ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಡಾ. ಹರ್ಷ ವರ್ಧನ್ ಅವರಿಂದ ಕೋಬಾಸ್ 6800 (COBAS 6800) ಪರೀಕ್ಷಾ ಯಂತ್ರ ರಾಷ್ಟ್ರಕ್ಕೆ ಅರ್ಪಣೆ

Posted On: 14 MAY 2020 3:53PM by PIB Bengaluru

ಡಾ. ಹರ್ಷ ವರ್ಧನ್ ಅವರಿಂದ ಕೋಬಾಸ್ 6800 (COBAS 6800) ಪರೀಕ್ಷಾ ಯಂತ್ರ ರಾಷ್ಟ್ರಕ್ಕೆ ಅರ್ಪಣೆ

500 ಕ್ಕೂ ಹೆಚ್ಚು ಪ್ರಯೋಗಾಲಯಗಳ ಮೂಲಕ ಕೋವಿಡ್-19ಕ್ಕಾಗಿ ಸುಮಾರು 20 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ: ಡಾ. ಹರ್ಷವರ್ಧನ್

ಕಳೆದ ಮೂರು ದಿನಗಳ ಸಮಯದಲ್ಲಿ ದ್ವಿಗುಣಗೊಳ್ಳುವ ಅವಧಿ ಸುಮಾರು 14 ದಿನಗಳಷ್ಟು ನಿಧಾನವಾಗಿದೆ

 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ರವರು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ (ಎನ್ಸಿಡಿಸಿ) ಭೇಟಿ ನೀಡಿ ಕೋಬಾಸ್ 6800 ಪರೀಕ್ಷಾ ಯಂತ್ರವನ್ನು ರಾಷ್ಟ್ರಕ್ಕೆ ಅರ್ಪಿಸಿದರು. ಕೋವಿಡ್-19 ಪ್ರಕರಣಗಳ ಪರೀಕ್ಷೆಗಾಗಿ ಸರ್ಕಾರವು ಪಡೆದ ಮೊದಲ ಪರೀಕ್ಷಾ ಯಂತ್ರ ಇದಾಗಿದ್ದು, ಇದನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ.

ಕೇಂದ್ರ ಆರೋಗ್ಯ ಸಚಿವರು ನಿಯಂತ್ರಣ ಕೊಠಡಿ ಮತ್ತು ಪರೀಕ್ಷಾ ಪ್ರಯೋಗಾಲಯಗಳಿಗೆ ಭೇಟಿ ನೀಡಿದರು ಮತ್ತು ಕೋವಿಡ್-19 ಪರೀಕ್ಷೆಯ ಪ್ರಸ್ತುತ ಸ್ಥಿತಿಯನ್ನು ಎನ್ಸಿಡಿಸಿ ನಿರ್ದೇಶಕರಾದ ಡಾ.ಎಸ್.ಕೆ.ಸಿಂಗ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು. ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿನ ಸಾಧನೆಗಳನ್ನು ಎತ್ತಿ ತೋರಿಸಿದ ಡಾ. ಹರ್ಷ್ ವರ್ಧನ್ ರವರು ನಾವು ಈಗ ದಿನಕ್ಕೆ 1,00,000 ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿದ್ದೇವೆ. 359 ಸರ್ಕಾರಿ ಪ್ರಯೋಗಾಲಯಗಳು ಮತ್ತು ದೇಶದ 145 ಖಾಸಗಿ ಪ್ರಯೋಗಾಲಯಗಳು ಸೇರಿದಂತೆ 500 ಕ್ಕೂ ಹೆಚ್ಚು ಪ್ರಯೋಗಾಲಯಗಳಲ್ಲಿ ನಾವು ಕೋವಿಡ್-19ಗಾಗಿ ಸುಮಾರು 20 ಲಕ್ಷ ಪರೀಕ್ಷೆಗಳನ್ನು ಪರೀಕ್ಷಿಸಿದ್ದರಿಂದ ಇಂದು ಒಂದು ಪ್ರಮುಖ ಮೈಲಿಗಲ್ಲಾಗಿದೆಎಂದು ಅವರು ಹೇಳಿದರು, “ಎನ್ಸಿಡಿಸಿ ಈಗ ಕೋಬಾಸ್ 6800 ಅನ್ನು ಹೊಂದಿದ್ದು, ರಾಷ್ಟ್ರದ ಸೇವೆಯಲ್ಲಿ ನೈಜ ಸಮಯದಲ್ಲಿ ಪಿಸಿಆರ್ ಪರೀಕ್ಷೆ ಕೋವಿಡ್-19 ಅನ್ನು ನಿರ್ವಹಿಸಲು ಸಂಪೂರ್ಣ ಸ್ವಯಂಚಾಲಿತ, ಉನ್ನತ ಮಟ್ಟದ ಯಂತ್ರವಾಗಿದೆ. ಕೋಬಾಸ್ 6800 24 ಗಂಟೆಗಳಲ್ಲಿ ಸುಮಾರು 1200 ಮಾದರಿಗಳ ಪರೀಕ್ಷೆಯ ಹೆಚ್ಚಿನ ಫಲಿತಾಂಶದೊಂದಿಗೆ ಗುಣಮಟ್ಟದ, ಹೆಚ್ಚಿನ ಪ್ರಮಾಣದ ಪರೀಕ್ಷೆಯನ್ನು ಒದಗಿಸುತ್ತದೆ. ಇದು ಹೆಚ್ಚಾಗಿ ಪರೀಕ್ಷಾ ಸಾಮರ್ಥ್ಯವನ್ನು ಬಾಕಿಇರುವ ಪ್ರಕರಣಗಳನ್ನು ಕಡಿತಗೊಳಿಸುವುದರಿಂದ ಹೆಚ್ಚಿಸುತ್ತದೆ.

ಅದರ ಇತರ ವೈಶಿಷ್ಟ್ಯಗಳನ್ನು ಎತ್ತಿ ತೋರಿಸುತ್ತಾ, ಡಾ. ಹರ್ಷವರ್ಧನ್ ಅವರು ರೋಬಾಟಿಕ್ಸ್ನೊಂದಿಗೆ ಶಕ್ತಗೊಂಡ ಅತ್ಯಾಧುನಿಕ ಯಂತ್ರವಾಗಿದ್ದು, ಇದು ಮಾಲಿನ್ಯದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ ಏಕೆಂದರೆ ಇದನ್ನು ಸೀಮಿತ ಮಾನವ ಹಸ್ತಕ್ಷೇಪದಿಂದ ದೂರದಿಂದಲೇ ನಿರ್ವಹಿಸಬಹುದು. ಯಂತ್ರವು ಪರೀಕ್ಷೆಗೆ ಕನಿಷ್ಠ ಬಿಎಸ್ಎಲ್ 2+ ನಿಯಂತರಣ ಮಟ್ಟವನ್ನು ಬಯಸುವುದರಿಂದ, ಅದನ್ನು ಯಾವುದೇ ಸೌಲಭ್ಯದಲ್ಲಿ ಇರಿಸಲಾಗುವುದಿಲ್ಲ. ಕೋಬಲ್ 6800 ವೈರಲ್ ಹೆಪಟೈಟಿಸ್ ಬಿ & ಸಿ, ಎಚ್ಐವಿ, ಎಂಟಿಬಿ (ರಿಫಾಂಪಿಸಿನ್ ಮತ್ತು ಐಸೋನಿಯಾಜೈಡ್ ಪ್ರತಿರೋಧ), ಪ್ಯಾಪಿಲೋಮ , ಸಿಎಮ್ವಿ, ಕ್ಲಮೈಡಿಯ, ನೈಸೆರಿಯಾ ಇತ್ಯಾದಿ ರೋಗಕಾರಕಗಳನ್ನು ಸಹ ಪತ್ತೆ ಮಾಡುತ್ತದೆ.

ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಪ್ರತಿದಿನ ನೀಡುತ್ತಿರುವ ನಿಸ್ವಾರ್ಥ ಸೇವೆಗಳಿಗೆ ತಮ್ಮ ಹೃದಯದಾಳದ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಡಾ. ಹರ್ಷವರ್ಧನ್ ರವರು, “ತಮ್ಮ ದೇಶದವರನ್ನು ಉಳಿಸಲು ಹಗಲು ರಾತ್ರಿ ತಮ್ಮ ಕರ್ತವ್ಯದಲ್ಲಿ ಎದುರಾಗುವ ಅಪಾರ ಅಪಾಯಕಾರಿ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ರೋಗಶಾಸ್ತ್ರಜ್ಞರು, ಲ್ಯಾಬ್ ತಂತ್ರಜ್ಞರು, ವಿಜ್ಞಾನಿಗಳು ಮತ್ತು ಇತರ ಸಿಬ್ಬಂದಿಗಳಾದ ನಮ್ಮ ಕೊರೊನಾ ವಾರಿಯರ್ಸಿಗೆ' ನಾನು ನಮಸ್ಕರಿಸುತ್ತೇನೆಎಂದರು. ರಾಷ್ಟ್ರವು ರೋಗಕ್ಕೆ ಅಂಟಿರುವ ಕಳಂಕವನ್ನು ದೂರವಿಡಬೇಕು ಮತ್ತು ಮುಂಚೂಣಿ ಆರೋಗ್ಯ ಪೂರೈಕೆದಾರರ ಕೊಡುಗೆಯನ್ನು ಶ್ಲಾಘಿಸಬೇಕಾಗಿದೆ ಎಂದು ಅವರು ಹೇಳಿದರು.

ಡಾ. ಹರ್ಷವರ್ಧನ್ ಅವರು ಎಲ್ಲಾ ಕಣ್ಗಾವಲು ಅಧಿಕಾರಿಗಳ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯನ್ನು ಶ್ಲಾಘಿಸಿದರು ಮತ್ತು ಹೊಸ ಚೈತನ್ಯದೊಂದಿಗೆ ಹೋರಾಟವನ್ನು ಮುಂದುವರಿಸಲು ಅವರನ್ನು ಪ್ರೋತ್ಸಾಹಿಸಿದರು. ಸಮುದಾಯ ಕಣ್ಗಾವಲು ಮತ್ತು ಸಂಪರ್ಕ ಪತ್ತೆಹಚ್ಚುವಿಕೆಯ ಗುಣಮಟ್ಟ ಮತ್ತು ದೃಢತೆಗೆ ಕೇಂದ್ರ ಆರೋಗ್ಯ ಸಚಿವರು ಒತ್ತು ನೀಡಿದರು. "ಮನೆಯ ಅಥವಾ ಸಂಪರ್ಕತಡೆಯ ಸೌಲಭ್ಯ ಹೊಂದಿರುವ ಎಲ್ಲಾ ಜನರು, ಕಟ್ಟುನಿಟ್ಟಿನ ಜಾಗರೂಕತೆಯನ್ನು ಕಾಪಾಡಿಕೊಳ್ಳುವುದು ಮತ್ತು ಸಾಮಾಜಿಕ ಅಂತರ ಮತ್ತು ವೈಯಕ್ತಿಕ ನೈರ್ಮಲ್ಯದ ಶಿಷ್ಟಾಚಾರಗಳನ್ನು ಪಾಲಿಸುವುದು ಈಗಿನ ಪರಿಸ್ಥಿತಿಯ ಅವಶ್ಯಕತೆಯಾಗಿದೆ. ವೃದ್ಧರು, ಗರ್ಭಿಣಿಯರು ಮತ್ತು ಸಣ್ಣ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆಎಂದು ಅವರು ಹೇಳಿದರು.

ಇಂದು, ಕಳೆದ ಮೂರು ದಿನಗಳ ದ್ವಿಗುಣಗೊಳಿಸುವ ಸಮಯವು 13.9 ದಿನಗಳಿಗೆ ನಿಧಾನವಾಗಿದ್ದರೆ, ಕಳೆದ 14 ದಿನಗಳಲ್ಲಿ ದ್ವಿಗುಣಗೊಳಿಸುವ ಸಮಯ 11.1 ಆಗಿತ್ತು ಎಂಬುದು ಸಂತಸದ ಸುದ್ದಿ ಎಂದು ಡಾ.ಹರ್ಷವರ್ಧನ್ ಹೇಳಿದರು. ಸಾವಿನ ಪ್ರಮಾಣ 3.2% ಮತ್ತು ಚೇತರಿಕೆ ಪ್ರಮಾಣ ಮತ್ತಷ್ಟು ಸುಧಾರಿಸಿದೆ ಮತ್ತು ಇಂದು 33.6% ರಷ್ಟಿದೆ (ಇದು ನಿನ್ನೆ 32.83% ಆಗಿತ್ತು) ಎಂದು ಅವರು ಹೇಳಿದರು. ನಿನ್ನೆಯ ಹೊತ್ತಿಗೆ ಐಸಿಯುನಲ್ಲಿ 3.0% ಸಕ್ರಿಯ ಕೋವಿಡ್-19 ರೋಗಿಗಳು, ವೆಂಟಿಲೇಟರ್ಗಳಲ್ಲಿ 0.39% ಮತ್ತು ಆಮ್ಲಜನಕದ ಆಸರೆಯಲ್ಲಿ 2.7% ರೋಗಿಗಳಿದ್ದಾರೆ ಎಂದು ಅವರು ಹೇಳಿದರು. "ಇಂದು, 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಳೆದ 24 ಗಂಟೆಗಳಲ್ಲಿ ಕೋವಿಡ್-19 ಯಾವುದೇ ಪ್ರಕರಣಗಳನ್ನು ವರದಿ ಮಾಡಿಲ್ಲ. ಅಂದರೆ ಅಂದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ, ಗೋವಾ, ಛತ್ತೀಸ್ಗಢ, ಗುಜರಾತ್, ಜಾರ್ಖಂಡ್, ಮಣಿಪುರ, ಮೇಘಾಲಯ, ಮಿಜೋರಾಂ, ಪುದುಚೇರಿ, ತೆಲಂಗಾಣ. ಅಲ್ಲದೆ, ದಮನ್ ಮತ್ತು ಡಿಯು, ಸಿಕ್ಕಿಂ, ನಾಗಾಲ್ಯಾಂಡ್ ಮತ್ತು ಲಕ್ಷದ್ವೀಪಗಳು ಈವರೆಗೆ ಯಾವುದೇ ಪ್ರಕರಣಗಳನ್ನು ವರದಿ ಮಾಡಿಲ್ಲಎಂದು ಅವರು ಹೇಳಿದರು.

ಮೇ 14, 2020 ಹೊತ್ತಿಗೆ ದೇಶದಲ್ಲಿ ಒಟ್ಟು 78,003 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 26,235 ಜನರನ್ನು ಗುಣಪಡಿಸಲಾಗಿದೆ ಮತ್ತು 2,549 ಸಾವುಗಳು ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ, 3,722 ಹೊಸ ದೃಢಪಡಿಸಿದ ಪ್ರಕರಣಗಳು ವರದಿಯಾಗಿವೆ.

***


(Release ID: 1623957) Visitor Counter : 292