ಪ್ರಧಾನ ಮಂತ್ರಿಯವರ ಕಛೇರಿ

ಅಂತರರಾಷ್ಟ್ರೀಯ ದಾದಿಯರ ದಿನದಂದು ಪ್ರಧಾನಿಯವರಿಂದ ದಾದಿಯರಿಗೆ ಕೃತಜ್ಞತೆ ಸಲ್ಲಿಕೆ

Posted On: 12 MAY 2020 5:05PM by PIB Bengaluru

ಅಂತರರಾಷ್ಟ್ರೀಯ ದಾದಿಯರ ದಿನದಂದು ಪ್ರಧಾನಿಯವರಿಂದ ದಾದಿಯರಿಗೆ ಕೃತಜ್ಞತೆ ಸಲ್ಲಿಕೆ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಂತರರಾಷ್ಟ್ರೀಯ ದಾದಿಯರ ದಿನದಂದು ದಾದಿಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

"ನಮ್ಮ ಗ್ರಹವನ್ನು ಆರೋಗ್ಯವಾಗಿಡಲು ಹಗಲು ರಾತ್ರಿಯೆನ್ನದೇ ದುಡಿಯುವ ಅದ್ಭುತ ದಾದಿಯರಿಗೆ ಕೃತಜ್ಞತೆ ಸಲ್ಲಿಸುವ ಅಂತರರಾಷ್ಟ್ರೀಯ ದಾದಿಯರ ದಿನವು ಒಂದು ವಿಶೇಷ ದಿನವಾಗಿದೆ. ಪ್ರಸ್ತುತ, ಅವರು ಕೋವಿಡ್-19ನ್ನು ಸೋಲಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ದಾದಿಯರು ಮತ್ತು ಅವರ ಕುಟುಂಬಗಳಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ.

ಫ್ಲಾರೆನ್ಸ್ ನೈಟಿಂಗೇಲ್ ಅವರಿಂದ ಪ್ರೇರಿತರಾಗಿ, ನಮ್ಮ ಶ್ರಮಶೀಲ ಶುಶ್ರೂಷಾ ಸಿಬ್ಬಂದಿ ಅಪಾರ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತಾರೆ. ಇಂದು, ದಾದಿಯರ ಕಲ್ಯಾಣಕ್ಕಾಗಿ ನಿರಂತರವಾಗಿ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ ಮತ್ತು ಆರೈಕೆದಾರರ ಕೊರತೆಯಾಗದಂತೆ ನೋಡಿಕೊಳ್ಳಲು ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ.

Narendra Modi@narendramodi

 · 5h

International Day of the Nurse is a special day to express gratitude to the phenomenal nurses working round the clock to keep our planet healthy. Presently, they are doing great work towards defeating COVID-19. We are extremely grateful to the nurses and their families.

Narendra Modi@narendramodi

Inspired by Florence Nightingale, our hardworking nursing staff personify abundant compassion. Today, we also reiterate our commitment to keep working for welfare of nurses and devote greater attention to opportunities in this field so that there is no shortage of caregivers.

15.1K

2:50 PM - May 12, 2020

Twitter Ads info and privacy

2,804 people are talking about this

***



(Release ID: 1623370) Visitor Counter : 236