ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಐ.ಸಿ.ಎಂ.ಆರ್. ಪ್ರಾದೇಶಿಕ ಡಿಪೋಗಳ ಸಹಿತ ದೇಶಾದ್ಯಂತ ದೂರ ಪ್ರದೇಶಗಳ ಪರೀಕ್ಷಾ ಪ್ರಯೋಗಾಲಯಗಳಿಗೆ ಭಾರತೀಯ ಅಂಚೆಯಿಂದ ಕೋವಿಡ್ -19 ಪರೀಕ್ಷಾ ಕಿಟ್ ಗಳ ಸರಬರಾಜು

Posted On: 08 MAY 2020 4:57PM by PIB Bengaluru

.ಸಿ.ಎಂ.ಆರ್. ಪ್ರಾದೇಶಿಕ ಡಿಪೋಗಳ ಸಹಿತ ದೇಶಾದ್ಯಂತ ದೂರ ಪ್ರದೇಶಗಳ ಪರೀಕ್ಷಾ ಪ್ರಯೋಗಾಲಯಗಳಿಗೆ ಭಾರತೀಯ ಅಂಚೆಯಿಂದ ಕೋವಿಡ್ -19 ಪರೀಕ್ಷಾ ಕಿಟ್ ಗಳ ಸರಬರಾಜು

 

ದೇಶದ ಉದ್ದಗಲಕ್ಕೂ ಹರಡಿರುವ 200ರಷ್ಟು ಹೆಚ್ಚುವರಿ ಕೋವಿಡ್ -19 ಪರೀಕ್ಷಾ ಪ್ರಯೋಗಾಲಯಗಳಿಗೆ ಕೋವಿಡ್ -19 ಪರೀಕ್ಷಾ ಕಿಟ್ ಗಳನ್ನು ಪೂರೈಸುವುದಕ್ಕೆ .ಸಿ.ಎಂ.ಆರ್. ಜೊತೆಯಲ್ಲಿ ಇಂಡಿಯಾ ಪೋಸ್ಟ್ (ಭಾರತೀಯ ಅಂಚೆ) ಒಪ್ಪಂದ ಮಾಡಿಕೊಂಡಿದೆ.ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (.ಸಿ.ಎಂ.ಆರ್.) ದೇಶದಲ್ಲಿ ದಿನವೊಂದಕ್ಕೆ 1 ಲಕ್ಷ ಪರೀಕ್ಷೆಗಳನ್ನು ನಡೆಸುವ ಗುರಿಯನ್ನು ನಿಗದಿ ಮಾಡಿಕೊಂಡಿದೆ. ನಿರ್ಣಾಯಕ ಕೆಲಸಕ್ಕೆ , ಭಾರತೀಯ ಅಂಚೆಯು ತನ್ನ1,56,000 ಅಂಚೆ ಕಚೇರಿಗಳ ವಿಸ್ತಾರವಾದ ಜಾಲದ ಮೂಲಕ ಮತ್ತೊಮ್ಮೆ ಬಲಿಷ್ಟ ಕೋವಿಡ್ ವಾರಿಯರ್ ಕಾರ್ಯವನ್ನು ನಿರ್ವಹಿಸಲು ಸಿದ್ದಗೊಂಡಿದೆ. ಭಾರತೀಯ ಅಂಚೆಯು ಇಂಫಾಲ, ಐಜವಾಲ, ದುಂಗಾರ್ ಪುರ್ , ಚುರು, ಜಲಾವಾರ್, ಕೋಲ್ಕೊತ್ತಾ, ಭುವನೇಶ್ವರ, ರಾಂಚಿ, ಜೋಧಪುರ,ಉದಯಪುರ , ಕೋಟಾ ಮತ್ತು ಇತರ ಪ್ರದೇಶಗಳಿಗೆ ಸರಕನ್ನು ಪೂರೈಕೆ ಮಾಡಿದೆ.

ಕೇಂದ್ರ ಸಂಪರ್ಕ ಸಚಿವರು, ಮತ್ತು .ಟಿ. ಹಾಗು ಕಾನೂನು ಮತ್ತು ನ್ಯಾಯಾಂಗ ಸಚಿವರಾದ ಶ್ರೀ ರವಿಶಂಕರ ಪ್ರಸಾದ್ ಅವರು ಇಲಾಖೆ ನಡೆಸುತ್ತಿರುವ ಉತ್ತಮ ಕಾರ್ಯವನ್ನು ಪ್ರಶಂಸಿಸಿದ್ದಾರೆ. ಹೊಸ ಬದ್ದತೆಯೊಂದಿಗೆ ಮತ್ತು .ಸಿ.ಎಂ.ಆರ್. ಹಾಗು ಅಂಚೆ ಇಲಾಖೆ ನಡುವೆ ಸಹಭಾಗಿತ್ವದಲ್ಲಿ ಕಾರ್ಯ ನಡೆಯುತ್ತಿದೆ ಎಂದವರು ಹೇಳಿದ್ದಾರೆ. ಭಾರತೀಯ ಅಂಚೆಯು ಪತ್ರಗಳನ್ನು, ಔಷಧಿಗಳನ್ನು , ಹಣಕಾಸು ಸಹಾಯವನ್ನು ಮನೆ ಬಾಗಿಲಿಗೆ ಒದಗಿಸುತ್ತಿರುವುದಲ್ಲದೆ ಲಾಕ್ ಡೌನ್ ಅವಧಿಯಲ್ಲಿ ಆವಶ್ಯಕತೆ ಇರುವವರಿಗೆ ಆಹಾರ ಮತ್ತು ಪಡಿತರವನ್ನೂ ವಿತರಿಸುತ್ತಿದೆ ಎಂದರು. ಭಾರತೀಯ ಅಂಚೆಯ ಪೋಸ್ಟ್ ಮ್ಯಾನ್ ಗಳು ಸಂದರ್ಭದಲ್ಲಿ ಎದ್ದು ನಿಂತು, ದೇಶದ ಜೊತೆ ಹೆಗಲಿಗೆ ಹೆಗಲು ಕೊಟ್ಟು ಸವಾಲಿನ ಸಮಯದಲ್ಲಿ ನಿಂತಿದ್ದಾರೆ ಎಂದೂ ಸಚಿವರು ಶ್ಲಾಘಿಸಿದರು.

ಕಿಟ್ ಗಳು ಸಕಾಲದಲ್ಲಿ ಪೂರೈಕೆಯಾಗುವಂತೆ ಮಾಡಲು ಸರಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. 16 ಡಿಪೋಗಳಿಂದ (14 ಅಂಚೆ ವೃತ್ತಗಳು/ ರಾಜ್ಯಗಳಲ್ಲಿರುವ ) .ಸಿ.ಎಂ.ಆರ್.ನೊಂದಿಗೆ ಕಿಟ್ ಗಳ ಸರಬರಾಜಿಗೆ ಭಾರತೀಯ ಅಂಚೆಯು ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ದೇಶದ ಅತ್ಯಂತ ದೂರದಲ್ಲಿರುವ ಪ್ರದೇಶಗಳಾದ ಶಿವಮೊಗ್ಗ, ತಿರುನೆಲ್ವೇಲಿ, ಧರಂಪುರಿ, ತಿರುಪತಿ, ದಾರ್ಜಿಲಿಂಗ್ , ಗ್ಯಾಂಗ್ಟಕ್, ಲೇಹ್, ಜಮ್ಮು, ಉಧಂಪುರ, ಝಲಾವರ್, ಭಾವನಗರ್, ಶೋಲಾಪುರ, ದರ್ಭಾಂಗ, ಋಷಿಕೇಶ, ಫರೀದ್ ಕೋಟ್ ಇವುಗಳಲ್ಲಿ ಉಲ್ಲ್ಲೇಖಾರ್ಹ ಕೆಲವು. ಕಿಟ್ ಗಳನ್ನು ಶುಷ್ಕ ಮಂಜುಗಡ್ಡೆಯಲ್ಲಿ ಪ್ಯಾಕ್ ಮಾಡಿ ಪೂರೈಸಲಾಗುತ್ತಿದೆ.

ಭಾರತೀಯ ಅಂಚೆಯ ಸಿಬ್ಬಂದಿಗಳು ಸಕಾಲದಲ್ಲಿ ಸರಬರಾಜನ್ನು ಖಾತ್ರಿಪಡಿಸಲು ಅಹರ್ನಿಶಿ ದುಡಿಯುತ್ತಿದ್ದಾರೆ. ಕರ್ತವ್ಯದ ಕರೆಗೆ ಓಗೊಟ್ಟು ರಾತ್ರಿ 11:30 ಗಂಟೆಗೂ ಡೆಲಿವರಿಗಳನ್ನು ಮಾಡಲಾಗಿದೆ. ಭಾರತೀಯ ಅಂಚೆಯು ಅತ್ಯಂತ ದೂರ ಪ್ರದೇಶದಲ್ಲಿರುವ ಮಣಿಪುರದ ಝೋರಾಮ್ ವೈದ್ಯಕೀಯ ಕಾಲೇಜಿಗೆ ಆವಶ್ಯಕತೆಯ ಅನ್ವಯ ಕಿಟ್ ಗಳ ಪೂರೈಕೆಯನ್ನು ಖಾತ್ರಿಪಡಿಸಲು ಬದ್ದವಾಗಿದೆ.

ಉಭಯ ಏಜೆನ್ಸಿಗಳಿಂದಲೂ (ಡಿ..ಪಿ. ಮತ್ತು .ಸಿ.ಎಂ.ಆರ್.) ಪ್ರತೀ ಪ್ರಾದೇಶಿಕ ಡಿಪೋಗಳಿಗೆ ಸುಸೂತ್ರವಾಗಿ ಕಾರ್ಯಾಚರಣೆಗಳು ನಡೆಯುವುದನ್ನು ಖಾತ್ರಿಪಡಿಸಲು ನೋಡಲ್ ಅಧಿಕಾರಿಗಳನ್ನು ಗುರುತಿಸಲಾಗಿದೆ. ವೃತ್ತಗಳಲ್ಲಿ ಆದ್ಯತೆಯಾಧಾರದಲ್ಲಿ ಸಾಮಗ್ರಿಗಳನ್ನು ಸಂಬಂಧಿತ ಪ್ರಯೋಗಾಲಯಗಳಿಗೆ ಆವಶ್ಯಕತೆಯನ್ನು ಅವಲಂಬಿಸಿ ಒಂದೋ ಹಾಲಿ ಇರುವ ವ್ಯವಸ್ಥೆಯನ್ನು ಬಳಸಿ ಅಥವಾ ಹೊಸ ವ್ಯವಸ್ಥೆಗಳೊಂದಿಗೆ ಕಾಲ ಮಿತಿಯೊಳಗೆ ತಲುಪಿಸಲು ಅವಶ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದನ್ನು .ಸಿ.ಎಂ.ಆರ್. ನೋಡಲ್ ಅಧಿಕಾರಿಗಳಿಗೂ ತಿಳಿಸಲಾಗಿದೆ.

ಪ್ರತೀ ಬುಕ್ಕಿಂಗ್ ವೃತ್ತದಲ್ಲಿ ಬಿ.ಎನ್.ಪಿ.ಎಲ್. (ಈಗ ಬುಕ್ ಮಾಡಿ, ನಂತರ ಪಾವತಿ ಮಾಡಿ) ಖಾತೆಯನ್ನು ಸ್ಪೀಡ್ ಪೋಸ್ಟ್ ಗಳಿಗಾಗಿ ತೆರೆಯಲಾಗಿದೆ. ಸಂಬಂಧಿತ ಡಿಪೋದಲ್ಲಿ ವ್ಯವಸ್ಥೆಯ ಮೂಲಕ ಏಜೆನ್ಸಿಗೆ ಅಡೆ ತಡೆ ರಹಿತ ಸೇವೆ ಒದಗಿಸಲಾಗುತ್ತದೆ. ವಾಟ್ಯಾಪ್ ಮೂಲಕ ದೈನಂದಿನ ಆಧಾರದಲ್ಲಿ ಪ್ರಯೋಗಾಲಯಗಳ ಜೊತೆ ಪೂರೈಕೆ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ. ಎಲ್ಲಾ ನೋಡಲ್ ಅಧಿಕಾರಿಗಳ ಜೊತೆ ಗೂಗಲ್ ಸ್ಪ್ರೆಡ್ ಶೀಟನ್ನು ಹಂಚಿಕೊಳ್ಳಲಾಗಿದ್ದು ಪರೀಕ್ಷಾ ಕಿಟ್ ಗಳ ಬುಕ್ಕಿಂಗ್ ಮತ್ತು ಡೆಲಿವರಿ ವಿವರಗಳನ್ನು ಸಕಾಲಿಕಗೊಳಿಸಲಾಗುತ್ತದೆ. ಮೂಲಕ ಕಾರ್ಯಾಚರಣಾ ಅಡೆ ತಡೆಗಳನ್ನು ನಿವಾರಿಸಲು ಏರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ.

ಕೇಂದ್ರ ಸಂಪರ್ಕ ಸಚಿವರು, ಮತ್ತು .ಟಿ. ಹಾಗು ಕಾನೂನು ಮತ್ತು ನ್ಯಾಯಾಂಗ ಸಚಿವರಾದ ಶ್ರೀ ರವಿಶಂಕರ ಪ್ರಸಾದ್ ಅವರು ಇಲಾಖೆ ನಡೆಸುತ್ತಿರುವ ಉತ್ತಮ ಕಾರ್ಯವನ್ನು ಪ್ರಶಂಸಿಸಿ, ಔಷಧಿ, ಪರೀಕ್ಷಾ ಕಿಟ್ ಗಳು ಮತ್ತು ಇತರ ವೈದ್ಯಕೀಯ ಸಲಕರಣೆಗಳನ್ನು ಸಕಾಲದಲ್ಲಿ ಸರಬರಾಜು ಮಾಡುವಲ್ಲಿ ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸಬೇಕು ಮತ್ತು ಯಾವ ಸ್ಥಿತಿಯಲ್ಲೂ ಸನ್ನಧವಾಗಿರಬೇಕು ಎಂದಿದ್ದಾರೆ.ಅವಶ್ಯಕ ವಸ್ತುಗಳನ್ನು ಪೂರೈಸಲು ಇಲಾಖೆಯು ತನ್ನ ಬೃಹತ್ ಜಾಲವನ್ನು ಏಕತ್ರಗೊಳಿಸಬೇಕು ಮತ್ತು ಅಲ್ಲಿ ಖಾಲಿ ಜಾಗಗಳಿರಬಾರದು ಎಂದು ಹೇಳಿದ್ದಾರೆ.


ಮಿಜೋರಾಂನ ಝೋರಾಮ್ ವೈದ್ಯಕೀಯ ಕಾಲೇಜಿಗೆ ಪರೀಕ್ಷಾ ಕಿಟ್ ಗಳ ಸರಬರಾಜು

 

ಭಾರತೀಯ ಅಂಚೆಯು ಮಣಿಪುರದಲ್ಲಿರುವ ಜವಾಹರಲಾಲ್ ನೆಹರೂ ವೈದ್ಯ ವಿಜ್ಞಾನಗಳ ಸಂಸ್ಥೆಗೆ ಕೋವಿಡ್ -19 ಪರೀಕ್ಷಾ ಕಿಟ್ ಗಳನ್ನು ಸರಬರಾಜು ಮಾಡಿದೆ.

.ಸಿ.ಎಂ.ಆರ್. 16 ಡಿಪೊಗಳೆಂದರೆ ಎನ್..ಎಂ.ಆರ್, ಹೊಸದಿಲ್ಲಿ. ಪಿ.ಜಿ.. ಚಂಡೀಗಢ, ಕೆ.ಜಿ.ಎಂ.ಯು. ಲಕ್ನೋ, ಆರ್.ಎಂ.ಆರ್.. ಪಟ್ನಾ, ಎನ್..ಆರ್.ಎನ್.ಸಿ.ಡಿ. ಜೋಧಪುರ, ಎನ್...ಎಚ್.ಅಹ್ಮದಾಬಾದ್, ಎನ್..ಆರ್..ಎಚ್.ಭೋಪಾಲ್, ಎನ್..ಸಿ..ಡಿ. ಕೋಲೊತ್ತಾ, ಎನ್..ವಿ. ಪುಣೆ, ಎನ್..ವಿ. ಕ್ಷೇತ್ರ ಕಾರ್ಯಾಲಯ ಬೆಂಗಳೂರು, ಎನ್..ಎನ್. ಹೈದರಾಬಾದ್, ಎನ್.. . ಚೆನ್ನೈ, ಆರ್.ಎಂ.ಆರ್.ಸಿ. ಧೀಬ್ರೂಘರ್, ಆರ್.ಎಂ.ಆರ್.ಸಿ. ಭುವನೇಶ್ವರ, ಎನ್..ಆರ್.ಆರ್.ಎಚ್. ಮುಂಬಯಿ, ಜಿ.ಎಂ.ಸಿ. ಗುವಾಹಟಿ.

***


(Release ID: 1622623) Visitor Counter : 233