ನಾಗರೀಕ ವಿಮಾನಯಾನ ಸಚಿವಾಲಯ

ಅಗತ್ಯ ವಸ್ತುಗಳು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು  ದೇಶಾದ್ಯಂತ ನಿರಂತರವಾಗಿ ಸರಬರಾಜು ಮಾಡಲು 490 ಲೈಫ್ ಲೈನ್ ಉಡಾನ್ ವಿಮಾನಗಳ ಕಾರ್ಯನಿರ್ವಹಣೆ

Posted On: 09 MAY 2020 3:06PM by PIB Bengaluru

ಅಗತ್ಯ ವಸ್ತುಗಳು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು  ದೇಶಾದ್ಯಂತ ನಿರಂತರವಾಗಿ ಸರಬರಾಜು ಮಾಡಲು

490 ಲೈಫ್ ಲೈನ್ ಉಡಾನ್ ವಿಮಾನಗಳ ಕಾರ್ಯನಿರ್ವಹಣೆ

 

ಏರ್ ಇಂಡಿಯಾ, ಅಲಯೆನ್ಸ್ ಏರ್, ಐಎಎಫ್, ಮತ್ತು ಖಾಸಗಿ ಸಂಸ್ಥೆಗಳ 490 ವಿಮಾನಗಳು ಲೈಫ್ ಲೈನ್ ಉಡಾನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 289 ಏರ್ ಇಂಡಿಯಾ, ಅಲಯೆನ್ಸ್ ಏರ್ ವಿಮಾನಗಳಾಗಿವೆ. ಮೇ 8, 2020 ರಂದು 6.32 ಟನ್ ಗಳಷ್ಟು ಸರಕುಗಳನ್ನು ಸಾಗಿಸಲಾಗಿದ್ದು, ಇಂದಿನವರೆಗೆ ಒಟ್ಟು 848.42 ಟನ್ ಗಳಷ್ಟು ಸರಕುಗಳನ್ನು ಸಾಗಿಸಲಾಗಿದೆ. ಮೇ 8, 2020 ರಂದು ಅಲಯೆನ್ಸ್ ಏರ್ 8 ವಿಮಾನಗಳ ಹಾರಾಟ ನಡೆಸಿದ್ದರೆ, ಐಎಎಫ್ 8 ವಿಮಾನಗಳ ಹಾರಾಟ ನಡೆಸಿದೆ. ಇಂದಿನವರೆಗೆ ಲೈಫ್ ಲೈನ್ ಉಡಾನ್ ವಿಮಾನಗಳು ಸುಮಾರು 4,73,609 ಕಿ. ಮೀ. ಗೂ ಹೆಚ್ಚು ವ್ಯಾಪ್ತಿಯನ್ನ ಕ್ರಮಿಸಿವೆ. ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸುವ ಮೂಲಕ ಕೊವಿಡ್ – 19 ರ ವಿರುದ್ಧದ ಭಾರತದ ಹೋರಾಟಕ್ಕೆ ನೆರವು ಒದಗಿಸಲು ‘ಲೈಫ್ ಲೈನ್ ಉಡಾನ್’ ವಿಮಾನಗಳು ಎಂ ಒ ಸಿ ಎ ಮೂಲಕ ಕಾರ್ಯನಿರ್ವಹಿಸುತ್ತಿವೆ.

ಪವನ್ ಹನ್ಸ್ ನಿಯಮಿತ ಸಂಸ್ಥೆ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಜಮ್ಮು ಮತ್ತು ಕಾಶ್ಮೀರ, ಲದಾಖ್, ದ್ವೀಪಗಳು ಮತ್ತು ಈಶಾನ್ಯ ಪ್ರದೇಶಗಳಿಗೆ ನಿರ್ಣಾಯಕ ವೈದ್ಯಕೀಯ ಸಾಮಗ್ರಿಗಳು ಮತ್ತು ರೋಗಿಗಳನ್ನು ಸಾಗಿಸಲು ಕಾರ್ಯನಿರ್ವಹಿಸುತ್ತಿವೆ. ಮೇ 8, 2020 ರವರೆಗೆ ಪವನ್ ಹನ್ಸ್ 8,001 ಕಿ. ಮೀ. ಗಳ ದೂರ ಕ್ರಮಿಸಿ 2.32 ಟನ್ ಗಳಷ್ಟು ಸರಕುಗಳನ್ನು ಸಾಗಿಸಿವೆ.

ದೇಶೀಯ ಸರಕು ಸಾಗಿಸುವ ವಿಮಾನಯಾನ ನಿರ್ವಾಹಕರಾದ ಸ್ಪೈಸ್ ಜೆಟ್, ಬ್ಲೂ ಡಾರ್ಟ್, ಇಂಡಿಗೊ ಮತ್ತು  ವಿಸ್ತಾರಾ, ವಾಣಿಜ್ಯ ಆಧಾರದ ಮೇಲೆ ಕಾರ್ಗೊ ವಿಮಾನಗಳ ಹಾರಾಟ ನಿರ್ವಹಿಸುತ್ತಿವೆ. ಸ್ಪೈಸ್ ಜೆಟ್ 15,46,809 ಕಿ. ಮೀ. ದೂರವನ್ನು ಮತ್ತು 6,587 ಟನ್ ಗಳಷ್ಟು ಸರಕುಗಳನ್ನು 916 ಕಾರ್ಗೊ ವಿಮಾನಗಳ ಮೂಲಕ 24 ಮಾರ್ಚ್ ರಿಂದ 08 ಮೇ 2020 ರ ನಡುವೆ ಸಾಗಾಟ ನಡೆಸಿತು. ಇವುಗಳಲ್ಲಿ 337 ವಿದೇಶೀ ಕಾರ್ಗೊ ವಿಮಾನಗಳಾಗಿವೆ. ಬ್ಲೂ ಡಾರ್ಟ್ 3,55,515 ಕಿ. ಮೀ. ದೂರವನ್ನು ಮತ್ತು 5,231 ಟನ್ ಗಳಷ್ಟು ಸರಕುಗಳನ್ನು 311 ಕಾರ್ಗೊ ವಿಮಾನಗಳ ಮೂಲಕ 25 ಮಾರ್ಚ್ ರಿಂದ 08 ಮೇ 2020 ರ ನಡುವೆ ಸಾಗಾಟ ನಡೆಸಿತು. ಇವುಗಳಲ್ಲಿ 16 ವಿದೇಶೀ ಕಾರ್ಗೊ ವಿಮಾನಗಳಾಗಿವೆ. ಇಂಡಿಗೊ 1,96,263 ಕಿ. ಮೀ. ದೂರವನ್ನು ಮತ್ತು 585 ಟನ್ ಗಳಷ್ಟು ಸರಕುಗಳನ್ನು 46 ಅಂತಾರಾಷ್ಟ್ರೀಯ ವಿಮಾನಗಳು ಸೇರಿದಂತೆ 121 ಕಾರ್ಗೊ ವಿಮಾನಗಳ ಮೂಲಕ ಏಪ್ರಿಲ್ 3 ರಿಂದ 8 ಮೇ 2020 ರ ನಡುವೆ ಸಾಗಾಟ ನಡೆಸಿತು. ಇದರಲ್ಲಿ ಸರ್ಕಾರಕ್ಕಾಗಿ ಉಚಿತವಾಗಿ ಸಾಗಿಸಲಾದ ವೈದ್ಯಕೀಯ ಸಾಮಗ್ರಿಗಳೂ ಒಳಗೊಂಡಿವೆ. ವಿಸ್ತಾರಾ 32,321 ಕಿ. ಮೀ. ದೂರವನ್ನು ಮತ್ತು 150 ಟನ್ ಗಳಷ್ಟು ಸರಕುಗಳನ್ನು 23 ಕಾರ್ಗೊ ವಿಮಾನಗಳ ಮೂಲಕ 19 ಏಪ್ರಿಲ್ ರಿಂದ 08 ಮೇ 2020 ರ ನಡುವೆ ಸಾಗಾಟ ನಡೆಸಿತು.

ಔಷಧಿಗಳು, ವೈದ್ಯಕೀಯ ಉಪಕರಣಗಳು ಮತ್ತು ಕೊವಿಡ್ – 19 ಪರಿಹಾರ ಸಾಮಗ್ರಿಗಳ ಸಾಗಣೆಗೆ ಪೂರ್ವ ಏಷ್ಯಾದೊಂದಿಗೆ ಸಾಗಾಣೆಯ ಏರ್ ಬ್ರಿಡ್ಜ್ ಅನ್ನು ಸ್ಥಾಪಿಸಲಾಗಿದೆ. ಏರ್ ಇಂಡಿಯಾ ಮೂಲಕ ತರಲಾದ ವೈದ್ಯಕೀಯ ಸಾಮಗ್ರಿಗಳ ಒಟ್ಟು ಪ್ರಮಾಣ 1075 ಟನ್ ಗಳು. 14 ಏಪ್ರಿಲ್ ರಿಂದ 08 ಮೇ 2020 ರವರೆಗೆ ಬ್ಲೂ ಡಾರ್ಟ್ 131 ಟನ್ ಗಳಷ್ಟು ಸರಕುಗಳನ್ನು ಗ್ವಾಂಗ್ ಝೊ ಮತ್ತು ಶಾಂಘಾಯ್ ನಿಂದ ಮತ್ತು 24 ಟನ್ ಗಳಷ್ಟು ಸರಕುಗಳನ್ನು ಹಾಂಗ್ ಕಾಂಗ್ ನಿಂದ ತಂದಿದೆ. ಸ್ಪೈಸ್ ಜೆಟ್ ಸಹ 08 ಮೇ 2020 ರವರೆಗೆ 205 ಟನ್ ಗಳಷ್ಟು ವೈದ್ಯಕೀಯ ಸಾಮಗ್ರಿಗಳನ್ನು ಶಾಂಘಾಯ್ ಮತ್ತು ಗ್ವಾಂಗ್ ಝೊ ನಿಂದ ಮತ್ತು 21 ಟನ್ ಗಳಷ್ಟು ವೈದ್ಯಕೀಯ ಸಾಮಗ್ರಿಗಳನ್ನು ಹಾಂಗ್ ಕಾಂಗ್ ಮತ್ತು ಸಿಂಗಪೂರ್ ನಿಂದ 08 ಮೇ 2020 ರವರೆಗೆ ತಂದಿದೆ.

***



(Release ID: 1622529) Visitor Counter : 165