಗಳ ಖರೀದಿ ಮುಂದುವರಿಕೆ

2020-21ರ ಹಿಂಗಾರು ಹಂಗಾಮಿನಲ್ಲಿ ಒಟ್ಟು 277 ಲಕ್ಷ ಮೆಟ್ರಿಕ್ ಟನ್ ಗೋಧಿ ಬಂದಿದ್ದು, ಆ ಪೈಕಿ ಸುಮಾರು 269 ಲಕ್ಷ ಮೆಟ್ರಿಕ್ ಟನ್ ಖರೀದಿಸಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಪಿಎಂ ಕಿಸಾನ್ ಅಡಿಯಲ್ಲಿ 9.25 ಕೋಟಿ ರೈತ ಕುಟುಂಬಗಳಿಗೆ 18,500 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ವಿತರಿಸಲಾಗಿದೆ.

ವಿವರಗಳಿಗೆ :  https://pib.gov.in/PressReleseDetail.aspx?PRID=1623602

ಭಾರತೀಯ ನೌಕಾಪಡೆ ಅಭಿವೃದ್ಧಿಪಡಿಸಿರುವ ಕಡಿಮೆ ವೆಚ್ಚದ ಪಿಪಿಇಗೆ ಪೇಟೆಂಟ್ ನಿಂದಾಗಿ ಭಾರೀ ಪ್ರಮಾಣದ ಉತ್ಪಾದನೆಗೆ ಹಾದಿ ಸುಗಮ

ಭಾರತೀಯ ನೌಕಾಪಡೆ ಅಭಿವೃದ್ಧಿಪಡಿಸಿರುವ ವೈದ್ಯಕೀಯ ವೈಯಕ್ತಿಕ ರಕ್ಷಣಾ ಉಪಕರಣ(ಪಿಪಿಇ)ಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಮಹತ್ವದ ಹೆಜ್ಜೆ ಇಡಲಾಗಿದೆ. ಇದಕ್ಕೆ ರಕ್ಷಣಾ ಸಚಿವಾಲಯದ ಬೌದ್ಧಿಕ ಹಕ್ಕು ಸೌಕರ್ಯ ಘಟಕ(ಐಪಿಎಫ್ ಸಿ) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಉದ್ದಿಮೆ ರಾಷ್ಟ್ರೀಯ ಸಂಶೋಧನಾ ಅಭಿವೃದ್ಧಿ ನಿಗಮ(ಎನ್ ಡಿಆರ್ ಸಿ) ಸಲ್ಲಿಸಿದ್ದ ಪೇಟೆಂಟ್ ಗೆ ಯಶಸ್ವಿ ಅನುಮೋದನೆ ದೊರೆತಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1623952

ಸಮುದ್ರ ಸೇತು ಕಾರ್ಯಾಚರಣೆಎರಡನೇ ಹಂತದಲ್ಲಿ ಮಾಲ್ಡವೀಸ್ ಗೆ ವಾಪಸ್ಸಾದ ಐಎನ್ಎಸ್ ಜಲಶ್ವಾ

ಭಾರತೀಯ ನೌಕಾಪಡೆಯ ಜಲಶ್ವಾ ಹಡಗು ಸಮುದ್ರಸೇತು ಕಾರ್ಯಾಚರಣೆಯ ಎರಡನೇ ಭಾಗದ ಆರಂಭದಲ್ಲಿ ಮಾಲ್ಡವೀಸ್ ಮಾಲೆಗೆ ವಾಪಸ್ಸಾಗಿದೆ. ಅದು ಸಮುದ್ರ ಮಾರ್ಗದ ಮೂಲಕ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುತ್ತಿದೆ. ಹಡಗು 2020ರ ಮೇ 15ರಂದು ಮುಂಜಾನೆ ಮಾಲೆ ಬಂದರು ಪ್ರವೇಶಿಸಲಿದೆ ಮತ್ತು ಮಾಲ್ಡವೀಸ್ ಭಾರತೀಯ ರಾಯಭಾರ ಕಚೇರಿಯಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡಿರುವ ಭಾರತೀಯ ಪ್ರಜೆಗಳನ್ನು ಅದು ಕರೆತರಲಿದೆ. ಎರಡನೇ ಬಾರಿಗೆ  ಐಎನ್ಎಸ್ ಜಲಶ್ವಾ 700 ಭಾರತೀಯ ಪ್ರಜೆಗಳನ್ನು ಹೊತ್ತು, ಮೇ 15ರಂದು ರಾತ್ರಿ ಕೊಚ್ಚಿಯತ್ತ ಪ್ರಯಾಣ ಬೆಳೆಸಲಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1623776

ಸ್ಥಳೀಯ ಉತ್ಪಾದನೆಗೆ ಕೈಜೋಡಿಸಲು ಮುಂದಾದ ಕೆವಿಐಸಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, “ವೋಕಲ್ ಫಾರ್ ಲೋಕಲ್” ಸ್ಥಳೀಯ ಉತ್ಪನ್ನಗಳಿಗೆ ದನಿಯಾಗಿ ಮತ್ತು ಸ್ಥಳೀಯ ಉತ್ಪನ್ನಗಳ ಉತ್ತೇಜನವನ್ನು ಜಾಗತಿಕರಣಗೊಳಿಸಬೇಕೆಂಬ ಕರೆಗೆ ಸ್ಪಂದಿಸಿರುವ ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಆಯೋಗ(ಕೆವಿಐಸಿ) ಸ್ಥಳೀಯ ಉತ್ಪನ್ನಗಳ ಉತ್ಪಾದನೆಗೆ ಬೆಂಬಲಿಸಲು ಮುಂದಾಗಿದೆ. ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ಕೆವಿಐಸಿ  ಕನಿಷ್ಠ ಒಂದು ಘಟಕದಲ್ಲಿ ಎನ್-95 ಮಾಸ್ಕ್, ವೆಂಟಿಲೇಟರ್ ಅಥವಾ ಅದರ ಬಿಡಿ ಭಾಗಗಳು, ವೈದ್ಯಕೀಯ ಸಿಬ್ಬಂದಿ ಬಳಸುವ ಪಿಪಿಇ ಕಿಟ್ ಗಳು, ಸ್ಯಾನಿಟೈಸರ್/ದ್ರವರೂಪದ ಹ್ಯಾಂಡ್ ವಾಶ್, ಥರ್ಮಲ್ ಸ್ಕ್ಯಾನರ್ ಮತ್ತು ಅಗರಬತ್ತಿ ಹಾಗೂ ಸೋಪುಗಳನ್ನು ಅಭಿವೃದ್ಧಿಪಡಿಸಲು ಪ್ರತಿಯೊಂದು ಜಿಲ್ಲೆಯಲ್ಲೂ ಒಂದೊಂದು ಘಟಕವನ್ನು ಸ್ಥಾಪಿಸಲು ನಿರ್ಧರಿಸಿದೆ. ದೇಶದಲ್ಲಿ ಕೋವಿಡ್-19 ಸ್ಥಿತಿ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು.

ವಿವರಗಳಿಗೆ :  https://pib.gov.in/PressReleseDetail.aspx?PRID=1623704

ಕೋವಿಡ್-19 ಸಮಯದಲ್ಲಿ ವೃದ್ಧರು, ದಿವ್ಯಾಂಗರು ಎದುರಿಸುವ ಸವಾಲುಗಳನ್ನು ಹತ್ತಿಕ್ಕಲು ಡಿಎಸ್ ಟಿಯಿಂದ ಸಹಾಯಕ ಉಪಕರಣ ತಂತ್ರಜ್ಞಾನ ಮತ್ತು ತಾಂತ್ರಿಕತೆ ಬೆಂಬಲ

ವಿವರಗಳಿಗೆ :  https://pib.gov.in/PressReleseDetail.aspx?PRID=1623600

 

ಪಿಐಬಿ ಪ್ರಾದೇಶಿಕ ಕಚೇರಿಗಳ ಮಾಹಿತಿ

  • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ ಅತ್ಯಧಿಕ 1,495 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, 54 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 25,922 ಹಾಗೂ ಸಾವುಗಳ ಸಂಖ್ಯೆ 975ಕ್ಕೆ ಏರಿಕೆಯಾಗಿದೆ. ಮುಂಬೈನ ಧಾರಾವಿಯಲ್ಲಿ ನಿನ್ನೆ 66 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದೆ. ಇಡೀ ಪ್ರದೇಶದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,028ಕ್ಕೆ ಏರಿಕೆಯಾಗಿದೆ. ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ, ರಾಜ್ಯದಲ್ಲಿ 65000 ಕೈಗಾರಿಕೆಗಳ ಪುನರಾರಂಭಕ್ಕೆ ಅನುಮತಿ ನೀಡಲಾಗಿದೆ. ಪೈಕಿ 35,000 ಕೈಗಾರಿಕೆಗಳು ಈಗಾಗಲೇ ಉತ್ಪಾದನಾ ಚಟುವಟಿಕೆ ಆರಂಭಿಸಿವೆ. ಸುಮಾರು 9 ಲಕ್ಷ ನೌಕರರು ಉದ್ಯೋಗಕ್ಕೆ ಮರಳಿದ್ದಾರೆ ಎಂದು ಹೇಳಿದ್ದಾರೆ. ಮಧ್ಯೆ, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳು ಸುಮಾರು  73,000 ಸಾವಿರ ವಲಸೆ ಕಾರ್ಮಿಕರನ್ನು ಕಳೆದ ಐದು ದಿನಗಳಲ್ಲಿ ಅವರವರ ರಾಜ್ಯಗಳ ಗಡಿ ಭಾಗದವರೆಗೆ ತಲುಪಿಸಿದೆ. ಶ್ರಮಿಕ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಪಡೆದು, ಸುಮಾರು 42,000 ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ಮರಳಿದ್ದಾರೆ.
  • ಗುಜರಾತ್: ಗುಜರಾತ್ ನಲ್ಲಿ ಹೊಸದಾಗಿ 364 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಕೋವಿಡ್ ರೋಗಿಗಳ ಸಂಖ್ಯೆ 9,267ಕ್ಕೆ ಏರಿಕೆಯಾಗಿದೆ. ಅಹಮದಾಬಾದ್ ಒಂದರಲ್ಲೇ ನಿನ್ನೆ 292 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಗುಜರಾತ್ ಸರ್ಕಾರ ಲಾಕ್ ಡೌನ್ ನಂತರ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಕ್ರಮಗಳನ್ನು ಶಿಫಾರಸ್ಸು ಮಾಡಲು ತಜ್ಞರ ಸಮಿತಿಯನ್ನು ರಚಿಸಿದೆ. ಸಮಿತಿಗೆ ಎರಡು ವಾರಗಳಲ್ಲಿ ಮಧ್ಯಂತರ ವರದಿ ಮತ್ತು ಒಂದು ತಿಂಗಳಲ್ಲಿ ಅಂತಿಮ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಸಿಎಂಒ ಕಾರ್ಯದರ್ಶಿ ಅಶ್ವಿನಿ ಕುಮಾರ್, ಸಮಿತಿ ಕೋವಿಡ್-19ನಿಂದಾಗಿ ರಾಜ್ಯದ ಪ್ರತಿಯೊಂದು ವಲಯದ ಮೇಲೆ ಆಗಿರುವ ಆಗಿರುವ ಆರ್ಥಿಕ ನಷ್ಟದ ಪ್ರಮಾಣವನ್ನು ಅಂದಾಜಿಸಲಿದೆ ಮತ್ತು ವಲಯವಾರು ಶಿಫಾರಸ್ಸುಗಳನ್ನುನೀಡಲಿದೆ ಎಂದು ಹೇಳಿದ್ದಾರೆ.
  • ರಾಜಸ್ಥಾನ: ಹೊಸದಾಗಿ 66 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ರಾಜಸ್ಥಾನದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 4394ಕ್ಕೆ ಏರಿದೆ. ಈವರೆಗೆ 2575 ರೋಗಿಗಳು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ 122 ಮಂದಿ ಸಾವನ್ನಪ್ಪಿದ್ದಾರೆ. 28 ಮಹಿಳೆಯರು ಸೋಂಕಿನಿಂದ ಗುಣಮುಖರಾಗಿ ತಮ್ಮ ಮಕ್ಕಳೊಂದಿಗೆ ಮನೆಗೆ ಮರಳಿದ್ದಾರೆ. ರಾಜಸ್ಥಾನ ಸರ್ಕಾರ ಆರು ಪ್ರಮುಖ ವಲಯಗಳಲ್ಲಿ ವಾಣಿಜ್ಯ ಸಂಸ್ಥೆಗಳು ಹಾಗೂ ಮಳಿಗೆಗಳ ಆರಂಭಕ್ಕೆ ಅನುಮತಿ ನೀಡಿದೆ. ವಲಯಗಳೆಂದರೆ ಆಹಾರ ತಿನಿಸುಗಳು, ಸಿಹಿ ಖಾದ್ಯ ಅಂಗಡಿಗಳು, ಹೆದ್ದಾರಿ ಪಕ್ಕದ ಡಾಭಾಗಳು, ಹಾರ್ಡ್ ವೇರ್ ಶಾಪ್ ಗಳು, ಕಟ್ಟಡ ಸಾಮಗ್ರಿ, ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಆಟೋಮೊಬೈಲ್ ಅಂಗಡಿಗಳು. ಆಹಾರ ತಿನಿಸು ಮಳಿಗೆಗಳು ಮತ್ತು ಸಹಿ ಖಾದ್ಯದ ಅಂಗಡಿಗಳು ಕೇವಲ ಪಾರ್ಸಲ್ ಮಾತ್ರ ನೀಡಲು ಅವಕಾಶ ಕಲ್ಪಿಸಲಾಗಿದೆ.
  • ಮಧ್ಯಪ್ರದೇಶ: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 187 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,173ಕ್ಕೆ ಏರಿದೆ. ಒಳ್ಳೆಯ ಸೂಚನೆ ಎಂದರೆ ರಾಜಧಾನಿ ಭೂಪಾಲ್ ನಲ್ಲಿ 884 ಸೋಂಕಿತರ ಪೈಕಿ 531 ಮಂದಿ ಗುಣಮುಖರಾಗಿರುವುದು. ಇದು ದಾಖಲೆಯ ಶೇ.60ರಷ್ಟು ಪ್ರಮಾಣವಾಗಿದೆ. ಅದೇ ರೀತಿ ಇಂದೋರ್ ನಲ್ಲಿ ಶೇ.45ರಷ್ಟು, ಉಜ್ಜಯನಿಯಲ್ಲಿ ಶೇ. 48ರಷ್ಟು, ಖಾರಗಾಂವ್ ನಲ್ಲಿ ಶೇ.57, ಧಾರ್ ನಲ್ಲಿ ಶೇ.46, ಖಾಂಡ್ವಾದಲ್ಲಿ ಶೇ.48ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ. ಇದು ರಾಷ್ಟ್ರೀಯ ಸರಾಸರಿಗಿಂತ ಅಧಿಕ.
  • ಗೋವಾ: ಗೋವಾದಲ್ಲಿ ರಾತ್ರೋರಾತ್ರಿ ಕೋವಿಡ್-19 ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿ 7 ಪಾಸಿಟಿವ್ ಪ್ರಕರಣಗಳಿದ್ದಿದ್ದು, 14ಕ್ಕೆ ಏರಿಕೆಯಾಗಿದೆ. ಎಲ್ಲ ಸೋಂಕಿತರು ಲಾಕ್ ಡೌನ್ ನಿಯಮಾವಳಿ ಸಡಿಲಿಕೆ ನಂತರ ರಾಜ್ಯಕ್ಕೆ ಬಂದವರಾಗಿದ್ದಾರೆ. 7 ರೋಗಿಗಳಿಗೆ ದಕ್ಷಿಣ ಗೋವಾದ ಕೋವಿಡ್-19 ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ.
  • ಅರುಣಾಚಲ ಪ್ರದೇಶ: ಮುಖ್ಯ ಕಾರ್ಯದರ್ಶಿ ರಾಜ್ಯಾದ್ಯಂತ ಇರುವ ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ಜನರು ಸಹಕರಿಸಬೇಕು ಎಂದು ಕರೆ ನೀಡಿದ್ದಾರೆ. ಲಾಕ್ ಡೌನ್ ನಿಯಮ ಸಡಿಲಿಕೆ ನಡುವೆಯೇ ಎಲ್ಲ ಅಗತ್ಯ ಮುಂಜಾಗ್ರತಾ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
  • ಅಸ್ಸಾಂ: ಅಸ್ಸಾಂನಲ್ಲಿ ಮುಂಬೈನಿಂದ ಆಗಮಿಸಿದ್ದ 7 ರೋಗಿಗಳು ಹಾಗೂ ಅವರನ್ನು ನೋಡಿಕೊಳ್ಳುತ್ತಿದ್ದವರನ್ನು ಕ್ವಾರಂಟೈನ್ ನಲ್ಲಿಡಲಾಗಿದ್ದು, ಅವರುಗಳಲ್ಲಿ ಸೋಂಕು ದೃಢಪಟ್ಟಿದೆ. ಪಾಸಿಟಿವ್ ಪ್ರಕರಣಗಳು 86, ಗುಣಮುಖರಾದವರು 39, ಕ್ರಿಯಾಶೀಲ 44 ಮತ್ತು ಇಬ್ಬರ ಸಾವು ಎಂದು ರಾಜ್ಯ ಆರೋಗ್ಯ ಸಚಿವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
  • ಮಣಿಪುರ: ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತರಿಗೆ ಮಣಿಪುರದಲ್ಲಿ ಪ್ರತಿ ತಿಂಗಳು ನೀಡುತ್ತಿದ್ದ ಗೌರವ ಧನವನ್ನು 3,000 ರೂ.ಗಳಿಂದ 4,500ರೂ.ಗೆ 2,250 ರೂ.ನಿಂದ 3,500ರೂ.ಗಳಿಗೆ ಮತ್ತು1,500 ರೂ.ನಿಂದ 2,250 ರೂ.ಗಳಿಗೆ ಕ್ರಮೇಣವಾಗಿ ಹೆಚ್ಚಿಸಲಾಗಿದೆ.
  • ಮೇಘಾಲಯ: ಮೇಘಾಲಯ ವಿಧಾನಸಭಾ ಸ್ಪೀಕರ್ ಮೆಟ್ ಬ್ಹ ಲಿಂಗಡೋ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಸರ್ಕಾರ ಮತ್ತು ಪ್ರತಿಪಕ್ಷಗಳು ಕೋವಿಡ್-19ಅನ್ನು ಪರಿಣಾಮಕಾರಿಯಾಗಿ ಎದುರಿಸಲು ದೃಢ ಸಂಕಲ್ಪ ಮಾಡಿವೆ.
  • ಮಿಝೋರಾಂ: ಲಾಕ್ ಡೌನ್ ಸಾಂಕ್ರಾಮಿಕದ ಮಧ್ಯೆಯೇ ರಾಜ್ಯದ ಯೋಜನೆ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಎಲ್ಲ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ಚರ್ಚ್ ಗಳು, ರಾಜಕೀಯ ಪಕ್ಷಗಳು, ಗ್ರಾಮ ಮತ್ತು ಸ್ಥಳೀಯ ಸಂಸ್ಥೆಗಳು ಹಾಗೂ ಸ್ಥಳೀಯ ಗ್ರಾಮ ಮಟ್ಟದ ಕಾರ್ಯಪಡೆಗಳ ಸಮಾಲೋಚನಾ ಸಭೆ ಕರೆದಿದ್ದಾರೆ.
  • ನಾಗಾಲ್ಯಾಂಡ್: ನಾಗಾಲ್ಯಾಂಡ್ ನಲ್ಲಿ  ಸ್ಥಳೀಯವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಜನರ ಎರಡನೇ ಹಂತದ ಸಂಚಾರ ಪೂರ್ಣಗೊಂಡಿದೆ. 64 ವಲಸೆ ಕಾರ್ಮಿಕರನ್ನು ನಾಲ್ಕು ಪರಿಹಾರ ಶಿಬಿರಗಳಲ್ಲಿ ಇಡಲಾಗಿದೆ. ಸುಮಾರು 720 ದಿನಗೂಲಿ ನೌಕರರು ಮತ್ತು ಬಡಜನರಿಗೆ ಆಹಾರ ವಿತರಿಸಲಾಗುತ್ತಿದೆ.
  • ಸಿಕ್ಕಿಂ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಎಲ್ಲ ಆರೋಗ್ಯ ಸೌಕರ್ಯಗಳು, ಕೋವಿಡ್-19 ರೋಗಿಗಳ ಕ್ವಾರಂಟೈನ್ ಮತ್ತು ಚಿಕಿತ್ಸೆ ವೇಳೆ ಹಾಗೂ ತ್ಯಾಜ್ಯ ವಿಲೇವಾರಿ ರೋಗಿಗಳ ಚಿಕಿತ್ಸೆ ನಿರ್ವಹಣೆ ವೇಳೆ ಕಟ್ಟುನಿಟ್ಟಾಗಿ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದೆ.
  • ಚಂಡಿಗಢ: ಲಾಕ್ ಡೌನ್ ನಿಂದಾಗಿ ಕೆಲವು ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು, ಪ್ರವಾಸಿಗರು ಮತ್ತು ಇತರೆ ಜನರು ಚಂಡಿಗಢದಲ್ಲಿ ಸಿಲುಕಿಕೊಂಡಿದ್ದಾರೆ. ವ್ಯಕ್ತಿಗಳ ಸುಗಮ ಸಂಚಾರಕ್ಕಾಗಿ ಚಂಡಿಗಢ ಆಡಳಿತ ವ್ಯಾಪಕ ಏರ್ಪಾಡುಗಳನ್ನು ಮಾಡಿಕೊಂಡಿದೆ. ಅವರಿಗೆ ಸುರಕ್ಷಿತ ಹಾಗೂ ಆರಾಮದಾಯಕ ವ್ಯವಸ್ಥೆ ಖಾತ್ರಿಪಡಿಸಲಿದೆ. ಐಎಸ್ ಬಿಟಿ-43ಯಲ್ಲಿ ಎರಡು ವಲಸೆ ಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರಗಳಲ್ಲಿ ವ್ಯಕ್ತಿಗಳನ್ನು ವೈದ್ಯಕೀಯವಾಗಿ ಪರೀಕ್ಷೆಗೊಳಪಡಿಸಲಾಗುವುದು ಮತ್ತು ಅವರು ಪ್ರಯಾಣದುದ್ದಕ್ಕೂ ವೈದ್ಯಕೀಯ ಪ್ರಮಾಣ ಪತ್ರವನ್ನು ಕೊಂಡೊಯ್ಯುವ ಅಗತ್ಯವಿದೆ. ಕೇಂದ್ರಗಳಲ್ಲಿ ಊಟದ ಪ್ಯಾಕೇಟ್ ಒದಗಿಸಲಾಗುತ್ತಿದೆ. ರೈಲು ನಿಲ್ದಾಣಗಳಲ್ಲಿ ಅವರಿಗೆ ಪ್ಯಾಕ್ ಮಾಡಿದ ಆಹಾರ, ನೀರಿನ ಬಾಟಲ್ ಅನ್ನು ಅವರು ನಿಗದಿತ ಬೋಗಿಗಳನ್ನು ಹತ್ತುವುದಕ್ಕಿಂತ ಮುಂಚೆ ನೀಡಲಾಗುತ್ತಿದೆ.
  • ಪಂಜಾಬ್:  ಪಂಜಾಬ್ ಸರ್ಕಾರ ವಲಸಿಗರು ತಮ್ಮ ಸ್ವಂತ ರಾಜ್ಯಗಳಿಗೆ ತೆರಳಲು ನೆರವು ನೀಡುತ್ತಿದೆ. ಈವರೆಗೆ ಪಂಜಾಬ್ ನಿಂದ 90 ರೈಲುಗಳಲ್ಲಿ ಸುಮಾರು 1,10,000 ವಲಸಿಗರು ತಮ್ಮ ರಾಜ್ಯಗಳಿಗೆ ಮರಳಿದ್ದಾರೆ. ರಾಜ್ಯ ಸರ್ಕಾರ ಈವರೆಗೆ ವಲಸಿಗರ ಸಂಚಾರಕ್ಕೆ ಸುಮಾರು 6 ಕೋಟಿ ರೂ. ವ್ಯಯ ಮಾಡಿದೆ. ಆಹಾರ ಮಳಿಗೆಗಳು ವಿಶೇಷವಾಗಿ ಹಲ್ವಾಯ್ ಶಾಪ್ ಗಳು ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ 50 ದಿನಗಳಿಂದ ಬಂದ್ ಆಗಿವೆ. ಅವುಗಳಲ್ಲಿದ್ದ ಆಹಾರಧಾನ್ಯಗಳು ಹಳೆಯದಾಗಿವೆ ಮತ್ತು ಹಾಳಾಗಿದೆ. ಪ್ಯಾಕ್ ಮಾಡಲಾದ ಆಹಾರದ ಬಳಕೆಯ ಅವಧಿ ಕೂಡ ಮೀರಿದ್ದು, ಅವುಗಳನ್ನು ನಾಶಗೊಳಿಸಲು ಆದೇಶಿಸಲಾಗಿದೆ.
  • ಹರಿಯಾಣ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಎಂಎಸ್ಎಂಇ ವಲಯಕ್ಕೆ 3 ಲಕ್ಷ ಕೋಟಿ ರೂ. ಖಾತ್ರಿರಹಿತ ಸಾಲವನ್ನು ಪ್ರಕಟಿಸಿದ ನಂತರ ರಾಜ್ಯದಲ್ಲಿನ ಸುಮಾರು 50 ಸಾವಿರ ಎಂಎಸ್ಎಂಇ ಘಟಕಗಳಿಗೆ ಸುಮಾರು 3000 ಕೋಟಿ ರೂ.ಗಳಷ್ಟು ಪ್ರಯೋಜನವಾಗಲಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಹೇಳಿದ್ದಾರೆ. ಅಂತೆಯೇ ನಿರ್ಮಲಾ ಸೀತಾರಾಮನ್ ಅವರು, ಒತ್ತಡದಲ್ಲಿರುವ ಎಂಎಸ್ಎಂಇಗಳಿಗೆ 20,000 ಕೋಟಿ ರೂ. ಅಧೀನ ಸಾಲ ಪ್ರಕಟಿಸಿರುವುದರಿಂದ ಹರಿಯಾಣದ ಸುಮಾರು 3,000 ಘಟಕಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಹರಿಯಾಣ ಸರ್ಕಾರ ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗಲು ಆಯ್ದ ಮಾರ್ಗಗಳಲ್ಲಿ ವಿಶೇಷ ಬಸ್ ಸೇವೆ ಆರಂಭಿಸಲು ನಿರ್ಧರಿಸಿದೆ. ಬಸ್ ಗಳು ಹರಿಯಾಣದಲ್ಲಿ ಮಾತ್ರ ಸಂಚರಿಸಲಿವೆ. ಕೋವಿಡ್-19ನಿಂದಾಗಿ ತೀವ್ರ ಬಾಧಿತವಾಗಿರುವ ಪ್ರದೇಶಗಳಲ್ಲಿ ವಿಶೇಷ ಬಸ್ ಗಳ ಸೇವೆ ಇರುವುದಿಲ್ಲ.
  • ಹಿಮಾಚಲ ಪ್ರದೇಶ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರಾಷ್ಟ್ರಕ್ಕೆ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಪ್ರಕಟಿಸಿರುವುದನ್ನು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಶ್ಲಾಘಿಸಿದ್ದಾರೆ. ಅವರು ನಾನಾ ಸಂಸ್ಥೆಗಳ ಮೂಲಕ ಭಾರತದಲ್ಲಿಯೇ ಉತ್ಪಾದಿಸಲಾದ ವಸ್ತುಗಳನ್ನು ಮಾರಾಟ ಮಾಡಲು ನಿರ್ಧರಿಸಿರುವುದರಿಂದ ರಾಜ್ಯಗಳ ಆರ್ಥಿಕತೆಯಲ್ಲಿ ಸ್ವಾವಲಂಬನೆಯಾಗಲಿದೆ ಎಂದು ಹೇಳಿದರು. ಇದು ರಾಜ್ಯಗಳು ಮತ್ತು ದೇಶದಲ್ಲಿ ಉತ್ಪಾದನೆ ಉತ್ತೇಜನಕ್ಕೆ ಅವಕಾಶ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.
  • ಕೇರಳ: ಕೋವಿಡ್-19 ಸೋಂಕಿತ ವ್ಯಕ್ತಿಯ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೂವರು ಸಂಸದರು ಮತ್ತು ಇಬ್ಬರು ಶಾಸಕರಿಗೆ 14 ದಿನ ಕ್ವಾರಂಟೈನ್ ಗೆ ಒಳಗಾಗಲು ಸೂಚಿಸಲಾಗಿದೆ. ಕೇರಳದವರಿಗೆ ಪ್ರವೇಶ ನಿರಾಕರಿಸಿದ್ದಕ್ಕಾಗಿ ವಲಯಾರ್ ಗಡಿ ತಪಾಸಣಾ ಕೇಂದ್ರದ ಬಳಿ ಅವರು ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸ್ ಅಧಿಕಾರಿಗಳು, ಆರ್ ಡಿ , ಪತ್ರಕರ್ತರು ಸೇರಿ ಸುಮಾರು 400 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ವೈನಾಡ್ ಮಾನಂತವಾಡಿ ಪೊಲೀಸ್ ಠಾಣೆಯ ಮೂವರು ಪೊಲೀಸ್ ಅಧಿಕಾರಿಗಳಲ್ಲಿ ಕೋವಿಡ್-19 ಸೋಂಕು ಖಚಿತವಾಗಿದ ಹಿನ್ನೆಲೆಯಲ್ಲಿ ಠಾಣೆಯ ಎಲ್ಲ ಪೊಲೀಸ್ ಅಧಿಕಾರಿಗಳನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ನಿನ್ನೆ 10 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಕುವೈತ್ ನಲ್ಲಿ ಕೋವಿಡ್-19ಗೆ ಓರ್ವ ಮಲಯಾಳಿ ನರ್ಸ್ ಬಲಿಯಾಗಿದ್ದಾರೆ. ವಿದೇಶಗಳಲ್ಲಿ ಕೋವಿಡ್ ಗೆ 120 ಕೇರಳದವರು ಬಲಿಯಾಗಿದ್ದಾರೆ.
  • ತಮಿಳುನಾಡು: 10ನೇ ತರಗತಿ ಮಂಡಳಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಒದಗಿಸುವ ಬಗ್ಗೆ ಸರ್ಕಾರಮೇ 19ರಂದು ಹೇಳಿಕೆ ನೀಡಲಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ಕೇರ್ ಕೇಂದ್ರಗಳಿಗೆ ಆಯ್ದ 30 ಹಾಸಿಗೆಗಳ ಪಿಎಚ್ ಸಿಗಳನ್ನು ನಿಯೋಜಿಸಲಾಗಿದೆ. ತಮಿಳುನಾಡಿನಲ್ಲಿ ನಿನ್ನೆ 509 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟು ಸಂಖ್ಯೆ 9 ಸಾವಿರದ ಗಡಿ ದಾಟಿದೆ. ಈವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ: 6984, ಸಾವು: 64, ಗುಣಮುಖರಾದವರು: 2176. ಚೆನ್ನೈನಲ್ಲಿ ಕ್ರಿಯಾಶೀಲ ಪ್ರಕರಣಗಳು 5262.
  • ಕರ್ನಾಟಕ : ಇಂದು ಮಧ್ಯಾಹ್ನ 12 ಗಂಟೆವರೆಗೆ 22 ಹೊಸ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 5, ಬೀದರ್, ಮಂಡ್ಯ, ಗದಗದಲ್ಲಿ ತಲಾ 4, ದಾವಣಗೆರೆಯಲ್ಲಿ 3, ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ತಲಾ 1. ಇಂದು ಕೋವಿಡ್ ಗೆ ಇಬ್ಬರು ಬಲಿಯಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ 80 ವರ್ಷದ ಮಹಿಳೆ ಮತ್ತು ಬೆಂಗಳೂರಿನಲ್ಲಿ 60 ವರ್ಷದ ಪುರುಷ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳು ಈವರೆಗೆ 981, ಸಾವನ್ನಪ್ಪಿದವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ ಮತ್ತು ಈವರೆಗೆ 456 ಮಂದಿ ಗುಣಮುಖರಾಗಿದ್ದಾರೆ.
  • ಆಂಧ್ರಪ್ರದೇಶ: ರಾಜ್ಯದಲ್ಲಿ ಲಾಕ್ ಡೌನ್ ನಿಯಮಾವಳಿಗಳನ್ನು ಮತ್ತಷ್ಟು ಸಡಿಲಗೊಳಿಸಲಾಗಿದ್ದು, ದಿನಸಿ ಪದಾರ್ಥಗಳ ಮಳಿಗೆಗಳ ಅವಧಿ ವಿಸ್ತರಿಸಲಾಗಿದೆ. ನಿರ್ಬಂಧಿತ ಮತ್ತು ಬಫರ್ ವಲಯ ಹೊರತುಪಡಿಸಿ, ಉಳಿದೆಡೆ ಬೆಳಗ್ಗೆ 10 ರಿಂದ ಸಂಜೆ 5 ವರೆಗೆ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರ ಹೈದ್ರಾಬಾದ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಆರ್ ಟಿಸಿ ವಿಶೇಷ ಬಸ್ ಗಳ ಮೂಲಕ ಕರೆತರಲು ಚಿಂತನೆ ನಡೆಸಿದೆ. 36 ಹೊಸ ಪ್ರಕರಣಗಳು ವರದಿಯಾಗಿವೆ.(ಮಹಾರಾಷ್ಟ್ರ, ಒಡಿಶಾ ಮತ್ತು ಬಂಗಾಳದಿಂದ ವಲಸೆ ಬಂದೆ 32 ಮಂದಿಯನ್ನು ಹೊರತುಪಡಿಸಿ) ಕಳೆದ 24 ಗಂಟೆಗಳಲ್ಲಿ 9256 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, 50 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಸಾವನ್ನಪ್ಪಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 2100ಕ್ಕೆ ಏರಿಕೆಯಾಗಿದೆ. ಕ್ರಿಯಾಶೀಲ ಪ್ರಕರಣಗಳು: 860, ಗುಣಮುಖರಾದವರು: 1192, ಸಾವು: 48. ಪಾಸಿಟಿವ್ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳು: ಕರ್ನೂಲು(591), ಗುಂಟೂರು(404) ಮತ್ತು ಕೃಷ್ಣ(351).
  • ತೆಲಂಗಾಣ: ಅಮೆರಿಕ ಮತ್ತು ಪಿಲಿಪೈನ್ಸ್ ನಿಂದ 312 ಭಾರತೀಯ ಪ್ರಜೆಗಳನ್ನು ಹೊತ್ತ ಎರಡು ವಿಮಾನಗಳು ಇಂದು ಹೈದ್ರಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದವು. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ ನಿನ್ನೆವರೆಗೆ 1367 ಇತ್ತು. ಗುಣಮುಖರಾದವರು 939, ಕ್ರಿಯಾಶೀಲ ಪ್ರಕರಣಗಳು 394, ಸಾವು 34.

ಪಿ ಐ ಬಿ ವಾಸ್ತವ ಪರೀಶೀಲನೆ

***

 



(Release ID: 1623965) Visitor Counter : 278