ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಡಾ. ಹರ್ಷವರ್ಧನ್ ಅವರಿಂದ ಪಂಜಾಬ್ ರಾಜ್ಯದ ಕೋವಿಡ್-19 ನಿರ್ವಹಣೆಯ ಸಿದ್ಧತೆ ಮತ್ತು ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆ
Posted On:
13 MAY 2020 4:34PM by PIB Bengaluru
ಡಾ. ಹರ್ಷವರ್ಧನ್ ಅವರಿಂದ ಪಂಜಾಬ್ ರಾಜ್ಯದ ಕೋವಿಡ್-19 ನಿರ್ವಹಣೆಯ ಸಿದ್ಧತೆ ಮತ್ತು ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆ
"ಎಲ್ಲಾ ರಾಜ್ಯಗಳ ಹಾಗು ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳಲ್ಲಿ ಬೆಂಬಲಿಸಲು ಕೇಂದ್ರವು ಬದ್ಧವಾಗಿದೆ"
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ ವರ್ಧನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉನ್ನತ ಮಟ್ಟದ ಸಭೆ ನಡೆಸಿದರು. ಪಂಜಾಬ್ ನ ಆರೋಗ್ಯ ಸಚಿವ ಬಲ್ ಬೀರ್ ಸಿಂಗ್ ಸಿಧು, ಜೊತೆ ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆಯವರ ಉಪಸ್ಥಿತಿಯಲ್ಲಿ ಇಂದು ಇಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಇದು ಕೋವಿಡ್-19 ನಿರ್ವಹಣೆಗೆ ತೆಗೆದುಕೊಳ್ಳುತ್ತಿರುವ ಕ್ರಮಗಳು ಮತ್ತು ಸನ್ನದ್ಧತೆಯ ಮಾಹಿತಿ ಸಂಗ್ರಹಿಸಲು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಮಂತ್ರಿಗಳು ಮತ್ತು ಕೆಂಪು ವಲಯ ಮತ್ತು ಹೆಚ್ಚಿನ ಆದ್ಯತೆಯ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗಿನ ನೇರ ಮಾತುಕತೆಯ ಸರಣಿಯ ಒಂದು ಭಾಗವಾಗಿದೆ.
ಆರಂಭದಲ್ಲಿ, ಡಾ. ಹರ್ಷ ವರ್ಧನ್ ಅವರು 13 ಮೇ 2020ರ ಹೊತ್ತಿಗೆ ದೇಶದಲ್ಲಿ ಒಟ್ಟು 74,281 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 24,386 ಜನರನ್ನು ಗುಣಪಡಿಸಲಾಗಿದೆ ಮತ್ತು 2,415 ಸಾವುಗಳು ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ, 3,525 ಹೊಸ ದೃಢಪಡಿಸಿದ ಪ್ರಕರಣಗಳು ವರದಿಯಾಗಿದೆ. ಕಳೆದ 14 ದಿನಗಳಲ್ಲಿ ದ್ವಿಗುಣಗೊಳಿಸುವ ಅವಧಿ 11 ಆಗಿದ್ದರೆ, ಕಳೆದ ಮೂರು ದಿನಗಳಲ್ಲಿ ಇದು 12.6 ಕ್ಕೆ ಸುಧಾರಿಸಿದೆ ಎಂದು ಅವರು ಗಮನಿಸಿದರು. ಸಾವಿನ ಪ್ರಮಾಣ 3.2% ಮತ್ತು ಚೇತರಿಕೆ ಪ್ರಮಾಣವನ್ನು 32.8% ಎಂದು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು. ನಿನ್ನೆಯ ಹೊತ್ತಿಗೆ ಐಸಿಯುನಲ್ಲಿ 2.75% ಸಕ್ರಿಯ ಕೋವಿಡ್ -19 ರೋಗಿಗಳು, ವೆಂಟಿಲೇಟರ್ಗಳಲ್ಲಿ 0.37% ಮತ್ತು ಆಮ್ಲಜನಕದ ಆಸರೆಯಲ್ಲಿ 1.89% ರೋಗಿಗಳಿದ್ದಾರೆ ಎಂದು ಅವರು ಹೇಳಿದರು. 352 ಸರ್ಕಾರಿ ಪ್ರಯೋಗಾಲಯಗಳು ಮತ್ತು 140 ಖಾಸಗಿ ಪ್ರಯೋಗಾಲಯಗಳ ಮೂಲಕ ದೇಶದಲ್ಲಿ ಪರೀಕ್ಷಾ ಸಾಮರ್ಥ್ಯವು ದಿನಕ್ಕೆ 1,00,000 ಪರೀಕ್ಷೆಗಳಿಗೆ ಏರಿದೆ ಎಂದು ಡಾ.ಹರ್ಷವರ್ಧನ್ ಎತ್ತಿ ತೋರಿಸಿದರು. ಒಟ್ಟಾರೆಯಾಗಿ, ಕೋವಿಡ್-19ಕ್ಕಾಗಿ ಇದುವರೆಗೆ 18,56,477 ಪರೀಕ್ಷೆಗಳನ್ನು ಮಾಡಲಾಗಿದ್ದು, ನಿನ್ನೆ 94708 ಮಾದರಿಗಳನ್ನು ಪರೀಕ್ಷಿಸಲಾಗಿದೆ. "ಇಂದು, ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಳೆದ 24 ಗಂಟೆಗಳಲ್ಲಿ ಕೋವಿಡ್-19ರ ಯಾವುದೇ ಪ್ರಕರಣಗಳನ್ನು ವರದಿ ಮಾಡಿಲ್ಲ . ಅಂದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ದಾದ್ರಾ ಮತ್ತು ನಗರ ಹವೇಲಿ, ಗೋವಾ, ಛತ್ತೀಸ್ಗಢ್, ಲಡಾಖ್, ಮಣಿಪುರ, ಮೇಘಾಲಯ, ಮಿಜೋರಾಂ. ಅಲ್ಲದೆ, ದಮನ್ ಮತ್ತು ಡಿಯು, ಸಿಕ್ಕಿಂ, ನಾಗಾಲ್ಯಾಂಡ್ ಮತ್ತು ಲಕ್ಷದ್ವೀಪಗಳು ಈವರೆಗೆ ಯಾವುದೇ ಪ್ರಕರಣಗಳನ್ನು ವರದಿ ಮಾಡಿಲ್ಲ ”ಎಂದು ಅವರು ಹೇಳಿದರು.
1,79,882 ಹಾಸಿಗೆಗಳು (ಪ್ರತ್ಯೇಕ ಹಾಸಿಗೆಗಳು- 1,60,610 ಮತ್ತು ಐಸಿಯು ಹಾಸಿಗೆಗಳು- 19,272) ಮತ್ತು 2,040 ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳು 1,29,689 ಹಾಸಿಗೆಗಳೊಂದಿಗೆ (ಪ್ರತ್ಯೇಕ ಹಾಸಿಗೆಗಳು - 1,19,340 ಮತ್ತು ಐಸಿಯು ಹಾಸಿಗೆಗಳು- 10,349) ಜೊತೆಗೆ 8,708 ಸಂಪರ್ಕತಡೆಯ ಕೇಂದ್ರಗಳು ಮತ್ತು 4,93,101 ಹಾಸಿಗೆಗಳನ್ನು ಹೊಂದಿರುವ 5,577 ಕೋವಿಡ್ ಕೇರ್ ಕೇಂದ್ರಗಳು ಈಗ ದೇಶದಲ್ಲಿ ಕೋವಿಡ್-19 ಅನ್ನು ಎದುರಿಸಲು ಲಭ್ಯವಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಂಸ್ಥೆಗಳಿಗೆ ಕೇಂದ್ರವು 78.42 ಲಕ್ಷ ಎನ್ 95 ಮುಖಗವಸುಗಳು ಮತ್ತು 42.18 ಲಕ್ಷ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಒದಗಿಸಿದೆ ಎಂದು ಅವರು ಹೇಳಿದರು.
ರಾಜ್ಯದ ಕೋವಿಡ್-19 ಪ್ರಕರಣಗಳ ಸ್ಥಿತಿ ಮತ್ತು ಅದರ ನಿರ್ವಹಣೆಯ ಕುರಿತು ನಿರ್ದೇಶಕ (ಎನ್ಸಿಡಿಸಿ) ಡಾ.ಎಸ್. ಕೆ ಸಿಂಗ್ ಸಂಕ್ಷಿಪ್ತ ಪ್ರಸ್ತುತಿಯನ್ನು ನೀಡಿದರು. ಮೇ 12, 2020 ರ ಹೊತ್ತಿಗೆ, ಎಲ್ಲಾ 22 ಜಿಲ್ಲೆಗಳು ಒಟ್ಟು 1913 ಪ್ರಕರಣಗಳೊಂದಿಗೆ ಕೋವಿಡ್-19 ನಿಂದ ಭಾದಿಸಲ್ಪಟ್ಟಿವೆ; 3 ಜಿಲ್ಲೆಗಳು (ಲೂಧಿಯಾನ, ಜಲಂಧರ್ ಮತ್ತು ಪಟಿಯಾಲ) ಕೆಂಪು ವಲಯದಲ್ಲಿವೆ ಮತ್ತು 15 ಜಿಲ್ಲೆಗಳು ಕಿತ್ತಳೆ ವಲಯದಲ್ಲಿವೆ. ಒಟ್ಟು ಸಂಗ್ರಹಿಸಿದ ಮಾದರಿಗಳು 43,999 ಆಗಿದ್ದು, ಮಾದರಿಗಳ ಸೋಂಕು ದೃಢಪಟ್ಟ ಪ್ರಮಾಣವು 4.3% ರಷ್ಟಿದೆ. ನಾಂದೇಡ್ ಹಜೂರ್ ಸಾಹಿಬ್ ನಿಂದ ಹಿಂದಿರುಗಿದವರ ಒಟ್ಟು 4,216 ಪ್ರಕರಣಗಳಲ್ಲಿ 1,225 ಜನರಿಗೆ ಸೋಂಕು ದೃಢಪಟ್ಟಿವೆ. ವಲಸೆ ಕಾರ್ಮಿಕರ ಸಂಖ್ಯೆಯು ಸುಮಾರು 20,521 ರಷ್ಟಿದ್ದು, ರಾಜ್ಯಕ್ಕೆ ಇದು ಮತ್ತೊಂದು ಸವಾಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಡಾ.ಹರ್ಷವರ್ಧನ್ ಅವರು ಶ್ರೀ ಬಲ್ ಬೀರ್ ಸಿಂಗ್ ಸಿಧು ಮತ್ತು ಲೂಧಿಯಾನ, ಅಮೃತಸರ, ಪಟಿಯಾಲ ಮತ್ತು ಜಲಂಧರ್ ಜಿಲ್ಲೆಗಳ ಜಿಲ್ಲಾ ದಂಡಾದಿಕಾರಿಗಳೊಂದಿಗೆ ಕೋವಿಡ್ -19 ನಿರ್ವಹಣೆಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಮತ್ತು ಆದ್ಯತೆಯನ್ನು ನೀಡುವ ವಿಷಯಗಳ ಬಗ್ಗೆ ಸುದೀರ್ಘ ಮಾತುಕತೆ ನಡೆಸಿದರು. ಲಾಕ್ಡೌನ್ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ; ನಿಖರವಾಗಿ ಸಂಪರ್ಕವನ್ನು ಪತ್ತೆಹಚ್ಚಿರುವುದ; ನಿಯಂತ್ರಣ ಪ್ರದೇಶಗಳಲ್ಲಿನ ಎಲ್ಲಾ ಜನರ ತಪಾಸಣೆ; ಜನರಿಗೆಲಾಕ್ ಡೌನ್ ಸಮಯದಲ್ಲಿ ಅಗತ್ಯ ಸೇವೆಗಳ ವಸ್ತುಗಳು ಮತ್ತು ಔಷಧಿಗಳನ್ನು ಮನೆಬಾಗಿಲಿಗೆ ವಿತರಿಸುವುದು; ಮತ್ತು ತೀವ್ರ ಉಸಿರಾಟದ ಸೋಂಕುಗಳ (ಎಸ್ಎಆರ್ ಐ) / ಶೀತಜ್ವರ ಮಾದರಿಯ ಅನಾರೋಗ್ಯ (ಐಎಲ್ಐ) ಕ್ಕಾಗಿ ಕಣ್ಗಾವಲನ್ನು ಬಾಧಿತವಲ್ಲದ ಜಿಲ್ಲೆಗಳಲ್ಲಿ ನಡೆಸಲಾಗಿರುವ ಬಗ್ಗೆ ಇಲ್ಲಿಯವರೆಗೆ ಕೈಗೊಂಡ ಕ್ರಮಗಳನ್ನು ಅವರು ಶ್ಲಾಘಿಸಿದರು .
ಆಯುಷ್ಮಾನ್ ಭಾರತ್ - ಆರೋಗ್ಯ ಮತ್ತು ಆರೋಗ್ಯ ಕೇಂದ್ರಗಳನ್ನು ನಿರ್ವಹಿಸುವಲ್ಲಿ ಪಂಜಾಬ್ ಉತ್ತಮ ಸಾಧನೆ ಮಾಡಿದೆ ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಮೂರು ಸಾಮಾನ್ಯ ಕ್ಯಾನ್ಸರ್ (ಬಾಯಿ, ಸ್ತನ ಮತ್ತು ಗರ್ಭ) ಹೊಂದಿರುವ ಜನರ ತಪಾಸಣೆಗೆ ಮತ್ತು ಸಮುದಾಯಕ್ಕೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ವಿಸ್ತರಿಸಲು ಇವುಗಳನ್ನು ಮತ್ತಷ್ಟು ಬಳಸಬಹುದು ಎಂದು ಡಾ.ಹರ್ಷವರ್ಧನ್ ಹೇಳಿದರು.
ತೀವ್ರ ಉಸಿರಾಟದ ಸೋಂಕುಗಳ (ಎಸ್ಎಆರ್ ಐ) / ಶೀತಜ್ವರ ಮಾದರಿಯ ಅನಾರೋಗ್ಯ (ಐಎಲ್ಐ) ಕ್ಕಾಗಿ ಕಣ್ಗಾವಲು ಹೆಚ್ಚಿಸುವುದರ ಜೊತೆಗ ರೋಗನಿರೋಧಕ ಕಾರ್ಯಕ್ರಮಗಳು, ಕ್ಷಯರೋಗ ಪ್ರಕರಣ ಪತ್ತೆ ಮತ್ತು ಚಿಕಿತ್ಸೆ, ಡಯಾಲಿಸಿಸ್ ರೋಗಿಗಳಿಗೆ ರಕ್ತ ವರ್ಗಾವಣೆ, ಕ್ಯಾನ್ಸರ್ ರೋಗಿಗಳ ಚಿಕಿತ್ಸೆ, ಗರ್ಭಿಣಿ ಮಹಿಳೆಯರ ಎಎನ್ಸಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕೋವಿಡ್ ಅಲ್ಲದ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುವುದರ ಬಗ್ಗೆ ಪ್ರತಿಕೂಲ ಪರಿಣಾಮ ಬೀರಬಾರದು ಎಂದು ರಾಜ್ಯಕ್ಕೆ ಕೋರಿದರು ಲಭ್ಯವಿರುವ ಮಾಹಿತಿಯ ಪ್ರಕಾರ ಖಾಸಗಿ ಮತ್ತು ಸಾರ್ವಜನಿಕ ಚಿಕಿತ್ಸಾಲಯಗಳಲ್ಲಿನ ಟಿಬಿ ಪ್ರಕರಣಗಳ ಅಧಿಸೂಚನೆಯಲ್ಲಿನ ಕುಸಿತವನ್ನು ಸೂಚಿಸುವಂತೆ, ರಾಜ್ಯವು ಇದಕ್ಕೂ ಆದ್ಯತೆ ನೀಡಬೇಕಾಗಿದೆ. ವೇತನ ಮತ್ತು ಕಾರ್ಯಕ್ಷಮತೆಗೆ ಸಂಬಂಧಿಸಿದ ಪ್ರೋತ್ಸಾಹಕಗಳನ್ನು ಸಕಾಲಿಕವಾಗಿ ಪಾವತಿಸುವುದು ಮುಂಚೂಣಿಯ ಆರೋಗ್ಯ ಕಾರ್ಯಕರ್ತರ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದು ಗಮನಸೆಳೆದ ಅವರು, ಇವುಗಳನ್ನು ಸಮಯಕ್ಕೆ ಬಿಡುಗಡೆ ಮಾಡಲು ರಾಜ್ಯವನ್ನು ಕೋರಲಾಯಿತು. ಉತ್ತಮ ಸಂಪರ್ಕ ಕಣ್ಗಾವಲು ಮತ್ತು ಸೂಕ್ತ ವೈದ್ಯಕೀಯ ಮಧ್ಯಸ್ಥಿಕೆಗಳಿಗಾಗಿ ಹಿಂದಿರುಗಿದ ಎಲ್ಲರಿಗೂ ಆರೋಗ್ಯ ಸೇತು ಡೌನ್ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಸಲಹೆ ನೀಡಿದರು. ಇದಲ್ಲದೆ, ರಾಜ್ಯದ ಸಹಾಯವಾಣಿ ಸಂಖ್ಯೆ 104 ರ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಅಡಿಯಲ್ಲಿ ಕಾಲ್ ಸೆಂಟರ್ ಗಳನ್ನು ಸಹ ಹೆಚ್ಚಿಸಬಹುದು. ಕೋವಿಡ್-19 ರೋಗಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ಚೇತರಿಸಿಕೊಂಡ ರೋಗಿಗಳು ಎದುರಿಸುವ ರೋಗದ ಕಳಂಕದ ಸಮಸ್ಯೆಗಳನ್ನು ಪರಿಹರಿಸಲು ದೇಶಾದ್ಯಂತದ ಕಾಲ್ ಸೆಂಟರ್ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ, ಆದ್ದರಿಂದ ಅವರ ಸೇವೆಗಳನ್ನು ಈ ಉದ್ದೇಶಕ್ಕೂ ಬಳಸಬಹುದು.
ಲಾಕ್ ಡೌನ್ ಸಮಯದಲ್ಲಿ ಸಹ ಹೊರ ರೋಗಿಗಳ ಸೇವೆಗಳನ್ನು ಮುಂದುವರೆಸಲಾಗಿದೆ ಮತ್ತು ಕೋವಿಡ್ ಅಲ್ಲದ ಆರೋಗ್ಯ ಸೇವೆಗೆ ತೊಂದರೆಯಾಗಿಲ್ಲ ಎಂದು ರಾಜ್ಯದ ಆರೋಗ್ಯ ಸಚಿವರು ಹೇಳಿದರು. ಅವರು ಮನೆ-ಮನೆಗೆ ಕಣ್ಗಾವಲು ಮೂಲಕ 6,58,000 ಜನಸಂಖ್ಯೆಯ ಸ್ಕ್ರೀನಿಂಗ್ ಮಾಡಿದ್ದಾರೆ. ಪಂಜಾಬ್ ತನ್ನದೇ ಆದ ಡ್ಯಾಶ್ಬೋರ್ಡ್ ಅನ್ನು ಅಭಿವೃದ್ಧಿಪಡಿಸಿದೆ, ಇದು ಹೀಟ್ ಮ್ಯಾಪ್ ಅನ್ನು ತಯಾರಿಸುತ್ತದೆ, ಇದು ಪರಿಣಾಮಕಾರಿಯಾದ ನಿಯಂತ್ರಣ ಕ್ರಮಗಳಿಗಾಗಿ ಮುಂದೆ ಆಗಬಹುದಾದ ಹಾಟ್ಸ್ಪಾಟ್ಗಳನ್ನು ಗುರುತಿಸಲು ಬಳಸಲಾಗುತ್ತದೆ ಎಂದು ಹೇಳಲಾಗಿದೆ. ನಂದೇಡ್ ಸಾಹಿಬ್ನಿಂದ ಹಿಂದಿರುಗಿದ ಎಲ್ಲಾ ಯಾತ್ರಿಕರನ್ನು ಪರೀಕ್ಷಿಸಿ, , ಸಮುದಾಯದೊಂದಿಗೆ ದೊಡ್ಡ ಪ್ರಮಾಣದಲ್ಲಿ ಸಂವಹನ ನಡೆಸದಂತೆ ತಡೆಯಲು ನಿರ್ಬಂಧಿಸಲಾಗಿದೆ ಎಂದು ಶ್ರೀ ಸಿಧು ಹೇಳಿದರು, ಇದರಿಂದಾಗಿ ಪ್ರಸರಣ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಇದಲ್ಲದೆ, ಡೆತ್ ಆಡಿಟ್ ಅನ್ನು ಸಹ ಕೈಗೊಳ್ಳಲಾಗಿದೆ, ಇದು ವಿವಿಧ ಕಾಯಿಲೆಯಿರುವ ರೋಗಿಗಳು ಪಂಜಾಬಿನಲ್ಲಿ ಕೋವಿಡ್-19 ಸಾವುಗಳಲ್ಲಿ ಶೇಕಡಾವಾರು ಹೆಚ್ಚಿನ ಪಾಲನ್ನು ಹೊಂದಿದ್ದಾರೆಂದು ಸೂಚಿಸಿದೆ. ಅಲ್ಲದೆ, 85% ಕ್ಕಿಂತ ಹೆಚ್ಚು ರೋಗಿಗಳು ಲಕ್ಷಣರಹಿತರಾಗಿದ್ದಾರೆ ಎಂದು ಶ್ರೀ ಅನುರಾಗ್ ಅಗ್ರವಾಲ್, ಪ್ರ. ಕಾರ್ಯದರ್ಶಿ (ಆರೋಗ್ಯ) ಹೇಳಿದ್ದಾರೆ. ಅವರ ವೈದ್ಯಕೀಯ ಮಧ್ಯಸ್ಥಿಕೆಗಳಿಗೆ ಮಾರ್ಗದರ್ಶನ ನೀಡಲು ರಾಜ್ಯದಲ್ಲಿ ಎಲ್ಲಾ ಮಾರ್ಗಸೂಚಿಗಳು, ಸಲಹೆಗಳು ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆ ಎಂದು ಅವರು ಹೇಳಿದರು.
ವಿಶೇಷ ಕರ್ತವ್ಯದ ಅಧಿಕಾರಿ ( ಒಎಸ್ಡಿ - ಎಚ್ಎಫ್ಡಬ್ಲ್ಯು), ಶ್ರೀ ರಾಜೇಶ್ ಭೂಷಣ್, ಜಂಟಿ ಕಾರ್ಯದರ್ಶಿ (ಎಂಒಹೆಚ್ಡಬ್ಲ್ಯು) ಡಾ.ಮನೋಹರ್ ಅಗ್ನಾನಿ, ಡಿಜಿಎಚ್ಎಸ್ ಡಾ.ರಾಜೀವ್ ಗರ್ಗ್, ಮತ್ತು ಕೇಂದ್ರ ಮತ್ತು ರಾಜ್ಯದ ಹಿರಿಯ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
***
(Release ID: 1623706)
Visitor Counter : 285