ರೈಲ್ವೇ ಸಚಿವಾಲಯ

ದೇಶಾದ್ಯಂತ ಮೇ 11, 2020 ರ (10:00 ಗಂಟೆ) ವರೆಗೆ ಭಾರತೀಯ ರೈಲ್ವೇ 468 “ಶ್ರಮಿಕ್ ವಿಶೇಷ” ರೈಲುಗಳ ಸಂಚಾರವನ್ನು ಕೈಗೊಂಡಿದೆ

Posted On: 11 MAY 2020 11:29AM by PIB Bengaluru

ದೇಶಾದ್ಯಂತ ಮೇ 11, 2020 ರ (10:00 ಗಂಟೆ) ವರೆಗೆ ಭಾರತೀಯ ರೈಲ್ವೇ 468 “ಶ್ರಮಿಕ್ ವಿಶೇಷ” ರೈಲುಗಳ ಸಂಚಾರವನ್ನು ಕೈಗೊಂಡಿದೆ

ಪ್ರಯಾಣಿಕರಿಗೆ ಉಚಿತ ಊಟ ಮತ್ತು ನೀರು ಒದಗಿಸಲಾಗುತ್ತಿದೆ

ಪ್ರಯಾಣಿಕರನ್ನು ಕಳುಹಿಸುವ ಮತ್ತು ಸ್ವೀಕರಿಸುವ ಎರಡೂ ರಾಜ್ಯಗಳು ಸಹಮತ ನೀಡಿದ ನಂತರ, ರೈಲ್ವೇಯಿಂದ ರೈಲು ಸಂಚಾರ

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ

ಪ್ರತಿ “ಶ್ರಮಿಕ್ ವಿಶೇಷ” ರೈಲಿನಲ್ಲಿ ಸುಮಾರು 1200 ಪ್ರಯಾಣಿಕರ ಪ್ರಯಾಣ
 

ವಿವಿಧ ಪ್ರದೇಶಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳ ಸಂಚಾರಕ್ಕೆ ಸಂಬಂಧಿಸಿದಂತೆ, ಗೃಹ ಸಚಿವಾಲಯ ನೀಡಿದ ವಿಶೇಷ ರೈಲುಗಳ ಆದೇಶದ ನಂತರ, ಭಾರತೀಯ ರೈಲ್ವೇ “ಶ್ರಮಿಕ್ ವಿಶೇಷ” ರೈಲುಗಳ ಕಾರ್ಯಾಚರಣೆಗೆ ನಿರ್ಧರಿಸಿತು.

ಮೇ 11, 2020 ರಂತೆ, ದೇಶದ ವಿವಿಧ ರಾಜ್ಯಗಳಿಂದ 468 “ಶ್ರಮಿಕ್ ವಿಶೇಷ” ರೈಲುಗಳು ಪ್ರಯಾಣ ಬೆಳೆಸಿದವು, ಅವುಗಳಲ್ಲಿ 363 ರೈಲುಗಳು ತಮ್ಮ ಗಮ್ಯಸ್ಥಾನವನ್ನು ತಲುಪಿದ್ದು, ಉಳಿದ 105 ರೈಲುಗಳು ಪ್ರಯಾಣ ಮಾರ್ಗದಲ್ಲಿವೆ.

ಈ 363 ರೈಲುಗಳು – ಆಂಧ್ರ ಪ್ರದೇಶ (1), ಬಿಹಾರ (100 ರೈಲುಗಳು), ಹಿಮಾಚಲ ಪ್ರದೇಶ (1 ರೈಲು), ಜಾರ್ಖಂಡ್ (22 ರೈಲುಗಳು), ಮಧ್ಯ ಪ್ರದೇಶ (30 ರೈಲುಗಳು), ಮಹಾರಾಷ್ಟ್ರ (3 ರೈಲುಗಳು), ಒಡಿಶಾ (25 ರೈಲುಗಳು), ರಾಜಸ್ಥಾನ (4 ರೈಲುಗಳು), ತೆಲಂಗಾಣ (2 ರೈಲುಗಳು), ಉತ್ತರ ಪ್ರದೇಶ (172 ರೈಲುಗಳು), ಪಶ್ಚಿಮ ಬಂಗಾಳ (2 ರೈಲುಗಳು), ತಮಿಳುನಾಡು (1 ರೈಲು) ಮುಂತಾದ ರಾಜ್ಯಗಳನ್ನು ತಲುಪಿದವು.

ತಿರುಚ್ಚಿರಾಪಲ್ಲಿ, ತಿತ್ಲಾಘಡ್, ಬರೌನಿ, ಖಂಡ್ವಾ, ಜಗನ್ನಾಥ್ ಪುರ್, ಖುರ್ದಾ ರಸ್ತೆ, ಪ್ರಯಾಗ್ ರಾಜ್, ಚಾಪ್ರಾ, ಬಲಿಯಾ, ಗಯಾ, ಪುರ್ನಿಯಾ, ವಾರಣಾಸಿ, ದರ್ಭಂಗಾ, ಗೋರಖ್ ಪುರ್, ಲಖ್ನೋ, ಜೌನ್ ಪುರ್, ಹತಿಯಾ, ಬಸ್ತಿ, ಕಟಿಹಾರ್, ದಾನಾಪುರ್, ಮುಝಾಫರ್ ಪುರ್, ಸಹರ್ಸಾ ಇತ್ಯಾದಿ ನಗರಗಳಿಗೆ ವಲಸಿಗರನ್ನು ಈ ರೈಲುಗಳು ಸಾಗಿಸಿವೆ

ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಗರಿಷ್ಠ 1200 ಪ್ರಯಾಣಿಕರು ಈ ಶ್ರಮಿಕ್ ವಿಶೇಷ ರೈಲುಗಳಲ್ಲಿ ಪ್ರಯಾಣಿಸಬಹುದು. ರೈಲು ಹತ್ತುವ ಮುನ್ನ ವ್ಯವಸ್ಥಿತವಾಗಿ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪ್ರಯಾಣದ ವೇಳೆ, ಪ್ರಯಾಣಿಕರಿಗೆ ಉಚಿತ ಊಟ ಮತ್ತು ನೀರು ಒದಗಿಸಲಾಗುತ್ತದೆ.

***(Release ID: 1622884) Visitor Counter : 17